ಮುಂಡಗೋಡ: ತಾಲೂಕಿನ ನಂದಿಕಟ್ಟಾ ತಾಲೂಕಾ ಪಂಚಾಯತಿ ಮತಕ್ಷೇತ್ರ ಬಿರುಸುಗೊಂಡಿದೆ. ಇನ್ನೂ ಚುನಾವಣೆಯೇ ಘೋಷಣೆಯಾಗಿಲ್ಲ, ಮೀಸಲಾತಿ ಪ್ರಕಟವಾಗ್ತಿದ್ದಂತೆ ರಾಜಕೀಯ ಚದುರಂಗದಾಟಗಳು ತೆರೆಮರೆಯಲ್ಲೇ ಚಾಲ್ತಿ ಪಡೆದುಕೊಂಡಿವೆ. ಬಿಜೆಪಿ ತಲೆಬಿಸಿ..! ಅಂದಹಾಗೆ, ನಂದಿಕಟ್ಟಾ ತಾಪಂ ಕ್ಷೇತ್ರಕ್ಕೆ ” ಸಾಮಾನ್ಯ” ಮೀಸಲಾತಿ ಪ್ರಕಟಗೊಂಡಿದೆ. ಹೀಗಾಗಿ, ಇಲ್ಲಿನ ಬಿಜೆಪಿಯಲ್ಲಿ ಈಗಾಗಲೇ ಟಿಕೆಟ್ ಪಡೆಯಲು ಇನ್ನಿಲ್ಲದ ಕಸರತ್ತುಗಳು ಜಾರಿಯಲ್ಲಿವೆ. ಹಾಗೆ ಆಕಾಂಕ್ಷಿತರ ಪಟ್ಟಿ ಹನುಂಮತನ ಬಾಲದಂಗಿದೆ. ಈ ಸಾರಿ ನಾನೂ ಒಂದು ಕೈ ನೋಡೇ ಬಿಡ್ತಿನಿ ಅಂತಾ ಆಕಾಂಕ್ಷಿಗಳು ತೋಳು ಏರಿಸಿಕೊಂಡು ಸನ್ನದ್ದವಾಗಿದ್ದಾರೆ. ಆದ್ರೆ ಆ...
Top Stories
ಸಾಲಬಾಧೆ, ಬಾಚಣಕಿಯಲ್ಲಿ ನೇಣಿಗೆ ಶರಣಾದ ಅನ್ನದಾತ..! ತನ್ನ ದನದ ಕೊಟ್ಟಿಗೆಯಲ್ಲೇ ಆತ್ಮಹತ್ಯೆ..!
ಅಭಿಮಾನಿಗಳ ನೆಚ್ಚಿನ “ಹೈಸ್ಪೀಡ್ ಮಣಿ” ಟಗರು ಅಕಾಲಿಕ ಸಾವು..! ಸಾವಿರಾರು ಅಭಿಮಾನಿಗಳ ಕಂಬನಿ..!
ವಯಸ್ಸು 45 ಆದ್ರೂ ಮದುವೆ ಆಗಲಿಲ್ಲ, ಅದೇ ಕೊರಗಲ್ಲೇ ಚಾಕು ಇರಿದುಕೊಂಡ, ಆತ್ಮಹತ್ಯೆಗೆ ಯತ್ನಿಸಿದ..!
ಮುಂಡಗೋಡಿನ ಕಿರಣ್ ಸಾಳುಂಕೆಗೆ ಗಡಿಪಾರು..!ಯಾದಗಿರಿ ಜಿಲ್ಲೆಗೆ ಗಡಿಪಾರು ಮಾಡಿ ಶಿರಸಿ ಎಸಿ ಆದೇಶ..!!
ಟ್ರಾಕ್ಟರ್ ರೂಟರ್ ನಲ್ಲಿ ಕಾಲು ಸಿಲುಕಿ ಕಾಲೇ ಕಟ್, ಮುಂಡಗೋಡ ತಾಲೂಕಿನ ಹುನಗುಂದದಲ್ಲಿ ಭೀಕರ ಘಟನೆ..!
ಮುಂಡಗೋಡ ಪೊಲೀಸರ ನೇತೃತ್ವದಲ್ಲಿ ಏಕತಾ ವಾಕ್ ಥಾನ್..! ಸರ್ದಾರ್ ಪಟೇಲರ ಜನ್ಮದಿನದಂದು ಏಕತಾ ದಿವಸ್ ಆಚರಣೆ..!
