ಮುಂಡಗೋಡ ತಾಲೂಕಿನಲ್ಲಿ ಮಳೆಯ ಅವಾಂತರಗಳು ಶುರುವಾಗಿವೆ. ಪಾಳಾ ಗ್ರಾಮದಲ್ಲಿ ನಿನ್ನೆ ರಾತ್ರಿ ಸುರಿದ ಮಳೆ, ಗಾಳಿಯಿಂದ ಮನೆಯ ಮೇಲೆ ಮರ ಬಿದ್ದು ಇಬ್ಬರಿಗೆ ಸಣ್ಣಪುಟ್ಟ ಗಾಯವಾಗಿದೆ. ಮನೆಗೆ ಹಾನಿಯಾಗಿದೆ. ಧಾರಾಕಾರ ಮಳೆ ಮತ್ತು ಗಾಳಿಯಿಂದ ಬದ್ರಾಪುರದ ಹೊಸನಗರದಲ್ಲಿ ರಜಿಯಾ ಖಾಸಿಂಸಾಬ್ ಶೇಕ್ ಎಂಬುವರ ಮನೆ ಮೇಲೆ, ಮನೆ ಪಕ್ಕದಲ್ಲಿ ಇದ್ದ ಬೃಹತ್ ಗಾತ್ರದ ಮರ ಬಿದ್ದಿದೆ. ಮನೆ ಮೇಲೆ ಬಿದ್ದು ಹಾನಿಯಾಗಿದೆ. ಮನೆಯಲ್ಲಿದ್ದ ರಜಿಯಾ ಬೇಗಂ ಮತ್ತು ಮಗನಾದ ಮಕ್ಬುಲ್ ಅಹಮದ್ ಶೇಕ್ ಅವರಿಗೆ ಸಣ್ಣಪುಟ್ಟ...
Top Stories
ಚಿಗಳ್ಳಿ ಪ್ರೌಢಶಾಲಾ ಆವರಣದಲ್ಲಿ ಡಿ.26 ರಂದು ಧರಣಿ ಸತ್ಯಾಗ್ರಹಕ್ಕೆ ವಿರೋಧ, ಮನವಿ ಅರ್ಪಣೆ..!
ಇಂದೂರು ಸೊಸೈಟಿಯ ನೂತನ ಕಛೇರಿ ಕಟ್ಟಡದ ಉದ್ಘಾಟನೆ ನೆರವೇರಿಸಿದ ಶಾಸಕ ಶಿವರಾಮ್ ಹೆಬ್ಬಾರ್..!
ಕರ್ನಾಟಕದ ಹಲವೆಡೆ ತೀವ್ರ ಶೀತ ಗಾಳಿ ; ಇಂದು 7 ಜಿಲ್ಲೆಗಳಿಗೆ ಆರೆಂಜ್, 16 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ವಿಧಿವಶ..!
ತಡಸ ತಾಯವ್ವನ ದೇವಸ್ಥಾನ ಬಳಿ ಭೀಕರ ಕಾರು ಅಪಘಾತ, ಮುಂಡಗೋಡ ತಹಶೀಲ್ದಾರ ಕಚೇರಿಯ ಓರ್ವ ತಲಾಟಿ ಸ್ಥಳದಲ್ಲೇ ಸಾವು, ಮತ್ತಿಬ್ಬರು ಗಂಭೀರ..!
ಎಚ್ಚರ, ಎಚ್ಚರ..! ತಡಸ ತಾಯವ್ವನ ದೇವಸ್ಥಾನದ ಸಮೀಪ ಚಿರತೆ ಪ್ರತ್ಯಕ್ಷ..!
ಕಾತೂರು ಅರಣ್ಯಾಧಿಕಾರಿಗಳ ಭರ್ಜರಿ ದಾಳಿ, ಜಿಂಕೆ ಚರ್ಮ, ಕಾಡು ಹಂದಿ ಮಾಂಸ ಸಾಗಿಸುತ್ತಿದ್ದ ಐವರು ಅಂದರ್..!
ಗೋವಾ; ನೈಟ್ ಕ್ಲಬ್ ನಲ್ಲಿ ಬೆಂಕಿ ಅವಘಡ, 23 ಮಂದಿ ಸಾವು..!
