ವಿಜಯಪುರ- ಸರ್ಕಾರಗಳು ಉತ್ತರ ಕರ್ನಾಟಕದ ಪ್ರಗತಿಗೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವುದರಿಂದ ಉತ್ತರ ಕರ್ನಾಟಕದ ಸಾರ್ವಜನಿಕರು, ರೈತರು, ಕಾರ್ಮಿಕರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಉತ್ತರ ಕರ್ನಾಟಕದ ಸರ್ವತೋಮುಖ ಪ್ರಗತಿಗಾಗಿ ಅನುದಾನದಲ್ಲಿ ಸಿಂಹಪಾಲು ನೀಡುವಂತೆ ಪ್ರಬಲವಾದ ಧ್ವನಿಯನ್ನು ಸರ್ಕಾರಕ್ಕೆ ಮುಟ್ಟಿಸಲು ಕ್ರಾಂತಿಯೋಗಿ ಅಣ್ಣ ಬಸವಣ್ಣನ ಜನ್ಮಸ್ಥಳ ಪಾವನ ನೆಲ ಬಸವನ ಬಾಗೇವಾಡಿಯಿಂದ ಜನವರಿ 20 ರಿಂದ ಬೆಂಗಳೂರಿನಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಅಂತಾ ಸಾಮಾಜಿಕ ಕಾರ್ಯಕರ್ತ ಯಾಸೀನ್ ಜವಳಿ ಘೋಷಿಸಿದ್ರು.. ವಿವಿಧ ಸಂಘಟನೆಯ ಕಾರ್ಯಕರ್ತರು, ಕನ್ನಡಪರ ಹೋರಾಟಗಾರರು, ರೈತ ಸಂಘಟನೆಯ...
Top Stories
ಅಭಿಮಾನಿಗಳ ನೆಚ್ಚಿನ “ಹೈಸ್ಪೀಡ್ ಮಣಿ” ಟಗರು ಅಕಾಲಿಕ ಸಾವು..! ಸಾವಿರಾರು ಅಭಿಮಾನಿಗಳ ಕಂಬನಿ..!
ವಯಸ್ಸು 45 ಆದ್ರೂ ಮದುವೆ ಆಗಲಿಲ್ಲ, ಅದೇ ಕೊರಗಲ್ಲೇ ಚಾಕು ಇರಿದುಕೊಂಡ, ಆತ್ಮಹತ್ಯೆಗೆ ಯತ್ನಿಸಿದ..!
ಮುಂಡಗೋಡಿನ ಕಿರಣ್ ಸಾಳುಂಕೆಗೆ ಗಡಿಪಾರು..!ಯಾದಗಿರಿ ಜಿಲ್ಲೆಗೆ ಗಡಿಪಾರು ಮಾಡಿ ಶಿರಸಿ ಎಸಿ ಆದೇಶ..!!
ಟ್ರಾಕ್ಟರ್ ರೂಟರ್ ನಲ್ಲಿ ಕಾಲು ಸಿಲುಕಿ ಕಾಲೇ ಕಟ್, ಮುಂಡಗೋಡ ತಾಲೂಕಿನ ಹುನಗುಂದದಲ್ಲಿ ಭೀಕರ ಘಟನೆ..!
ಮುಂಡಗೋಡ ಪೊಲೀಸರ ನೇತೃತ್ವದಲ್ಲಿ ಏಕತಾ ವಾಕ್ ಥಾನ್..! ಸರ್ದಾರ್ ಪಟೇಲರ ಜನ್ಮದಿನದಂದು ಏಕತಾ ದಿವಸ್ ಆಚರಣೆ..!
ಮುಂಡಗೋಡಿನ ಹಿರಿಯ ರಥಶಿಲ್ಪಿ ವಿರೂಪಾಕ್ಷಪ್ಪ ಬಡಿಗೇರ ನಿಧನ…!
ಮುಂಡಗೋಡ ಪಪಂ ಮಾಜಿ ಅಧ್ಯಕ್ಷ ರಾಮಣ್ಣ ಕುನ್ನೂರ್ ನಿಧನ..!
ಮಳಗಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಸರಿದ ಶಿರಸಿ ಹುಬ್ಬಳ್ಳಿ KSRTC ಬಸ್, ತಪ್ಪಿದ ಅನಾಹುತ..!
ಪಾಳಾದಲ್ಲಿ KSRTC ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ, ಬಸ್ ಗಾಗಿ ಬಸ್ ತಡೆದು ಪ್ರತಿಭಟನೆ..!
ತಡಸ ತಾಯವ್ವ ದೇವಸ್ಥಾನದ ಬಳಿ ಕ್ರೂಸರ್ ವಾಹನ ಪಲ್ಟಿ ಹಲವರಿಗೆ ಗಾಯ..!
ಹುಬ್ಬಳ್ಳಿಯಲ್ಲಿ ಮತ್ತೊಂದು ಚಾಕು ಇರಿತ ಪ್ರಕರಣ: ಹಳೇ ದ್ವೇಷದ ಹಿನ್ನೆಲೆ ವ್ಯಕ್ತಿ ಮೇಲೆ ಅಟ್ಯಾಕ್..!
ಉತ್ತರ ಕನ್ನಡ ಸೇರಿ ಹಲವು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಭಾರೀ ಮಳೆಯ ಮುನ್ಸೂಚನೆ..!
KDCC ಕುಸ್ತಿಯಲ್ಲಿ ಹೆಬ್ಬಾರ್ ಬಣದ್ದೇ ಮೇಲುಗೈ, ಮಂಕಾಳು ವೈದ್ಯರ ಬಣಕ್ಕೆ ನಿರಾಸೆ..!
ಮುಂಡಗೋಡ ಹೊರವಲಯದ ಖಬರಸ್ಥಾನ ಬಳಿ ಭಯಾನಕ ಕಾರ್ ಪಲ್ಟಿ..! ಚಾಲಕ ಬದುಕಿದ್ದೇ ಪವಾಡ..!!
ಭಾರೀ ಮಳೆ ಮುನ್ಸೂಚನೆ ಉತ್ತರ ಕನ್ನಡದಲ್ಲಿ ಆರೆಂಜ್ ಅಲರ್ಟ್, ಮುನ್ನೆಚ್ಚರಿಕೆ ವಹಿಸಿ: ಜಿಲ್ಲಾಧಿಕಾರಿ ಕರೆ
ನೈರುತ್ಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಉತ್ತರ ಕನ್ನಡ ಸೇರಿ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ..!
ಸನವಳ್ಳಿ ಬಳಿ ಕಾರ್ ಹಾಗೂ ಬೈಕ್ ನಡುವೆ ಅಪಘಾತ, ಬೈಕ್ ಸವಾರನಿಗೆ ಗಂಭೀರ ಗಾಯ..!
ಕಲಿಯುಗದ ಕುಡುಕ ಖ್ಯಾತಿಯ ಹಾಸ್ಯನಟ ರಾಜು ತಾಳಿಕೋಟಿ ವಿಧಿವಶ..!
ಮುಂಡಗೋಡ ಮಾರ್ಕೆಟಿಂಗ್ ಸೊಸೈಟಿಗೆ ಮತ್ತೊಮ್ಮೆ ರವಿಗೌಡ ಪಾಟೀಲರೇ ಕಿಂಗ್..!
