Home admin

Author: admin (ಶ್ರೀ ಆದಿಶಕ್ತಿ ಮಿಡಿಯಾ ಪ್ರೈವೇಟ್ ಲಿಮಿಟೆಡ್)

Post
ಮಹಾರಾಷ್ಟ್ರ ಪಶ್ಚಿಮ ಘಟ್ಟದಲ್ಲಿ ಮಳೆ ಅರ್ಭಟ; ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ಕೃಷ್ಣಾ ನದಿ..!

ಮಹಾರಾಷ್ಟ್ರ ಪಶ್ಚಿಮ ಘಟ್ಟದಲ್ಲಿ ಮಳೆ ಅರ್ಭಟ; ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ಕೃಷ್ಣಾ ನದಿ..!

 Krishna river flowing; ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಮುಂದುವರೆದ ಮಳೆ ಆರ್ಭಟ. ಗಡಿ ಜಿಲ್ಲೆ ಬೆಳಗಾವಿಯಲ್ಲೂ ನಿಲ್ಲದ ಮಳೆ. ಕೃಷ್ಣಾ ನದಿ ಅಪಾಯದ‌ ಮಟ್ಟ‌ ಮೀರಿ ಹರಿಯುತ್ತಿದೆ. ಕಳೆದ ಒಂದು ವಾರದಿಂದ ‌ಸುರಿಯುತ್ತಿರೋ ಮಳೆಯಿಂದ, ಕೃಷ್ಣಾ ‌ನದಿಗೆ ಮಹಾರಾಷ್ಟ್ರದಿಂದ 90 ಸಾವಿರ ಕ್ಯೂಸೆಕ್ ಗೂ ಅಧಿಕ ಒಳ ಹರಿವು ಆಗಿದೆ. ಪ್ರವಾಹ ಪರಿಸ್ಥಿತಿ ತಗ್ಗಿಸಲು ಹಿಪ್ಪರಗಿ ಬ್ಯಾರೇಜನಿಂದ ಅಷ್ಟೇ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗ್ತಿದೆ. ಸದ್ಯ ಚಿಕ್ಕೋಡಿ ಉಪ ವಿಭಾಗದಲ್ಲಿ 6 ಕೆಳ ಹಂತದ ಸೇತುವೆಗಳು...

Post
ಮತ್ತೆ ಏರಿಕೆಯ ಹಾದಿ ಹಿಡಿದ ಚಿನ್ನದ ಬೆಲೆ! ಈಗ 10 ಗ್ರಾಂ ಬಂಗಾರದ ಬೆಲೆ ಎಷ್ಟಿದೆ..?

ಮತ್ತೆ ಏರಿಕೆಯ ಹಾದಿ ಹಿಡಿದ ಚಿನ್ನದ ಬೆಲೆ! ಈಗ 10 ಗ್ರಾಂ ಬಂಗಾರದ ಬೆಲೆ ಎಷ್ಟಿದೆ..?

Gold Price Today : ಆಭರಣ ಖರೀದಿಸಲು ಯೋಜಿಸುತ್ತಿರುವವರಿಗೆ ಮತ್ತೆ ಶಾಕ್‌ ನೀಡಿದೆ ಚಿನ್ನದ ಬೆಲೆ. ಇತ್ತೀಚೆಗೆ ಇಳಿಕೆ ಕಂಡಿದ್ದ ಚಿನ್ನದ ದರ ಈಗ ಮತ್ತೆ ಏರಿಕೆಯ ಹಾದಿ ಹಿಡಿದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿನ ಪ್ರತಿಕೂಲ ಸನ್ನಿವೇಶಗಳು, ಇರಾನ್-ಇಸ್ರೇಲ್ ಯುದ್ಧ ಮತ್ತು ವ್ಯಾಪಾರ ಅನಿಶ್ಚಿತತೆಗಳಂತಹ ಕಾರಣಗಳಿಂದ ಚಿನ್ನದ ದರಗಳು ಮತ್ತೆ ಹೆಚ್ಚುತ್ತಿವೆ. ಹೂಡಿಕೆದಾರರು ಚಿನ್ನವನ್ನು ಸುರಕ್ಷಿತ ಹೂಡಿಕೆ ಸಾಧನವಾಗಿ ಪರಿಗಣಿಸುತ್ತಿದ್ದು, ಚಿನ್ನದ ದರಗಳು ಕ್ರಮೇಣ ಹೆಚ್ಚುತ್ತಿವೆ. ದೇಶೀಯ ಮಾರುಕಟ್ಟೆಯಲ್ಲಿ ಒಂದು ತೊಲ (10 ಗ್ರಾಂ) ಚಿನ್ನದ ದರ ಒಂದು...

