Home admin

Author: admin (ಶ್ರೀ ಆದಿಶಕ್ತಿ ಮಿಡಿಯಾ ಪ್ರೈವೇಟ್ ಲಿಮಿಟೆಡ್)

Post

ತಾಲೂಕಿಗೆ ಉಚಿತ ಅಂಬ್ಯುಲೆನ್ಸ್ ಸೇವೆ ಒದಗಿಸಿದ ಪ್ರಶಾಂತ್ ದೇಶಪಾಂಡೆ..!

ಮುಂಡಗೋಡ ತಾಲೂಕಿನ ಕೊರೋನಾ ಪೀಡಿತರ ಸಹಾಯಕ್ಕಾಗಿ ಕಾಂಗ್ರೆಸ್ ಮುಖಂಡ ಪ್ರಶಾಂತ ದೇಶಪಾಂಡೆ ಅಂಬ್ಯುಲೆನ್ಸ್ ವಾಹನ ನೀಡಿದ್ದಾರೆ.. ಸುಸಜ್ಜಿತ ವ್ಯವಸ್ಥೆ ಇರೋ ಅಂಬ್ಯುಲೆನ್ಸ್ ವಾಹನವನ್ನು ಮುಂಡಗೋಡ ತಾಲೂಕಾಸ್ಪತ್ರೆಗೆ ನೀಡುತ್ತಿದ್ದಾರೆ.. ತಾಲೂಕಿನಲ್ಲಿ ಕೊರೋನಾ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಚಿಕಿತ್ಸೆಗಾಗಿ ಕರೆದೊಯ್ಯಲು ಅಂಬ್ಯುಲೆನ್ಸ್ ಅವಶ್ಯಕತೆ ಹೆಚ್ಚಾಗಿದ್ದು, ಇದನ್ನರಿತ ಪ್ರಶಾಂತ್ ದೇಶಪಾಂಡೆ ಅಂಬ್ಯುಲೆನ್ಸ್ ವಾಹನ ನೀಡಿದ್ದು ಸಮಯೋಚಿತವಾಗಿದೆ ಅಂತಾ ಜನರ ಅಭಿಪ್ರಾಯವಾಗಿದೆ..

Post

ಕಾರ್ಮಿಕರು ಹಾಗೂ ಕಂಪೆನಿಯವರು ಒಂದೇ ಸೈಕಲ್ ನ ಗಾಲಿಗಳಿದ್ದಂತೆ- ಶಿವರಾಮ್ ಹೆಬ್ಬಾರ್

ಬೆಂಗಳೂರು : ಕಾರ್ಮಿಕರು ಮತ್ತು ಕಂಪೆನಿಯವರು ಒಂದೇ ಸೈಕಲ್ ನ ಗಾಲಿಗಳಂತೆ ಕಾರ್ಯ ನಿರ್ವಹಿಸಿ, ಕೋವಿಡ್ ಮುಕ್ತ ಸಮಾಜದ ನಿರ್ಮಾಣಕ್ಕೆ ಸಹಕರಿಸಬೇಕು ಅಂತಾ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಕರೆ ನೀಡಿದ್ರು. ಬೆಂಗಳೂರಿನ CRDEI ಪ್ರೆಸ್ಟೀಜ್ ಗ್ರೂಫ್, ಕರ್ನಾಟಕ ಸರ್ಕಾರ ಕಾರ್ಮಿಕ ಇಲಾಖೆ ಹಾಗೂ ಬಿಬಿಎಂಪಿ ಇವರ ಸಹಭಾಗಿತ್ವದಲ್ಲಿ ಬೆಂಗಳೂರು ನಗರದಲ್ಲಿ ಕಟ್ಟಡ ಕಾರ್ಮಿಕರು ಕೆಲಸ ನಿರ್ವಹಿಸುವ ಅವರವರ ಸ್ಥಳಗಳಲ್ಲಿಯೇ, ಅವರ ಆರೋಗ್ಯದ ಹಿತದೃಷ್ಟಿಯಿಂದ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವ್ರು ಮಾತಾನಾಡುತ್ತಿದ್ರು. ಕಾರ್ಮಿಕರಿಗೆ...

