ಕಾರವಾರ: ಜಿಲ್ಲಾ ಪಂಚಾಯತಿ ಕಚೇರಿಯಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಜಿಪಂ ಅಭಿಲೇಖಾಲಯ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು ಮೂರು ಅಂತಸ್ಥಿನ ಕಟ್ಟಡಕ್ಕೆ ಬೆಂಕಿ ವ್ಯಾಪಸಿದೆ. ಬೆಂಕಿ ನಂದಿಸುವ ಕಾರ್ಯದಲ್ಲಿ ಅಗ್ನಿ ಶಾಮಕದಳದ ಸಿಬ್ಬಂದಿಗಳು ನಿರತರಾಗಿದ್ದಾರೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಅಗ್ನಿ ಹೊತ್ತಿಕೊಂಡಿರೋ ಅನುಮಾನ ವ್ಯಕ್ತವಾಗಿದೆ. ಇನ್ನು ಘಟನೆಯಲ್ಲಿ ಕಚೇರಿಯ ದಾಖಲೆಗಳು ಬೆಂಕಿಗೆ ಆಹುತಿಯಾಗಿವೆ. ಸ್ಥಳಕ್ಕೆ ಡಿಸಿ ಮುಲೈ ಮುಹಿಲನ್, ಸಿಇಒ ಪ್ರಿಯಾಂಗ ಭೇಟಿ ನೀಡಿದ್ದಾರೆ. ಕಾರವಾರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Top Stories
ಮುಂಡಗೋಡಿನಲ್ಲಿ ಕಾರ್ಯನಿರ್ವಹಿಸಿದ್ದ ಪೊಲೀಸ್ ಅಧಿಕಾರಿ ಆತ್ಮಹತ್ಯೆ..! PSI ಆಗಿದ್ದವರು ನೇಣಿಗೆ ಶರಣಾಗಿದ್ದೇಕೆ..?
ಕಾರವಾರದಲ್ಲಿ ಕಾರಿನ ಮೇಲೆ ಉರುಳಿಬಿದ್ದ ಬೃಹತ್ ಮರ, ಕಾರಲ್ಲಿ ಕೂತಿದ್ದ ಮಹಿಳೆ ಸಾ*ವು..!
ಶಿರಸಿ ಪೊಲೀಸರ ಕಾರ್ಯಾಚರಣೆ ಪಡಿತರ ಅಕ್ಕಿ ಅಕ್ರಮವಾಗಿ ಸಾಗಾಟ, ಇಬ್ಬರು ಆರೋಪಿಗಳು ಮಾಲು ಸಹಿತ ಅಂದರ್..!
Heavy Rain Warning; ಇಂದಿನಿಂದ 2 ದಿನ ಭಾರೀ ಮಳೆ ಎಚ್ಚರಿಕೆ; ಉತ್ತರ ಕನ್ನಡ ಸೇರಿ ಕೆಲ ಜಿಲ್ಲೆಗಳಿಗೆ ರೆಡ್ ಅಲರ್ಟ್..!
ಉತ್ತರ ಕನ್ನಡದಲ್ಲಿ ಭಾರೀ ಮಳೆ ಸಂಭವ, ಎಚ್ಚರವಹಿಸಿ; ಜಿಲ್ಲಾಧಿಕಾರಿ
ಯಲ್ಲಾಪುರದಲ್ಲಿ ಸರಣಿ ಮನೆ ಕಳ್ಳತನ..! ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲೇ ಖದೀಮರ ಕೈಚಳಕ..! ಈ ಕ್ಷಣಕ್ಕೂ ಪೊಲೀಸರ “ದಿವ್ಯ ಮೌನ”..? ಅಯ್ಯೋ ಏನಿದೇಲ್ಲ..?
ಪಂಪಸೆಟ್ ಮೋಟಾರ್ ರಿಪೇರಿ ವೇಳೆ ವಿದ್ಯುತ್ ತಗುಲಿ ಮೂವರು ರೈತರ ದಾರುಣ ಸಾ*ವು..!
ಇಂದಿನಿಂದ “ಮನೆ ಮನೆಗೆ ಪೊಲೀಸ್” ವಿನೂತನ ಕಾರ್ಯಕ್ರಮಕ್ಕೆ ಚಾಲನೆ..! ನಿಮ್ಮನೆಗೇ ಬಂದು ನಿಮ್ಮ ದೂರು ಆಲಿಸಲಿದ್ದಾರೆ ಪೊಲೀಸ್ರು..!
