ಮುಂಡಗೋಡ ತಾಲೂಕಿನಲ್ಲೂ ಗೋಕಳ್ಳರು, ದನಗಳ್ಳರು ಬಂದಿದ್ದಾರಾ..? ಇಂತಹದ್ದೊಂದು ಅನುಮಾನ ಅಗಡಿ ಗ್ರಾಮದಲ್ಲಿ ನಿನ್ನೆ ಶನಿವಾರ ರಾತ್ರಿ ನಡೆದ ಘಟನೆಯಿಂದ ಆತಂಕಮೂಡಿಸಿದೆ. ಕೊಟ್ಟಿಗೆಯಲ್ಲಿ ಕಟ್ಟಿದ್ದ ಲಕ್ಷ ಬೆಲೆ ಬಾಳುವ ಜೋಡೆತ್ತುಗಳನ್ನೇ ಖದೀಮರು ಕದ್ದು ಹೋಗಿದ್ದಾರೆ ಅನ್ನೊ ಮಾಹಿತಿ ಬಂದಿದೆ. ಅಗಡಿ ಗ್ರಾಮದ ನಿಂಗಪ್ಪ ಫಕ್ಕೀರಪ್ಪ ಗಳಗಿ ಎಂಬುವವರಿಗೆ ಸೇರಿದ ಎರಡು ಎತ್ತುಗಳನ್ನು ಶನಿವಾರ ರಾತ್ರಿ ಕಳ್ಳರು ಹೊತ್ತೊಯ್ದಿದ್ದಾರೆ ಎನ್ನಲಾಗಿದೆ. ರಾತ್ರಿ ಮೇವು ಹಾಕಿ ನೀರು ಕುಡಿಸಿ, ಕೊಟ್ಟಿಗೆಯಲ್ಲಿ ಕಟ್ಟಿದ್ದ ರೈತ ನಿಂಗಪ್ಪ ಮನೆಯಲ್ಲಿ ಮಲಗಿದ್ದ. ಇದೇ ಹೊತ್ತಲ್ಲಿ, ತಡರಾತ್ರಿ...
Top Stories
ಇಂದೂರು ಸೊಸೈಟಿಯ ನೂತನ ಕಛೇರಿ ಕಟ್ಟಡದ ಉದ್ಘಾಟನೆ ನೆರವೇರಿಸಿದ ಶಾಸಕ ಶಿವರಾಮ್ ಹೆಬ್ಬಾರ್..!
ಕರ್ನಾಟಕದ ಹಲವೆಡೆ ತೀವ್ರ ಶೀತ ಗಾಳಿ ; ಇಂದು 7 ಜಿಲ್ಲೆಗಳಿಗೆ ಆರೆಂಜ್, 16 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ವಿಧಿವಶ..!
ತಡಸ ತಾಯವ್ವನ ದೇವಸ್ಥಾನ ಬಳಿ ಭೀಕರ ಕಾರು ಅಪಘಾತ, ಮುಂಡಗೋಡ ತಹಶೀಲ್ದಾರ ಕಚೇರಿಯ ಓರ್ವ ತಲಾಟಿ ಸ್ಥಳದಲ್ಲೇ ಸಾವು, ಮತ್ತಿಬ್ಬರು ಗಂಭೀರ..!
ಎಚ್ಚರ, ಎಚ್ಚರ..! ತಡಸ ತಾಯವ್ವನ ದೇವಸ್ಥಾನದ ಸಮೀಪ ಚಿರತೆ ಪ್ರತ್ಯಕ್ಷ..!
ಕಾತೂರು ಅರಣ್ಯಾಧಿಕಾರಿಗಳ ಭರ್ಜರಿ ದಾಳಿ, ಜಿಂಕೆ ಚರ್ಮ, ಕಾಡು ಹಂದಿ ಮಾಂಸ ಸಾಗಿಸುತ್ತಿದ್ದ ಐವರು ಅಂದರ್..!
ಗೋವಾ; ನೈಟ್ ಕ್ಲಬ್ ನಲ್ಲಿ ಬೆಂಕಿ ಅವಘಡ, 23 ಮಂದಿ ಸಾವು..!
