ಗಣೇಶಪುರದ ರೈತನ ಮೇಲೆ ಕರಡಿ ದಾಳಿ, ಗಂಭೀರ ಗಾಯ..!

ಮುಂಡಗೋಡ ತಾಲೂಕಿನ ಗಣೇಶಪುರದ ರೈತನ ಮೇಲೆ ಕರಡಿ ದಾಳಿ ಮಾಡಿದೆ. ಕರಡಿ ದಾಳಿಯಿಂದ ರೈತ ಗಂಭೀರ ಗಾಯಗೊಂಡಿದ್ದು ಸದ್ಯ ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲಾಗಿದ್ದಾನೆ. ರಹೀಮಖಾನ್ ಮುನ್ವರ್ಖಾನ್ ಪಾಳಾ(60) ಎಂಬುವವನೇ ಕರಡಿ ದಾಳಿಗೆ ತುತ್ತಾಗಿದ್ದ ರೈತನಾಗಿದ್ದಾನೆ.

ಅಂದಹಾಗೆ, ಮುಂಡಗೋಡ ತಾಲೂಕಿನ ಗಣೇಶಪುರದ ವ್ಯಕ್ತಿ ಪಾಳಾ ಸಮೀಪದ ತನ್ನ ಗದ್ದೆಗೆ ಮಂಗನ ಕಾಯಲು ಹೋಗಿದ್ದಾಗ ಕರಡಿ ದಾಳಿ ಮಾಡಿದೆ‌. ಪರಿಣಾಮ ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಪ್ರಾಥಮಿಕ ಚಿಕಿತ್ಸೆ ಗಾಗಿ ಮುಂಡಗೋಡ ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿದೆ.

ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.