ಮುಂಡಗೋಡಿನ ಹಿರಿಯ ರಥಶಿಲ್ಪಿ ವಿರೂಪಾಕ್ಷಪ್ಪ ಬಡಿಗೇರ ನಿಧನ…!
ಮುಂಡಗೋಡ ಪಪಂ ಮಾಜಿ ಅಧ್ಯಕ್ಷ ರಾಮಣ್ಣ ಕುನ್ನೂರ್ ನಿಧನ..!
ಮಳಗಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಸರಿದ ಶಿರಸಿ ಹುಬ್ಬಳ್ಳಿ KSRTC ಬಸ್, ತಪ್ಪಿದ ಅನಾಹುತ..!
ಪಾಳಾದಲ್ಲಿ KSRTC ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ, ಬಸ್ ಗಾಗಿ ಬಸ್ ತಡೆದು ಪ್ರತಿಭಟನೆ..!
ತಡಸ ತಾಯವ್ವ ದೇವಸ್ಥಾನದ ಬಳಿ ಕ್ರೂಸರ್ ವಾಹನ ಪಲ್ಟಿ ಹಲವರಿಗೆ ಗಾಯ..!
ಹುಬ್ಬಳ್ಳಿಯಲ್ಲಿ ಮತ್ತೊಂದು ಚಾಕು ಇರಿತ ಪ್ರಕರಣ: ಹಳೇ ದ್ವೇಷದ ಹಿನ್ನೆಲೆ ವ್ಯಕ್ತಿ ಮೇಲೆ ಅಟ್ಯಾಕ್..!
ಉತ್ತರ ಕನ್ನಡ ಸೇರಿ ಹಲವು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಭಾರೀ ಮಳೆಯ ಮುನ್ಸೂಚನೆ..!
KDCC ಕುಸ್ತಿಯಲ್ಲಿ ಹೆಬ್ಬಾರ್ ಬಣದ್ದೇ ಮೇಲುಗೈ, ಮಂಕಾಳು ವೈದ್ಯರ ಬಣಕ್ಕೆ ನಿರಾಸೆ..!
ಮುಂಡಗೋಡ ಹೊರವಲಯದ ಖಬರಸ್ಥಾನ ಬಳಿ ಭಯಾನಕ ಕಾರ್ ಪಲ್ಟಿ..! ಚಾಲಕ ಬದುಕಿದ್ದೇ ಪವಾಡ..!!
ಭಾರೀ ಮಳೆ ಮುನ್ಸೂಚನೆ ಉತ್ತರ ಕನ್ನಡದಲ್ಲಿ ಆರೆಂಜ್ ಅಲರ್ಟ್, ಮುನ್ನೆಚ್ಚರಿಕೆ ವಹಿಸಿ: ಜಿಲ್ಲಾಧಿಕಾರಿ ಕರೆ
ನೈರುತ್ಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಉತ್ತರ ಕನ್ನಡ ಸೇರಿ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ..!
ಸನವಳ್ಳಿ ಬಳಿ ಕಾರ್ ಹಾಗೂ ಬೈಕ್ ನಡುವೆ ಅಪಘಾತ, ಬೈಕ್ ಸವಾರನಿಗೆ ಗಂಭೀರ ಗಾಯ..!
ಕಲಿಯುಗದ ಕುಡುಕ ಖ್ಯಾತಿಯ ಹಾಸ್ಯನಟ ರಾಜು ತಾಳಿಕೋಟಿ ವಿಧಿವಶ..!
Author: admin (ಶ್ರೀ ಆದಿಶಕ್ತಿ ಮಿಡಿಯಾ ಪ್ರೈವೇಟ್ ಲಿಮಿಟೆಡ್)
ಸದಾನಂದಗೌಡ ಸಿಎಂ ಪಟ್ಟಕ್ಕೇರೋದು ಪಕ್ಕಾನಾ..? ಅಷ್ಟಕ್ಕೂ ಬಿಜೆಪಿ ಹೈಕಮಾಂಡ್ ಲೆಕ್ಕಾಚಾರವೇನು..?
ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಕೂಗು ಕೇಳಿಬರುತ್ತಿರೋ ಬೆನ್ನಲ್ಲೇ ಬಿಜೆಪಿ ಹೈಕಮಾಂಡ್ ಸಿಎಂ ಬದಲಾವಣೆಗೆ ಮುಂದಾಗಿದೆ ಎನ್ನಲಾಗ್ತಿದೆ. ಯಡಿಯೂರಪ್ಪ ಹುದ್ದೆಯಿಂದ ಕೆಳಗಿಳಿದ್ರೆ ಸಿಎಂ ಯಾರು ಅನ್ನೋ ಪ್ರಶ್ನೆಗೆ ಹೈಕಮಾಂಡ್ ಪರೋಕ್ಷವಾಗಿ ಉತ್ತರ ನೀಡಿದ್ದು, ಸಂಸದ ಡಿ.ವಿ.ಸದಾನಂದ ಗೌಡ ಎರಡನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗೋದು ಬಹುತೇಕ ಪಕ್ಕಾ ಅನ್ನುವಂತಾಗಿದೆ. ಬಿಜೆಪಿ ಒಡೆದ ಮನೆ..! ನಾಯಕತ್ವದ ವಿಚಾರದಲ್ಲಿಯೇ ಬಿಜೆಪಿ ಸದ್ಯ ಒಡೆದ ಮನೆ. ಸಿಎಂ ಯಡಿಯೂರಪ್ಪ ಅವರನ್ನು ಹುದ್ದೆಯಿಂದ ಕೆಳಗಿಳಿಸಲು ವಿರೋಧಿ ಪಾಳಯ ಶತಾಯಗತಾಯ ಪ್ರಯತ್ನ ನಡೆಸ್ತಿದೆ. ಈ ನಡುವಲ್ಲೇ ಯಡಿಯೂರಪ್ಪ...
ಮುಂಡಗೋಡಿಗೆ ಡಿಕೆಶಿ ಭೇಟಿ, ಹೂವಿನ ಮಳೆ ಸುರಿಸಿ ಕಾರ್ಯಕರ್ತರ ಉತ್ಸಾಹ..!
ಮುಂಡಗೋಡ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಹಮ್ಮಿಕೊಂಡಿದ್ದ ಸೈಕಲ್ ಜಾಥಾ ಪ್ರತಿಭಟನೆಗೆ ಆಗಮಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮುಂಡಗೋಡ ಪಟ್ಟಣಕ್ಕೆ ಭೇಟಿ ನೀಡಿದ್ರು. ಶಿರಸಿಯಿಂದ ಹುಬ್ಬಳ್ಳಿಗೆ ತೆರಳುವ ವೇಳೆ ಮುಂಡಗೋಡ ಪಟ್ಟಣದಲ್ಲೂ ಕೆಲಹೊತ್ತು ನಿಂತು ಕಾರ್ಯಕರ್ತರನ್ನು ಭೇಟಿ ಮಾಡಿದ್ರು. ಡಿಕೆಶಿ ಬರ್ತಿದ್ದಾರೆ ಅಂತಾ ಮಾಹಿತಿ ತಿಳಿದು ಪಟ್ಟಣದ ಶಿವಾಜಿ ಸರ್ಕಲ್ ನಲ್ಲಿ ನೂರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಯುವ ಕಾರ್ಯಕರ್ತರು ಜಮಾವಣೆ ಆಗಿದ್ರು. ಡಿ.ಕೆ.ಶಿವಕುಮಾರ್ ಬರುತ್ತಿದ್ದಂತೆ ಘೋಷಣೆ ಕೂಗಿ ಹೂವಿನ ಮಳೆ ಸುರಿಸಿದ್ರು. ಹಾರ...
ಬೆಲೆ ಏರಿಕೆ ವಿರುದ್ಧ ಕಲಘಟಗಿಯಲ್ಲಿ ಸಂತೋಷ್ ಲಾಡ್ ನೇತೃತ್ವದಲ್ಲಿ ಬೃಹತ್ ಸೈಕಲ್ ಜಾಥಾ..!