ಮುಂಡಗೋಡಿನಲ್ಲಿ ಬೆಳ್ಳಂ ಬೆಳಿಗ್ಗೆ ಭಾರೀ ಬೆಂಕಿ ಅನಾಹುತ, ಸುಟ್ಟು ಕರಕಲಾಯ್ತು ಪರ್ನಿಚರ್ ಅಡ್ಡೆ..! ಲಕ್ಷಾಂತರ ಬೆಲೆಯ ಪರ್ನಿಚರ್ ಗಳು ಬೆಂಕಿಗಾಹುತಿ..!
ಶಿರಸಿ ಎಸಿ ಕಾವ್ಯಾರಾಣಿ ವರ್ಗಾವಣೆಗೆ ಹಲವರ ಆಕ್ರೋಶ, ಆದೇಶ ರದ್ದುಗೊಳಿಸುವಂತೆ ಶೇಖರ್ ಲಮಾಣಿ ಆಗ್ರಹ..!
ಅಗಡಿ ಶ್ರೀಗಂಧ ತುಂಡುಗಳು ಸಿಕ್ಕ ಕೇಸ್, ಕಚೇರಿಗೇ ಬಂದ್ರೂ ಆರೋಪಿಯನ್ನ ಬಿಟ್ಟು ಕಳಿಸಿದ್ರಾ ಅಧಿಕಾರಿಗಳು..? RFO ಕಚೇರಿಯಿಂದಲೇ ಆರೋಪಿ ಮತ್ತೆ ಎಸ್ಕೇಪ್..!
ಅಗಡಿಯಲ್ಲಿ ಅರಣ್ಯ ಅಧಿಕಾರಿಗಳ ಭರ್ಜರಿ ದಾಳಿ, 60 ಕೆಜಿಗೂ ಹೆಚ್ಚು ಶ್ರೀಗಂಧದ ಮರದ ತುಂಡುಗಳು ವಶಕ್ಕೆ, ಆರೋಪಿ ಪರಾರಿ..!
ಚಿಗಳ್ಳಿ ಪ್ರೌಢಶಾಲೆಯ ಶಿಕ್ಷಕ ದಾಸಪ್ಪ, ಸಸ್ಪೆಂಡ್..! ಹಲವು ದಿನಗಳ ಗುದುಮುರುಗಿ ಬಳಿಕ ಶಿರಸಿ ಡಿಡಿಪಿಐ ಖಡಕ್ ಆದೇಶ..!
ಮುಂಡಗೋಡ ಮಾದರಿ ಶಾಲೆಯ ಬಿಸಿಯೂಟ ಸೇವಿಸಿದ ವಿದ್ಯಾರ್ಥಿಗಳು ಅಸ್ವಸ್ಥ..! ಆಸ್ಪತ್ರೆಗೆ ದಾಖಲು..!
ಒಂದೇ ಕುಟುಂಬದ ನಾಲ್ವರು ಬಾವಿಗೆ ಹಾರಿ ಆತ್ಮಹತ್ಯೆ..! ಮೊಮ್ಮಕ್ಕಳು, ಮಗನೊಂದಿಗೆ ಸಾವು ಕಂಡ ತಂದೆ..!
ಮುಂಡಗೋಡ ಪೊಲೀಸರ ತಡರಾತ್ರಿ ಕಾರ್ಯಾಚರಣೆ..! “ಚರಸ್” ದಂಧೆಯಲ್ಲಿ ತೊಡಗಿದ್ದ ಇಂಜಿನೀಯರ್ ಅಂದರ್..!
ಸನವಳ್ಳಿ ಬಳಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರ್, ತುಂಡಾಗಿ ಬಿದ್ದ ವಿದ್ಯುತ್ ಕಂಬ..!
ಯಲ್ಲಾಪುರ ಪೊಲೀಸ್ರ ಸಿನಿಮಿಯ ರೀತಿ ದಾಳಿ..!! ಉಮ್ಮಚಗಿ ಬ್ಯಾಂಕ್ ದರೋಡೆಗೆ ಯತ್ನಿಸಿದ್ದ ನಟೋರಿಯಸ್ ಕಳ್ಳನ ಗ್ಯಾಂಗ್ ಅಂದರ್..!
ಹನುಮಾಪುರದಲ್ಲಿ ಭೀಕರ ಬೆಂಕಿ ಅವಘಡ..! ಬೆಂಕಿಯಲ್ಲಿ ಮನೆಯ ಸಮೇತ ಬೆಂದು ಹೋದ ವೃದ್ದೆ..!