Post

ಹಾನಗಲ್ ಆಶಾ ಕಾರ್ಯಕರ್ತರಿಗೆ ತಲಾ 2 ಸಾವಿರ ಗೌರವಧನ ನೀಡಿದ ಶ್ರೀನಿವಾಸ್ ಮಾನೆ..!

  ಹಾನಗಲ್- ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ್ ಮಾನೆ ಕೋವಿಡ್ ಸಂದರ್ಭದಲ್ಲಿ ಶ್ಲಾಘನೀಯ ಕಾರ್ಯ ಮಾಡಿದ್ದಾರೆ. ಹಾನಗಲ್ ತಾಲೂಕಿ‌ನ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ತಲಾ 2000 ರೂ. ಗೌರವಧನ ನೀಡಿದ್ದಾರೆ. ಹಾನಗಲ್ಲ ತಾಲೂಕಿನಲ್ಲಿ ಕೊರೋನಾ ವಿರುದ್ಧದ ಹೋರಾಟದಲ್ಲಿ ತಮ್ಮ ಪ್ರಾಣದ ಹಂಗನ್ನೂ ತೊರೆದು ಕಾರ್ಯ ನಿರ್ವಹಿಸುತ್ತಿರೋ ಆಶಾ ಕಾರ್ಯಕರ್ತರಿಗೆ ಉತ್ತೇಜನ ನೀಡಲು ಶ್ರೀನಿವಾಸ್ ಮಾನೆ ಮುಂದೆ ಬಂದಿದ್ದಾರೆ.. ವಿಧಾನ ಪರಿಷತ್ ಸದಸ್ಯರಾಗಿರೋ ಶ್ರೀನಿವಾಸ್ ಮಾನೆ, ವೈಯಕ್ತಿಕವಾಗಿ ಅವರ ಸಂಬಳದಲ್ಲಿ, ಒಟ್ಟು 272 ಆಶಾ ಕಾರ್ಯಕರ್ತೆಯರಿಗೆ, ತಲಾ. 2000...

Post
ಚೌಡಳ್ಳಿ ಗ್ರಾಮದ ಗೋಸಾವಿ ಜನಾಂಗದವ್ರಿಗೆ ಆಹಾರ ನೀಡಿದ ಬಸಯ್ಯಸ್ವಾಮಿ..!

ಚೌಡಳ್ಳಿ ಗ್ರಾಮದ ಗೋಸಾವಿ ಜನಾಂಗದವ್ರಿಗೆ ಆಹಾರ ನೀಡಿದ ಬಸಯ್ಯಸ್ವಾಮಿ..!

ಮುಂಡಗೋಡ- ತಾಲೂಕಿನ ಚೌಡಳ್ಳಿ ಗ್ರಾಮದ ಬಸವನಗರ ಪ್ಲಾಟ್ ನಲ್ಲಿ ಇರುವ ಗೋಸಾವಿ ಜನಾಂಗದವರು ಲಾಕ್ಡೌನ್ ಹಿನ್ನೆಲೆ ಸಂಕಷ್ಟದಲ್ಲಿದ್ದಾರೆ.. ಹೀಗಾಗಿ ಇಂದು ಈ ಕುಟುಂಬಗಳಿಗೆ, ಬಸಯ್ಯಸ್ವಾಮಿ ಹಿರೇಮಠ ಕುಟುಂಬದವರು, ಸಂಕಷ್ಟದಲ್ಲಿದ್ದ ಸುಮಾರು 300 ಜನರಿಗೆ ಆಹಾರದ ವ್ಯವಸ್ಥೆ ಮಾಡಿದ್ರು.. ಪ್ರತಿಯೊಂದು ಕುಟುಂಬಕ್ಕೂ ಆಹಾರ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.. ಹೀಗಾಗಿ ಈ ಕುಟುಂಬದವರ ಸಾಮಾಜಿಕ ಜವಾಬ್ದಾರಿಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ..