ಸಿಎಂ ಸಿದ್ದರಾಮಯ್ಯರಿಂದ ಅವಮಾನಕ್ಕೆ ಈಡಾಗಿದ್ದ ಎಎಸ್ಪಿ ನಾರಾಯಣ ಬರಮನಿಗೆ ಪದೋನ್ನತಿ ನೀಡಿದ ರಾಜ್ಯ ಸರ್ಕಾರ..!
ಭಾರಿ ಮಳೆ ಹಿನ್ನೆಲೆ; ಜಿಲ್ಲೆಯ ಕರಾವಳಿ ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ಇಂದು ರಜೆ..!
ಜು.21 ರವರೆಗೂ ಉತ್ತರ ಕನ್ನಡ ಸೇರಿ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ..!
ಯಲ್ಲಾಪುರದಲ್ಲಿ ರಾಮನಗರದ ರೌಡಿಶೀಟರ್ ಕಾಲಿಗೆ ಪೊಲೀಸರ ಗುಂಡು..! ತಪ್ಪಿಸಿಕೊಳ್ಳಲು ಯತ್ನಿಸಿದಾಗ ಫೈರಿಂಗ್..!
ಉತ್ತರ ಕನ್ನಡದ ಖಡಕ್ ಎಸ್ಪಿ ಎಂ.ನಾರಾಯಣ್ ಏಕಾಏಕಿ ವರ್ಗಾವಣೆ, ನೂತನ ಎಸ್ಪಿಯಾಗಿ ದೀಪನ್ ಎಂ.ಎನ್..!
ಸಂಘಟನೆಯಿಂದ ಸಮಾಜ ಸದೃಡವಾಗುತ್ತದೆ- ಮಾಜಿ ಶಾಸಕ ವಿ.ಎಸ್.ಪಾಟೀಲ್
ಮಳಗಿ ಧರ್ಮಾ ಜಲಾಶಯದಲ್ಲಿ ಹಾನಗಲ್ ವ್ಯಕ್ತಿಯ ಶವ ಪತ್ತೆ..! ಆತ್ಮಹತ್ಯೆನಾ..?
ನಮ್ಮ ಸರ್ಕಾರ ನುಡಿದಂತೆ ನಡೆದಿದೆ, ಪಂಚ ಗ್ಯಾರಂಟಿಗಳು ಅಬಲರನ್ನು ಸಬಲರನ್ನಾಗಿಸಿದೆ- ಶಾಸಕ ಭೀಮಣ್ಣ ನಾಯ್ಕ್
ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಕೆನರಾ ಬ್ಯಾಂಕ್ ದರೋಡೆ ಕೇಸಿನಲ್ಲಿ, ಮತ್ತೇ 12 ಖದೀಮರ ಬಂಧನ..!
ಬಾಚಣಕಿ ಸರ್ಕಾರಿ “ಅಡಿಕೆ ಗಿಡಗಳ” ಮಾರಣ ಹೋಮ ಕೇಸ್..! ನಾಳೆಯೇ ಸ್ಥಳಕ್ಕೆ ಅಧಿಕಾರಿಗಳ ಟೀಂ ಭೇಟಿ, ತಪ್ಪಿತಸ್ಥರ ವಿರುದ್ಧ ಕ್ರಮ ಗ್ಯಾರಂಟಿ ಅಂದ್ರು ಡಿಡಿ ಡಾ.ಬಿ.ಪಿ. ಸತೀಶ್..!
ಬಾಚಣಕಿಯಲ್ಲಿ “ಸರ್ಕಾರಿ” ಅಡಿಕೆ ಸಸಿಗಳ ಮಾರಣ ಹೋಮ..! ತೋಟಗಾರಿಕಾ ಅಧಿಕಾರಿಗಳ ಕಣ್ಗಾವಲಲ್ಲೇ ನಡೀತಾ ದುಷ್ಕೃತ್ಯ..? ಅಯ್ಯೋ ಕೃಷ್ಣ, ಕೃಷ್ಣಾ..!!