ಪಾಳಾದ ಇಂದಿರಾ ಗಾಂಧಿ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಇದೇಂಥ ಸ್ಥಿತಿ..? ಈ ಮಕ್ಕಳಿಗೆ ನುಸಿ ತುಂಬಿರೋ ದವಸದ ಆಹಾರವೇ ಗತಿಯಾ..?
Author: ಸಂತೋಷ ಶೆಟ್ಟೆಪ್ಪನವರ್ (ಶ್ರೀ ಆದಿಶಕ್ತಿ ಮಿಡಿಯಾ ಪ್ರೈವೇಟ್ ಲಿಮಿಟೆಡ್)
ಮುಂಡಗೋಡ ನೆಹರು ನಗರದಲ್ಲಿ ಜೇನುದಾಳಿ 6 ಜನರಿಗೆ ಗಾಯ, ಮೂವರು ಗಂಭೀರ..!
ಮುಂಡಗೋಡ ಪಟ್ಟಣದ ನೆಹರು ನಗರದಲ್ಲಿ ಜೇನು ನೋಣಗಳ ದಾಳಿಯಾಗಿದೆ. ಪರಿಣಾಮ ಆರು ಜನರಿಗೆ ಗಾಯವಾಗಿದೆ. ಅದ್ರಲ್ಲಿ ಮೂವರಿಗೆ ಗಂಭೀರ ಗಾಯವಾಗಿದ್ದು ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಪಟ್ಟಣದ ನೆಹರು ನಗರದ ನನ್ನೇಸಾಬ್ ಶೇಖ್ ಮನೆಯ ಹತ್ತಿರದ ಗಿಡದಲ್ಲಿ ಜೇನು ಗೂಡು ಕಟ್ಟಿತ್ತು. ಇವತ್ತು ಮದ್ಯಾನ ಬಿಸಿಲಿನ ತಾಪಕ್ಕೋ ಅಥವಾ ಯಾರಾದ್ರೂ ಕಲ್ಲೆಸೆದ ಕಾರಣಕ್ಕೋ ಜೇನು ನೋಣಗಳು ಎದ್ದಿವೆ. ಈ ಹೊತ್ತಲ್ಲಿ ಅಲ್ಲೇ ಪಕ್ಕದಲ್ಲಿ ಇದ್ದ ಆರು ಜನರಿಗೆ ಕಚ್ಚಿ ಗಾಯಗೊಳಿಸಿವೆ. ಅದ್ರಲ್ಲಿ ಮೂವರಿಗೆ ಗಂಭೀರ ಗಾಯಗೊಳಿಸಿವೆ. ಸದ್ಯ ಗಾಯಾಳುಗಳನ್ನು...
ಸಭಾಪತಿ ಹೊರಟ್ಟಿ ಮನೆ ಬಳಿ ದರೋಡೆ ಮಾಡಿದ್ದ ಇಬ್ಬರ ಕಾಲಿಗೆ ಪೊಲೀಸರ ಗುಂಡೇಟು
ಹುಬ್ಬಳ್ಳಿ: ನಗರದಲ್ಲಿ ಮತ್ತೆ ಪೊಲೀಸರ ಗನ್ ಸದ್ದು ಮಾಡಿದೆ. ಮನೆಯೊಂದರಲ್ಲಿ ದರೋಡೆ ಮಾಡಿದ್ದ ಇಬ್ಬರು ಅಂತರರಾಜ್ಯ ದರೋಡೆಕೋರರಿಗೆ ಪೊಲೀಸರು ಗುಂಡೇಟು ನೀಡಿದ್ದಾರೆ. ಅಂತರರಾಜ್ಯ ಕಳ್ಳರಾದ ಇರ್ಷಾದ್ ಹಾಗೂ ಅಕ್ಬರ್ ಕಾಲಿಗೆ ಹುಬ್ಬಳ್ಳಿಯ ಉಪನಗರ ಪೊಲೀಸರು ಗುಂಡು ಹಾರಿಸಿದ್ದಾರೆ. ಸಭಾಪತಿ ಬಸವರಾಜ್ ಹೊರಟ್ಟಿಯವರ ಹುಬ್ಬಳ್ಳಿಯ ನಿವಾಸದ ಬಳಿ ಆರೋಪಿಗಳು ದರೋಡೆ ಮಾಡಿದ್ದರು. ಆರೋಪಿಗಳ ಬಂಧನಕ್ಕೆ ತೆರಳಿದ್ದ ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದು, ಪೊಲೀಸರು ಗುಂಡೇಟು ನೀಡಿ ಬಂಧಿಸಿದ್ದಾರೆ. ಕಾರ್ಯಾಚರಣೆ ವೇಳೆ, ಮೂವರು ಪೊಲೀಸ್ ಸಿಬ್ಬಂದಿಗೆ...
ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಲಾರಿ, ಕಾರಿನಲ್ಲಿ ಇಬ್ಬರು ಸಿಲುಕಿ ನರಳಾಟ, ಹೊರತೆಗೆಯಲು ಹರಸಾಹಸ..!
ಬ್ರೇಕಿಂಗ್ ಬೆಳಗಾವಿ ಬಳಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದ ಸರ್ವಿಸ್ ರಸ್ತೆಯಲ್ಲಿ ಘನಘೋರ ದುರಂತ. ಚಲಿಸುತ್ತಿದ್ದ ಕಾರಿನ ಮೇಲೆ ಮುಗುಚಿ ಬಿದ್ದ ಲಾರಿ. ಕಾರಿನಲ್ಲೇ ಸಿಲುಕಿ ಹಾಕಿ ಒದ್ದಾಡುತ್ತಿರುವ ಇಬ್ಬರು. ಬೆಳಗಾವಿ ನಗರ ಹೊರ ವಲಯದ ಕೆಎಲ್ಇ ಆಸ್ಪತ್ರೆ ಬಳಿ ಘಟನೆ. ಕಾರಿನಲ್ಲಿದ್ದವರನ್ನ ಹೊರ ತೆಗೆಯಲು ಹರಸಾಹಸ ಪಡುತ್ತಿರುವ ಸಾರ್ವಜನಿಕರು. ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.
ತಿಂಗಳಾಂತ್ಯಕ್ಕೆ ಹೆಬ್ಬಾರ್ ಹಾಗೂ ST ಸೋಮಶೇಖರ್, ಬಿಜೆಪಿ ಪಕ್ಷದಿಂದ ಉಚ್ಚಾಟನೆ ಗ್ಯಾರಂಟಿ- ಲಿಂಗರಾಜ ಪಾಟೀಲ್
ಹುಬ್ಬಳ್ಳಿ: ಪಕ್ಷ ವಿರೋಧಿ ಚಟುವಟಿಕೆ ಆರೋಪ ಹೊತ್ತ ಇಬ್ಬರು ಶಾಸಕರನ್ನು ಈ ತಿಂಗಳಾಂತ್ಯಕ್ಕೆ ಪಕ್ಷದಿಂದ ಉಚ್ಚಾಟನೆ ಮಾಡಲಾಗುವದು ಅಂತಾ ಬಿಜೆಪಿ ಶಿಸ್ತು ಸಮಿತಿ ರಾಜ್ಯ ಅಧ್ಯಕ್ಷ ಲಿಂಗರಾಜ ಪಾಟೀಲ್ ಹೇಳಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಯ ನಂತ್ರ ಎಸ್.ಟಿ.ಸೋಮಶೇಖರ್, ಶಿವರಾಮ ಹೆಬ್ಬಾರ್ ನಿರಂತರ ಪಕ್ಷ ದ್ರೋಹ ಮಾಡಿದ್ದಾರೆ. ಕಳೆದ ಲೋಕಸಭಾ ಮತ್ತು ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ. ಇವರಿಬ್ಬರ ಬಗ್ಗೆ ಈಗಾಗಲೇ ಕೇಂದ್ರ ಶಿಸ್ತು ಸಮಿತಿ ಅಧ್ಯಕ್ಷರಿಗೆ ವರದಿ ಸಲ್ಲಿಸಲಾಗಿದೆ ಎಂದರು....
ಮೈನಳ್ಳಿ ಪಂಚಾಯತಿಯ ಕಳಕೀಕಾರೆಯಲ್ಲಿ ಕುಡಿಯುವ ನೀರಿಗೆ ಬರ..! ಟ್ಯಾಂಕರ್ ಮೂಲಕ ನೀರು ಪೂರೈಕೆ..!