ಮುಂಡಗೋಡಿನಲ್ಲಿ ಬೆಳ್ಳಂ ಬೆಳಿಗ್ಗೆ ಭಾರೀ ಬೆಂಕಿ ಅನಾಹುತ, ಸುಟ್ಟು ಕರಕಲಾಯ್ತು ಪರ್ನಿಚರ್ ಅಡ್ಡೆ..! ಲಕ್ಷಾಂತರ ಬೆಲೆಯ ಪರ್ನಿಚರ್ ಗಳು ಬೆಂಕಿಗಾಹುತಿ..!
ಶಿರಸಿ ಎಸಿ ಕಾವ್ಯಾರಾಣಿ ವರ್ಗಾವಣೆಗೆ ಹಲವರ ಆಕ್ರೋಶ, ಆದೇಶ ರದ್ದುಗೊಳಿಸುವಂತೆ ಶೇಖರ್ ಲಮಾಣಿ ಆಗ್ರಹ..!
ಅಗಡಿ ಶ್ರೀಗಂಧ ತುಂಡುಗಳು ಸಿಕ್ಕ ಕೇಸ್, ಕಚೇರಿಗೇ ಬಂದ್ರೂ ಆರೋಪಿಯನ್ನ ಬಿಟ್ಟು ಕಳಿಸಿದ್ರಾ ಅಧಿಕಾರಿಗಳು..? RFO ಕಚೇರಿಯಿಂದಲೇ ಆರೋಪಿ ಮತ್ತೆ ಎಸ್ಕೇಪ್..!
ಅಗಡಿಯಲ್ಲಿ ಅರಣ್ಯ ಅಧಿಕಾರಿಗಳ ಭರ್ಜರಿ ದಾಳಿ, 60 ಕೆಜಿಗೂ ಹೆಚ್ಚು ಶ್ರೀಗಂಧದ ಮರದ ತುಂಡುಗಳು ವಶಕ್ಕೆ, ಆರೋಪಿ ಪರಾರಿ..!
ಚಿಗಳ್ಳಿ ಪ್ರೌಢಶಾಲೆಯ ಶಿಕ್ಷಕ ದಾಸಪ್ಪ, ಸಸ್ಪೆಂಡ್..! ಹಲವು ದಿನಗಳ ಗುದುಮುರುಗಿ ಬಳಿಕ ಶಿರಸಿ ಡಿಡಿಪಿಐ ಖಡಕ್ ಆದೇಶ..!
ಮುಂಡಗೋಡ ಮಾದರಿ ಶಾಲೆಯ ಬಿಸಿಯೂಟ ಸೇವಿಸಿದ ವಿದ್ಯಾರ್ಥಿಗಳು ಅಸ್ವಸ್ಥ..! ಆಸ್ಪತ್ರೆಗೆ ದಾಖಲು..!
ಒಂದೇ ಕುಟುಂಬದ ನಾಲ್ವರು ಬಾವಿಗೆ ಹಾರಿ ಆತ್ಮಹತ್ಯೆ..! ಮೊಮ್ಮಕ್ಕಳು, ಮಗನೊಂದಿಗೆ ಸಾವು ಕಂಡ ತಂದೆ..!
ಮುಂಡಗೋಡ ಪೊಲೀಸರ ತಡರಾತ್ರಿ ಕಾರ್ಯಾಚರಣೆ..! “ಚರಸ್” ದಂಧೆಯಲ್ಲಿ ತೊಡಗಿದ್ದ ಇಂಜಿನೀಯರ್ ಅಂದರ್..!
ಸನವಳ್ಳಿ ಬಳಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರ್, ತುಂಡಾಗಿ ಬಿದ್ದ ವಿದ್ಯುತ್ ಕಂಬ..!
ಯಲ್ಲಾಪುರ ಪೊಲೀಸ್ರ ಸಿನಿಮಿಯ ರೀತಿ ದಾಳಿ..!! ಉಮ್ಮಚಗಿ ಬ್ಯಾಂಕ್ ದರೋಡೆಗೆ ಯತ್ನಿಸಿದ್ದ ನಟೋರಿಯಸ್ ಕಳ್ಳನ ಗ್ಯಾಂಗ್ ಅಂದರ್..!
ಹನುಮಾಪುರದಲ್ಲಿ ಭೀಕರ ಬೆಂಕಿ ಅವಘಡ..! ಬೆಂಕಿಯಲ್ಲಿ ಮನೆಯ ಸಮೇತ ಬೆಂದು ಹೋದ ವೃದ್ದೆ..!
