Home admin

Author: admin (ಶ್ರೀ ಆದಿಶಕ್ತಿ ಮಿಡಿಯಾ ಪ್ರೈವೇಟ್ ಲಿಮಿಟೆಡ್)

Post

ಚೌಡಳ್ಳಿ ಗ್ರಾಮಕ್ಕೆ ಸಂಪೂರ್ಣ ಸ್ಯಾನಿಟೈಸ್..!

ಮುಂಡಗೋಡ- ತಾಲೂಕಿನ ಚವಡಳ್ಳಿ ಗ್ರಾಮದಲ್ಲಿ ಇಂದು ಇಡೀ ಗ್ರಾಮದ ಗಲ್ಲಿ ಗಲ್ಲಿಗಳಿಗೂ ಗ್ರಾಮ ಪಂಚಾಯತಿ ವತಿಯಿಂದ ಸ್ಯಾನಿಟೈಸ್ ಮಾಡಲಾಯಿತು.. ಗ್ರಾಮ ಪಂಚಾಯತಿ ಆವರಣದಲ್ಲಿ ಸ್ಯಾನಿಟೈಸ್ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯತಿ ಅಧ್ಯಕ್ಷರು ಚಾಲನೆ ನೀಡಿದ್ರು.. ನಂತರ ಅಗಡಿ ಗ್ರಾಮದ ಬಹುತೇಕ ಗಲ್ಲಿಗಳಿಗೆ ತೆರಳಿ ಸ್ಯಾನಿಟೈಸ್ ಮಾಡಲಾಯಿತು.. ಅದಕ್ಕೂ ಮೊದಲು ಗ್ರಾಮದಲ್ಲಿ ಧ್ವನಿ ವರ್ದಕದ ಮೂಲಕ ಗ್ರಾಮಸ್ತರಿಗೆ ತಿಳುವಳಿಕೆ ನೀಡಲಾಯಿತು..ಈ ವೇಳೆ ಗ್ರಾಮ ಪಂಚಾಯತಿ ಸದಸ್ಯರು ಮುಂದೆ ನಿಂತು ಸ್ಯಾನಿಟೈಸ್ ಕಾರ್ಯ ನೆರವೇರಿಸಿದ್ರು.

Post
ತಾಲೂಕಿನಲ್ಲಿ ಮುಂಗಾರು ಹಂಗಾಮು ಜೋರು; ಭೂಮಿ ಹದಗೊಳಿಸಿ ಬಿತ್ತನೆ ಕಾರ್ಯ ಮಾಡುತ್ತಿರೋ ಅನ್ನದಾತರು..!

ತಾಲೂಕಿನಲ್ಲಿ ಮುಂಗಾರು ಹಂಗಾಮು ಜೋರು; ಭೂಮಿ ಹದಗೊಳಿಸಿ ಬಿತ್ತನೆ ಕಾರ್ಯ ಮಾಡುತ್ತಿರೋ ಅನ್ನದಾತರು..!

ಮುಂಡಗೋಡ- ತಾಲೂಕಿನಲ್ಲಿ ಮುಂಗಾರು ಹಂಗಾಮು ಶುರುವಾಗಿದೆ.. ಈಗಾಗಲೇ ತಾಲೂಕಿನ ರೈತರು ತಮ್ಮ ಗದ್ದೆಗಳನ್ನು ಸ್ವಚ್ಚಗೊಳಿಸಿದ್ದಾರೆ.. ಸಾಕಷ್ಟು ಮಳೆಯಾದ ಕಾರಣ ಭೂಮಿ ರಂಟೆ ಕುಂಟೆ ಹೊಡೆದು ಹದಗೊಳಿಸಿದ್ದಾರೆ.. ಅಲ್ದೇ ಸಾಕಷ್ಟು ಭಾಗಗಳಲ್ಲಿ ಈಗಾಗಲೇ ಬಿತ್ತನೆ ಕಾರ್ಯ ಚುರಿಕುಗೊಂಡಿದೆ.. ತಾಲೂಕಿನ ಸನವಳ್ಳಿ, ಬಾಚಣಕಿ, ಕಾತೂರು, ಪಾಳಾ ಸೇರಿದಂತೆ ಹಲವು ಕಡೆ ಈಗಾಗಲೇ ಗೋವಿನ ಜೋಳ, ಭತ್ತ ಸೇರಿದಂತೆ ಹಲವು ತಳಿಯ ಬೀಜಗಳ ಬಿತ್ತನೇ ಕಾರ್ಯ ಶುರುವಾಗಿದ್ದು ರೈತ ಲಾಕ್ ಡೌನ್ ಮದ್ಯೆಯೂ ಬ್ಯುಸಿಯಾಗಿದ್ದಾನೆ. ಇನ್ನು, ಬಿತ್ತನೆಗೆ ಬೇಕಾದ ಬೀಜ, ರಸಗೊಬ್ಬರಗಳ...