Author: admin (ಶ್ರೀ ಆದಿಶಕ್ತಿ ಮಿಡಿಯಾ ಪ್ರೈವೇಟ್ ಲಿಮಿಟೆಡ್)
ಸನವಳ್ಳಿಯಲ್ಲಿ ಹಲವು ಮನೆಯೊಳಗೆ ಹೊಕ್ಕ ಮಳೆ ನೀರು: ರಾತ್ರಿಯಿಡೀ ಪರದಾಟ..!
ಮುಂಡಗೋಡ-ತಾಲೂಕಿನಲ್ಲಿ ನಿನ್ನೆ ರಾತ್ರಿ ಸುರಿದ ಮಳೆಯಿಂದ ಹಲವು ಅವಾಂತರ ಸೃಷ್ಟಿಯಾಗಿತ್ತು. ತಾಲೂಕಿನ ಸನವಳ್ಳಿ ಗ್ರಾಮದಲ್ಲಿ ಮಳೆಯ ಕಾರಣಕ್ಕೆ ಕೆಲವು ಗ್ರಾಮಸ್ಥರು ರಾತ್ರಿಯಿಡಿ ನಿದ್ದೆಗೆಡುವಂತಾಯಿತು. ಸನವಳ್ಳಿ ಗ್ರಾಮದಲ್ಲಿ ವ್ಯವಸ್ಥಿತವಾದ ಗಟಾರಗಳು ಇಲ್ಲದ ಕಾರಣ, ಗ್ರಾಮದ ಹಲವು ಮನೆಗಳಿಗೆ ಮಳೆಯ ನೀರು ಒಳಗೆ ನುಗ್ಗಿತ್ತು. ಹೀಗಾಗಿ, ಮನೆ ಮಂದಿಯೆಲ್ಲ ಮಳೆ ನೀರು ಹೊರಹಾಕಲು ಹರಸಾಹಸ ಪಡಬೇಕಾಯ್ತು. ಪುಟ್ಟ ಪುಟ್ಟ ಮಕ್ಕಳು ಸೇರಿದಂತೆ ಮನೆಯ ಮಂದಿಯೆಲ್ಲ ಮಳೆ ನೀರು ಹೊರ ಹಾಕುವಲ್ಲಿ ನಿರತರಾಗಿದ್ರು. ಇನ್ನು ಮಳೆ ನೀರು ಮನೆಯ ಒಳಗೆ ಹೊಕ್ಕ...
ಹುಲಿಹೊಂಡ ಗ್ರಾಮದಲ್ಲಿ ಮರಕ್ಕೆ ಬಡಿದ ಸಿಡಿಲು: ಮರದ ಕೆಳಗೆ ನಿಂತಿದ್ದ 9 ಜನರಿಗೆ ಗಾಯ..!
ಮುಂಡಗೋಡ- ತಾಲೂಕಿನಲ್ಲಿ ಮಳೆಯ ಅವಾಂತರಗಳು ಶುರುವಾಗಿದೆ. ಶುಕ್ರವಾರ ತಾಲೂಕಿನ ಹುಲಿಹೊಂಡ ಗ್ರಾಮದ ಗದ್ದೆಯಲ್ಲಿ ಮರಕ್ಕೆ ಸಿಡಿಲು ಬಡಿದಿದೆ. ಪರಿಣಾಮ, ಮಳೆಯಿಂದ ತಪ್ಪಿಸಿಕೊಳ್ಳಲು ಮರದ ಕೆಳಗೆ ನಿಂತಿದ್ದ 9 ಜನರಿಗೆ ಸಿಡಿಲಿನ ಶಾಖ ತಟ್ಟಿ ಚಿಕ್ಕ ಪುಟ್ಟ ಗಾಯವಾದ ಘಟನೆ ನಡೆದಿದೆ. ಹುಲಿಹೊಂಡ ಗ್ರಾಮದ ರಾಮಪ್ಪ ಬಸಪ್ಪ ಕಬ್ಬೇರ್ ಎಂಬುವವರು ತಮ್ಮ ಜಮೀನಿನಲ್ಲಿ ನಿನ್ನೆ ಶುಕ್ರವಾರ ಗೋವಿನ ಜೋಳ ಬೀಜ ಬಿತ್ತನೆ ಮಾಡುತ್ತಿದ್ದರು. ಈ ವೇಳೆ ಮಳೆ ಬಂದ ಕಾರಣ ಮಳೆಯ ಹನಿಯಿಂದ ತಪ್ಪಿಸಿಕೊಳ್ಳಲು ಬೀಜ ಬಿತ್ತನೆಯಲ್ಲಿ ತೊಡಗಿದ್ದ...