ಮುಂಡಗೋಡ ತಾಲೂಕಿನ ಮೈನಳ್ಳಿ ಗ್ರಾಮ ಪಂಚಾಯತದ ಕಳಕಿಕಾರೆ ಮಜಿರೆಯಲ್ಲಿ ಕುಡಿಯುವ ನೀರಿನ ಅಭಾವ ತಲೆದೋರಿದೆ. ಬಹುತೇಕ ಇಲ್ಲಿ ಕುಡಿಯುವ ನೀರಿಗಾಗಿ ಗ್ರಾಮಸ್ಥರ ಸಂಕಟ ಒಂದೆಡೆಯಾದ್ರೆ, ಗ್ರಾಮಸ್ಥರಿಗೆ ನೀರು ಪೂರೈಸಲು ಮೈನಳ್ಳಿ ಗ್ರಾಮ ಪಂಚಾಯತಿ ಅಧಿಕಾರಿಗಳು ಪರದಾಡುವ ಸ್ಥಿತಿಯಲ್ಲಿದ್ದಾರೆ. ಕಳೆದ ಒಂದು ವಾರದಿಂದ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಅಂದಹಾಗೆ, ಮೈನಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಳಕೀಕಾರೆಯಲ್ಲಿ RWS ಇಲಾಖೆಯಿಂದ ಬೋರ್ವೆಲ್ ಕೊರೆದಿದ್ದಾರೆ. ಆದ್ರೆ, ಜೀವಜಲ ಮಾತ್ರ ಸಿಕ್ಕೇ ಇಲ್ಲ. ಹೀಗಾಗಿ, ಇಲ್ಲಿನ ಜನ್ರಿಗೆ ಕುಡಿಯುವ...
ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆಯಡಿ ಈ ತಿಂಗಳಿಂದ ಹಣ ನೀಡಲ್ಲ, ಬದಲಾಗಿ ಅಕ್ಕಿ ವಿತರಣೆೆ ; ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯ
ಕಾರವಾರ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಅನ್ನಭಾಗ್ಯ ಯೋಜನೆಯಡಿ ಪ್ರಸ್ತುತ ರಾಜ್ಯದಲ್ಲಿರುವ ಅಂತ್ಯೋದಯ ಅನ್ನಯೋಜನೆ ಮತ್ತು ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗೆ ಪ್ರತಿ ತಿಂಗಳು ಪಡಿತರ ಚೀಟಿಯಲ್ಲಿನ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ (ಆಃಖಿ) ಮುಖಾಂತರ ಹಣವನ್ನು ವರ್ಗಾಯಿಸುವ ಪ್ರಕ್ರಿಯೆಯ ಬದಲಾಗಿ ಫೆಬ್ರವರಿ-2025 ರ ಮಾಹೆಯಿಂದ ಜಾರಿಗೆ ಬರುವಂತೆ ಅರ್ಹ ಫಲಾನುಭವಿಗಳಿಗೆ 05 ಕೆ.ಜಿ ಅಕ್ಕಿಯನ್ನು ಸಾರ್ವಜನಿಕ ವಿತರಣಾ ಪದ್ಧತಿಯಡಿ ವಿತರಿಸಲು ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ .ಕೆ.ಲಕ್ಷ್ಮೀಪ್ರಿಯ ತಿಳಿಸಿದ್ದಾರೆ. ಅದರಂತೆ ಫೆಬ್ರವರಿ-2025...
ಇದುವರೆಗೆ 2500 ಕ್ಕೂ ಆಧಿಕ ಕಡಲಾಮೆ ಮರಿಗಳು ಸಮುದ್ರಕ್ಕೆ : ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿ.ರವಿಶಂಕರ್
ಕಾರವಾರ: ಕಾರವಾರ ಅಂಕೋಲಾ ವಿಭಾಗದಲ್ಲಿ ಈ ವರ್ಷ ಇದುವರೆಗೆ 2500 ಕ್ಕೂ ಅಧಿಕ ಆಲಿವ್ ರಿಡ್ಲೆ ಕಡಲಾಮೆಗಳನ್ನು ಸಮುದ್ರಕ್ಕೆ ಬಿಡಲಾಗಿದ್ದು, 111 ಕಡಲಾಮೆಗಳ ಗೂಡುಗಳನ್ನು ರಕ್ಷಣೆ ಮಾಡಲಾಗಿದೆ. ಕಳೆದ ವರ್ಷ 188 ಕಡಲಾಮೆಗಳ ಗೂಡುಗಳನ್ನು ರಕ್ಷಣೆ ಮಾಡಲಾಗಿದೆ ಎಂದು ಕಾರವಾರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿ.ರವಿಶಂಕರ್ ತಿಳಿಸಿದರು. ಅವರು ಶುಕ್ರವಾರ ಕಾರವಾರದ ರವೀಂದ್ರನಾಥ್ ಟಾಗೋರ್ ಕಡಲ ತೀರದಲ್ಲಿ ಸಮಾರು 150 ಆಲಿವ್ ರಿಡ್ಲೆ ಕಡಲಾಮೆ ಮರಿಗಳನ್ನು ಸಮುದ್ರಕ್ಕೆ ಬಿಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಪ್ರಸ್ತುತ ಎರಡು...
