Home admin

Author: admin (ಶ್ರೀ ಆದಿಶಕ್ತಿ ಮಿಡಿಯಾ ಪ್ರೈವೇಟ್ ಲಿಮಿಟೆಡ್)

Post
ರಾಜ್ಯದಲ್ಲಿ ಮುಂದುವರಿಯತ್ತಾ ಲಾಕ್ ಡೌನ್..? ತಜ್ಞರ ಸಮಿತಿ ಸರ್ಕಾರಕ್ಕೆ ಕೊಟ್ಟ ವರದಿಯಲ್ಲಿ ಏನಿದೆ..?

ರಾಜ್ಯದಲ್ಲಿ ಮುಂದುವರಿಯತ್ತಾ ಲಾಕ್ ಡೌನ್..? ತಜ್ಞರ ಸಮಿತಿ ಸರ್ಕಾರಕ್ಕೆ ಕೊಟ್ಟ ವರದಿಯಲ್ಲಿ ಏನಿದೆ..?

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ತೀವ್ರ ಸಂಕಷ್ಟ ತಂದಿದೆ. ನಿತ್ಯ ಸಾವು-ನೋವಿನ ಪ್ರಮಾಣ ಹೆಚ್ಚುತ್ತಲೇ ಇದೆ. ರಾಜ್ಯದ ಬಹುತೇಕ ಗ್ರಾಮೀಣ ಭಾಗಕ್ಕೂ ಸೋಂಕು ಹೊಕ್ಕು ಹಿಂಡಿ ಹಿಪ್ಪೆ ಮಾಡಿದೆ. ಹೀಗಾಗಿ ಕೋವಿಡ್ ಪಾಸಿಟಿವಿಟಿ ರೇಟ್ ಶೇಕಡಾ 5 ಕ್ಕಿಂತ ಕಡಿಮೆ ಹಾಗೂ ಸಾವಿನ ಪ್ರಮಾಣ ಶೇಕಡಾ 1ಕ್ಕಿಂತ ಕಡಿಮೆಯಾಗುವರೆಗೂ ಲಾಕ್ ಡೌನ್ ಸೂಕ್ತ ಅಂತಾ ತಜ್ಞರ ಸಮಿತಿ ಸಲಹೆ ನೀಡಿದೆ. ಅಂದಹಾಗೆ, ಈಗ ರಾಜ್ಯ ಸರ್ಕಾರ ಹಲವು ನಿಯಮಾವಳಿಗಳ ಜೊತೆ ವಿಧಿಸಿರುವ ಸೆಮಿ ಲಾಕ್ ಡೌನ್...

Post
ಮುಂಡಗೋಡ: ಹೊಟ್ಟೆನೋವು ತಾಳದೆ ಕಾಡಿನಲ್ಲಿ ವ್ಯಕ್ತಿ ನೇಣಿಗೆ ಶರಣು..!

ಮುಂಡಗೋಡ: ಹೊಟ್ಟೆನೋವು ತಾಳದೆ ಕಾಡಿನಲ್ಲಿ ವ್ಯಕ್ತಿ ನೇಣಿಗೆ ಶರಣು..!

ಮುಂಡಗೋಡ: ಹೊಟ್ಟೆನೋವು ತಾಳಲಾರದೆ ವ್ಯಕ್ತಿಯೋರ್ವ ಕಾಡಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಮುಂಡಗೋಡ-ಹುಬ್ಬಳ್ಳಿ ರಸ್ತೆಯಲ್ಲಿ ನಡೆದಿದೆ. ಮುಂಡಗೋಡ ಗಣೇಶ ನಗರದ, ಬಸವರಾಜ್ ಬಾಲಪ್ಪ ಗೌಳಿ(36) ಆತ್ಮಹತ್ಯೆಗೆ ಶರಣಾದ ವ್ಯಕ್ತಿಯಾಗಿದ್ದಾನೆ. ಹೈನುಗಾರಿಕೆ ಮಾಡುತ್ತಿದ್ದ ವ್ಯಕ್ತಿ ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದ, ಹೀಗಾಗಿ ಸಾಕಷ್ಟು ಚಿಕಿತ್ಸೆ ನೀಡಿದರೂ ನೋವು ಕಡಿಮೆಯಾಗಿರಲಿಲ್ಲ. ಹೀಗಾಗಿ, ಅದನ್ನೇ ಮನಸಿಗೆ ಹಚ್ಚಿಕೊಂಡು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಅಂತಾ ಮೃತನ ಸಹೋದರ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Post

ಇಂದಿರಾನಗರಕ್ಕೂ ವಕ್ಕರಿಸಿದ ಕೊರೋನಾ..! ಸೋಂಕಿನಿಂದ ಮೃತಪಟ್ಟ ವೃದ್ಧನ ಅಂತಿಮ ಸಂಸ್ಕಾರ..!!