VRDM ಟ್ರಸ್ಟ್ ವತಿಯಿಂದ ಆಶಾ ಕಾರ್ಯಕರ್ತೆಯರಿಗೆ ಸೆಪ್ಟಿ ಕಿಟ್ ವಿತರಣೆ..!
ಮುಂಡಗೋಡ: ತಾಲೂಕಿನ ಹುನಗುಂದ ಗ್ರಾಮ ಪಂಚಾಯತಿ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರಿಗೆ ದೇಶಪಾಂಡೆ ರೂಡ್ ಸೆಟಿ ವತಿಯಿಂದ ಇಂದು ಮೆಡಿಕಲ್ ಸೆಪ್ಟಿ ಕಿಟ್ ವಿತರಿಸಲಾಯಿತು. ತಾಲೂಕಿನ ಹುನಗುಂದ ಗ್ರಾಮದ ವಿರಕ್ತ ಮಠದ ಆವರಣದಲ್ಲಿ ನಡೆದ ಸರಳ ಕಾರ್ಯಕ್ರಮವನ್ನು ಕಾಂಗ್ರೆಸ್ ಮುಖಂಡ ಎಚ್.ಎಂ.ನಾಯ್ಕ್ ಉದ್ಘಾಟಿಸಿ ಮಾತನಾಡಿದ್ರು. ಹುನಗುಂದ ಗ್ರಾಪಂ ಅಧ್ಯಕ್ಷೆ ಯಲ್ಲವ್ವ ಕುನ್ನೂರ್, ಉಪಾಧ್ಯಕ್ಷ ತುಕಾರಾಮ್ ಹೊನ್ನಳ್ಳಿ, ಕಾಂಗ್ರೆಸ್ ಯುವ ಮುಖಂಡ ಧರ್ಮರಾಜ್ ನಡಗೇರಿ, ಗ್ರಾಪಂ ಸದಸ್ಯರಾದ ಈಶ್ವರಗೌಡ ಅರಳಿಹೊಂಡ ಸೇರಿ ದೇಶಪಾಂಡೆ ರೂಡಸೆಟಿಯ ಸಂಚಾಲಕರು ಉಪಸ್ತಿತರಿದ್ದರು.
ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ರದ್ದು: SSLC ಪರೀಕ್ಷೆ ಇರತ್ತೆ: ಸಚಿವ ಸುರೇಶ್ ಕುಮಾರ್ ಮಹತ್ವದ ನಿರ್ಧಾರ..!
ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ಮಾಡಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಆದೇಶ ಹೊರಡಿಸಿದ್ದಾರೆ. ಕೊರೋನಾ ಸೋಂಕಿನ ಹಿನ್ನೆಲೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಹಾಗೇ SSLC ಪರೀಕ್ಷೆ ನಡೆಯಲಿದೆ. 120 ಅಂಕಗಳಿಗೆ 3 ಗಂಟೆಯ ಪರೀಕ್ಷೆ ನಡೆಸಲಾಗುವುದು. ಆರೋಗ್ಯ ಇಲಾಖೆಯೊಂದಿಗೆ ಚರ್ಚಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಬಹು ಆಯ್ಕೆ ಮಾದರಿಯಲ್ಲಿ ಪರೀಕ್ಷೆ ನಡೆಯಲಿದೆ. ಕನ್ನಡ , ಇಂಗ್ಲೀಷ್, ಹಿಂದಿಗೆ 1 ಪರೀಕ್ಷೆ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನಕ್ಕೆ ಒಂದು ಪರೀಕ್ಷೆ ನಡೆಸಲಾಗುವುದು....
ಯಲ್ಲಾಪುರ ತಾಲೂಕಿನ ವಿವಿಧ ಹಳ್ಳಿಗಳಿಗೆ ಭೇಟಿ ನೀಡಿದ ಸಚಿವ ಹೆಬ್ಬಾರ್..!
