Home ಅಪಘಾತ

Category: ಅಪಘಾತ

Post
ಮುಂಡಗೋಡಿನಿಂದ ಹಜ್ ಯಾತ್ರೆಗೆ ತೆರಳಿದ್ದ ಮೂವರು ಕಾರ್ ಅಪಘಾತದಲ್ಲಿ ಸಾವು..! ಮತ್ತೆ ಮೂವರಿಗೆ ಗಾಯ..!

ಮುಂಡಗೋಡಿನಿಂದ ಹಜ್ ಯಾತ್ರೆಗೆ ತೆರಳಿದ್ದ ಮೂವರು ಕಾರ್ ಅಪಘಾತದಲ್ಲಿ ಸಾವು..! ಮತ್ತೆ ಮೂವರಿಗೆ ಗಾಯ..!

 ಮುಂಡಗೋಡಿನಿಂದ ಮೆಕ್ಕಾ( ಹಜ್ ಯಾತ್ರೆಗೆ) ತೆರಳಿದ್ದ ಮೂವರು ಅಪಘಾತದಲ್ಲಿ ಮೃತಪಟ್ಟಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಮುಂಡಗೋಡಿನ ರೋಣ್ಸ್ ಮೆಡಿಕಲ್ ಮಾಲೀಕ ಫಯಾಜ್ ಅಹ್ಮದ್ ರೋಣ್, ಅವ್ರ ಧರ್ಮಪತ್ನಿ ಆಫೀನಾ ಬಾನು ಹಾಗೂ ಅಣ್ಣನ ಮಗ ಆಯಾನ್ ರೋಣ್ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇನ್ನುಳಿದ ಮೂವರಿಗೆ ಗಾಯವಾಗಿದೆ ಅನ್ನೊ ಮಾಹಿತಿ ಲಭ್ಯವಾಗಿದೆ. ಮೆಕ್ಕಾದ ದರ್ಶನ ಮುಗಿಸಿಕೊಂಡು ಕಾರಿನಲ್ಲಿ ಮದಿನಾಕ್ಕೆ ಹೊರಟಿದ್ದ ವೇಳೆ, ಕಾರಿನ ಟೈಯರ್ ಸ್ಪೋಟಗೊಂಡ ಪರಿಣಾಮ ಕಾರ್ ಪಲ್ಟಿಯಾಗಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಇನ್ನುಳಿದಂತೆ ಹೆಚ್ಚಿನ...

Post
ಅಯ್ಯೋ ವಿಧಿಯೇ, ಮತ್ತೊಂದು ಭೀಕರ ಬೈಕ್  ಅಪಘಾತ..! ನಂದಿಕಟ್ಟಾದ ಮತ್ತೋರ್ವ ಯುವಕ ಸಾವು..!

ಅಯ್ಯೋ ವಿಧಿಯೇ, ಮತ್ತೊಂದು ಭೀಕರ ಬೈಕ್ ಅಪಘಾತ..! ನಂದಿಕಟ್ಟಾದ ಮತ್ತೋರ್ವ ಯುವಕ ಸಾವು..!

