Home admin

Author: admin (ಶ್ರೀ ಆದಿಶಕ್ತಿ ಮಿಡಿಯಾ ಪ್ರೈವೇಟ್ ಲಿಮಿಟೆಡ್)

Post
ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ: ಉತ್ತರ ಕನ್ನಡ ಜಿಲ್ಲೆ ಸೇರಿ, ರಾಜ್ಯದಲ್ಲಿ ಒಂದು ವಾರ ಭಾರಿ ಮಳೆ ಮುನ್ಸೂಚನೆ, 6 ಜಿಲ್ಲೆಗಳಿಗೆ ರೆಡ್‌ ಅಲರ್ಟ್‌..!

ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ: ಉತ್ತರ ಕನ್ನಡ ಜಿಲ್ಲೆ ಸೇರಿ, ರಾಜ್ಯದಲ್ಲಿ ಒಂದು ವಾರ ಭಾರಿ ಮಳೆ ಮುನ್ಸೂಚನೆ, 6 ಜಿಲ್ಲೆಗಳಿಗೆ ರೆಡ್‌ ಅಲರ್ಟ್‌..!

Heavy Rain Alert: ಬೆಂಗಳೂರು: ರಾಜ್ಯದಲ್ಲಿ ಒಂದು ವಾರ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ಘೋಷಿಸಿದೆ. ಮೇ 25 ರಿಂದ ಮೇ 28ರ ವರೆಗೆ ಕರ್ನಾಟಕದ ಕರಾವಳಿಯ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ಘೋಷಿಸಲಾಗಿದೆ.   ಇನ್ನು ಮಲೆನಾಡಿನ ಜಿಲ್ಲೆಗಳಾದ ಶಿವಮೊಗ್ಗ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಗೂ ಮೇ 28ರವರೆಗೆ ರೆಡ್‌ ಅಲರ್ಟ್‌ ಘೋಷಿಸಾಗಿದೆ. ಮೇ 25ರಂದು...

Post
ಮುಂಡಗೋಡಲ್ಲಿ ಮೊಳಗಿದ ದೇಶ ಭಕ್ತಿಯ ಘೋಷವಾಕ್ಯ..! “ಆಪರೇಷನ್ ಸಿಂಧೂರ” ವೀರ ಸೈನಿಕರಿಗೆ ಗೌರವದ ಬೆಂಬಲ..!

ಮುಂಡಗೋಡಲ್ಲಿ ಮೊಳಗಿದ ದೇಶ ಭಕ್ತಿಯ ಘೋಷವಾಕ್ಯ..! “ಆಪರೇಷನ್ ಸಿಂಧೂರ” ವೀರ ಸೈನಿಕರಿಗೆ ಗೌರವದ ಬೆಂಬಲ..!

Mundgod News:”ಆಪರೇಷನ್ ಸಿಂಧೂರ”ನಲ್ಲಿ ಭಾರತೀಯ ಸೈನಿಕರು ತೋರಿದ ಅಪ್ರತಿಮ ಹೋರಾಟವನ್ನು ಬೆಂಬಲಿಸಿ ಮುಂಡಗೋಡ ಪಟ್ಟಣದಲ್ಲಿ ಜಾತ್ಯಾತೀತವಾಗಿ “ತಿರಂಗಾ ಯಾತ್ರೆ” ನಡೆಯಿತು. ಪಟ್ಟಣದ ಹಳೂರಿನ ಶ್ರೀ‌ಮಾರಿಕಾಂಬಾ ದೇವಸ್ಥಾನದಿಂದ ಬೃಹತ್ ರಾಷ್ಟ್ರಧ್ವಜದೊಂದಿಗೆ ಯಾತ್ರೆ ಹೊರಟು, ಶಿವಾಜಿ ಸರ್ಕಲ್ ಬಳಿ ಬಂದು ಸೇರುತ್ತಿದೆ. ಯಾತ್ರೆಯುದ್ದಕ್ಕೂ ಭಾರತ ಮಾತಾ ಕೀ ಜೈ, ಹಾಗೂ ಸೈನಿಕರ ಪರ ಜಯಘೋಷಗಳನ್ನು ಕೂಗಿ ಬೆಂಬಲಿಸಿದ್ರು.

