Death News; ಮುಂಡಗೋಡ ತಾಲೂಕಿನ ಮಳಗಿಯ ಧರ್ಮಾ ಜಲಾಶಯದಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ. ಜಲಾಶಯದಲ್ಲಿ ಶವ ತೇಲುತ್ತಿರೊ ದೃಷ್ಯ ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ, ಸ್ಥಳಕ್ಕೆ ಬಂದ ಮುಂಡಗೋಡ ಪೊಲೀಸರು ಸ್ಥಳೀಯರ ಸಹಕಾರದಿಂದ ಶವ ಹೊರತೆಗೆದಿದ್ದಾರೆ.
ಅಂದಹಾಗೆ, ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬಾಳಣ್ಣ ಸಣ್ಣಪಾಳೆ ಎಂಬುವವರೇ ಇಲ್ಲಿ ಶವವಾಗಿ ಸಿಕ್ಕಿದ್ದು, ಕಳೆದ ಗುರುವಾರ ಇವ್ರು ಮನೆಯಿಂದ ತೆರಳಿದ್ದವರು, ಮನೆಗೆ ವಾಪಸ್ ಆಗಿರಲಿಲ್ಲವಂತೆ. ಇಂದು ಮಳಗಿ ಧರ್ಮಾ ಜಲಾಶಯದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮುಂಡಗೋಡ ಪೊಲೀಸರು ಪರಿಶೀಲನೆ ನಡೆಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.