ಮುಂಡಗೋಡ- ಕಲಘಟಗಿ ರಸ್ತೆಯಲ್ಲಿ ಮತ್ತೊಂದು ಭಯಾನಕ ಅಪಘಾತವಾಗಿದೆ. ಕಲಘಟಗಿ ತಾಲೂಕಿನ ಬೆಲವಂತರ ಬಳಿ ಬೈಕ್ ಹಾಗೂ ಸ್ಕೂಟಿ ನಡುವೆ ಮುಖಾಮುಕಿ ಡಿಕ್ಕಿಯಾದ ಪರಿಣಾಮ ಮುಂಡಗೋಡ ತಾಲೂಕಿನ ನಂದಿಕಟ್ಟಾ ಗ್ರಾಮದ ಯುವಕ ಮೃತಪಟ್ಟಿದ್ದಾನೆ. ಮತ್ತಿಬ್ಬರಿಗೆ ಗಾಯವಾಗಿದೆ. ನಂದಿಕಟ್ಟಾ ಗ್ರಾಮದ ತುಕಾರಾಮ್ ಅರ್ಜುನ್ ಕಮ್ಮಾರ್ (26) ಬೈಕ್ ಅಪಘಾತದಲ್ಲಿ ಮೃತಪಟ್ಟ ಯುವಕನಾಗಿದ್ದಾನೆ. ಇನ್ನು ಮತ್ತೀರ್ವರಿಗೆ ಗಾಯವಾಗಿದ್ದು ಆಸ್ಪತ್ರೆಗೆ ರವಾನಿಸಲಾಗಿದೆ. ಅಂದಹಾಗೆ, ಮುಂಡಗೋಡ ತಾಲೂಕಿನ ನಂದಿಕಟ್ಟಾ ಗ್ರಾಮಕ್ಕೆ ಬಹುಶಃ ಇವತ್ತು ಕರಾಳ ದಿನ. ಯಾಕಂದ್ರೆ ಒಂದೇ ದಿನ ಪ್ರತ್ಯೇಕ ಎರಡು ಅಪಘಾತದಲ್ಲಿ...

Post
ಹುನಗುಂದ ಬಳಿ ಭೀಕರ ಅಪಘಾತ, ಬೈಕ್ ಓಮಿನಿ ನಡುವೆ ಡಿಕ್ಕಿ, ನಂದಿಕಟ್ಟಾದ ಬೈಕ್ ಸವಾರ ಸಾವು, ಮತ್ತೋರ್ವನಿಗೆ ಗಾಯ..!

ಹುನಗುಂದ ಬಳಿ ಭೀಕರ ಅಪಘಾತ, ಬೈಕ್ ಓಮಿನಿ ನಡುವೆ ಡಿಕ್ಕಿ, ನಂದಿಕಟ್ಟಾದ ಬೈಕ್ ಸವಾರ ಸಾವು, ಮತ್ತೋರ್ವನಿಗೆ ಗಾಯ..!

ಮುಂಡಗೋಡ: ತಾಲೂಕಿನ ಹುನಗುಂದ ಹಾಗೂ ಟಿಬೇಟಿಯನ್ ಕ್ಯಾಂಪ್ ನಂ. 8 ರ ರಸ್ತೆ ಮದ್ಯೆ ಭೀಕರ ಅಪಘಾತವಾಗಿದೆ. ಓಮಿನಿ ಹಾಗೂ ಬೈಕ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಸಾವನ್ನಪ್ಪಿದ್ದಾ‌ನೆ. ಮತ್ತೋರ್ವನಿಗೆ ಗಾಯವಾಗಿದೆ. ನಂದಿಕಟ್ಟಾ ಗ್ರಾಮದ ಕೃಷ್ಣ ಸೋಮಣ್ಣ ಕಟಾವಕರ್ (54) ಎಂಬುವವನೇ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯಾಗಿದ್ದಾನೆ. ಇನ್ನು ಪ್ರಭು(36) ಎಂಬುವ ಬೈಕ್ ಹಿಂಬದಿಯ ಸವಾರ ಗಾಯಗೊಂಡಿದ್ದಾನೆ. ಬೈಕ್ ಸವಾರರು ಹುನಗುಂದ ಗ್ರಾಮಕ್ಕೆ ತೆರಳುತ್ತಿದ್ದರು. ಹಾಗೇನೆ ಹುನಗುಂದ ಕಡೆಯಿಂದ ವರುತ್ತಿದ್ದ ಓಮಿನಿ ನಡುವೆ ಡಿಕ್ಕಿಯಾಗಿದೆ. ಹೀಗಾಗಿ, ಗಂಭೀರವಾಗಿ ಗಾಯಗೊಂಡಿದ್ದ...