Author: admin (ಶ್ರೀ ಆದಿಶಕ್ತಿ ಮಿಡಿಯಾ ಪ್ರೈವೇಟ್ ಲಿಮಿಟೆಡ್)
ಗೋ ಹತ್ಯೆ ನಿಷೇಧ ವಿಧೇಯಕ: ಇದು ಕೃಷಿ ಸಂಸ್ಕೃತಿಯ ಪ್ರತೀಕ- ಕಟೀಲ್*
ಮಂಗಳೂರು- ತೀವ್ರ ವಿರೋಧದ ನಡುವೆಯೂ ವಿಧಾನ ಸಭೆಯಲ್ಲಿ ಗೋ ಹತ್ಯೆ ನಿಷೇಧ ವಿದೇಯಕವನ್ನು ಮಂಡಿಸಲಾಯಿಗಿದೆ. ಪಶುಸಂಗೋಪನಾ ಸಚಿವ ಪ್ರಭು ಚೌವ್ಹಾಣ್ ಅವರು ಗೋಹತ್ಯೆ ನಿಷೇಧ ಮಸೂದೆಯನ್ನು ಮಂಡಿಸಿದ್ದು ಅಂಗೀಕಾರಗೊಂಡಿದೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗೋಹತ್ಯೆ ನಿಷೇಧ ಮಸೂದೆ ಮಂಡಿಸಿ ಅಂಗೀಕಾರ ಗೊಂಡಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. ಬಹು ನಿರೀಕ್ಷಿತ ಹಾಗೂ ಬಹು ಬೇಡಿಕೆಯ ಗೋಹತ್ಯಾ ನಿಷೇಧ ಕಾನೂನು ಜಾರಿಗೆ ತರುವ ಪ್ರಯತ್ನ ಈ ಹಿಂದೆ ಬಿಜೆಪಿ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ನಡೆದಿತ್ತು...
ಲೆಫ್ಟಿನೆಂಟ್ ಹುದ್ದೆ: ಮುಂಡಗೋಡ ಯುವಕನ ಹೆಮ್ಮೆ*
ಮುಂಡಗೋಡ: ಇದು ನಿಜಕ್ಕೂ ಮುಂಡಗೋಡಿಗರಿಗೆ ಹೆಮ್ಮೆಯ ಸಂಗತಿ. ಪಟ್ಟಣದಲ್ಲೇ ಹುಟ್ಟಿ ಬೆಳೆದ ಯುವಕನೊಬ್ಬ ನಮ್ಮ ಭಾರತೀಯ ಸೇನಾಧಿಕಾರಿ ಹುದ್ದೆ ಅಲಂಕರಿಸಿದ್ದಾನೆ. ಸತತ ಛಲ.. ಭಾರತೀಯ ಸೇನಾಧಿಕಾರಿ ಹುದ್ದೆ ಪಡೆಯಲೇಬೇಕು ಎಂಬ ಗುರಿಯೊಂದಿಗೆ ಪರೀಕ್ಷೆ ಎದುರಿಸಿ, ಸತತ ಎಂಟನೇ ಪ್ರಯತ್ನದಲ್ಲಿ ಲೆಫ್ಟಿನೆಂಟ್ ಹುದ್ದೆ ಪಡೆಯುವಲ್ಲಿ ಪಟ್ಟಣದ ಹಳೂರಿನ ಯುವಕ ಅಭಯ ಪಂಡಿತ್ ಯಶಸ್ವಿಯಾಗಿದ್ದಾರೆ. ಕರ್ನಾಟಕದಿಂದ ಒಟ್ಟು ಆರು ಜನರು ಈ ಹುದ್ದೆಗೆ ಆಯ್ಕೆಯಾಗಿದ್ದು, ಉತ್ತರಕನ್ನಡ ಜಿಲ್ಲೆಯಿಂದ ಇವರೊಬ್ಬರೇ ಆಯ್ಕೆಯಾಗಿರುವುದು ವಿಶೇಷ. ಚೆನ್ನೈನ ಭಾರತೀಯ ಸೇನಾಧಿಕಾರಿಗಳ ಅಕಾಡೆಮಿಯಲ್ಲಿ ತರಬೇತಿ ಮುಗಿಸಿ,...