Post
ರಾಜ್ಯದಲ್ಲಿ ಜೂನ್ ಅಂತ್ಯದವರೆಗೂ ಲಾಕ್ ಡೌನ್ ನಿಶ್ಚಿತ..!

ರಾಜ್ಯದಲ್ಲಿ ಜೂನ್ ಅಂತ್ಯದವರೆಗೂ ಲಾಕ್ ಡೌನ್ ನಿಶ್ಚಿತ..!

ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಎರಡನೇ ಅಲೆಯ ಆರ್ಭಟ ಕೊಂಚ ಕಡಿಮೆಯಾಗಿದೆ. ಆದ್ರೆ ಮಹಾಮಾರಿ ನಿತ್ಯವೂ ಮರಣ ಮೃದಂಗವನ್ನು ಬಾರಿಸುತ್ತಿದೆ. ಹೀಗಾಗಿ ಕರ್ನಾಟಕದಲ್ಲಿ ಜೂನ್ ಅಂತ್ಯದ ವರೆಗೂ ಲಾಕ್ ಡೌನ್ ಫಿಕ್ಸ್ ಆಗುವ ಎಲ್ಲಾ ಸಾಧ್ಯತೆಗಳು ನಿಚ್ಚಳವಾಗಿವೆ.. ರಾಜ್ಯ ಸರ್ಕಾರ ಕರ್ನಾಟಕದಲ್ಲಿ ಅರ್ಧ ಲಕ್ಷದಷ್ಟು ಸೋಂಕು ಪತ್ತೆಯಾಗುತ್ತಲೇ ರಾಜ್ಯದಲ್ಲಿ ಲಾಕ್ ಡೌನ್ ಹೇರಿಕೆ ಮಾಡಿತ್ತು. ಲಾಕ್ ಡೌನ್ ಬೆನ್ನಲ್ಲೇ ರಾಜ್ಯದಲ್ಲಿ ಸೋಂಕಿನ ಪ್ರಮಾಣ ಕೊಂಚ ಇಳಿಕೆ ಕಾಣುತ್ತಿದೆ. ರಾಜ್ಯದಲ್ಲೀಗ ಸರಿಸುಮಾರು 25 ಸಾವಿರದಷ್ಟು ಸೋಂಕು ಪತ್ತೆಯಾಗುತ್ತಿದೆ. ಆದರೆ...

Post

ಇನ್ನು ಜಿಲ್ಲೆಯಲ್ಲಿ ವಾರದ 4 ದಿನ ಅಗತ್ಯ ವಸ್ತುಗಳ ಖರೀಧಿಗೆ ಅವಕಾಶ..!

ಕಾರವಾರ- ಉತ್ತರ ಕನ್ನಡ ಜಿಲ್ಲೆಯಾದ್ಯಂತ ಲಾಕ್ ಡೌನ್ ಮಾರ್ಗಸೂಚಿಯಲ್ಲಿ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಮಲ್ಲೈ ಮುಹಿಲನ್ ಆದೇಶ ಹೊರಡಿಸಿದ್ದಾರೆ.. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಸೂಚನೆಯಂತೆ ಪರಿಷ್ಕೃತ ಆದೇಶ ಹೊರಡಿಸಲಾಗಿದೆ‌‌. ವಾರದ ಎರಡು ದಿನಗಳಿಗೆ ಸೀಮಿತವಾಗಿದ್ದ ಅಗತ್ಯ ವಸ್ತುಗಳ ಖರೀದಿಯ ಅವಕಾಶವನ್ನು, ನಾಳೆಯಿಂದ ಜಿಲ್ಲೆಯಲ್ಲಿ ವಾರದ ನಾಲ್ಕು ದಿನಗಳಿಗೆ, ಅಂದರೆ, ಸೋಮವಾರ, ಮಂಗಳವಾರ, ಬುಧವಾರ ಹಾಗೂ ಗುರುವಾರಗಳಿಗೂ ವಿಸ್ತರಿಸಲಾಗಿದೆ. ಬೆಳಿಗ್ಗೆ 8 ಗಂಟೆಯಿಂದ 12 ಗಂಟೆಯವರೆಗೂ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ.. ಇನ್ನು ಜಿಲ್ಲೆಯಲ್ಲಿ...