Post

ಲಾಕ್ ಡೌನ್ ಸಂಕಷ್ಟದಲ್ಲಿದ್ದ ಮಹಾರಾಷ್ಟ್ರದ ಕುಟುಂಬಗಳಿಗೆ ದಿನಸಿ ವಿತರಣೆ..!

ಮುಂಡಗೋಡ-ತಾಲೂಕಿನ ಇಂದೂರಿನಲ್ಲಿ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವಕ್ಕೆಂದು ಮಹಾರಾಷ್ಟ್ರದಿಂದ ಜೋಕಾಲಿ ಪ್ರದರ್ಶನಕ್ಕೆ ಬಂದಿದ್ದ ಕೂಲಿಕಾರ್ಮಿಕರಿಗೆ ಕೊಡುಗೈ ದಾನಿಗಳು ನೆರವಿನ ಹಸ್ತ ಚಾಚಿದ್ದಾರೆ.. ಇಂದೂ ಕೂಡ ಇಂದೂರಿನ ಅಂಗನವಾಡಿ ಹಾಗೂ ಆಶಾ ಕರ್ಯಕರ್ತರು ಸಂಕಷ್ಟದಲ್ಲಿದ್ದ ಕುಟುಂಬಗಳಿಗೆ ತರಕಾರಿ ಹಾಗೂ ದಿನಸಿ ವಿತರಿಸಿದ್ರು.. ಅಂಗನವಾಡಿ ಕಾರ್ಯಕರ್ತೆ ಜ್ಯೋತಿ ಸುರಕೋಡ್, ಆಶಾ ಕಾರ್ಯಕರ್ತೆ ಲಕ್ಮೀ ಕೊಮ್ಮರಿಸಿಕೊಪ್ಪ ಸೇರಿ ಸಂಕಷ್ಟದಲ್ಲಿದ್ದ ಮಹಾರಾಷ್ಟ್ರದ ಕುಟುಂಬಗಳಿಗೆ ತರಕಾರಿ ಹಾಗೂ ದಿನಸಿ ವಿತರಿಸಿದ್ರು..

Post
ಅರಟಾಳದಲ್ಲಿ ಸುಬ್ರಮ್ಮಣ್ಯ ಸ್ವಾಮಿಯ ಸನ್ನಿಧಾನ..!

ಅರಟಾಳದಲ್ಲಿ ಸುಬ್ರಮ್ಮಣ್ಯ ಸ್ವಾಮಿಯ ಸನ್ನಿಧಾನ..!

ವಿಶೇಷ ವರದಿ ಕಾಳ ಸರ್ಪ ದೋಷ, ನಾಗದೋಷಗಳ ಪರಿಹಾರಕ್ಕಾಗಿ ಸಾಕಷ್ಟು ಜನ ಕುಕ್ಕೆ ಸುಬ್ರಮ್ಮಣ್ಯ ಕ್ಷೇತ್ರಕ್ಕೆ ಹೋಗ್ತಾರೆ.. ಆದ್ರೆ ಕುಕ್ಕೆ ಶ್ರೀ ಕ್ಷೇತ್ರದ ದಿವ್ಯ ಸನ್ನಿಧಾನದಂತೆಯೇ ಮತ್ತೊಂದು ಸನ್ನಿಧಾನ ನಮ್ಮ ಸಮೀಪದಲ್ಲೇ ಇದೆ.. ಹೌದು, ಶಿಗ್ಗಾವಿ ತಾಲೂಕಿನ ಅರಟಾಳ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಾಲಯ ಲದ ಆವರಣದಲ್ಲಿ ಶ್ರೀ ಸುಬ್ರಮ್ಮಣ್ಯ ಸ್ವಾಮಿ ನೆಲೆ ನಿಂತಿದ್ದಾರೆ.. ಭವ್ಯವಾದ ಆಲದ ಮರದ ಕೆಳಗೆ ವಿರಾಜಮಾನವಾಗಿರೋ ಸುಭ್ರಮ್ಮಣ್ಯ ಸ್ವಾಮಿಯ ದರ್ಶನಕ್ಕಾಗಿ ಭಕ್ತರ ದಂಡೇ ಹರಿದು ಬರತ್ತೆ.. ಇನ್ನು ಸರ್ಪದೋಷ, ಕಾಳಸರ್ಪದೋಷ ಮುಂತಾದ...