Author: ಪಬ್ಲಿಕ್ ಫಸ್ಟ್ ನ್ಯೂಸ್ ಡೆಸ್ಕ್ (ಶ್ರೀ ಆದಿಶಕ್ತಿ ಮಿಡಿಯಾ ಪ್ರೈವೇಟ್ ಲಿಮಿಟೆಡ್)
ಉ.ಕನ್ನಡದಲ್ಲಿ ನಾಳೆ ಸೋಮವಾರ ಶಾಲಾ ಕಾಲೇಜುಗಳಿಗೆ ರಜೆ, ನಿರಂತರ ಮಳೆ ಹಿನ್ನೆಲೆ ಡಿಸಿ ಆದೇಶ..!
ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತ್ತಿದ್ದು. ಜಿಲ್ಲಾಧ್ಯಂತ ಇನ್ನಿಲ್ಲದ ಅವಾಂತರ ಸೃಷ್ಟಿಯಾಗಿದೆ. ಹೀಗಾಗಿ, ಜಿಲ್ಲೆಯ ಎಲ್ಲಾ ತಾಲೂಕಿನ ಶಾಲಾ ಕಾಲೇಜುಗಳಿಗೆ ನಾಳೆ ಸೋಮವಾರವೂ ರಜೆ ಘೊಷಿಸಿ ಡಿಸಿ ಲಕ್ಷ್ಮೀ ಪ್ರಿಯ ಆದೇಶಿಸಿದ್ದಾರೆ. ಕಾರವಾರ, ಕುಮಟಾ, ಅಂಕೋಲಾ, ಭಟ್ಕಳ, ಹೊನ್ನಾವರ, ಶಿರಸಿ, ಸಿದ್ದಾಪುರ, ಜೋಯಿಡಾ, ದಾಂಡೇಲಿ, ಯಲ್ಲಾಪುರ, ಮುಂಡಗೋಡ ಹಾಗೂ ಹಳಿಯಾಳ ತಾಲೂಕುಗಳಲ್ಲಿ ಮಳೆಯ ಅರ್ಭಟ ಜೋರಾಗಿದೆ. ಹೀಗಾಗಿ, ನಾಳೆ ಸೋಮವಾರ ಈ ತಾಲೂಕುಗಳ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಭಟ್ಕಳ, ಹೊನ್ನಾವರ, ಕುಮಟಾ,...
ಕಾರವಾರದಲ್ಲಿ ಸಿಎಂ ಅಧ್ಯಕ್ಷತೆಯ ಸಭೆ, ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ನೀಡಿದ ಖಡಕ್ ಸೂಚನೆಗಳೇನು ಗೊತ್ತಾ..?
ಕಾರವಾರ: ಮುಖ್ಯಮಂತ್ರಿ ಅವರು ಕಾರವಾರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸರ್ಕಾರದ ಹಿರಿಯ ಅಧಿಕಾರಿಗಳು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಕೆಲವು ಪ್ರಮುಖ ಸೂಚನೆಗಳನ್ನು ನೀಡಿದರು. ತಕ್ಷಣ ಹಾನಿಯ ವರದಿ ನೀಡಿ..! ಮಳೆಯಿಂದ ಕೃಷಿ ಮತ್ತು ತೋಟಗಾರಿಕೆ ಬೆಳೆ ನಷ್ಟಕ್ಕೆ ಎನ್‌ಡಿಆರ್‌ಎಫ್ ನಿಯಮದ ಪ್ರಕಾರ ಪರಿಹಾರ ಒದಗಿಸಲು ತಕ್ಷಣ ಹಾನಿಯ ವರದಿ ಸಲ್ಲಿಸಿ. ಕದ್ರಾ ಅಣೆಕಟ್ಟೆಯಿಂದ ಹೊರಬಿಡುವ ನೀರಿನಿಂದ ತೊಂದರೆಗೊಳಗಾಗುವ ಸಂತ್ರಸ್ತರಿಗೆ ಶಾಶ್ವತ ಪರಿಹಾರ ಒದಗಿಸುವ ಬಗ್ಗೆ ಅಂತಿಮ ತೀರ್ಮಾನ ಮಾಡಿ....
ಶಿರೂರು ಗುಡ್ಡ ಕುಸಿತದಿಂದ ಹಾನಿಯಾದ ಮೀನುಗಾರರಿಗೆ ಪರಿಹಾರ ವಿತರಿಸಿದ ಸಚಿವ ಮಂಕಾಳ ವೈದ್ಯ, ನಾಳೆ ಸಿಎಂ ಜಿಲ್ಲೆಗೆ..!