Post
ಕಾರವಾರ ಕಾರ್ಯನಿರತ ಪತ್ರಕರ್ತರ ಸಂಘ ಅಸ್ತಿತ್ವಕ್ಕೆ : ಪದಾಧಿಕಾರಿಗಳ ಅವಿರೋಧ ಆಯ್ಕೆ

ಕಾರವಾರ ಕಾರ್ಯನಿರತ ಪತ್ರಕರ್ತರ ಸಂಘ ಅಸ್ತಿತ್ವಕ್ಕೆ : ಪದಾಧಿಕಾರಿಗಳ ಅವಿರೋಧ ಆಯ್ಕೆ

ಕಾರವಾರ : ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರವಾರ ತಾಲೂಕಾ ಘಟಕದ ಕಾರ್ಯನಿರತ ಪತ್ರಕರ್ತರ ನೂತನ ಸಂಘದ ಪದಾಧಿಕಾರಿಗಳ ಆಯ್ಕೆಯನ್ನ‌ ಪತ್ರಿಕಾಭವನದಲ್ಲಿ ನಡೆಸಲಾಗಿದ್ದು, ಪದಾಧಿಕಾರಿಗಳನ್ನ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಸಂಘದ ನೂತನ ಅಧ್ಯಕ್ಷರಾಗಿ ಪವರ್‌ ಟಿವಿ ಜಿಲ್ಲಾ ವರದಿಗಾರ ಉದಯ ಬರ್ಗಿ, ಉಪಾಧ್ಯಕ್ಷರಾಗಿ ವಿಜಯ ಕರ್ನಾಟಕ ಜಿಲ್ಲಾ ವರದಿಗಾರ ಪ್ರಮೋದ ಹರಿಕಂತ್ರ, ಕಾರ್ಯದರ್ಶಿಯಾಗಿ ನ್ಯೂಸ್ 18 ಜಿಲ್ಲಾ ವರದಿಗಾರ ದರ್ಶನ ನಾಯ್ಕ, ಖಜಾಂಚಿಯಾಗಿ ಸುವರ್ಣವಾಹಿನಿ ಜಿಲ್ಲಾ ವರದಿಗಾರ ಭರತರಾಜ್ ಕಲ್ಲಡಕ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ...

Post
RCB ಕನಸು ಭಗ್ನಗೊಳಿಸಿದ ಸನ್ ರೈಸರ್ಸ್, ಇನ್ನೇನಿದ್ರೂ ಪಂಜಾಬ್​ ಮೇಲೆ ಬೆಂಗಳೂರಿಗರ ಕಣ್ಣು..!

RCB ಕನಸು ಭಗ್ನಗೊಳಿಸಿದ ಸನ್ ರೈಸರ್ಸ್, ಇನ್ನೇನಿದ್ರೂ ಪಂಜಾಬ್​ ಮೇಲೆ ಬೆಂಗಳೂರಿಗರ ಕಣ್ಣು..!

IPL 2025 RCB vs SRH Match: ಇಂಡಿಯನ್ ಪ್ರೀಮಿಯರ್ ಲೀಗ್ (IPL)ನ 65ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ ತಂಡ 42 ರನ್‌ಗಳಿಂದ ಗೆಲುವು ಸಾಧಿಸಿದೆ. ಇದರೊಂದಿಗೆ ಆರ್​ಸಿಬಿಯ ಕನಸನ್ನು ಭಗ್ನಗೊಳಿಸಿದೆ. ಏಕಾನ ಮೈದಾನದಲ್ಲಿ ನಡೆದಿದ್ದ ರೋಚಕ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಆರೆಂಜ್ ಆರ್ಮಿ, ಇಶನ್ ಕಿಶನ್ ಅವರ ಸಿಡಿಲಬ್ಬರದ ಬ್ಯಾಟಿಂಗ್​ ಸಹಯಾದಿಂದಾಗಿ ನಿಗದಿತ 20 ಓವರ್​ ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 231 ರನ್ ಬಾರಿಸಿತು....

Post
ಸಾವಿತ್ರಿಬಾಯಿ ಪುಲೆ ಮಹಿಳಾ ಸಬಲೀಕರಣ ಯೋಜನೆಯಿಂದ, ಗ್ರಾಮೀಣ ಮಹಿಳೆಯರಿಗೆ ಉದ್ಯೋಗಾಧಾರಿತ ಕೌಶಲ್ಯ ತರಬೇತಿ..!