Post

ಶೇಂಗಾ ಬೆಳೆದ ತಾಲೂಕಿನ ರೈತನ ಬದುಕು ಮೂರಾಬಟ್ಟೆ; ಇದೇಲ್ಲ ತೌಕ್ತೆ ಚಂಡ ಮಾರುತದ ಎಫೆಕ್ಟ್ ಕಣ್ರಿ..!

ಮುಂಡಗೋಡ- ತಾಲೂಕಿನ ಅನ್ನದಾತ ಅಕ್ಷರಶಃ ಸಂಕಷ್ಟದಲ್ಲಿದ್ದಾನೆ. ಬೇಸಿಗೆ ಬೆಳೆಯಾಗಿ ಸಾವಿರಾರು ರೂ. ಖರ್ಚು ಮಾಡಿ ಶೇಂಗಾ ಬೆಳೆದಿದ್ದ ರೈತನ ಬದುಕು ಈಗ ಮೂರಾಬಟ್ಟೆಯಾಗಿದೆ. ತೌಕ್ತೆ ಚಂಡ ಮಾರುತದ ಎಫೆಕ್ಟ್ ನಿಂದಾಗಿ ಶೇಂಗಾ ಬೆಳೆದಿದ್ದ ರೈತನಿಗೆ ಈಗ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.. ಯಸ್, ಬಂದಷ್ಟು ಬರಲಿ ಅಂತಾ ತನ್ನ ಗದ್ದೆಯಲ್ಲಿ ಬೆಳೆದು ಮಳೆಯ ನೀರಲ್ಲಿ ಕೊಳೆತು ಹೋಗಿರೋ ಶೇಂಗಾ ಬೆಳೆಯನ್ನು ಒಕ್ಕಲು ಮಾಡುತ್ತಿರೋ ರೈತನ ಮನಸಲ್ಲಿ ಅಕ್ಷರಶಃ ಆತಂಕವಿದೆ.. ಸಾಲ ಸೋಲ ಮಾಡಿ ಬೆಳೆದಿದ್ದ ಬೆಳೆಯೇಲ್ಲ...

Post

ನಂದಿಕಟ್ಟಾ ಗ್ರಾಮದ ಪುರಾತನ ಬಸವಣ್ಣ ದೇವಾಲಯ ಈಗ ನವನವೀನ..!

ವಿಶೇಷ ವರದಿ.. ಮುಂಡಗೋಡ ತಾಲೂಕು ಅಂದ್ರೆ ಪುಟ್ಟದೊಂದು ಪ್ರಪಂಚ ಇದ್ದಂಗೆ.. ಒಮ್ಮೆ ನೀವು ಮುಂಡಗೋಡ ತಾಲೂಕನ್ನು ಸುತ್ತಿ ಬಂದ್ರೆ ಸಾಕು ಇಡೀ ವಿಶ್ವವನ್ನೇ ಸುತ್ತಿ ಬಂದಷ್ಟು ಜ್ಙಾನ ಸಿಗೋದು ಗ್ಯಾರಂಟಿ.. ಇಲ್ಲಿನ ವೈವಿದ್ಯತೆ ಅನ್ನೋದೇ ಹಾಗಿದೆ.. ಯಾಕಂದ್ರೆ ಇಲ್ಲಿ ಜಗತ್ತಿನಾದ್ಯಂತ ಇರೋ ಬಹುತೇಕ ಜನಾಂಗಗಳು ನೆಲೆ ನಿಂತಿವೆ.. ಟಿಬೇಟಿಗರು, ಸಿದ್ದಿಗಳು, ಲಂಬಾಣಿಗರು, ಗೌಳಿಗರು ಹೀಗೆ ವಿವಿಧ ಜನಾಂಗಗಳು ಇಲ್ಲಿ ನೆಲೆ ನಿಂತಿವೆ.. ಹೀಗಾಗಿ ವಿಶ್ವದ ಬಹುತೇಕ ಜನಾಂಗಗಳನ್ನು ಮುಂಡಗೋಡ ತಾಲೂಕಿನಲ್ಲಿ ಕಾಣಬಹುದು… ಇದು ನಮ್ಮೇಲ್ಲರ ಹೆಮ್ಮೆ.. ಇನ್ನು...