ಭೀಮಾತೀರದ ಸಾಹುಕಾರನ ಮೇಲೆ ಫೈರಿಂಗ್ ಕೇಸ್; ಕಿಂಗ್ ಪಿನ್ ಮಡುಸ್ವಾಮಿ ಆರೆಸ್ಟ್
ವಿಜಯಪುರ- ಭೀಮಾತೀರದ ಸಾಹುಕಾರ್ ಮಹದೇವ್ ಬೈರಗೊಂಡ ಮೇಲೆ ನಡೆದ ಫೈರಿಂಗ್ ಕೇಸ್ ನ ಪ್ರಮುಖ ಆರೋಪಿ ಅಂದರ್ ಆಗಿದ್ದಾನೆ.. ಕಳೆದ ಒಂದು ತಿಂಗಳಿಂದ ಫೈರಿಂಗ್ ಕೇಸ್ ಬೆನ್ನತ್ತಿದ್ದ ವಿಜಯಪುರ ಪೊಲೀಸ್ರಿಗೆ ಅಸಲೀ ಆರೋಪಿಯ ಜಾಡು ಬೇಧಿಸೋದು ಅಷ್ಟು ಸುಲಭದ ಮಾತಾಗಿರಲಿಲ್ಲ.. ಹಾಗಾದ್ರೆ ಮಹದೇವ್ ಸಾಹುಕಾರನ ಮೇಲೆ ಸಾವಿನ ಗುರಿಯಿಟ್ಟ ಆ ಹಂತಕರ ನಾಯಕ ಯಾರು..? ಅವತ್ತು ನವೆಂಬರ್ 2 ಮಟ ಮಟ ಮದ್ಯಾಹ್ನ ಭೀಮಾತೀರದ ಮಹದೇವ ಸಾಹುಕಾರನ ಮೇಲೆ ಡೆಡ್ಲಿ ಅಟ್ಯಾಕ್ ಒಂದು ನಡೆದಿತ್ತು.. ಥೇಟು ಸಿನಿಮಾ...
ಮರಾಠಾ ಅಭಿವೃದ್ಧಿ ಪ್ರಾಧಿಕಾರ ಮಾಡಿದ್ದು ಶ್ಲಾಘನೀಯ ಕಾರ್ಯ; ಮಾಜಿ ಸಚಿವ ಪಟ್ಟಣಶೆಟ್ಟಿ
ವಿಜಯಪುರ-ಮರಾಠಾ ಅಭಿವೃದ್ಧಿ ಪ್ರಾಧಿಕಾರದ ಮಾಡಿದ ನಿರ್ಣಯ ನಾವು ಸ್ವಾಗತಿಸಲೇ ಬೇಕು ಎಂದು ಮಾಜಿ ಸಚಿವ ಅಪ್ಪಾಸಾಹೇಬ್ ಪಟ್ಟಣಶೆಟ್ಟಿ ಹೇಳಿದ್ದಾರೆ.. ಮಾದ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು ಮರಾಠಾ ಸಮಾಜದ ಸಲುವಾಗಿ ಮಾಡಿದ ಪ್ರಾಧಿಕಾರವದು, ಅವರು ಕೂಡಾ ಹಿಂದುಗಳಲ್ಲಿ ಇರುವ ವಿಶೇಷ ಜನಾಂಗ. ಅವರಲ್ಲೂ ಸಹಿಹ ಸಾಕಷ್ಟು ಕಡು ಬಡವರು, ನಿರುದ್ಯೋಗಿಗಳಿದ್ದಾರೆ, ಅವರಿಗೆ ಸರ್ಕಾರದಿಂದ ಸೌಲತ್ತು ಸಿಗುತ್ತಿಲ್ಲ. ಇದು ಮರಾಠಿ ಭಾಷೆಗರಿಗೆ ನೀಡಿದ ಅನುದಾನಲವಲ್ಲ. ಕನ್ನಡಪರ ಸಂಘಟನೆಗಳು ಇದನ್ನು ತಪ್ಪಾಗಿ ಭಾವಿಸಿವೆ. ಗಡಿ ಜಿಲ್ಲೆಗಳಾದ ವಿಜಯಪುರ, ಬಾಗಲಕೋಟೆ, ಬೀದರ,...