ಕಾರವಾರ; ಅಂಕೋಲಾ ತಾಲೂಕಿನ ಶಿರೂರು ಬಳಿಯ ಗುಡ್ಡ ಕುಸಿತದಿಂದ ಹಾನಿಯಾದ ಉಳುವರೆ ಗ್ರಾಮದ ಮೀನುಗಾರರ ಕುಟುಂಬಗಳ 59 ಜನರಿಗೆ ರೂ. 25000 ದಂತೆ 14,75,000 ಮೊತ್ತದ ಚೆಕ್‌ನ್ನು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಶನಿವಾರ ವಿತರಿಸಿದರು. ನಂತರ ಮಾತನಾಡಿದ ಸಚಿವರು, ಗುಡ್ಡಕುಸಿತದಿಂದ ಹಾನಿಯಾದ ಉಳುವರೆ ಗ್ರಾಮದ ಮೀನುಗಾರರಿಗೆ ಸರ್ಕಾರದ ವತಿಯಿಂದ ಎಲ್ಲಾ ಅಗತ್ಯ ನೆರವು ಒದಗಿಸಲು ಬದ್ದವಾಗಿದ್ದು, ಈಗಾಗಲೇ ಇಲ್ಲಿನ ಜನರಿಗೆ ಅಗತ್ಯ ನಿವೇಶನ ನೀಡಲು...
PWD ರಸ್ತೆಯಲ್ಲಿ ಯಮರೂಪಿ ಗುಂಡಿಗಳು, ಖುದ್ದಾಗಿ ನಿಂತು ಗುಂಡಿ ಮುಚ್ಚಿಸಿದ ಹುನಗುಂದ ಗ್ರಾಪಂ ಅಧ್ಯಕ್ಷರು..!
ಮುಂಡಗೋಡ ತಾಲೂಕಿನ ಹುನಗುಂದ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ರಸ್ತೆಗಳು ಹದಗೆಟ್ಟು ಹಳ್ಳ ಹಿಡಿದಿವೆ. ಅದ್ರಲ್ಲೂ ಇಂದೂರಿನಿಂದ ಕ್ಯಾಂಪ್ ನಂಬರ್ 8 ರ ಮಾರ್ಗವಾಗಿ ಹುನಗುಂದಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ, ಅಗಡಿ ವರೆಗೂ ನಡೆದಾಡಲೂ ಆಗದ ಸ್ಥಿತಿಯಲ್ಲಿದೆ. ಈ ಮಾರ್ಗದಿಂದ ಸಂಚರಿಸುವ ಬಸ್ ಗಳು ಎದ್ದು, ಬಿದ್ದು ಸಾಗುವ ಹಾಗಿದೆ. ಹೀಗಾಗಿ, ಹುನಗುಂದ ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರುಗಳು ಒಂದೊಳ್ಳೆ ಕೆಲಸ ಮಾಡಿದ್ದಾರೆ. ರಸ್ತೆಯಲ್ಲಿ ಯಮರೂಪಿಯಾಗಿದ್ದ ಗುಂಡಿಗಳನ್ನು ಮುಚ್ಚಿಸುವ ಕಾರ್ಯ ಮಾಡಿದ್ದಾರೆ. ಅಂದಹಾಗೆ, PWD ಇಲಾಖೆ ಅಧಿಕಾರಿಗಳಿಗೆ ಈ...