Post

ಲಾಕ್ ಡೌನ್ ಎಫೆಕ್ಟ್- ಶುಂಠಿ ಬೆಳೆದ ರೈತನ ಬದುಕೇ ಕಗ್ಗಂಟು..!

ಮುಂಡಗೋಡ- ತಾಲೂಕಿನಲ್ಲಿ ಶುಂಠಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಲಾಕ್ ಡೌನ್ ಹಿನ್ನೆಲೆ ಶುಂಠಿ ಬೆಲೆ ದಿಢೀರನೆ ಕುಸಿದ ಪರಿಣಾಮ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಶುಂಠಿ ಬೆಳೆದಿದ್ದ ರೈತನಿಗೆ ಸದ್ಯ ಲಾಕ್ ಡೌನ್ ಇರೋ ಕಾರಣಕ್ಕೆ, ಶುಂಠಿ ಖರೀದಿಸುವ ವ್ಯಾಪಾರಸ್ಥರು ಬರುತ್ತಿಲ್ಲ.. ಹೀಗಾಗಿ ಇಲ್ಲಿನ ಕೆಲವು ಸ್ಥಳೀಯ ವ್ಯಾಪಾರಿಗಳು 60 ಕೆಜಿಯ ಶುಂಠಿ ಚೀಲಕ್ಕೆ 600 ರಿಂದ 700 ರೂಪಾಯಿ ದರಕ್ಕೆ ಕೇಳುತ್ತಿದ್ದಾರೆ. ಹೀಗಾಗಿ, ಶುಂಠಿ ಬೆಳೆಯಲು ಮಾಡಿದ್ದ ಖರ್ಚೂ ಸಹ ಬರದಾಗಿದೆ...

Post

ಲಾಕ್ ಡೌನ್ ಹಿನ್ನೆಲೆ- ಮುಂಡಗೋಡ ಸಂಪೂರ್ಣ ಸ್ತಬ್ದ; ಫಿಲ್ಡಿಗಿಳಿದ ಪೊಲೀಸ್ರು..!

ಮುಂಡಗೋಡ-ತಾಲೂಕಿನಲ್ಲಿ ಮತ್ತೆ ಕಠಿಣ ಲಾಕ್ ಡೌನ್ ಜಾರಿಯಾದ ಎರಡನೇ ದಿನದ ಹಿನ್ನೆಲೆಯಲ್ಲಿ ಪೊಲೀಸ್ರು ಫಿಲ್ಡಿಗಿಳಿದಿದ್ರು. ಮುಂಡಗೋಡ ಪಟ್ಟಣದ ಎಲ್ಲಾ ರಸ್ತೆಗಳಿಗೂ ಬ್ಯಾರಿಕೇಡ್ ಹಾಕಿ ಪಟ್ಟಣದ ಒಳಗೆ ಅಥವಾ ಹೊರ ಹೋಗುವ ವಾಹನಗಳ ತಪಾಸಣೆ ಮಾಡುತ್ತಿದ್ದಾರೆ.. ಈ ಮೂಲಕ ಅನಗತ್ಯವಾಗಿ ತಿರುಗಾಡುವ ವಾಹನ ಸವಾರರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ.. ಮುಂಡಗೋಡ ಪಟ್ಟಣಕ್ಕೆ ಸಂಪರ್ಕಿಸುವ ಎಲ್ಲಾ ಮಾರ್ಗಗಳಲ್ಲೂ ಬ್ಯಾರಿಕೇಡ್ ಹಾಕಿ ತಪಾಸಣೆ ನಡೆಸುತ್ತಿರೋ ಪೊಲೀಸ್ರು, ಅನಗತ್ಯ ಸಂಚರಿಸೊ ವಾಹನಗಳು ಬಂದ್ರೆ ಅಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತಿದ್ದಾರೆ.. ವಾಹನ ಸವಾರರ ಜೊತೆ...

Post

ಮುಂಡಗೋಡ ಕೃಷಿ ಇಲಾಖೆ ಬೇಜವಾಬ್ದಾರಿ; ಕೋವಿಡ್ ನಿಯಮ ಪಾಲಿಸದ ರೈತರು..!