ಸಾವಿತ್ರಿಬಾಯಿ ಪುಲೆ ಮಹಿಳಾ ಸಬಲೀಕರಣ ಯೋಜನೆಯಿಂದ, ಗ್ರಾಮೀಣ ಮಹಿಳೆಯರಿಗೆ ಉದ್ಯೋಗಾಧಾರಿತ ಕೌಶಲ್ಯ ತರಬೇತಿ..!

Women skill training: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ರಾಷ್ಟ್ರೀಯ ಜೀವನೋಪಾಯ ಅಭಿಯಾನ ಸಹಯೋಗದಲ್ಲಿ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟಗಳ ಸ್ವ-ಸಹಾಯ ಗುಂಪುಗಳ ಮೂಲಕ ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಹಲವು ಯೋಜನೆ/ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನ ಮಾಡಲಾಗುತ್ತಿದ್ದು, ಪ್ರಸ್ತುತ ಗ್ರಾಮೀಣ ಮಹಿಳೆಯರ ಆಕಾಂಕ್ಷೆ ಮತ್ತು ಆಸಕ್ತಿಗೆ ಅನುಗುಣವಾಗಿ ಉದ್ಯೋಗಾಧಾರಿತ ಕೌಶಲ್ಯ ತರಬೇತಿಯನ್ನು ನೀಡಲು ಸಾವಿತ್ರಿಬಾಯಿ ಪುಲೆ ಮಹಿಳಾ ಸಬಲೀಕರಣ ಯೋಜನೆಯನ್ನು ಪ್ರಾರಂಭಿಸಲಾಗುತ್ತಿದೆ. ಗ್ರಾಮೀಣ ಪ್ರದೇಶದ ಮಹಿಳೆಯರು ಕೃಷಿಯಿಂದ ಹೆಚ್ಚಿನ ಲಾಭ ಪಡೆಯಲಾಗದೇ, ಆದಾಯ ಗಳಿಕೆಗಾಗಿ...

Post
ದೆಹಲಿಯಲ್ಲಿ 23 ಕೋರೊನಾ ಕೇಸ್ ಗಳು  ವರದಿ; ಭಯ ಬೇಡ, ಸಜ್ಜಾಗಿರಲು ಆಸ್ಪತ್ರೆಗಳಿಗೆ ಸರ್ಕಾರದ ಸೂಚನೆ

ದೆಹಲಿಯಲ್ಲಿ 23 ಕೋರೊನಾ ಕೇಸ್ ಗಳು ವರದಿ; ಭಯ ಬೇಡ, ಸಜ್ಜಾಗಿರಲು ಆಸ್ಪತ್ರೆಗಳಿಗೆ ಸರ್ಕಾರದ ಸೂಚನೆ

Covid-19 News: ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 23 ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, ದೆಹಲಿ ಸರ್ಕಾರವು ಎಲ್ಲಾ ಆಸ್ಪತ್ರೆಗಳು ಹಾಸಿಗೆಗಳು, ಆಮ್ಲಜನಕ, ಔಷಧಿಗಳು ಮತ್ತು ಲಸಿಕೆಗಳು ಲಭ್ಯವಿರುವಂತೆ ನೋಡಿಕೊಂಡು ಸಜ್ಜಾಗಿರುವಂತೆ ಸಲಹೆ ನೀಡಿದೆ. ಸುಮಾರು ಮೂರು ವರ್ಷಗಳ ನಂತರ ದೆಹಲಿಯಲ್ಲಿ ಕೋವಿಡ್-19 ಪ್ರಕರಣಗಳು ವರದಿಯಾಗುತ್ತಿದೆ. ಗುರುವಾರದವರೆಗೆ 23 ಕೋವಿಡ್-19 ಸೋಂಕಿನ ಪ್ರಕರಣಗಳು ವರದಿಯಾಗಿವೆ ಮತ್ತು ರೋಗಿಗಳು ದೆಹಲಿಯ ನಿವಾಸಿಗಳೇ ಅಥವಾ ನಗರದ ಹೊರಗೆ ಪ್ರಯಾಣದ ಇತಿಹಾಸವನ್ನು ಹೊಂದಿದ್ದಾರೆಯೇ ಎಂಬ ವಿವರಗಳನ್ನು ಸರ್ಕಾರ ಪರಿಶೀಲಿಸುತ್ತಿದೆ ಎಂದು ಆರೋಗ್ಯ ಸಚಿವ...