Post
ಗ್ರಾನೈಟ್ ಮೈಮೇಲೆ ಬಿದ್ದು, ಮಲ್ಲಿಕಾರ್ಜುನ ಟೈಲ್ಸ್ & ಸಿರಾಮಿಕ್ಸ್ ಮಾಲೀಕನೇ ಸಾವು..!

ಗ್ರಾನೈಟ್ ಮೈಮೇಲೆ ಬಿದ್ದು, ಮಲ್ಲಿಕಾರ್ಜುನ ಟೈಲ್ಸ್ & ಸಿರಾಮಿಕ್ಸ್ ಮಾಲೀಕನೇ ಸಾವು..!

Karwar Crime News; ಕಾರವಾರ: ಮಲ್ಲಿಕಾರ್ಜುನ ಟೈಲ್ಸ & ಸಿರಾಮಿಕ್ಸ ಮಾಲಕ ಮುದ್ದಣ್ಣ ಹಾಲುಂಡಿ ಅವರ ಮೈಮೇಲೆ ಗ್ರಾನೆಟ್ ಕಲ್ಲು ಬಿದ್ದಿದೆ. ಪರಿಣಾಮ ಅವರು ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ಮುದ್ದಣ್ಣ ಹಾಲುಂಡಿ (53) ಅವರು ಉಪ್ಪಾರ ಸಮುದಾಯದ ಮುಖಂಡರಾಗಿದ್ದರು. ಕೊಪ್ಪಳ ಜಿಲ್ಲೆಯವರಾದ ಅವರು ಕಾರವಾರದ ಬಾಂಡಿಶೆಟ್ಟಾದಲ್ಲಿ ಮನೆ ಮಾಡಿಕೊಂಡಿದ್ದರು. ಅಸ್ನೋಟಿಯ ಕೊಳಗೆ ಗ್ರಾಮದ ಬಳಿ ಅವರು ಗ್ರಾನೆಟ್ ಸಂಗ್ರಹಿಸಿಟ್ಟುಕೊoಡಿದ್ದರು. ಗುರುವಾರ ತಮ್ಮ ಮಳಿಗೆಗೆ ಬಂದ ಗ್ರಾಹಕರಿಗೆ ಗ್ರಾನೆಟ್ ಹಾಗೂ ಟೈಲ್ಸುಗಳನ್ನು ಕಾಣಿಸುತ್ತಿದ್ದರು. ಗ್ರಾಹಕರು ಆಯ್ಕೆ ಮಾಡಿಕೊಂಡ ಕಡಪವನ್ನು ರಿಕ್ಷಾಗೆ...

Post
5 ವರ್ಷದಲ್ಲಿ 2303% ರಿಟರ್ನ್; ಈಗ ವಿದೇಶದಲ್ಲಿ ಗುತ್ತಿಗೆ ಪಡೆದ ಫಾರ್ಮಾ ಕಂಪನಿ, ಅಪ್ಪರ್ ಸರ್ಕ್ಯೂಟ್ ಹೊಡೆದ ಷೇರು..!

5 ವರ್ಷದಲ್ಲಿ 2303% ರಿಟರ್ನ್; ಈಗ ವಿದೇಶದಲ್ಲಿ ಗುತ್ತಿಗೆ ಪಡೆದ ಫಾರ್ಮಾ ಕಂಪನಿ, ಅಪ್ಪರ್ ಸರ್ಕ್ಯೂಟ್ ಹೊಡೆದ ಷೇರು..!