ಮುಂಡಗೋಡ-ತಾಲೂಕಿನ ಇಂದೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಪ್ಪ ಇಂದಿರಾನಗರದಲ್ಲಿ ಕೊರೋನಾ ಮಹಾಮಾರಿ ತನ್ನ ಕಬಂಧ ಬಾಹು ಚಾಚಿದೆ. ಅಂದಹಾಗೆ, ಇದುವರೆಗೂ ಒಂದೇ ಒಂದು ಪಾಸಿಟಿವ್ ಪ್ರಕರಣ ದಾಖಲಾಗದೇ ಸುರಕ್ಷಿತವಾಗಿದ್ದ ಹಳ್ಳಿಯಲ್ಲಿ ಈಗ ಕೊರೋನಾದಿಂದಲೇ ಒಂದು ಸಾವು ಸಂಭವಿಸಿದೆ. ನಿನ್ನೆ ಈ ಹಳ್ಳಿಯ 76 ವರ್ಷ ವಯಸ್ಸಿನ ವೃದ್ದ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾನೆ. ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ವದ್ದನನ್ನು ಚಿಕಿತ್ಸೆಗಾಗಿ ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ವೃದ್ದ ಮೃತಪಟ್ಟಿದ್ದಾನೆ. ಹೀಗಾಗಿ, ಸೋಂಕಿತ...

Post
ಮುಂಡಗೋಡ ಕೋವಿಡ್ ಕೇರ್ ಸೆಂಟರ್‌ನಲ್ಲೇ ಕೊರೋನಾ ಸೋಂಕಿತನ ಡ್ಯಾನ್ಸ್..!

ಮುಂಡಗೋಡ ಕೋವಿಡ್ ಕೇರ್ ಸೆಂಟರ್‌ನಲ್ಲೇ ಕೊರೋನಾ ಸೋಂಕಿತನ ಡ್ಯಾನ್ಸ್..!

ಮುಂಡಗೋಡ: ಕೊರೋನಾ ಅನ್ನೋದು ಈಗ ಇಡೀ ದೇಶದ ಜನರ ಜೀವ ಹಿಂಡ್ತಿದೆ. ಅದ್ರಲ್ಲೂ ಕೊರೋನಾ ಸೋಂಕು ದೃಢಪಟ್ಟರೆ ಮುಗಿತು ಎಷ್ಟೊ ಸೋಂಕಿತರು ಭಯದಿಂದಲೇ ಪ್ರಾಣ ಕಳೆದುಕೊಳ್ತಿದಾರೆ. ಆದ್ರೆ ಇಲ್ಲೊಬ್ಬ ಸೋಂಕಿತ ಯುವಕ ಕೋವಿಡ್ ಕೇರ್ ಸೆಂಟರ್ ನಲ್ಲೇ ಕುಣಿದು ಕುಪ್ಪಳಿಸ್ತಿದಾನೆ. ಕೋವಿಡ್ ಅಂದ್ರೆ ಭಯ ಪಡೋ ಜನ್ರಿಗೆ ಧೈರ್ಯ ತುಂಬಿದ್ದಾನೆ. ತನ್ನ ಜೊತೆ ಕೋವಿಡ್ ಕೇರ್ ಸೆಂಟರ್ ನಲ್ಲಿ ಅಡ್ಮಿಟ್ ಆಗಿದ್ದ ಇನ್ನಿತರ ರೋಗಿಗಳಿಗೂ ಆತ್ಮ ಸ್ಥೈರ್ಯ ತುಂಬಿದ್ದಾನೆ. ನಕ್ಕು ನಲಿಸಿದ್ದಾನೆ. ಕೊರೋನಾ ಅಂದ್ರೆ ಯಾರೂ ಭಯ...