Post

ಅಗಡಿ ಗ್ರಾಮಕ್ಕೆ ಸಂಪೂರ್ಣ ಸ್ಯಾನಿಟೈಸ್..!

  ಮುಂಡಗೋಡ- ತಾಲೂಕಿನ ಹುನಗುಂದ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಗಡಿ ಗ್ರಾಮದಲ್ಲಿ ಇಂದು ಇಡೀ ಗ್ರಾಮದ ಗಲ್ಲಿ ಗಲ್ಲಿಗಳಿಗೂ ಗ್ರಾಮ ಪಂಚಾಯತಿ ವತಿಯಿಂದ ಸ್ಯಾನಿಟೈಸ್ ಮಾಡಲಾಯಿತು.. ಗ್ರಾಮ ಪಂಚಾಯತಿ ಆವರಣದಲ್ಲಿ ಸ್ಯಾನಿಟೈಸ್ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯತಿ ಅಧ್ಯಕ್ಷರು ಚಾಲನೆ ನೀಡಿದ್ರು.. ನಂತರ ಅಗಡಿ ಗ್ರಾಮದ ಬಹುತೇಕ ಗಲ್ಲಿಗಳಿಗೆ ತೆರಳಿ ಸ್ಯಾನಿಟೈಸ್ ಮಾಡಲಾಯಿತು.. ಅದಕ್ಕೂ ಮೊದಲು ಗ್ರಾಮದಲ್ಲಿ ಧ್ವನಿ ವರ್ದಕದ ಮೂಲಕ ಗ್ರಾಮಸ್ತರಿಗೆ ತಿಳುವಳಿಕೆ ನೀಡಲಾಯಿತು..ಈ ವೇಳೆ ಗ್ರಾಮ ಪಂಚಾಯತಿ ಸದಸ್ಯರು ಮುಂದೆ ನಿಂತು ಸ್ಯಾನಿಟೈಸ್ ಕಾರ್ಯ ನೆರವೇರಿಸಿದ್ರು…

Post

ಕೊಪ್ಪ ಗ್ರಾಮದಲ್ಲಿ ಕೊರೋನಾ ಸೋಂಕಿತೆ ಸಾವು; ಕೋವಿಡ್ ನಿಯಮದಂತೆ ಅಂತ್ಯಸಂಸ್ಕಾರ..!

ಮುಂಡಗೋಡ ತಾಲೂಕಿನ ಕೊಪ್ಪ ಗ್ರಾಮದಲ್ಲಿ ಕೊವಿಡ್ ನಿಂದ ಮೃತಪಟ್ಟ 55 ವರ್ಷದ ಮಹಿಳೆಯ ಅಂತಿಮ ಸಂಸ್ಕಾರವನ್ನು ಕೋವಿಡ್ ಮಾರ್ಗಸೂಚಿಯ ಅನ್ವಯ ಇಂದು ಕೊಪ್ಪ ಗ್ರಾಮದ ಹೊರವಲಯದಲ್ಲಿ ನೆರವೇರಿಸಲಾಯಿತು.. ಇಂದೂರು ಗ್ರಾಮ ಪಂಚಾಯತಿ ಸದಸ್ಯರು, ಮುಂಡಗೋಡ ತಾಲೂಕಾಡಳಿತದ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯವರ ನೇತೃತ್ವದಲ್ಲಿ ಕೋವಿಡ್ ನಿಯಮದ ಅನ್ವಯ ಅಂತ್ಯ ಸಂಸ್ಕಾರ ಮಾಡಲಾಯಿತು.. ಇಂದು ಬೆಳಿಗ್ಗೆ ಉಸಿರಾಟದ ತೊಂದರೆಯಿಂದ ಕೊಪ್ಪ ಗ್ರಾಮದ ಮಹಿಳೆ ಮೃತಪಟ್ಟಿದ್ದರು..