Pharma Stock News : ನವದೆಹಲಿ: ಭಾರತೀಯ ಷೇರು ಮಾರುಕಟ್ಟೆ ಗುರುವಾರ ರೆಡ್‌ ಮಾರ್ಕ್‌ನಲ್ಲಿ ಮುಚ್ಚಿದೆ. ಮಾರುಕಟ್ಟೆ ಕುಸಿತದ ಹೊತಾಗಿಯೂ ಫಾರ್ಮಾ ಕಂಪನಿ ‘ವೆಲ್‌ಕ್ಯೂರ್ ಡ್ರಗ್ಸ್ & ಫಾರ್ಮಾಸುಟಿಕಲ್ಸ್‌ (Welcure Drugs and Pharmaceuticals) ಷೇರುಗಳಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಈ ಷೇರು ಬೆಲೆ ಶೇ.5 ರಷ್ಟು ಏರಿಕೆಯೊಂದಿಗೆ ₹14.42ಕ್ಕೆ ತಲುಪಿದ್ದು, ಅಪ್ಪರ್ ಸರ್ಕ್ಯೂಟ್ ಹೊಡೆದಿದೆ. ವಾಸ್ತವವಾಗಿ, ವೆಲ್‌ಕ್ಯೂರ್ ಡ್ರಗ್ಸ್ ಅಂಡ್ ಫಾರ್ಮಾಸ್ಯುಟಿಕಲ್ಸ್ ಕಂಪನಿಯು ₹517 ಕೋಟಿ ಮೌಲ್ಯದ ಗ್ಲೋಬಲ್‌ ಸೋರ್ಸಿಂಗ್ ಆರ್ಡರ್‌ ಪಡೆದಿರುವುದಾಗಿ ಘೋಷಿಸಿದೆ. ಅಂದರೆ,...

Post
ಉತ್ತರ ಕನ್ನಡ ಜಿಲ್ಲೆಯ ಇಂದಿನ ಸಂಕ್ಷಿಪ್ತ ಸುದ್ದಿಗಳು..!

ಉತ್ತರ ಕನ್ನಡ ಜಿಲ್ಲೆಯ ಇಂದಿನ ಸಂಕ್ಷಿಪ್ತ ಸುದ್ದಿಗಳು..!

Uttar Kannada News Today; ಉತ್ತರ ಕನ್ನಡ ಜಿಲ್ಲೆಯ ಇಂದಿನ ಸಂಕ್ಷಿಪ್ತ ಸುದ್ದಿಗಳು..! Uttar Kannada News Today; ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ..! ಕಾರವಾರ; ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮಂತ್ರಾಲಯ, ಭಾರತ ಸರಕಾರದಿಂದ 2025ನೇ ಸಾಲಿಗೆ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. 2025 ರ ಜುಲೈ 31ಕ್ಕೆ ಅನ್ವಯವಾಗುವಂತೆ 5 ವರ್ಷ ಮೇಲ್ಪಟ್ಟ ಹಾಗೂ 18 ವರ್ಷದೊಳಗಿನ ವಿವಿಧ ಕ್ಷೇತ್ರಗಳ ಸಾಧಕರಾದ (ಧೈರ್ಯ ಮತ್ತು ಸಾಹಸದಿಂದ...

Post
ಒಂದೂವರೆ ವರ್ಷದೊಳಗೆ ಹು – ಧಾ ಮಹಾನಗರ ‌ಪಾಲಿಕೆ ಆಯುಕ್ತರ ವರ್ಗಾವಣೆ: ಗುತ್ತಿಗೆದಾರರ ಸಂಘ ಆಕ್ರೋಶ..!

ಒಂದೂವರೆ ವರ್ಷದೊಳಗೆ ಹು – ಧಾ ಮಹಾನಗರ ‌ಪಾಲಿಕೆ ಆಯುಕ್ತರ ವರ್ಗಾವಣೆ: ಗುತ್ತಿಗೆದಾರರ ಸಂಘ ಆಕ್ರೋಶ..!

Hubli- Dharwad News: ಹುಬ್ಬಳ್ಳಿ : ರಾಜ್ಯದ ಎರಡನೇ ಅತಿ ದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಮಿಷನರ್​ಗಳಿಗೆ ಪೂರ್ಣಾವಧಿ‌ ಅಧಿಕಾರ ಸಿಕ್ಕೇ ಇಲ್ಲ. ಇಲ್ಲಿ ಆಯುಕ್ತರಾಗಿ ಆಗಮಿಸುವವರು ಕೇವಲ ಒಂದು, ಒಂದೂವರೆ ಹಾಗೂ ಆರು ತಿಂಗಳಲ್ಲಿ ವರ್ಗಾವಣೆಯಾಗುತ್ತಿರುವುದರಿಂದ ಅವಳಿ‌ ನಗರದ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಒಂದು ನಗರ ಅಭಿವೃದ್ಧಿಗೊಳ್ಳಬೇಕಾದರೆ ಆಯುಕ್ತರಾಗಿ ಬರುವವರು ಕನಿಷ್ಠ ಎರಡು ವರ್ಷವಾದರೂ ಇಲ್ಲಿರಬೇಕು. ಆದರೆ, ಇಲ್ಲಿಗೆ ಕಮಿಷನರ್ ಆಗಿ ಬರುವವರು ಒಂದರಿಂದ...