Post
ಅಳ್ನಾವರ- ತಾಲೂಕಿನ ಹುಲಿಕೇರಿಯಲ್ಲಿ ಕೋವಿಡ್ ಟೆಸ್ಟ್..!

ಅಳ್ನಾವರ- ತಾಲೂಕಿನ ಹುಲಿಕೇರಿಯಲ್ಲಿ ಕೋವಿಡ್ ಟೆಸ್ಟ್..!

ಅಳ್ನಾವರ- ತಾಲೂಕಿನ ಕಡಬಗಟ್ಟಿ ಗ್ರಾ.ಪಂಚಾಯತ ವ್ಯಾಪ್ತಿಯ ಹುಲಿಕೇರಿ ಗ್ರಾಮದಲ್ಲಿ ಕೋವಿಡ್ ಟೆಸ್ಟ್ ಮಾಡಲಾಯಿತು.   ಈ ವೇಳೆ ಜನರಿಗೆ ತೊಂದರೆ ಆಗದಂತೆ ಅಂತರ ಕಾಪಾಡಿಕೊಂಡು ಕೋವಿಡ್ ನಿಯಮಾವಳಿ ಪಾಲನೆಯನ್ನು ಮಾಡಲಾಯಿತು ಮತ್ತು ಮಾಸ್ಕ ಹಾಕದವರಿಗೆ ಜಾಗೃತಿ ಮೂಡಿಸಿ ನಿಯಮಾವಳಿಗಳನ್ನು ಪಾಲಿಸಲು ಸೂಚನೆ ನೀಡಲಾಯಿತು.   ಜನರು ಭಯ ಪಡುವ ಅವಶ್ಯಕತೆ ಇಲ್ಲ ಕೋವಿಡ್ ಗುಣಲಕ್ಷಣಗಳು ಕಂಡು ಬಂದಲ್ಲಿ ಸರಕಾರಿ ಶಾಲೆಯನ್ನು ಕೋವಿಡ್ ಕಾಳಜಿ ಕೇಂದ್ರವನ್ನಾಗಿ ಪರಿವರ್ತನೆ ಮಾಡಿ ಸೋಂಕಿತರಿಗೆ ಅಗತ್ಯ ಚಿಕಿತ್ಸೆ ನಿಡಲಾಗುತ್ತದೆ ಅಂತಾ ಕರ್ನಾಟಕ ಪ್ರದೇಶ...

Post

ಸೋಂದಾ ಸ್ವರ್ಣವಲ್ಲಿ ಮಠದಿಂದ ಅಶಕ್ತರಿಗೆ ದಿನಸಿ ಕಿಟ್ ವಿತರಣೆ..!

ಶಿರಸಿ: ಆಧ್ಯಾತ್ಮ ಸಾಧನೆಯ ಜೊತೆಗೆ ಸಮಾಜಮುಖಿ ಮಠವಾಗಿಯೂ ಗುರುತಿಸಿಕೊಂಡಿರೋ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸೋಂದಾ ಸ್ವರ್ಣವಲ್ಲೀ‌ ಮಹಾ ಸಂಸ್ಥಾನವು ಮಠದ ಸುತ್ತಲಿನ ಅಗತ್ಯವುಳ್ಳ ಜನರಿಗೆ ಉಚಿತವಾಗಿ ದಿನಸಿ ಸಾಮಗ್ರಿ ವಿತರಿಸಿತು. ಲಾಕ್ ಡೌನ್, ಕೋವಿಡ್ ಕಾರಣದಿಂದ ಬಡತನದಲ್ಲಿ ಇರೋ ಕುಟುಂಬಗಳಿಗೆ ಅಕ್ಕಿ, ಕಾಯಿ, ಬೆಲ್ಲ, ಬೇಳೆ, ಶ್ರೀದೇವರ ಪ್ರಸಾದವನ್ನ ಕೂಡ ಸ್ವರ್ಣವಲ್ಲೀ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತೀ‌ ಮಹಾಸ್ವಾಮೀಜಿಗಳು ವಿತರಿಸಿದರು. ಇದೇ ವೇಳೆ ಈ ಸಂದಿಗ್ದ ಕಾಲವನ್ನು‌ ಒಟ್ಟಾಗಿ ಎದುರಿಸಬೇಕಾಗಿದೆ. ಸಾಮಾಜಿಕ ಅಂತರ, ಮಾಸ್ಕ ಧಾರಣೆ...