Post

ಲಾಕ್ ಡೌನ್ ಹಿನ್ನೆಲೆ ಸಂಕಷ್ಟಕ್ಕೆ ಸಿಲುಕಿವೆ ಬಡ ಕಾರ್ಮಿಕ ಕುಟುಂಬಗಳು..!

ಮುಂಡಗೋಡ-ಪಟ್ಟಣದಲ್ಲಿ ಲಾಕ್ ಡೌನ್ ಸಂಕಷ್ಟದಲ್ಲಿ ಸಿಲುಕಿ ಐದು ಕಾರ್ಮಿಕ ಕುಟುಂಬಗಳು ನರಳುತ್ತಿವೆ.. ಗಾರೆ ಕೆಲಸಕ್ಕೆಂದು ಆಂದ್ರ ಪ್ರದೇಶದಿಂದ ಬಂದಿದ್ದ ಕುಟುಂಬಗಳು, ಲಾಕ್ ಡೌನ್ ಘೋಷಣೆಯಾದ ನಂತ್ರ ವಾಪಸ್ ತಮ್ಮ ರಾಜ್ಯಕ್ಕೆ ತೆರಳಲು ಆಗದೇ ಸಂಕಷ್ಟಕ್ಕೆ ಸಿಲುಕಿವೆ.. ಪುಟ್ಟ ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ದರೂ ಈ ಕಾರ್ಮಿಕರ ಕುಟುಂಬದಲ್ಲಿದ್ದು ಒಂದೊತ್ತಿನ ಊಟಕ್ಕೂ ಪರದಾಡುತ್ತಿವೆ.. ಲಾಕ್ ಡೌನ್ ಗೂ ಮುಂಚೆ ದುಡಿದು ಶೇಖರಿಸಿಟ್ಟುಕೊಂಡಿದ್ದ ದಿನಸಿ ಖಾಲಿಯಾಗಿ ಈಗ ಕುಟುಂಬ ಪರದಾಡುವಂತಾಗಿದೆ.. ಕೈಯಲ್ಲಿ ಹಣವಿಲ್ಲ, ಮಾಡಲು ಕೆಲಸವಿಲ್ಲ, ಹೇಗಾದ್ರೂ ಸರಿ ಪುಟ್ಟ...

Post

ನಂದಿಕಟ್ಟಾ ಗ್ರಾಮದಲ್ಲಿ ಸಂಪೂರ್ಣ ಸ್ಯಾನಿಟೈಸ್ ಸಿಂಪಡಣೆ..!

ಮುಂಡಗೋಡ-ತಾಲೂಕಿನ ನಂದಿಕಟ್ಟಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಿಗೆ ಇಂದು ಗ್ರಾಮ ಪಂಚಾಯತಿ ವತಿಯಿಂದ ಸ್ಯಾನಿಟೈಸ್ ಸಿಂಪಡಣೆ ಮಾಡಲಾಯಿತು.. ನಂದಿಕಟ್ಟಾ ಗ್ರಾಮ ಪಂಚಾಯತಿ ಆವರಣದಲ್ಲಿ ಸ್ಯಾನಿಟೈಸ್ ವಾಹನಕ್ಕೆ ಚಾಲನೆ ನೀಡಿದ ಗ್ರಾಮ ಪಂಚಾಯತಿ ಅಧ್ಯಕ್ಷೆ, ಗ್ರಾಮದಲ್ಲಿ ಸ್ಯಾನಿಟೈಸ್ ಕಾರ್ಯ ಸಂಪೂರ್ಣಗೊಳಿಸುವಂತೆ ಸೂಚಿಸಿದ್ರು.. ಆನಂತರದಲ್ಲಿ ಗ್ರಾಮದ ಗಲ್ಲಿ ಗಲ್ಲಿಗಳಲ್ಲಿ ಸ್ಯಾನಿಟೈಸ್ ಮಾಡಲಾಯಿತು.. ಈ ವೇಳೆ ಗ್ರಾಮ ಪಂಚಾಯತಿ ಸದಸ್ಯರು, ಸಿಬ್ಬಂದಿಗಳು ಹಾಜರಿದ್ದರು..

error: Content is protected !!