Post
ಮಹಿಳೆಗೆ ಬೈಕ್ ಡಿಕ್ಕಿ ಹೊಡೆದು, 30 ವರ್ಷ ತಲೆ ಮರೆಸಿಕೊಂಡಿದ್ದ ಆರೋಪಿ ಕೇರಳದಲ್ಲಿ ಬಂಧನ..!

ಮಹಿಳೆಗೆ ಬೈಕ್ ಡಿಕ್ಕಿ ಹೊಡೆದು, 30 ವರ್ಷ ತಲೆ ಮರೆಸಿಕೊಂಡಿದ್ದ ಆರೋಪಿ ಕೇರಳದಲ್ಲಿ ಬಂಧನ..!

Sirsi Crime News; ಶಿರಸಿ; ಗ್ರಾಮೀಣ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ,30 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಹೆಡೆಮುರಿ ಕಟ್ಟಿದ್ದಾರೆ‌. 1996 ರಲ್ಲಿ, ಶಿರಸಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಅತಿ ವೇಗವಾಗಿ ಬೈಕ್ ಚಲಾಯಿಸಿಕೊಂಡು ಬಂದು ಶಿರಸಿ- ಕುಮಟಾ ರಸ್ತೆ ಕಸಗೆ ಹತ್ತಿರ, ಪಾದಾಚಾರಿ ಕೋಖಂಡದ ಲೀಲಾವತಿ ಗಣಪತಿ ಹೆಗಡೆ ಎಂಬುವ ಮಹಿಳೆಗೆ ಡಿಕ್ಕಿ ಹೊಡೆದಿದ್ದ. ಡಿಕ್ಕಿ ಹೊಡೆದು ಬೈಕ್ ನಿಲ್ಲಿಸದೇ ಅಲ್ಲಿಂದ ಪರಾರಿಯಾಗಿದ್ದ. ಆರೋಪಿತನು 1996 ರಿಂದಲೂ ನ್ಯಾಯಾಲಯಕ್ಕೆ ಹಾಜರಾಗದೇ ತಲೆ ಮರೆಸಿಕೊಂಡಿದ್ದನು. ಇದನ್ನೂ ಓದಿ👉 ವಸತಿ...

Post
ವಸತಿ ಯೋಜನೆಯಲ್ಲಿ ಅಲ್ಪಸಂಖ್ಯಾತರ ಮೀಸಲಾತಿ ಹೆಚ್ಚಳ : ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ..!

ವಸತಿ ಯೋಜನೆಯಲ್ಲಿ ಅಲ್ಪಸಂಖ್ಯಾತರ ಮೀಸಲಾತಿ ಹೆಚ್ಚಳ : ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ..!

Minority Scheme : ಬೆಂಗಳೂರು: ರಾಜ್ಯ ಸರ್ಕಾರ ಗುತ್ತಿಗೆ ಬೆನ್ನಲ್ಲೇ ಈಗ ಅಲ್ಪಸಂಖ್ಯಾತರಿಗೆ ಮತ್ತೊಂದು ಯೋಜನೆಯಲ್ಲಿ ಮೀಸಲಾತಿ ಹೆಚ್ಚಳಕ್ಕೆ ನಿರ್ಧರಿಸಿದ್ದು, ವಿವಿಧ ವಸತಿ ಯೋಜನೆಗಳ ಅಡಿಯಲ್ಲಿ ಅಲ್ಪಸಂಖ್ಯಾತರಿಗೆ ಇದ್ದ ಮೀಸಲಾತಿಯನ್ನು ಶೇಕಡಾ 10 ರಿಂದ 15 ಕ್ಕೆ ಹೆಚ್ಚಿಸಲು ಸಚಿವ ಸಂಪುಟ ಸಭೆ ಗುರುವಾರ ಒಪ್ಪಿಗೆ ನೀಡಿದೆ. ಗುರುವಾರ (ಜೂನ್‌ ೧೯) ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಸಿದ ಸಚಿವ ಸಂಪುಟ ಸಭೆಯಲ್ಲಿ, ರಾಜ್ಯದ ವಿವಿಧ ವಸತಿ ಯೋಜನೆಗಳ ಅಡಿಯಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿ ಹೆಚ್ಚಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ....