ನಾಳೆ ರವಿವಾರ ಬೆಂಗಳೂರಿನಲ್ಲಿ ರಾಜ್ಯಮಟ್ಟದ ಹಡಪದ ಅಪ್ಪಣ್ಣ ಜಯಂತಿ ಉತ್ಸವ- ಸರ್ವರಿಗೂ ಆಮಂತ್ರಣ ಕೋರಿದ ರಾಜ್ಯಾಧ್ಯಕ್ಷ
ಮುಂಡಗೋಡ: ನಾಳೆ ರವಿವಾರ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ರಾಜ್ಯಮಟ್ಟದ ಶಿವಶರಣ ಶ್ರೀ ಹಡಪದ ಅಪ್ಪಣ್ಣ ಜಯಂತಿ ಆಚರಿಸಿಲಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಸಮಾರಂಭದಲ್ಲಿ ಭಾಗಿಯಾಗಲಿದ್ದು, ರಾಜ್ಯದ ಹಡಪದ ಅಪ್ಪಣ್ಣವರ ಸಮಾಜದ ಬಾಂಧವರು ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಹಡಪದ ಅಪ್ಪಣ್ಣ ಸಮಾಜದ ರಾಜ್ಯಾಧ್ಯಕ್ಷ ಸಿದ್ದಪ್ಪ ಹಡಪದ ವನವಿ ಮಾಡಿದ್ದಾರೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ರವಿವಾರ ಬೆಳಿಗ್ಗೆ 11 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ, ತಂಗಡಗಿಯ ಹಡಪದ ಅಪ್ಪಣ್ಣ ದೇವರ ಮಹಾಸಂಸ್ಥಾನ ಮಠದ ಶ್ರೀ ಅನ್ನದಾನಿ ಭಾರತಿ ಅಪ್ಪಣ್ಣ...
ಉ.ಕನ್ನಡದಲ್ಲಿ ನಾಳೆ ಶನಿವಾರವೂ ಶಾಲಾ ಕಾಲೇಜುಗಳಿಗೆ ರಜೆ, ನಿರಂತರ ಮಳೆ ಹಿನ್ನೆಲೆ ಡಿಸಿ ಆದೇಶ..!
ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತ್ತಿದ್ದು. ಜಿಲ್ಲಾಧ್ಯಂತ ಇನ್ನಿಲ್ಲದ ಅವಾಂತರ ಸೃಷ್ಟಿಯಾಗಿದೆ. ಹೀಗಾಗಿ, ಜಿಲ್ಲೆಯ ಎಲ್ಲಾ ತಾಲೂಕಿನ ಶಾಲಾ ಕಾಲೇಜುಗಳಿಗೆ ನಾಳೆ ಶನಿವಾರವೂ ರಜೆ ಘೊಷಿಸಿ ಡಿಸಿ ಲಕ್ಷ್ಮೀ ಪ್ರಿಯ ಆದೇಶಿಸಿದ್ದಾರೆ. ಕಾರವಾರ, ಕುಮಟಾ, ಅಂಕೋಲಾ, ಭಟ್ಕಳ, ಹೊನ್ನಾವರ, ಶಿರಸಿ, ಸಿದ್ದಾಪುರ, ಜೋಯಿಡಾ, ದಾಂಡೇಲಿ, ಯಲ್ಲಾಪುರ, ಮುಂಡಗೋಡ ಹಾಗೂ ಹಳಿಯಾಳ ತಾಲೂಕುಗಳಲ್ಲಿ ಮಳೆಯ ಅರ್ಭಟ ಜೋರಾಗಿದೆ. ಹೀಗಾಗಿ, ನಾಳೆ ಶನಿವಾರ ಈ ತಾಲೂಕುಗಳ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಭಟ್ಕಳ, ಹೊನ್ನಾವರ, ಕುಮಟಾ,...
ಶಿರೂರು ಗುಡ್ಡ ಕುಸಿತ ಪ್ರಕರಣ: ಸಡಗೇರಿ ಗ್ರಾಮ ಗ್ಯಾಸ್ ಸೋರಿಕೆ ಅಪಾಯದಿಂದ ಮುಕ್ತ : ಜಿಲ್ಲಾಧಿಕಾರಿ ಲಕ್ಷೀಪ್ರಿಯ
ಕಾರವಾರ: ಸಗಡೇರಿ ಗ್ರಾಮದ ಬಳಿ ಗಂಗಾವಳಿ ನದಿಯಲ್ಲಿದ್ದ ಗ್ಯಾಸ್ ಟ್ಯಾಂಕರ್ ನಲ್ಲಿನದ್ದ ಸುಮಾರು 15 ಟನ್ ಗ್ಯಾಸ್ ನ್ನು ಹೆಚ್,ಪಿ.ಸಿ.ಎಲ್, ಬಿ.ಪಿ.ಸಿಎಲ್, ರಾಜ್ಯ ವಿಪತ್ತು ನಿರ್ವಹಣಾ ತಂಡ ಹಾಗೂ ಅಗ್ನಿಶಾಮಕ ತಂಡಗಳ ನೆರವಿನಿಂದ ಸಂಪೂರ್ಣವಾಗಿ ಖಾಲಿ ಮಾಡಲಾಗಿದ್ದು, ಈ ಪ್ರದೇಶವನ್ನು ವಾಸಯೋಗ್ಯಕ್ಕೆ ಮುಕ್ತಗೊಳಿಸಲಾಗಿದ್ದು, ಗ್ರಾಮಸ್ಥರು ತಮ್ಮ ಮನೆಗಳಿಗೆ ವಾಪಸ್ ಬರಬಹುದಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷಿಪ್ರಿಯ ತಿಳಿಸಿದ್ದಾರೆ. ಅವರು ಶುಕ್ರವಾರ ಅಂಕೋಲ ಸಮೀಪದ ಗುಡ್ಡ ಬಿದ್ದ ಪ್ರದೇಶಕ್ಕೆ ಭೇಟಿ ನೀಡಿ ಮಾತನಾಡಿದರು. ಮಣ್ಣು ತೆರವು ಕಾರ್ಯಾಚರಣೆ..! ಅಂಕೋಲ ಶಿರೂರು...