Post
ಬಾಚಣಕಿ ಬಳಿ ಅಪಘಾತ, ಅರಷಿಣಗೇರಿಯ ವ್ಯಕ್ತಿ ಸ್ಥಳದಲ್ಲೇ ಸಾವು..!

ಬಾಚಣಕಿ ಬಳಿ ಅಪಘಾತ, ಅರಷಿಣಗೇರಿಯ ವ್ಯಕ್ತಿ ಸ್ಥಳದಲ್ಲೇ ಸಾವು..!

ಮುಂಡಗೋಡ ತಾಲೂಕಿನ ಬಾಚಣಕಿ ಬಳಿ ಲಾರಿ ಹಾಗೂ ಸ್ಕೂಟಿ ನಡುವೆ ಭೀಕರ ಅಪಘಾತ ಸಂಭವಿಸಿದೆ. ಪರಿಣಾಮ ಅರಷಿಣಗೇರಿಯ ಸ್ಕೂಟಿ ಸವಾರ ಸ್ಥಳದಲ್ಲೇ ಸಾಚನ್ನಪ್ಪಿದ್ದಾನೆ. ಬಸವರಾಜ್ ಶಿವನಗೌಡರ್ (50) ಎಂಬುವ ಸ್ಲೂಟಿ ಸವಾರನೇ ಅಪಘಾತದಲ್ಲಿ ಮೃತಪಟ್ಟಿದ್ದು, ಸಂಜೆ ಮುಂಡಗೋಡಿನಿಂದ ಸ್ಕೂಟಿ ಮೇಲೆ ಅರಷಿಣಗೇರಿಗೆ ಬರುತ್ತಿದ್ದಾಗ ಲಾರಿ ಡಿಕ್ಕಿಯಾಗಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Post
ಮುಂಡಗೋಡ ಅಮ್ಮಾಜಿ ಕೆರೆ ಸಮೀಪ ವಿಷ ಕುಡಿದು ನಿತ್ರಾಣಗೊಂಡಿದ್ದ ಯುವಕ, ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಸಾರ್ವಜನಿಕರು..!

ಮುಂಡಗೋಡ ಅಮ್ಮಾಜಿ ಕೆರೆ ಸಮೀಪ ವಿಷ ಕುಡಿದು ನಿತ್ರಾಣಗೊಂಡಿದ್ದ ಯುವಕ, ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಸಾರ್ವಜನಿಕರು..!

ಮುಂಡಗೋಡ ಪಟ್ಟಣದ ಅಮ್ಮಾಜಿ ಕೆರೆ ಬಳಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿ, ನಿತ್ರಾಣಗೊಂಡ ಯುವಕನೋರ್ವನ ರಕ್ಷಣೆ ಮಾಡಲಾಗಿದೆ. ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಚಿಲ್ಲೂರು ಬಡ್ನಿ ಮೂಲದವನು ಅಂತಾ ಅಂದಾಜಿಸಲಾಗಿರೋ ಯುವಕನಿಗೆ ಸದ್ಯ ತಾಲೂಕಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾವೇರಿ ನೋಂದಣಿ ಸಂಖ್ಯೆ ಹೊಂದಿರುವ ಸ್ಕೂಟಿ ಮೇಲೆ ಬಂದಿರೋ ಯುವಕ, ಮುಂಡಗೋಡ ಪಟ್ಟಣದ ಹೊರವಲಯದ ಅಮ್ಮಾಜಿ ಕೆರೆ ಪಕ್ಕ ಬಿದ್ದು ನರಳಾಡುತ್ತಿದ್ದ. ಬಾಯಲ್ಲಿ ನೊರೆ ಬಂದು ಕೋಮಾ ಸ್ಥಿತಿಗೆ ತಲುಪಿದ್ದ ಯುವಕ ವಿಷ ಸೇವಿಸಿರಬಹುದು ಅಂತಾ ಅಂದಾಜಿಸಲಾಗಿದೆ. ಸಾರ್ವಜನಿಕರು...

