Banking News:ಭಾರತದ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಉತ್ತಮ ಕ್ರೆಡಿಟ್ ಸ್ಕೋರ್ ಹಾಗೂ ಕ್ರೆಡಿಟ್ ಹಿಸ್ಟರಿ ಹೊಂದಿರುವವರಿಗೆ ಅತ್ಯಂತ ಸುಲಭವಾಗಿ, ಉತ್ತಮ ಬಡ್ಡಿ ದರದಲ್ಲಿ ಸಾಲ ಸಿಗುವುದರಲ್ಲಿ ಅನುಮಾನವಿಲ್ಲ.

ಹೀಗಿರುವಾಗ ನಿಮ್ಮ ಕ್ರೆಡಿಟ್ ಸ್ಕೋರ್ ಈಗಾಗಲೇ 700 ದಾಟಿದ್ರೆ, ಇನ್ನಷ್ಟು ಉತ್ತಮ ಸಾಲ ಸೌಲಭ್ಯ ಪಡೆಯಲು ಕೆಲವು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ.
ಹೌದು ನಿಮ್ಮ ಕ್ರೆಡಿಟ್‌ ಸ್ಕೋರ್ 700ಕ್ಕೂ ಅಧಿಕ ವಾಗಿ ಹೆಚ್ಚಿಸಲು ಸಕಾಲಕ್ಕೆ ಪಾವತಿ ಮಾಡಿ, ಕ್ರೆಡಿಟ್ ಬಳಕೆಯನ್ನು ಮಿತಿಯಲ್ಲಿಡುವುದರ ಜೊತೆಗೆ ವೈವಿಧ್ಯಮಯ ಸಾಲಗಳನ್ನು ಹೊಂದಿರುವುದು ಬಹಳ ಮುಖ್ಯ.

ಹೀಗಾಗಿ ನಿಮ್ಮ ಕ್ರೆಡಿಟ್‌ ಸ್ಕೋರ್ ಮತ್ತಷ್ಟು ಹೆಚ್ಚಿಸಲು ಐದು ಸಲಹೆಗಳನ್ನ ತಿಳಿಯುವ ಮೊದಲು, ಎಷ್ಟು ಸ್ಕೋರ್ ಇದ್ರೆ, ಏನೆಂದು ಪರಿಗಣಿಸಲಾಗುತ್ತದೆ ಎಂಬುದನ್ನು ಮೊದಲು ಈ ಕೆಳಗೆ ತಿಳಿಯಿರಿ.

ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಹೆಚ್ಚಿಸಲು 5 ಸರಳ ಮಾರ್ಗಗಳು:

1. ಸಕಾಲಿಕ ಪಾವತಿ:
ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್‌ಗಳು ಮತ್ತು ಸಾಲದ EMIಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಿ. ಆಟೋ ಪೇಮೆಂಟ್ ಆಯ್ಕೆ ಬಳಸಿದರೆ, ತಪ್ಪಿಸಿಕೊಳ್ಳುವ ಸಾಧ್ಯತೆ ಕಡಿಮೆ.

2. ಕಡಿಮೆ ಕ್ರೆಡಿಟ್ ಬಳಕೆ:
ನಿಮ್ಮ ಒಟ್ಟು ಕ್ರೆಡಿಟ್ ಮಿತಿಯ 30%ಕ್ಕಿಂತ ಕಡಿಮೆ ಬಳಸಿ. ಉದಾಹರಣೆಗೆ, ನಿಮ್ಮ ಕ್ರೆಡಿಟ್ ಮಿತಿ ₹1,00,000 ಆಗಿದ್ದರೆ, ₹30,000ಕ್ಕಿಂತ ಹೆಚ್ಚು ಬಳಸಬೇಡಿ.

3. ವಿವಿಧ ಕ್ರೆಡಿಟ್ ಮಿಕ್ಸ್:
ಸುರಕ್ಷಿತ (ಗೃಹ ಸಾಲ) ಚಿನ್ನದ ಸಾಲ ಮತ್ತು ಅಸುರಕ್ಷಿತ (ಕ್ರೆಡಿಟ್ ಕಾರ್ಡ್), ವೈಯಕ್ತಿಕ ಸಾಲಗಳ ಸಂಯೋಜನೆ ಇರಲಿ.

4. ಹೊಸ ಕ್ರೆಡಿಟ್ ಅಪ್ಲಿಕೇಶನ್‌ಗಳನ್ನು ಮಿತಿಗೊಳಿಸಿ:
ಪದೇ ಪದೇ ಅರ್ಜಿ ಸಲ್ಲಿಸುವುದರಿಂದ ನಿಮ್ಮ ಸ್ಕೋರ್ ಕಡಿಮೆಯಾಗಬಹುದು. ಅಗತ್ಯವಿದ್ದಾಗ ಮಾತ್ರ ಅರ್ಜಿ ಸಲ್ಲಿಸಿ.

5. ಕ್ರೆಡಿಟ್ ರಿಪೋರ್ಟ್‌ಗಳನ್ನು ಪರಿಶೀಲಿಸಿ:
ನಿಮ್ಮ ಕ್ರೆಡಿಟ್ ರಿಪೋರ್ಟ್‌ಗಳನ್ನು ಆಗಾಗ ಪರಿಶೀಲಿಸಿ. ತಪ್ಪುಗಳಿದ್ದರೆ, ತಕ್ಷಣವೇ ಸರಿಪಡಿಸಿಕೊಳ್ಳಿ.

ಈ ಕ್ರಮಗಳನ್ನು ಅನುಸರಿಸುವುದರಿಂದ ನಿಮ್ಮ ಕ್ರೆಡಿಟ್ ಸ್ಕೋರ್ ಕ್ರಮೇಣವಾಗಿ ಸುಧಾರಿಸುತ್ತದೆ. ಇದು ನಿಮ್ಮ ಹಣಕಾಸು ಭವಿಷ್ಯಕ್ಕೆ ಉತ್ತಮ ಅವಕಾಶಗಳನ್ನು ನೀಡುತ್ತದೆ.

error: Content is protected !!