ಕಲಘಟಗಿ: ಪೆಟ್ರೊಲ್, ಡೀಸೆಲ್, ಅಡುಗೆ ಅನಿಲ ಹಾಗೂ ಅಗತ್ಯವಸ್ತುಗಳ ಬೆಲೆ ಏರಿಕೆ ಖಂಡಿಸಿ ಮಾಜಿ ಸಚಿವ ಸಂತೋಷ್ ಲಾಡ್ ನೇತೃತ್ವದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಬೃಹತ್ ಸೈಕಲ್ ಜಾಥಾವನ್ನ ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ಮಾಡಲಾಯಿತು. ಸೈಕಲ್ ಜಾಥಾ ಜೊತೆಗೆ ಸಂತೋಷ್ ಲಾಡ್ ಒಂಟೆ, ಕುದುರೆ ಹಾಗೂ ಎತ್ತಿನ ಬಂಡಿಯ ಮೇಲೆ ಕುಳಿತು ಪ್ರತಿಭಟನೆ ನಡೆಸಿದ್ದು ರಾಜ್ಯದಲ್ಲೇ ವಿನೂತನವಾಗಿತ್ತು. ಅಲ್ಲದೇ ಎತ್ತಿನ ಬಂಡೆಯ ಮೇಲೆ ಬೈಕ್ ಇಟ್ಟು ಆಕ್ರೋಶವನ್ನ ಲಾಡ್ ವ್ಯಕ್ತ ಪಡಿಸಿದರು, ಇನ್ನು ಬಡವರ...
ಕೇಂದ್ರ ಸಚಿವ ಸಂಪುಟದಲ್ಲಿ ನೂತನ ಸಚಿವರ ಲಿಸ್ಟ್ ಇಲ್ಲಿದೆ ನೋಡಿ..!
ನವದೆಹಲಿ:ಕೇಂದ್ರ ಸಚಿವ ಸಂಪುಟ ಪುನಾರಚನೆಗೆ ಕ್ಷಣಗಣನೆ ಆರಂಭವಾಗಿದ್ದು, 43 ನೂತನ ಸಚಿವರ ಪಟ್ಟಿ ಬಿಡುಗಡೆಯಾಗಿದೆ. ರಾಜ್ಯದ ನಾಲ್ವರು ಸಂಸದರಿಗೆ ಪ್ರಧಾನಿ ಮೋದಿ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ. ಡಿ.ವಿ ಸದಾನಂದಗೌಡ, ಡಾ.ಹರ್ಷವರ್ಧನ್ ಸೇರಿದಂತೆ 11 ಸಚಿವರಿಗೆ ಸಂಪುಟದಿಂದ ಕೊಕ್ ನೀಡಲಾಗಿದೆ. ನೂತನ ಸಚಿವರ ಪಟ್ಟಿ ಇಂತಿದೆ. 1.ಶೋಭಾ ಕರಂದ್ಲಾಜೆ 2.ರಾಜೀವ್ ಚಂದ್ರಶೇಖರ್ 3.ಭಗವಂತ ಖೂಬಾ 4.ಎ.ನಾರಾಯಣಸ್ವಾಮಿ 5.ನಾರಾಯಣ್ ರಾಣೆ 6.ಸರ್ಬಾನಂದ್ ಸೋನೊವಾಲ್ 7.ವಿರೇಂದ್ರ ಕುಮಾರ್ 8.ಜ್ಯೋತಿರಾದಿತ್ಯ ಸಿಂಧ್ಯಾ 9.ರಾಮಚಂದ್ರ ಪ್ರಸಾದ್ ಸಿಂಗ್ 10.ಅಶ್ವಿನಿ ವೈಷ್ಣವ್ 11.ಪಶುಪತಿ ಕುಮಾರ್ ಪರಸ್...
ತೈಲ ಬೆಲೆ ಏರಿಕೆಗೆ ಖಂಡನೆ: ಶಿರಸಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ; ಸೈಕಲ್ ಏರಿ ಡಿಕೆಶಿ ಆಕ್ರೋಶ..!
ಶಿರಸಿ: ನಗರದಲ್ಲಿ ಇಂದು ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ವಿರುದ್ಧ, ತೈಲ ಬೆಲೆ ಏರಿಕೆ ಖಂಡಿಸಿ ಸೈಕಲ್ ಜಾಥಾ ನಡೆಯಿತು. ಕೋವಿಡ್ ನಿಯಮ ಹಿನ್ನೆಲೆಯಲ್ಲಿ ಡಿ.ಕೆ ಶಿವಕುಮಾರ್ ಸೈಕಲ್ ಜಾಥಾಗೆ ಉತ್ತರ ಕನ್ನಡ ಜಿಲ್ಲಾಡಳಿತ ಅನುಮತಿ ನೀಡಿರಲಿಲ್ಲ. ಆದರೂ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತ ಪಡಿಸಿದ್ರು. ಕಾಂಗ್ರೆಸ್ ಹಿರಿಯ ಮುಖಂಡ ಆರ್. ವಿ.ದೇಶಪಾಂಡೆ ಸೇರಿದಂತೆ ಹಲವು ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ರು.