Post
ಭಾರೀ ಮಳೆಯಿಂದ ಶಿರಸಿ-ಕುಮಟಾ ರಸ್ತೆ ವಾಹನ ಸಂಚಾರ ಸಂಪೂರ್ಣ ಬಂದ್, ಡೀಸಿ ಆದೇಶ..!

ಭಾರೀ ಮಳೆಯಿಂದ ಶಿರಸಿ-ಕುಮಟಾ ರಸ್ತೆ ವಾಹನ ಸಂಚಾರ ಸಂಪೂರ್ಣ ಬಂದ್, ಡೀಸಿ ಆದೇಶ..!

Sirsi-Kumta Road News: ಕಾರವಾರ : ಶಿರಸಿ-ಕುಮಟಾ ರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿರುವ ಬೆಣ್ಣೆ ಹೊಳೆ ಸೇತುವೆ ಪಕ್ಕದಲ್ಲಿ ತಾತ್ಕಾಲಿಕವಾಗಿ ವಾಹನ ಸಂಚಾರಕ್ಕೆ ಮಾಡಿದ ರಸ್ತೆಯು ಮಳೆಯ ನೀರಿಗೆ ಕೊಚ್ಚಿ ಹೋಗಿದ್ದರಿಂದ ಮುಂದಿನ ಆದೇಶದವರೆಗೆ ಶಿರಸಿ-ಕುಮಟಾ ರಸ್ತೆಯಲ್ಲಿ ಎಲ್ಲ ವಾಹನಗಳ ಸಂಚಾರಕ್ಕೆ ಸಂಪೂರ್ಣವಾಗಿ ನಿಷೇಧ ಹೇರಲಾಗಿದೆ. ಶಿರಸಿ-ಕುಮಟಾ ರಸ್ತೆಯಲ್ಲಿ ಬೆಣ್ಣೆ ಹಳ್ಳ ಬ್ರಿಜ್ ಕಾಮಗಾರಿ ನಡೆಯುತ್ತಿರುವ ಸ್ಥಳದ ಪಕ್ಕದಲ್ಲಿ ತಾತ್ಕಾಲಿಕ ಸಂಚಾರ ವ್ಯವಸ್ಥೆಗಾಗಿ ಕಲ್ಪಿಸಿದ್ದ ಪರ್ಯಾಯ ರಸ್ತೆಯ ಮೇಲೆ “ಬೆಣ್ಣೆ ಹೊಳೆ”ಯ ನೀರು ಹರಿಯುತ್ತಿರುವ ಹಿನ್ನೆಲೆಯಲ್ಲಿ ಶಿರಸಿ ಕುಮಟಾ...

Post
ಜಿಲ್ಲೆಯಲ್ಲಿನ ಸೇತುವೆಗಳ ದೃಡತೆ ಬಗ್ಗೆ ವರದಿ ನೀಡಿ, ಅನಾಹುತವಾದಲ್ಲಿ ಅಧಿಕಾರಿಗಳೇ‌ ಹೊಣೆ-ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ಖಡಕ್ ಎಚ್ಚರಿಕೆ..!

ಜಿಲ್ಲೆಯಲ್ಲಿನ ಸೇತುವೆಗಳ ದೃಡತೆ ಬಗ್ಗೆ ವರದಿ ನೀಡಿ, ಅನಾಹುತವಾದಲ್ಲಿ ಅಧಿಕಾರಿಗಳೇ‌ ಹೊಣೆ-ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ಖಡಕ್ ಎಚ್ಚರಿಕೆ..!

