Accident News; ಮುಂಡಗೋಡ ತಾಲೂಕಿನ ಅತ್ತಿವೇರಿ ಗೌಳಿ ದಡ್ಡಿಯ ಯುವಕನೋರ್ವ, ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡು, ಚಿಕಿತ್ಸೆ ಫಲಕಾರಿಯಾಗದೇ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಮೃತಪಟ್ಟಿದ್ದಾನೆ.
ಅತ್ತಿವೇರಿ ಗೌಳಿ ದಡ್ಡಿಯ ಬಮ್ಮು ಜನ್ನು ಬೋಡೇಕರ್(20), ಮೃತಪಟ್ಟ ಯುವಕನಾಗಿದ್ದಾನೆ. ಈತ ಕೆಲಸ ನಿಮಿತ್ತ, ಅತ್ತಿವೇರಿ ಗೌಳಿ ದಡ್ಡಿಯಿಂದ ಉಡುಪಿಯ ಮಣಿಪಾಲಕ್ಕೆ ತೆರಳುತ್ತಿದ್ದ ವೇಳೆ, ಜೂನ್ 26 ರಂದು ಸಂಜೆ ಬೈಕ್ ಅಪಘಾತವಾಗಿದೆ.
Accident News; ಹೀಗಾಗಿ, ಗಂಭೀರ ಗಾಯಗೊಂಡಿದ್ದ ಯುವಕನನ್ನು ಮಣಿಪಾಲದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ತರಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಬಮ್ಮು ಮೃತಪಟ್ಟಿದ್ದಾನೆ.
ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಅರಣ್ಯಾಧಿಕಾರಿಗಳ ಭರ್ಜರಿ ಕಾರ್ಯಾಚರಣೆ, ಖಾನಾಪುರದಲ್ಲಿ ಕಡವೆ ಬೇಟೆಯಾಡಿದ್ದ 9ಜನರ ಬಂಧನ..!