ನನಗೆ ಧರ್ಮ ಒಡೆದವನು ಅಂತಾ ಪಟ್ಟ ಕಟ್ಟಿದ್ರು; ಮಾಜಿ ಸಚಿವ ಎಂ.ಬಿ.ಪಾಟೀಲ್ ಕಿಡಿ
ವಿಜಯಪುರ- ಮರಾಠ ಅಭಿವೃದ್ಧಿ ನಿಗಮ ಹಾಗೂ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ ವಿಚಾರವಾಗಿ ನಿಗಮ ಸ್ಥಾಪನೆಗಳಿಗೆ ಮಾಜಿ ಸಚಿವ ಎಂ ಬಿ ಪಾಟೀಲ್ ವಿರೋಧ ವ್ಯಕ್ತಪಡಿಸಿದ್ದಾರೆ. ನಿಗಮ ಸ್ಥಾಪನೆಯಿಂದ ಯಾವುದೇ ಸಮಾಜ ಮುಂದೆ ಬರಲು ಸಾಧ್ಯವಿಲ್ಲ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ನೀಡಿದರೆ ಆಯಾ ಸಮಾಜಗಳು ಮುಂದೆ ಬರುತ್ತವೆ ಎಂದು ಸಲಹೆ ನೀಡಿದ್ದಾರೆ. ಸಣ್ಣ ಸಣ್ಣ ಸಮಾಜಕ್ಕೆ ನಿಗಮ ಸ್ಥಾಪನೆಯಿಂದ ಸಹಾಯ ವಾಗಬಹುದು, ಆದ್ರೆ ದೊಡ್ಡ ಸಮುದಾಯಗಳಿಗೆ ನಿಗಮದಿಂದ ಯಾವುದೇ...
ಮುಂಡಗೋಡ ತಾಲೂಕಿನಲ್ಲಿ ಗಜಪಡೆಯ ಅರ್ಭಟ
ಮುಂಡಗೋಡ- ತಾಲೂಕಿನಲ್ಲಿ ಗಜಪಡೆಯ ಅರ್ಭಟ ಜೋರಾಗಿದೆ.. ಗಜಪಡೆಯ ದಾಳಿಯಿಂದ ಇಲ್ಲಿನ ಅನ್ನದಾತ ಕಂಗಾಲಾಗಿದ್ದಾನೆ. ತಾನು ಬೆವರು ಹರಿಸಿ ಬೆಳೆದಿದ್ದ ಬೆಳೆಯನ್ನು ಆನೆಗಳ ಹಿಂಡು ನಾಶಗೊಳಿಸುತ್ತಿವೆ.. ಮುಂಡಗೋಡ ತಾಲೂಕಿನ ಅರಷಿಣಗೇರಿ, ಮಜ್ಜಿಗೇರಿ, ಅತ್ತಿವೇರಿ, ಹುನಗುಂದ ಭಾಗದ ರೈತರು ಆನೆದಾಳಿಯಿಂದ ತಮ್ಮ ಬೆಳೆ ನಾಶವಾಗುವ ಭೀತಿಯಲ್ಲಿದ್ದಾರೆ.. ಹೀಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಆದಷ್ಟು ಬೇಗ ಆನೆಗಳ ಹಾವಳಿಯಿಂದ ರೈತರ ಬದುಕನ್ನ ರಕ್ಷಿಸಬೇಕಾಗಿದೆ.