ಮುಂಡಗೋಡ ತಾಲೂಕಿನಲ್ಲೂ ಮಳೆಯ ಅವಾಂತರ, ಹಲವು ಮನೆಗಳಿಗೆ ಹಾನಿ, ತಹಶೀಲ್ದಾರ್ ಪರಿಶೀಲನೆ..!
ಮುಂಡಗೋಡ ತಾಲೂಕಿನಲ್ಲೂ ಮಳೆಯ ಅವಾಂತರಗಳಿ ಸೃಷ್ಟಿಯಾಗಿವೆ. ನಿರಂತರ ಮಳೆಯಿಂದ ತಾಲೂಕಿನಲ್ಲಿ ಹಲವು ಮನೆಗಳು ಹಾನಿಗೊಳಗಾಗಿದ್ದು ತಹಶೀಲ್ದಾರ್ ಶಂಕರ್ ಗೌಡಿ ಮತ್ತವರ ಟೀಂ ಮಳೆ ಹಾನಿ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ತಾಲೂಕಿನ ಸನವಳ್ಳಿ, ಬೆಡಸಗಾಂವ್, ಕಾತೂರು, ಅಗಡಿ, ಹುನಗುಂದ ಸೇರಿದಂತೆ ಕೆಲವು ಕಡೆ ನಿರಂತರ ಮಳೆಯಿಂದ ಮನೆಗಳಿಗೆ ಹಾನಿಯಾಗಿದೆ.
ನಿರಂತರ ಮಳೆಗೆ ಸವಣೂರಿನಲ್ಲಿ ಭಾರೀ ದುರಂತ, ಮನೆ ಕುಸಿದು ಎರಡು ಕಂದಮ್ಮಗಳು ಸೇರಿ ಮೂವರ ಸಾವು..!
ಸವಣೂರು; ನಿರಂತರ ಮಳೆ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನಲ್ಲಿ ದುರಂತ ಸಂಭವಿಸಿದೆ. ಜಿಟಿ ಜಿಟಿ ಮಳೆಗೆ ಮನೆಗೋಡೆ ಕುಸಿದು ಎರಡು ಕಂದಮ್ಮಗಳು ಸೇರಿ ಓರ್ವ ಮಹಿಳೆ ಸಾವು ಕಂಡಿದ್ದಾಳೆ. ಸವಣೂರು ತಾಲೂಕಿನ ಮಾದಾಪುರ ಗ್ರಾಮದಲ್ಲಿ ಘಟನೆ ನಡೆದಿದ್ದು, ಅಮೂಲ್ಯ & ಅನನ್ಯ ಎರಡು 2 ವರ್ಷದ ಅವಳಿ ಜವಳಿ ಕಂದಮ್ಮಗಳು ಹಾಗೂ ಚೆನ್ನಮ್ಮ(30) ಸಾವು ಕಂಡಿದ್ದಾರೆ., ಘಟನೆಯಲ್ಲಿ ಮುತ್ತು, ಸುನೀತ ಎಂಬುವವರಿಗೆ ಗಾಯವಾಗಿದೆ. ಹಾವೇರಿ ಜಿಲ್ಲೆಯ ಸವಣೂರಿ ತಾಲೂಕಿನ ಮಾದಾಪುರ ಗ್ರಾಮದಲ್ಲಿ ಬೆಳಗಿನ ಜಾವದಲ್ಲಿ ಘಟನೆ...