Uttar Kannada alert: ಕಾರವಾರ: ಜಿಲ್ಲೆಯಲ್ಲಿನ ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿ ವ್ಯಾಪ್ತಿಯಲ್ಲಿನ ಎಲ್ಲಾ ಸೇತುವೆಗಳ ದೃಡತೆಯ ಬಗ್ಗೆ ಸಂಪೂರ್ಣ ವರದಿಯನ್ನು ನೀಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯ ಸೂಚನೆ ನೀಡಿದರು. ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಸ್ತುತ ಜಿಲ್ಲೆಯಲ್ಲಿ ಪೂರ್ವ ಮುಂಗಾರು ಆರಂಭಗೊಂಡಿದ್ದು, ವಾಡಿಕೆಯಂತೆ ಜುಲೈ ತಿಂಗಳಲ್ಲಿ ಅತೀ ಹೆಚ್ಚಿನ ಮಳೆಯಾಗುವ ಸಾಧ್ಯತೆಗಳಿದ್ದು, ಜಿಲ್ಲೆಯ...

Post
ಜಿಲ್ಲೆಯಲ್ಲಿ ಮೇ.27 ರ ವರೆಗೆ ರೆಡ್ ಅಲರ್ಟ್, ಮುನ್ನೆಚ್ಚರಿಕೆ ವಹಿಸಿ: ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ

ಜಿಲ್ಲೆಯಲ್ಲಿ ಮೇ.27 ರ ವರೆಗೆ ರೆಡ್ ಅಲರ್ಟ್, ಮುನ್ನೆಚ್ಚರಿಕೆ ವಹಿಸಿ: ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ

Rain Alert News uttar Kannada: ಕಾರವಾರ: ಭಾರತೀಯ ಹವಾಮಾನ ಇಲಾಖೆ/ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬೆಂಗಳೂರು ಇವರ ಮುನ್ಸೂಚನೆಯಂತೆ ರಾಜ್ಯದ ಕರಾವಳಿ ಭಾಗದಲ್ಲಿ ಮುಂದಿನ ನಾಲ್ಕು ದಿನಗಳಿಗೆ (ದಿನಾಂಕ 24.05.2025 ರಿಂದ 27.05.2025 ವರೆಗೆ) ರೆಡ್ ಅಲರ್ಟ್ ಇದ್ದು ಈ ದಿನಗಳಲ್ಲಿ ಜಿಲ್ಲೆಯ ಭಾಗಗಳಲ್ಲಿ ಗುಡುಗು ಸಿಡಿಲಿನೊಂದಿಗೆ ಹೆಚ್ಚಿನ ಗಾಳಿ (ಸುಮಾರು 40 ಕೀ.ಮೀ) ಯಿಂದ ಕೂಡಿದ ಮಳೆಯಾಗುವ ಸಾಧ್ಯತೆಯಿದೆಯೆಂದು ಸೂಚನೆಯಿದೆ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯ ತಿಳಿಸಿದ್ದಾರೆ.   ಅರಬ್ಬಿ ಸಮುದ್ರದಲ್ಲಿ...

Post
ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ -2025 ರ ಅವಧಿ ವಿಸ್ತರಣೆ..!

ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ -2025 ರ ಅವಧಿ ವಿಸ್ತರಣೆ..!

Scheduled Caste Census News: ಬೆಂಗಳೂರು: ಸರ್ಕಾರದ ಆದೇಶ ದಿನಾಂಕ 2024 ನೇ ನವೆಂಬರ್ 12 ರಲ್ಲಿ ರಾಜ್ಯದಲ್ಲಿ ಶಿಕ್ಷಣ ಮತ್ತು ಸರ್ಕಾರಿ ಸೇವೆಗಳಲ್ಲಿ ಪರಿಶಿಷ್ಟ ಜಾತಿಯ ವಿವಿಧ ಉಪ ಜಾತಿಗಳಿಗೆ ಸೇರಿದವರ ಪ್ರಾತಿನಿಧ್ಯತೆ ಕುರಿತು Empirical Data ಪಡೆದು ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಬಗ್ಗೆ ಸೂಕ್ತ ಶಿಫಾರಸ್ಸಿನೊಂದಿಗೆ ವರದಿ ಸಲ್ಲಿಸಲು ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಡಾ: ಹೆಚ್.ಎನ್. ನಾಗಮೋಹನ್ ದಾಸ್ ಇವರ ಅಧ್ಯಕ್ಷತೆಯಲ್ಲಿ ಏಕ ಸದಸ್ಯ ಆಯೋಗವನ್ನು ರಚಿಸಲಾಗಿರುತ್ತದೆ. ಪರಿಶಿಷ್ಟ ಜಾತಿಯಲ್ಲಿನ...

error: Content is protected !!