SSLC ಪರೀಕ್ಷೆಗಳು ವ್ಯವಸ್ಥಿತ ಮತ್ತು ಪಾರದರ್ಶಕವಾಗಿರಲಿ, ಪೂರ್ವಭಾವಿ ಸಭೆಯಲ್ಲಿ ಡೀಸಿ ಲಕ್ಷ್ಮಿಪ್ರಿಯ ಅಧಿಕಾರಿಗಳಿಗೆ ತಾಕೀತು..!
ಕಾರವಾರ: ಜಿಲ್ಲೆಯಲ್ಲಿ ಮಾರ್ಚ್ 21 ರಿಂದ ಆರಂಭಗೊಳ್ಳಲಿರುವ ಎಸ್.ಎಸ್.ಎಲ್.ಸಿ. ಪರೀಕ್ಷೆಗಳನ್ನು ಅತ್ಯಂತ ವ್ಯವಸ್ಥಿತ ಮತ್ತು ಪಾರದರ್ಶಕವಾಗಿ ನಡೆಯುವ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳು ತಮಗೆ ವಹಿಸಲಾದ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಮತ್ತು ಪರೀಕ್ಷಾ ಮಾರ್ಗಸೂಚಿಗಳನ್ನು ಕಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯ ಸೂಚನೆ ನೀಡಿದರು. ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ, ಎಸ್.ಎಸ್.ಎಲ್.ಸಿ ಪರೀಕ್ಷಾ ಸಿದ್ದತೆಗಳ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಈ ಬಾರಿಯ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಜಿಲ್ಲೆಯಲ್ಲಿ 20035 ವಿದ್ಯಾರ್ಥಿಗಳು ಹಾಜರಾಗುತ್ತಿದ್ದು, ಯಾವುದೇ ವಿದ್ಯಾರ್ಥಿಗಳು...
ಹಿರಿಯೂರು ಬಳಿ ಅಪಘಾತ, ವಿಧಾನಸಭಾ ಉಪಾಧ್ಯಕ್ಷ ರುದ್ರಪ್ಪ ಲಮಾಣಿಗೆ ಗಂಭೀರ ಗಾಯ..!
ಹಾವೇರಿ; ಬೆಂಗಳೂರಿನಿಂದ ಹಾವೇರಿಗೆ ಕಾರಿನಲ್ಲಿ ಬರುತ್ತಿದ್ದ ವೇಳೆ ಹಿರಿಯೂರು ಬಳಿ ಅಪಘಾತ ಸಂಭವಿಸಿ ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿಗೆ ಗಂಭೀರ ಗಾಯವಾಗಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ. ಹಿರಿಯೂರು ಬಳಿ ರೆಸ್ಟ್ ವೇಳೆ ದ್ವಿಚಕ್ರ ವಾಹನ ಸವಾರನೋರ್ವ ರುದ್ರಪ್ಪ ಲಮಾಣಿ ಅವರಿಗೆ ಡಿಕ್ಕಿ ಹೊಡೆದು ತಲೆಗೆ, ಮೂಗಿಗೆ ಗಾಯಗಳು ಆಗಿವೆ ಎಂದು ಲಮಾಣಿ ಅವರನ್ನು ದಾವಣಗೆರೆ ಎಸ್ ರಸ್ ಆಸ್ಪತ್ರೆಗೆ ಚಿಕಿತ್ಸೆ ಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.