ಯಲ್ಲಾಪುರ:ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಅವರು ಇಂದು ತಾಲೂಕಿನ ದೇಹಳ್ಳಿ, ಆನಗೋಡ ಹಾಗೂ ಕಣ್ಣಿಗೇರಿ ಗ್ರಾಮ ಪಂಚಾಯತ ವ್ಯಾಪ್ತಿಯ ಹಲವು ಗ್ರಾಮಗಳಿಗೆ ಭೇಟಿ ನೀಡಿದರು. ಸ್ಥಳೀಯ ಜನಪ್ರತಿನಿಧಿಗಳ, ಆಶಾ ಕಾರ್ಯಕರ್ತೆಯರು ಹಾಗೂ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಸಭೆ ನಡೆಸಿ,ಗ್ರಾಮಗಳಲ್ಲಿ ಕೊರೊನಾ ಸೋಂಕನ್ನು ತಡೆಯಲು ತೆಗೆದುಕೊಂಡ ಕ್ರಮಗಳ ಬಗ್ಗೆ ಮಾಹಿತಿ ಪಡೆದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು. ಗ್ರಾಮಸ್ಥರನ್ನು ಭೇಟಿಯಾಗಿ ಕೋವಿಡ್ 19 ಸೋಂಕಿನ ಕುರಿತು ಜಾಗೃತಿ ಮೂಡಿಸಿ,ಕೋವಿಡ್ ನ...
ಸಿಎಂ ಘೋಷಿಸಿದ ವಿಶೇಷ ಪ್ಯಾಕೇಜ್ ನಲ್ಲಿ ಯಾರಿಗೇಷ್ಟು..? ಇಲ್ಲಿದೆ ಫುಲ್ ಡೀಟೇಲ್ಸ್..!
ಕರ್ನಾಟಕದಲ್ಲಿ 2ನೇ ಅಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಠಿಣ ನಿರ್ಬಂಧಗಳನ್ನು ಜಾರಿಮಾಡಿದ್ದು ಇದರಿಂದ ಸಂಕಷ್ಟಕ್ಕೊಳಗಾಗಿರೋ ವಿವಿಧ ವರ್ಗಗಳಿಗೆ ಸರ್ಕಾರ ಪ್ಯಾಕೇಜ್ ಘೋಷಣೆ ಮಾಡಿದೆ. ಆರ್ಥಿಕ ಹಿಂಜರಿತದ ನಡುವೆಯೂ ಕೂಡ ಸಂಕಷ್ಟಕ್ಕಿಡಾಗಿರುವ ವರ್ಗಗಳಿಗೆ ಸಿಎಂ ಯಡಿಯೂರಪ್ಪ ಇಂದು ಮತ್ತೆ ಘೋಷಣೆ ಮಾಡಿದ್ದಾರೆ. ಹಾಗಾದ್ರೆ ಇವತ್ತು ಘೋಷಣೆ ಮಾಡಿರೋ ಪ್ಯಾಕೇಜ್ ನಲ್ಲಿ ಯಾರ್ಯಾರ ಪಾಲು ಎಷ್ಟು..? ಇಲ್ಲಿದೆ ಫುಲ್ ಡೀಟೇಲ್ಸ್. 1. ಪವರ್ ಲೂಮ್ ನೇಕಾರರು ಪ್ರತಿ ಪವರ್ ಲೂಮ್‍ಗೆ ಇಬ್ಬರು ಕೆಲಸಗಾರರಿಗೆ ಮೀರದಂತೆ ತಲಾ ರೂ 3,000ದಂತೆ...
ನಕ್ಕು ನಗಿಸಿದ್ದ ಹಿರಿಯ ಪೋಷಕ ನಟಿ ಬಿ.ಜಯಾ ವಿಧಿವಶ..! ಕಂಬನಿ ಮಿಡಿದ ಚಿತ್ರರಂಗ..!!