ಇದು ಮುಂಡಗೋಡ ಕಾಂಗ್ರೆಸ್ ಹಕೀಕತ್ತು..! ಯುವ ಪಡೆಗೆ “ಗದ್ದುಗೆ” ಪ್ರಿಯರದ್ದೇ ಆಪತ್ತು..! ಇನ್ನಾದ್ರೂ ಎದ್ದೇಳತ್ತಾ “ಕೈ” ಪಡೆ..?
ಮುಂಡಗೋಡ ತಾಲೂಕಿನಲ್ಲಿ ಕಾಂಗ್ರೆಸ್ ಇನ್ನೂ ಉಸಿರಾಡ್ತಿದೆಯಾ..? ಇಂತಹದ್ದೊಂದು ಪ್ರಶ್ನೆ ಬಹುತೇಕ ಕ್ಷೇತ್ರದ ಜನರಲ್ಲಿದೆ. ಯಾಕಂದ್ರೆ, ಯಾವಾಗ, ಶಿವರಾಮ್ ಹೆಬ್ಬಾರ್ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಬಾವುಟ ಹಿಡಿದ್ರೊ, ಆ ಕ್ಷಣದಿಂದಲೇ ಇಡೀ ಮುಂಡಗೋಡ ತಾಲೂಕಿನ “ಕೈ” ಪಡೆಯ ಜಂಘಾಬಲವೇ ಕುಗ್ಗಿಹೋಯ್ತು, ಇನ್ನೇನು ತಾಲೂಕಿನಲ್ಲಿ ಕಾಂಗ್ರೆಸ್ ಖತಂ ಆಯ್ತು ಅನ್ನೋ ವಾತಾವರಣ ಇತ್ತು. ಇದು ಇತಿಹಾಸ..! ಹಾಗೆ ನೋಡಿದ್ರೆ, ಇದುವರೆಗೂ ತಾಲೂಕಿನ ಮೂರೂ ಜಿಲ್ಲಾ ಪಂಚಾಯತಿ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಪ್ರಭಲವಾಗಿಯೇ ಇತ್ತು. ಬಿಜೆಪಿ ಯಾವುದೇ ಒಂದು...
ಶಿರಸಿಯಲ್ಲಿ ಡಿಕೆಶಿ ನೇತೃತ್ವದಲ್ಲಿ ಕಾಂಗ್ರೆಸ್ ಸೈಕಲ್ ಸವಾರಿಗೆ ಆರಂಭಿಕ ವಿಘ್ನ..? ನಡಿಯತ್ತಾ ಪ್ರತಿಭಟನೆ..?
ಶಿರಸಿ: ನಗರದಲ್ಲಿ ಇಂದು ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ತೈಲ ಬೆಲೆ ಏರಿಕೆ ಖಂಡಿಸಿ ನಡೆಸಲಿರೋ ಸೈಕಲ್ ಜಾಥಾ ಗೆ ಆರಂಭಿಕ ವಿಘ್ನ ಎದುರಾಗಿದೆ. ಕೋವಿಡ್ ನಿಯಮ ಹಿನ್ನೆಲೆಯಲ್ಲಿ ಡಿ.ಕೆ ಶಿವಕುಮಾರ್ ಸೈಕಲ್ ಜಾಥಾಗೆ ಉತ್ತರ ಕನ್ನಡ ಜಿಲ್ಲಾಡಳಿತ ಅನುಮತಿ ನೀಡಿಲ್ಲ. ಅನುಮತಿ ನಿರಾಕರಿಸಲಾಗಿದ್ದು, ಈ ನಡುವೆಯೇ ಕಾಂಗ್ರೆಸ್ ಸೈಕಲ್ ಜಾಥಾ ನಡೆಸಲು ತಯಾರಿ ನಡೆಸಿದೆ. ಈಗಷ್ಟೇ ಶಿರಸಿ ನಗರಕ್ಕೆ ಡಿಕೆ ಶಿವಕುಮಾರ್ ಆಗಮಿಸಿದ್ದಾರೆ. ಮೊದಲು ಮಾರಿಕಾಂಬೆಯ ದರ್ಶನ ಪಡೆದ ಡಿಕೆಶಿ, ಆನಂತರದಲ್ಲಿ ಸೈಕಲ್ ಜಾಥಾ ನಡೆಸಲಿದ್ದಾರೆ....