Post
ಕೃಷಿ ಇಲಾಖೆಯಲ್ಲಿ ಸಮಗ್ರ ಬದಲಾವಣೆ : ಸಚಿವ ಎನ್. ಚಲವರಾಯ ಸ್ವಾಮಿ

ಕೃಷಿ ಇಲಾಖೆಯಲ್ಲಿ ಸಮಗ್ರ ಬದಲಾವಣೆ : ಸಚಿವ ಎನ್. ಚಲವರಾಯ ಸ್ವಾಮಿ

Agriculture News;  ಕಾರವಾರ; ರಾಜ್ಯದ ಕೃಷಿ ಇಲಾಖೆಯಲ್ಲಿ ಸಮಗ್ರ ಬದಲಾವಣೆ ತರಲಾಗುತ್ತಿದೆ ಎಂದು‌ ಕೃಷಿ ಸಚಿವ ಎನ್. ಚಲವರಾಯ ಸ್ವಾಮಿ ಹೇಳಿದರು. ಅವರು ಮಂಗಳವಾರ ಹಳಿಯಾಳದ ಪುರಭವನದಲ್ಲಿ, ಮುಂಗಾರು ಬೀಜ ಬಿತ್ತನೆ ಅಭಿಯಾನಕ್ಕೆ ಚಾಲನೆ ಹಾಗೂ ಕೃಷಿ ಯಂತ್ರೋಪಕರಣ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೃಷಿ ಇಲಾಖೆಯಲ್ಲಿ ಸಮಗ್ರವಾಗಿ ಬದಲಾವಣೆ ತರಲಾಗುತ್ತಿದ್ದು 1000 ಅಧಿಕಾರಿ ಸಿಬ್ಬಂದಿಗಳ ನೇಮಕಾತಿಗೆ ಸೂಚನೆ ನೀಡಲಾಗಿದ್ದು, ಸದ್ಯದಲ್ಲಿಯೇ ನೋಟಿಪಿಕೇಷನ್ ಹೊರಡಿಸಲಾಗುವುದು ಹಾಗೂ 700 ಮಂದಿಗೆ ಈಗಾಗಲೇ ಮುಂಬಡ್ತಿ ನೀಡಲಾಗಿದೆ ಎಂದರು. ರಾಜ್ಯದ 224...

Post
ಜೋಯಿಡಾ ತಾಲೂಕು ದೇಶದ ಮೊದಲ ಸಾವಯವ ತಾಲ್ಲೂಕಾಗಿ ಪರಿವರ್ತನೆ; ಸಚಿವ ಚೆಲುವರಾಯ ಸ್ವಾಮಿ

ಜೋಯಿಡಾ ತಾಲೂಕು ದೇಶದ ಮೊದಲ ಸಾವಯವ ತಾಲ್ಲೂಕಾಗಿ ಪರಿವರ್ತನೆ; ಸಚಿವ ಚೆಲುವರಾಯ ಸ್ವಾಮಿ

Agriculture News; ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಲ್ಲಿರುವ ಭೂಮಿಯಲ್ಲಿ ರಾಸಾಯನಿಕಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ, ಸಾವಯವ ರೀತಿಯಲ್ಲಿ ಬಳಕೆ ಮಾಡುವ ಮೂಲಕ ಮೂಲಕ ದೇಶದ ಮೊದಲ‌ ಸಾವಯವ ಕೃಷಿ ತಾಲೂಕನ್ನಾಗಿ ಪರಿವರ್ತಿಸಲಾಗುವುದು ಎಂದು ಕೃಷಿ ಸಚಿವ ಎನ್ ಚಲವರಾಯ ಸ್ವಾಮಿ ಹೇಳಿದರು. ಅವರೂ ಮಂಗಳವಾರ, ಜೋಯಿಡಾದಲ್ಲಿ, ಜಿಲ್ಲಾ ಆಡಳಿತ ಹಾಗೂ ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಕೃಷಿ ಸಂಬoಧಿತ ಇಲಾಖೆಗಳು ಹಾಗೂ ಐ.ಸಿ.ಎ ಆರ್- ಕೃಷಿ ವಿಜ್ಞಾನ ಕೇಂದ್ರ ಶಿರಸಿ ಇವರ ಸಂಯುಕ್ತ...

error: Content is protected !!