ಬೆಂಗಳೂರು: ಕನ್ನಡ ಚಿತ್ರರಂಗ ಹಿರಿಯ ಪೋಷಕ ನಟಿ ಬಿ.ಜಯಾ ಇಂದು ಕೊನೆಯುಸಿರು ಎಳೆದಿದ್ದಾರೆ. ಅನೇಕ ಹಿರಿಯ ನಟರೊಂದಿಗೆ ನಟಿಸಿದ್ದ ನಟಿಯ ನಿಧನಕ್ಕೆ ಚಿತ್ರರಂಗವೇ ಕಣ್ಣೀರು ಸುರಿಸಿದೆ. ಎತ್ತರದಲ್ಲಿ ಕೊಂಚ ಕುಳ್ಳಗಿದ್ದ ಜಯಾ ಅವರು ಕುಳ್ಳಿ ಜಯಾ ಎಂದೇ ಜನಪ್ರಿಯರಾಗಿದ್ದರು. ಸುಮಾರು 300ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿ ಜನರ ಮನಸ್ಸು ಗೆದ್ದಿದ್ದರು. ಹಾಸ್ಯಮಯ ಪಾತ್ರಗಳಲ್ಲೂ ಕಾಣಿಸಿಕೊಂಡು ಅಭಿಮಾನಿಗಳ ಮೊಗದಲ್ಲಿ ನಗು ಮೂಡಿಸಿದ್ದರು. ರಂಗಭೂಮಿಯಿಂದ ಬಣ್ಣದ ಲೋಕಕ್ಕೆ ಕಾಲಿಟ್ಟ ಜಯಾ ಇತ್ತೀಚಿನ ದಿನಗಳಲ್ಲಿ ಕೆಲವು ಧಾರಾವಾಹಿಗಳಲ್ಲೂ ಬಣ್ಣ ಹಚ್ಚಿದ್ದರು. 1944ರಲ್ಲಿ...
ಬೀಜ ಗೊಬ್ಬರದ ಕೃತಕ ಅಭಾವ ಸೃಷ್ಟಿಸಿದರೆ ಕಠಿಣ ಕ್ರಮ-ಕೃಷಿ ಸಚಿವ ಬಿ.ಸಿ.ಪಾಟೀಲ್
ಹಾವೇರಿ: : ಕಳಪೆ ಬಿತ್ತನೆ ಬೀಜ ದಾಸ್ತಾನು, ಮಾರಾಟ ಹಾಗೂ ಅನಧಿಕೃತವಾಗಿ ಬಿತ್ತನೆ ಬೀಜ ಗೊಬ್ಬರ ದಾಸ್ತಾನು ಮಾಡಿಕೊಂಡು ಕೃತಕ ಅಭಾವ ಸೃಷ್ಟಿಸುವವರ ಮೇಲೆ ಕಠಿಣ ಕಾನೂನು ಕ್ರಮಕೈಗೊಳ್ಳಲಾಗುವುದು. ಈ ಕುರಿತಂತೆ ರಾಜ್ಯಾದ್ಯಂತ ವಿಶೇಷ ಅಭಿಯಾನ ಕೈಗೊಂಡು ಅಕ್ರಮಕ್ಕೆ ಕಡಿವಾಣ ಹಾಕಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ಹೇಳಿದರು. ಹಾವೇರಿ ಪ್ರವಾಸಿ ಮಂದಿರದಲ್ಲಿ ಮುಂಗಾರು ಬಿತ್ತನೆ ಬೀಜ ಹಾಗೂ ಗೊಬ್ಬರದ ದಾಸ್ತಾನು ವ್ಯವಸ್ಥೆ ಕುರಿತಂತೆ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು. ಕಳಪೆ...
ಮತ್ತೊಂದು ವಾರ ಲಾಕ್ ಡೌನ್ ವಿಸ್ತರಣೆ: ಜೊತೆಗೆ 500 ಕೋಟಿ ಪ್ಯಾಕೇಜ್ ಘೋಷಣೆ..!!
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಹಿನ್ನೆಲೆ ಯಲ್ಲಿ ಒಂದು ವಾರಗಳ ಕಾಲ ಲಾಕ್ ಡೌನ್ ವಿಸ್ತರಣೆ ಮಾಡಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ಸದ್ಯ ಜಾರಿಯಲ್ಲಿರುವ ಲಾಕ್ ಡೌನ್ ಮಾರ್ಗಸೂಚಿ ಒಂದು ವಾರಗಳ ಕಾಲ ಮುಂದುವರಿಯಲಿದೆ. ಹೋಟೆಲ್ ಗಳಲ್ಲಿ ಸಂಜೆಯ ವರೆಗೂ ಪಾರ್ಸೆಲ್ ಗೆ ಅವಕಾಶವನ್ನು ಕಲ್ಪಿಸಲಾಗಿದೆ. ಅಲ್ಲದೇ ಲಾಕ್ ಡೌನ್ ಘೋಷಣೆಯ ಜೊತೆಗೆ 500 ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.