Post

ಮುಂಡಗೋಡ ಪಟ್ಟಣದಲ್ಲಿ ಅಗತ್ಯ ವಸ್ತುಗಳ ಖರೀಧಿ ಭರಾಟೆ ಜೋರು..!

ಮುಂಡಗೋಡ- ಪಟ್ಟಣದಲ್ಲಿ ಇಂದಿನಿಂದ ವಾರದ 4 ದಿನಗಳ ಕಾಲ ಬೆಳಿಗ್ಗೆ 8 ಗಂಟೆಯಿಂದ ಮದ್ಯಾನ 12 ಗಂಟೆವರೆಗೆ ಅಗತ್ಯ ವಸ್ತುಗಳ ಖರೀಧಿಗೆ ಅವಕಾಶ ಕಲ್ಪಿಸಿರೋ ಹಿನ್ನೆಲೆಯಲ್ಲಿ ತಾಲೂಕಿನೆಲ್ಲೆಡೆಯಿಂದ ಪಟ್ಟಣಕ್ಕೆ ಬೆಳಗಿನಿಂದಲೇ ಜನ ಬಂದಿದ್ರು. ಅಗತ್ಯ ವಸ್ತುಗಳ ಖರೀಧಿಗೆ ಬಂದ ಜನ ಅಗತ್ಯ ವಸ್ತಗಳಿಗಾಗಿ ಮುಗಿಬೀಳುತ್ತಿರೊ ದೃಷ್ಯಗಳು ಸಾಮಾನ್ಯವಾಗಿತ್ತು. ಹೀಗಾಗಿ ಪೊಲೀಸ್ರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಎಚ್ಚರಿಸಿದ್ರು. ಇನ್ನು ದಿನಸಿ ಅಂಗಡಿಗಳ ಮಾಲೀಕರಿಗೂ ಅಂಗಡಿಗಳ ಮುಂದೆ ಗ್ರಾಹಕರಿಗೆ ಸಾಮಾಜಿಕ ಅಂತರ ಹಾಗೂ ಮಾಸ್ಕ್...

Post

ಮುಂಡಗೋಡ ಪಟ್ಟಣದಲ್ಲಿ ಅನಗತ್ಯ ತಿರುಗಾಡುವವರ ವಿರುದ್ಧ ಪೊಲೀಸರ ಕಠಿಣ ಕ್ರಮ..!

ಮುಂಡಗೋಡ- ಪಟ್ಟಣದಲ್ಲಿ ಅನಗತ್ಯ ತಿರುಗಾಡುವ ವಾಹನ ಸವಾರರಿಗೆ ಪೊಲೀಸ್ರು ಬಿಸಿ ಮುಟ್ಟಿಸುತ್ತಿದ್ದಾರೆ. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ಪರಿಶೀಲನೆಗೆ ಇಳಿದಿರೋ ಪೊಲೀಸ್ರು ಅನಗತ್ಯವಾಗಿ ತಿರುಗಾಡುವ ವಾಹನಗಳ ಬಗ್ಗೆ ಕಣ್ಣಿಟ್ಟಿದ್ರು. ಬೈಕ್ ಸವಾರರು, ಕಾರ್ ಸವಾರರು ಪಟ್ಟಣದ ಒಳಗೆ ಅಥವಾ ಪಟ್ಟಣದಿಂದ ಹೊರಗೆ ಹೋಗುವ ಸಂದರ್ಭದಲ್ಲಿ ಅಂತವರನ್ನು ಪೊಲೀಸರು ಪರಿಶೀಲಿಸುತ್ತಿದ್ದರು. ಇನ್ನು ಮಾಸ್ಕ್ ಧರರಿಸದೇ ತಿರುಗಾಡುವ ಸವಾರರ ವಿರುದ್ಧ ಸಮರ ಸಾರಿರೋ ಪೊಲೀಸ್ರು, ಮಾಸ್ಕ್ ಧರಿಸದವರನ್ನು ತಡೆದು ಕ್ಲಾಸ್ ತೆಗೆದುಕೊಂಡರು, ಅಲ್ದೆ ದಂಡ ಹಾಕುವ ಮೂಲಕ ಬಿಸಿ...

