ಮುಂಡಗೋಡ ತಾಲೂಕಿನ ಗಣೇಶಪುರದ ರೈತನ ಮೇಲೆ ಕರಡಿ ದಾಳಿ ಕೇಸ್ ಗೆ ಸಂಬಂಧಿಸಿದಂತೆ, ಮುಂಡಗೋಡ RFO ಅಪ್ಪಾರಾವ್ ಕಲಶೆಟ್ಟಿ ಕರಡಿ ದಾಳಿಗೊಳಗಾದ ರೈತನಿಗೆ ಸ್ಪಂಧಿಸಿದ್ದಾರೆ. ಘಟನೆ ಮಾಹಿತಿ ತಿಳಿಯುತ್ತಿದ್ದಂತೆ, ಹುಬ್ಬಳ್ಳಿಯ ಕಿಮ್ಸ್ ಗೆ ಭೇಟಿ ನೀಡಿ ಗಾಯಗೊಂಡಿರೋ ರೈತನ ಆರೋಗ್ಯ ವಿಚಾರಿಸಿದ್ದಾರೆ.

ಅಂದಹಾಗೆ, ನಿನ್ನೆ ರವಿವಾರ ಮುಂಡಗೋಡ ತಾಲೂಕಿನ ಗಣೇಶಪುರದ ರಹೀಮಖಾನ್ ಮುನ್ವರ್ಖಾನ್ ಪಾಳಾ(60) ಎಂಬುವವನು ಕರಡಿ ದಾಳಿಗೆ ತುತ್ತಾಗಿದ್ದ. ಪಾಳಾ ಸಮೀಪದ ತನ್ನ ಗದ್ದೆಗೆ ಮಂಗನ ಕಾಯಲು ಹೋಗಿದ್ದಾಗ ಕರಡಿ ದಾಳಿ ಮಾಡಿತ್ತು. ಪರಿಣಾಮ ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಪ್ರಾಥಮಿಕ ಚಿಕಿತ್ಸೆ ಗಾಗಿ ಮುಂಡಗೋಡ ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿತ್ತು.

ಹೀಗಾಗಿ, ಮಾಹಿತಿ ತಿಳಿಯುತ್ತಿದ್ದಂತೆ RFO ಅಪ್ಪಾರಾವ್ ಕಲಶೆಟ್ಟಿ ಗಾಯಾಳುವನ್ಜು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಲ್ಲದೇ, ಇಲಾಖೆಯಿಂದ ದೊರೆಯಬಹುದಾದ ಪರಿಹಾರಗಳನ್ನು ದೊರಕೊಸಿ ಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡೋದಾಗಿ ಭರವಸೆ ನೀಡಿದ್ದಾರೆ.