Post
ಹಾರವಳ್ಳಿ ಬಳಿ ಮಾಜಿ ಶಾಸಕ ವಿ.ಎಸ್.ಪಾಟೀಲ್ ಕಾರು ಅಪಘಾತ, ಆಸ್ಪತ್ರೆಗೆ ದಾಖಲು..!

ಹಾರವಳ್ಳಿ ಬಳಿ ಮಾಜಿ ಶಾಸಕ ವಿ.ಎಸ್.ಪಾಟೀಲ್ ಕಾರು ಅಪಘಾತ, ಆಸ್ಪತ್ರೆಗೆ ದಾಖಲು..!

ಮುಂಡಗೋಡ: ತಾಲೂಕಿನ ಹಾರವಳ್ಳಿ‌‌ ಗ್ರಾಮದ ಹತ್ತಿರ ಮಾಜಿ ಶಾಸಕ‌ ವಿ ಎಸ್ ಪಾಟೀಲ ಕಾರು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಘಟನೆ ನಡೆದಿದೆ. ಬನವಾಸಿಯಿಂದ ಪಾಳಾ- ರಾಮಪೂರ ಮಾರ್ಗವಾಗಿ ತಮ್ಮ ಸ್ವಗ್ರಾಮ ಅಂದಲಗಿಗೆ ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ. ಇದರ ಪರಿಣಾಮ‌ ಚಾಲಕ ಆನಂದ ಆಲೂರನಿಗೆ ಕಣ್ಣಿಗೆ ಹಾಗೂ ಮಾಜಿ ಶಾಸಕ ವಿ ಎಸ್ ಪಾಟೀಲರಿಗೆ ಎದಗೆ ಪೆಟ್ಟು ಬಿದ್ದಿದೆ. ಅದೃಷ್ಟವಾಶತ್ ಕಾರಿನ ಏರ್ ಬ್ಯಾಗ್ ಓಪನ್...

Post
ಹಂಸಬಾವಿ ಹೋರಿ ಹಬ್ಬದಲ್ಲಿ ಹೋರಿ ತಿವಿದು ಯುವಕ ಸಾವು, ಇಬ್ಬರು ಗಂಭೀರ, 16ಜನರಿಗೆ ಗಾಯ, ಹಬ್ಬವೇ ಬಂದ್..!

ಹಂಸಬಾವಿ ಹೋರಿ ಹಬ್ಬದಲ್ಲಿ ಹೋರಿ ತಿವಿದು ಯುವಕ ಸಾವು, ಇಬ್ಬರು ಗಂಭೀರ, 16ಜನರಿಗೆ ಗಾಯ, ಹಬ್ಬವೇ ಬಂದ್..!

ಹಾವೇರಿ ಜಿಲ್ಲೆಯ ಹಿರೆಕೆರೂರಿನ ಹಂಸಬಾವಿ ಹೋರಿ ಬೆದರಿಸುವ ಹಬ್ಬದಲ್ಲಿ ದುರಂತ ಸಂಭವಿಸಿದೆ. ಹೋರಿ ತಿವಿದು ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಹಾವೇರಿ ಜಿಲ್ಲೆಯ ಹಿರೇಕೆರೂರ ತಾಲೂಕಿನ ಹಂಸಭಾವಿ ಗ್ರಾಮದಲ್ಲಿ ನಡೆದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಘಟನೆ ನಡೆದಿದೆ. ಅರಳೀಕಟ್ಟಿ ಗ್ರಾಮದ ಮಂಜಪ್ಪ ಚನ್ನಪ್ಪನವರ(38), ಮೃತ ಯುವಕನಾಗಿದ್ದು, ಘಟನೆಯಲ್ಲಿ ಇನ್ನಿಬ್ಬರಿಗೆ ಗಂಭೀರ ಗಾಯವಾಗಿದೆ. ಅಲ್ದೆ, 16 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೀಗಾಗಿ, ಹೋರಿ ಬೆದರಿಸುವ ಹಬ್ಬವನ್ನು ಪೊಲೀಸರು ಬಂದ್ ಮಾಡಿಸಿದ್ದಾರೆ....