Post

ಮುಂಡಗೋಡದ ಶಿವಾಜಿ ಸರ್ಕಲ್ ನಲ್ಲಿ ಜನವೋ ಜನ..! ಸಾಮಾಜಿಕ ಅಂತರ ಮಾಯ..!!

ಮುಂಡಗೋಡ- ಪಟ್ಟಣದಲ್ಲಿ ಇಂದು ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿರೋ ಹಿನ್ನೆಲೆಯಲ್ಲಿ, ಮುಂಡಗೋಡ ಪಟ್ಟಣದ ಹೃದಯಭಾಗ ಶಿವಾಜಿ ಸರ್ಕಲ್ ನಲ್ಲಿ ಜನಸಂದಣಿ ಸೇರಿತ್ತು. ಅಗತ್ಯ ವಸ್ತುಗಳ ಖರೀಧಿಗೆ ತಾಲೂಕಿನ ಗ್ರಾಮೀಣ ಭಾಗಗಳಿಂದ ಬಂದಿದ್ದ ಜನ ಅಗತ್ಯ ವಸ್ತುಗಳ ಖರೀಧಿಯಲ್ಲಿ ಮುಳುಗಿದ್ರು. ಪಟ್ಟಣದ ಬಹುತೇಕ ದಿನಸಿ ಅಂಗಡಿಗಳು ಫುಲ್ ಆಗಿದ್ದವು. ಹೀಗಾಗಿ ಕೆಲವು ಕಡೆ ಸಾಮಾಜಿಕ ಅಂತರ ಅನ್ನೋದು ಮಂಗಮಾಯವಾಗಿತ್ತು. ಪೊಲೀಸರು ಎಷ್ಟೇ ಎಚ್ಚರಿಸಿದ್ರೂ ಜನ ಕ್ಯಾರೇ ಅನ್ನದೇ ಸಾಮಾಜಿಕ ಅಂತರ ಮರೆತು ಖರೀಧಿಯಲ್ಲಿ ಬ್ಯುಸಿಯಾಗಿದ್ರು.

Post

LVK ಯಿಂದ ಆಶಾ ಕಾರ್ಯಕರ್ತೆಯರಿಗೆ ಆರೋಗ್ಯ ರಕ್ಷಕ ಕಿಟ್, ದಿನಸಿ ಕಿಟ್ ವಿತರಣೆ..!

ಮುಂಡಗೋಡ- ತಾಲೂಕಿನ ಹುನಗುಂದ ಪ್ರಾಥಮಿಕ ಆರೋಗ್ಯ ಕೇಂದ್ರದ ಮೂಲಕ LVK ಮುಂಡಗೋಡ ವತಿಯಿಂದ ಆಶಾ ಕರ್ಯಕರ್ತೆಯರಿಗೆ ಸ್ಯಾನಿಟೈಸ್, ಮಾಸ್ಕ್ ಸೇರಿ ಆರೋಗ್ಯ ರಕ್ಷಕ ಕಿಟ್ ವಿತರಣೆ ಮಾಡಲಾಯಿತು. ಹಾಗೇ ಆಶಾ ಕರ್ಯಕರ್ತರಿಗೆ ದಿನಸಿ ಸಾಮಗ್ರಿಗಳ ಕಿಟ್ ನೀಡಲಾಯಿತು. ಮುಂಡಗೋಡ ತಾಲೂಕಿನಲ್ಲಿ ಸಾಮಾಜಿಕ ಜವಾಬ್ದಾರಿಯ ಕಾರ್ಯಗಳನ್ನು ಮಾಡುತ್ತಿರೋ LVK ತಾಲೂಕಿನ ಬಹುತೇಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ಇಂತಹದ್ದೊಂದು ಸೇವೆ ಮಾಡುತ್ತಿದೆ. ಇನ್ನು ಈ ವೇಳೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ಎಸ್‌.ವಿ‌. ಸುಳ್ಳದ, LVK ಸಂಚಾಲಕರು, ಆರೋಗ್ಯ ಸಿಬ್ಬಂದಿಗಳು...

error: Content is protected !!