ಹನುಮಾಪುರ ಶ್ರೀಗಳ ಸಾವಿಗೆ ಕಾರಣವೇನು..? ಅಷ್ಟಕ್ಕೂ ವಿ.ಎಸ್.ಪಾಟೀಲರು ಹೇಳಿದ್ದೇನು..?
ಮುಂಡಗೋಡ: ತಾಲೂಕಿನ ಹನುಮಾಪುರ ಕಾಳಿಕಾಮಠದ ಸದಾನಂದ ಶಿವಾಚಾರ್ಯ ಸ್ವಾಮೀಜಿ ಇಂದು ನಸುಕಿನ ಜಾವ ವಿಧಿವಶರಾಗಿದ್ದಾರೆ. ಕಳೆದ ಕೆಲ ತಿಂಗಳಿನಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಶ್ರೀಗಳು ಕೊರೋನಾ ಪಾಸಿಟಿವ್ ಆಗಿ ತೀವ್ರ ಸಂಕಷ್ಟ ಅನುಭವಿಸಿದ್ರು. ತುಮಕೂರು, ರಾಣೇಬೆನ್ನೂರು ಸೇರಿದಂತೆ ಹಲವು ಕಡೆ ಚಿಕಿತ್ಸೆ ಪಡೆದಿದ್ರು. ಆನಂತರದಲ್ಲಿ ಶ್ರೀಗಳಿಗೆ, ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡು ಮತ್ತಷ್ಟು ಆರೋಗ್ಯ ಹದಗೆಟ್ಟಿತ್ತು. ಹೀಗಾಗಿ, ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.. ಆದ್ರೆ ಚಿಕಿತ್ಸೆ ಪಲಕಾರಿಯಾಗದೇ ಶ್ರೀಗಳು ವಿಧಿವಶರಾದ್ರು ಅಂತಾ ಮಾಜಿ ಶಾಸಕ, ವಾಯುವ್ಯ ಕರ್ನಾಟಕ...
ಹನುಮಾಪುರ ಕಾಳಿಕಾಮಠದ “ಶ್ರೀಗಳು” ಅಸ್ತಂಗತ..! ಗಣ್ಯರ ಸಂತಾಪ..!!
ಮುಂಡಗೋಡ ತಾಲೂಕಿನ ಹನುಮಾಪುರ ಕಾಳಿಕಾಮಠದ (ಹೀರೇಮಠ) ಸದಾನಂದ ಶಿವಾಚಾರ್ಯ ಸ್ವಾಮೀಜಿ ಇಂದು ನಸುಕಿನ ಜಾವ ವಿಧಿವಶರಾಗಿದ್ದಾರೆ. ಒಂದು ತಿಂಗಳಿಂದ ಅನಾರೋಗ್ಯ..! ಕಳೆದ ಒಂದು ತಿಂಗಳಿನಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಶ್ರೀಗಳು ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಶ್ರೀಗಳು ಇಂದು ಬೆಳಗಿನ ಜಾವ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಕೊನೆ ಉಸಿರೆಳೆದಿದ್ದಾರೆ. ಪ್ರತಿಷ್ಠಿತ ಮಠ..! ಮುಂಡಗೋಡ ತಾಲೂಕಿನ ಪ್ರತಿಷ್ಠಿತ ಕಾಳಿಕಾಮಠದಲ್ಲಿ ಹಲವು ವರ್ಷಗಳಿಂದ ಸಾಮಾಜಿಕ ಕಾರ್ಯಗಳನ್ನು ಶ್ರೀಗಳು ಕೈಗೊಂಡಿದ್ರು. ಹೀಗಾಗಿ, ಶ್ರೀ ಮಠ ತಾಲೂಕು ಸೇರಿದಂತೆ...