ಮುಂಡಗೋಡ- ಹಿರಿಯ ಕಾಂಗ್ರೆಸ್ ಮುಖಂಡ ಎಚ್.ಟಿ.ಆಸ್ತಕಟ್ಟಿ ವಿಧಿವಶ- ಗಣ್ಯರ ಸಂತಾಪ
ಮುಂಡಗೋಡ- ತಾಲೂಕಿನ ಹುನಗುಂದ ಗ್ರಾಮದ ಕಾಂಗ್ರೆಸ್ ಹಿರಿಯ ಮುಖಂಡ ಹನ್ಮಂತಪ್ಪ ಆಸ್ತಕಟ್ಟಿ ಇಂದು ವಿಧಿವಶರಾಗಿದ್ದಾರೆ. ಮಾಜಿ ಸಚಿವ ಆರ್.ವಿ.ದೇಶಪಾಂಡೆ ಯವರ ಕಟ್ಟಾ ಬೆಂಬಲಿಗರಾಗಿದ್ದ ಹನ್ಮಂತಪ್ಪ ಆಸ್ತಕಟ್ಟಿ, ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೇ ಪಕ್ಷದಲ್ಲಿ ಅನೇಕ ಹುದ್ದೆಗಳನ್ನು ಅಲಂಕರಿಸಿದ್ದರು. ಹನ್ಮಂತಪ್ಪ ಆಸ್ತಕಟ್ಟಿಯವರ ನಿಧನಕ್ಕೆ ಮಾಜಿ ಸಚಿವ ಆರ್.ವಿ.ದೇಶಪಾಂಡೆ ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ
ಮುಂಡಗೋಡ; ವಿದ್ಯಾರ್ಥಿಗಳಿಗೆ ವಾಟ್ಸ್ ಅಪ್ ಮನೆಪಾಠ; ಹುನಗುಂದ ಶಾಲೆ ಶಿಕ್ಷಕರ ಅವಿರತ ಪ್ರಯತ್ನ
ಮುಂಡಗೋಡ- ಕೊರೋನಾ ಸಂಕಷ್ಟದ ಮದ್ಯೆ ಸದ್ಯ ಮನೆಯಲ್ಲಿರೋ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ವಾಟ್ಸ್ ಅಪ್ ಮೂಲಕವೇ ಶಿಕ್ಷಣ ನೀಡಲಾಗ್ತಿದೆ. ತಾಲೂಕಿನ ಹುನಗುಂದ ಹಿರಿಯ ಪ್ರಾಥಮಿಕ ಶಾಲೆಯ ಎಲ್ಲ ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ವಾಟ್ಸ್ ಅಪ್ ಮೂಲಕವೇ ಮನೆ ಪಾಠ ನೀಡುತ್ತಿದ್ದು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರತಿದಿನ ಬೆಳಿಗ್ಗೆಯಿಂದ ರಾತ್ರಿಯವರೆಗೂ ವಾಟ್ಸ್ ಅಪ್ ಮೂಲಕವೇ ಪಾಠ ಮಾಡ್ತಿರೋ ಶಿಕ್ಷಕರು, ತಮ್ಮ ವಿದ್ಯಾರ್ಥಿಗಳ ಜೊತೆ ವಾಟ್ಸ್ ಅಪ್ ಮೂಲಕ ನಿರಂತರವಾಗಿ ಸಂಪರ್ಕದಲ್ಲಿದ್ದು ಪಾಠ ಮಾಡ್ತಿದಾರೆ. ವಿದ್ಯಾರ್ಥಿಗಳು ಕೇಳುವ ಪ್ರಶ್ನೆಗಳಿಗೆ ವಾಟ್ಸ್...
ಮುಂಡಗೋಡ- ಹುನಗುಂದದಲ್ಲಿ ಒಂದು ಪಾಸಿಟಿವ್: ಸೋಂಕಿತನ ಮನೆ ಸುತ್ತ ಸೀಲ್ ಡೌನ್
ಮುಂಡಗೋಡ- ತಾಲೂಕಿನ ಹುನಗುಂದ ಗ್ರಾಮದಲ್ಲಿ ಇಂದು ಕೊರೋನಾ ಮೊದಲ ಪಾಸಿಟಿವ್ ಪ್ರಕರಣ ದೃಡವಾಗಿದ್ದು, ಸೋಂಕಿತನ ಮನೆ ಸುತ್ತ ಸೀಲ್ ಡೌನ್ ಮಾಡಲಾಗಿದೆ. ಇಂದು ಪ್ರಕರಣ ದೃಢವಾಗುತ್ತಿದ್ದಂತೆ ಹುನಗುಂದ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಹಾಗೂ ವೈದ್ಯಕೀಯ ಸಿಬ್ಬಂದಿಗಳು ಸೀಲ್ ಡೌನ್ ಮಾಡಿದ್ರು. ಹುನಗುಂದ ಗ್ರಾಮ ಪಂಚಾಯತಿಯ ಸಿಬ್ಬಂದಿಗಳು ಸೋಂಕಿತನ ಮನೆ ಸುತ್ತ ಮುತ್ತ ಫಾಗಿಂಗ್ ಮಾಡಿದ್ರು.