Post
ಸಾಲಗಾಂವ್ ಸಮೀಪದ ಜೋಗೇಶ್ವರ ಹಳ್ಳದ ಬಳಿ ಲಾರಿಗಳ ನಡುವೆ ಮುಖಾಮುಕಿ ಡಿಕ್ಕಿ, ಇಬ್ಬರು ಚಾಲಕರಿಗೆ ಗಾಯ..!

ಸಾಲಗಾಂವ್ ಸಮೀಪದ ಜೋಗೇಶ್ವರ ಹಳ್ಳದ ಬಳಿ ಲಾರಿಗಳ ನಡುವೆ ಮುಖಾಮುಕಿ ಡಿಕ್ಕಿ, ಇಬ್ಬರು ಚಾಲಕರಿಗೆ ಗಾಯ..!

ಮುಂಡಗೋಡ ತಾಲೂಕಿನ ಜೋಗೇಶ್ವರ ಹಳ್ಳದ ಸಮೀಪ ಭೀಕರ ರಸ್ತೆ ಅಪಘಾತವಾಗಿದೆ. ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿರೋ ಘಟನೆ ನಡೆದಿದೆ. ಡಿಕ್ಕಿಯ ರಭಸಕ್ಕೆ ಎರಡೂ ಲಾರಿಗಳ‌ ಮುಂಬಾಗ ಸಂಪೂರ್ಣ ಜಖಂ ಆಗಿದೆ. ಶಿರಸಿ ಕಡೆಯಿಂದ ಬರುತ್ತಿದ್ದ ಲಾರಿ, ಮುಂಡಗೋಡ ಕಡೆಯಿಂದ ಹೊರಟಿದ್ದ ಲಾರಿ ನಿಯಂತ್ರಣ ತಪ್ಪಿ ಪರಸ್ಪರ ಮುಖಾಮುಕಿ ಡಿಕ್ಕಿಯಾಗಿದೆ. ಪರಿಣಾಮ ಲಾರಿ ಚಾಲಕರು ಇಬ್ಬರಿಗೂ ಗಾಯವಾಗಿದೆ. ಇನ್ನು ಗಾಯಗೊಂಡ ಲಾರಿ ಚಾಲಕರನ್ನು ಕಲಬುರ್ಗಿಯ ಮೌನೇಶ್ ಡೋಲಿ, ಶಿರಸಿಯ ಮಹೇಶ್ ಶಂಕರ್ ಪರಪರ್ ಅಂತಾ ಗುರುತಿಸಲಾಗಿದೆ. ಸದ್ಯ ಗಾಯಾಳುಗಳನ್ನು...

Post
ಪಾಳಾ ಹತ್ತಿರ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯೂ ಸಾವು..! ಬೈಕ್ ಸವಾರರಿಬ್ಬರೂ ದುರ್ಮರಣ..!

ಪಾಳಾ ಹತ್ತಿರ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯೂ ಸಾವು..! ಬೈಕ್ ಸವಾರರಿಬ್ಬರೂ ದುರ್ಮರಣ..!