ಮುಂಡಗೋಡ-ಪಟ್ಟಣದಲ್ಲಿರೋ ಕೃಷಿ ಇಲಾಖೆಯಲ್ಲಿ ರೈತರಿಗೆ ಬಿತ್ತನೆಗೆ ಬೀಜ ಮಾರಾಟ ಮಾಡಲಾಗುತ್ತಿದೆ. ಹೀಗಾಗಿ ತಾಲೂಕಿನ ರೈತರು ಇಂದು ಬಿತ್ತನೆ ಬೀಜಗಳ ಖರೀದಿಗಾಗಿ ಮುಗಿ ಬಿದ್ದಿದ್ರು.. ಆದ್ರೆ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ, ಸಾಮಾಜಿಕ ಅಂತರ ಮರೆತು ಬೀಜ ಖರೀಧಿಸುತ್ತಿದ್ದ ರೈತರಿಗೆ ಇಲಾಖೆಯ ಅಧಿಕಾರಿಗಳು ಕೋವಿಡ್ ನಿಯಮ ಪಾಲಿಸುವಂತೆ ಯಾವುದೇ ನಿರ್ದೇಶನ ನೀಡದೇ ಕಣ್ಮುಚ್ವಿ ಕುಳಿತಿದ್ರು.. ಕೃಷಿ ಇಲಾಖೆಯ ಆವರಣದಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದ ರೈತರು ಯಾವುದೇ ಸಾಮಾಜಿಕ ಅಂತರ ಪಾಲಿಸಲಿಲ್ಲ. ಅಲ್ಲದೇ ಅದೇಷ್ಟೋ ರೈತರು ಮಾಸ್ಕ್ ಕೂಡ ಧರಿಸಿರಲಿಲ್ಲ....

Post
ಪುಟ್ಟ ಬಾಲಕಿಗೂ ಬಿಡಲಿಲ್ಲ ಹೆಮ್ಮಾರಿ; ಆಸ್ಪತ್ರೆಗೆ ಕರೆದೊಯ್ಯುವಾಗ ಕಣ್ಣೀರು ಹಾಕಿದ ಬಾಲಕಿ..!

ಪುಟ್ಟ ಬಾಲಕಿಗೂ ಬಿಡಲಿಲ್ಲ ಹೆಮ್ಮಾರಿ; ಆಸ್ಪತ್ರೆಗೆ ಕರೆದೊಯ್ಯುವಾಗ ಕಣ್ಣೀರು ಹಾಕಿದ ಬಾಲಕಿ..!

ಮುಂಡಗೋಡ- ತಾಲೂಕಿನ ಅಗಡಿ ಗ್ರಾಮದಲ್ಲಿ ಪುಟ್ಟ ಕಂದಮ್ಮನಿಗೂ ಪಾಸಿಟಿವ್ ದೃಡಪಟ್ಟಿದ್ದು ಹೆಬ್ಬಾರ್ ಕೋವಿಡ್ ಹೆಲ್ಪ್ ಲೈನ್ ವಾಹನದ ಮೂಲಕ ಕೋವಿಡ್ ಕೇರ್ ಸೆಂಟರ್ ಗೆ ರವಾನಿಸಲಾಯಿತು.. ಈ ವೇಳೆ ತನ್ನ ಕುಟುಂಬವನ್ನು ಬಿಟ್ಟು ಕೋವಿಡ್ ಕೇರ್ ಸೆಂಟರ್ ಗೆ ಹೋಗುವಾಗ ಪುಟ್ಟ ಮಗು ಕಣ್ಣೀರು ಹಾಕಿದೆ.. ಅಂದಹಾಗೆ ಅಗಡಿ ಗ್ರಾಮದಲ್ಲಿ ಪುಟ್ಟ ಬಾಲಕಿಯೂ ಸೇರಿ ಒಂದೇ ಕುಟುಂಬದ ಮೂವರಲ್ಲಿ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು ಸೋಂಕಿತರೆಲ್ಲರನ್ನೂ ಇಂದು ಕೋವಿಡ್ ಸೆಂಟರ್ ಗೆ ದಾಖಲಿಸಲು ಅಧಿಕಾರಿಗಳ ತಂಡ ಹಾಗೂ ಹುನಗುಂದ...

error: Content is protected !!