ಮುಂಡಗೋಡ ತಾಲೂಕಿನ ಪಾಳಾ ಹತ್ತಿರ KSRTC ಬಸ್ ಹಾಗೂ ಬೈಕ್ ನಡುವೆ, ಮುಕಾಮುಖಿ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿಯೂ ಮೃತಪಟ್ಟಿದ್ದಾನೆ. ಮುಂಡಗೋಡ ತಾಲೂಕಾಸ್ಪತ್ರೆಗೆ ಚಿಕಿತ್ಸೆಗೆಂದು ರವಾನಿಸುತ್ತಿದ್ದ ವೇಳೆ ಮೃತಪಟ್ಟಿದ್ದಾನೆ ಅಂತಾ ಮಾಹಿತಿ ತಿಳಿದು ಬಂದಿದೆ. ಈ ಮೂಲಕ ಘಟನೆಯಲ್ಲಿ ಸಾವಿನ ಸಂಖ್ಯೆ ಎರಡಕ್ಕೆ ಏರಿದಂತಾಗಿದೆ. ಅಂದಹಾಗೆ, ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹುಡೆ ಗ್ರಾಮದ ಜಾಫರ್ ದೇವಸೂರ್(32) ಎಂಬುವವನೇ ಘಟನೆಯಲ್ಲಿ ಮೃತಪಟ್ಟ ಮತ್ತೋರ್ವ ವ್ಯಕ್ತಿಯಾಗಿದ್ದಾನೆ. ಇನ್ನು ಘಟನೆಯಲ್ಲಿ ಹಾನಗಲ್ ತಾಲೂಕಿನ ಆರೆಗೊಪ್ಪ ಗ್ರಾಮದ ಮಾಹಬಲೇಶ್ವರ ಸಂಕಪಾಳೆ(38) ಸ್ಥಳದಲ್ಲೇ...

Post
ಪಾಳಾ ಹತ್ತಿರ, KSRTC ಬಸ್ ಹಾಗೂ ಬೈಕ್ ನಡುವೆ ಭಯಾನಕ ಅಪಘಾತ, ಓರ್ವ ಬೈಕ್ ಸವಾರ ಸ್ಥಳದಲ್ಲೇ ಸಾವು, ಮತ್ತೋರ್ವ ಗಂಭೀರ..!

ಪಾಳಾ ಹತ್ತಿರ, KSRTC ಬಸ್ ಹಾಗೂ ಬೈಕ್ ನಡುವೆ ಭಯಾನಕ ಅಪಘಾತ, ಓರ್ವ ಬೈಕ್ ಸವಾರ ಸ್ಥಳದಲ್ಲೇ ಸಾವು, ಮತ್ತೋರ್ವ ಗಂಭೀರ..!

ಮುಂಡಗೋಡ ತಾಲೂಕಿನ ಪಾಳಾ ಹತ್ತಿರ KSRTC ಬಸ್ ಹಾಗೂ ಬೈಕ್ ನಡುವೆ, ಮುಕಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಓರ್ವ ಸ್ಥಳದಲ್ಲೇ ಮೃತಪಟ್ಟು, ಮತ್ತೋರ್ವ ಗಂಭೀರ ಗಾಯಗೊಂಡಿರೋ ಘಟನೆ ನಡೆದಿದೆ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಆರೆಗೊಪ್ಪ ಗ್ರಾಮದ ಮಾಹಬಲೇಶ್ವರ ಸಂಕಪಾಳೆ(38) ಸ್ಥಳದಲ್ಲೇ ಮೃತಪಟ್ಟ ಬೈಕ್ ಸವಾರನಾಗಿದ್ದಾನೆ. ಇನ್ನು ಹಾನಗಲ್ ತಾಲೂಕಿನ ಹುಡೆ ಗ್ರಾಮದ ಜಾಫರ್ ದೇವಸೂರ್(32) ಎಂಬುವವನು ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದಾನೆ. ಪಾಳಾ ಹಾಗೂ ಸಿಂಗನಳ್ಳಿ ನಡುವಿನ ರಸ್ತೆಯಲ್ಲಿ ಘಟನೆ ನಡೆದಿದ್ದು, ಗಾಯಾಳುವನ್ನು ಆಸ್ಪತ್ರೆಗೆ ರವಾನಿಸಲಾಗಿದೆ....

error: Content is protected !!