Home admin

Author: admin (ಶ್ರೀ ಆದಿಶಕ್ತಿ ಮಿಡಿಯಾ ಪ್ರೈವೇಟ್ ಲಿಮಿಟೆಡ್)

Post
ಪುಟ್ಟ ಮಗುವನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ಅಂಬುಲೆನ್ಸ್ ಅಪಘಾತ, ತಪ್ಪಿದ ಭಾರೀ ದುರಂತ..!

ಪುಟ್ಟ ಮಗುವನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ಅಂಬುಲೆನ್ಸ್ ಅಪಘಾತ, ತಪ್ಪಿದ ಭಾರೀ ದುರಂತ..!

ಉಡುಪಿ: ಉತ್ತರ ಕನ್ನಡ ಜಿಲ್ಲೆಯಿಂದ ಅನಾರೋಗ್ಯ ಪೀಡಿತ ಮಗುವನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ಅಂಬುಲೆನ್ಸ್ ಅಪಘಾತವಾಗಿದೆ. ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕು ಮಾಬುಕಳ ಸೇತುವೆ ಬಳಿ ಘಟನೆ ನಡೆದಿದೆ. ಟೈಯರ್ ಸ್ಪೋಟಗೊಂಡು ಡಿವೈಡರ್ ಹಾರಿ ನುಗ್ಗಿದ ಅಂಬುಲೆನ್ಸ್, ಇಡಿ ಇಡಿಯಾಗಿ ನದಿಗೆ ಹಾರುವುದರಲ್ಲಿ ಸ್ವಲ್ಪದರಲ್ಲೇ ತಪ್ಪಿದೆ. ಸೇತುವೆಯ ಆವರಣ ಗೋಡೆಗೆ ಡಿಕ್ಕಿಯಾಗಿ ಬಚಾವ್ ಆಗಿದೆ. ಹೀಗಾಗಿ, ನದಿಗೆ ಉರುಳುವುದರಿಂದ ಸ್ವಲ್ಪದರಲ್ಲೇ ಪಾರಾಗಿದೆ. ಇದ್ರಿಂದ ಭಾರೀ ದುರಂತವೊಂದು ತಪ್ಪಿದಂತಾಗಿದೆ‌. ಘಟನೆಯಲ್ಲಿ ಆಂಬುಲೆನ್ಸ್ ನಲ್ಲಿ ಮಗುವನ್ನು‌ ಕರೆದೊಯ್ಯುತ್ತಿದ್ದ ಮಹಿಳೆಗೆ ಗಾಯವಾಗಿದ್ದು, ಆಸ್ಪತ್ರೆಗೆ...

Post
ನಾಯಿ ಬೇಟೆಯಾಡಲು ಬಂದ ಚಿರತೆಗೆ ಏನಾಯ್ತು..? ಕುಮಟಾದಲ್ಲೊಂದು ವಿಚಿತ್ರ ಘಟನೆ..!

ನಾಯಿ ಬೇಟೆಯಾಡಲು ಬಂದ ಚಿರತೆಗೆ ಏನಾಯ್ತು..? ಕುಮಟಾದಲ್ಲೊಂದು ವಿಚಿತ್ರ ಘಟನೆ..!

ಕುಮಟಾ: ನಾಯಿ ಬೇಟೆಯಾಡಲು ಬಂದ ಚಿರತೆಯೊಂದು, ತಾನೆ ನಾಯಿ ಬಲೆಯಲ್ಲಿ ಸಿಲಕಿದ ಘಟನೆ ಕುಮಟಾ ತಾಲೂಕಿನ ಕಿಮಾನಿ ಗ್ರಾಮದಲ್ಲಿ ನಡೆದಿದೆ‌. ರಾತ್ರಿ ಮನೆಯ ಹತ್ತಿರ ಕಟ್ಟಿದ್ದ ನಾಯಿಯನ್ನು ಹಿಡಿಯಲು ಬಂದಿದ್ದ ಚಿರತೆ, ನಾಯಿಯ ಬೋನಿನೋಳಗೆ ಹೋಗಿದೆ. ಬೋನಿನೊಳಗೆ ಹೋಗಿದ್ದನ್ನ ಗಮನಿಸಿದ ಮನೆಯ ಮಾಲೀಕರು, ತಕ್ಷಣ ಬೋನ್ ಲಾಕ್ ಮಾಡಿದ್ದಾರೆ. ಹೀಗಾಗಿ, ನಾಯಿ ಬೇಟೆಯಾಡಿ ಹೊಟ್ಟೆ ತುಂಬಿಸಿಕೊಳ್ಳಲು ಬಂದಿದ್ದ ಚಿರತೆ ಈಗ ನಾಯಿ ಬೋನಲ್ಲೇ ಬಲೆ ಬಿದ್ದಿದೆ‌. ಹೀಗಾಗಿ, ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ‌. ಚಿರತೆ...

Post
ಕಾರವಾರ ಯುವಕನಿಗೆ ನಿಫಾ ವೈರಸ್ ಇಲ್ಲ, ಪುಣೆಯಿಂದ ಬಂದ ವರದಿ ನೆಗೆಟಿವ್..! ನಿಟ್ಟುಸಿರು ಬಿಟ್ಟ ಜಿಲ್ಲಾಡಳಿತ..!!

ಕಾರವಾರ ಯುವಕನಿಗೆ ನಿಫಾ ವೈರಸ್ ಇಲ್ಲ, ಪುಣೆಯಿಂದ ಬಂದ ವರದಿ ನೆಗೆಟಿವ್..! ನಿಟ್ಟುಸಿರು ಬಿಟ್ಟ ಜಿಲ್ಲಾಡಳಿತ..!!

ಕಾರವಾರ: ನಿಫಾ ವೈರಸ್ ಆತಂಕದಿಂದ ಆಸ್ಪತ್ರೆಗೆ ದಾಖಲಾಗಿದ್ದ ಕಾರವಾರದ ಯುವಕ ಸದ್ಯ ರಿಲೀಫ್ ಆಗಿದ್ದಾನೆ. ಯಾಕಂದ್ರೆ, ನಿಫಾ ಆತಂಕಿತ ಯುವಕನ ನಿಫಾ ಟೆಸ್ಟ್ ವರದಿ ನೆಗೆಟಿವ್ ಬಂದಿದೆ. ಇದ್ರಿಂದ ನಿಫಾ ಆತಂಕಕ್ಕಿಡಾಗಿದ್ದ ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಯುವಕ ನಿಟ್ಟುಸಿರು ಬಿಟ್ಟಿದ್ದಾರೆ. ಹಾಗಂತ, ದಕ್ಷಿಣಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ ಕಿಶೋರ್ ಕುಮಾರ್ ಮಾಹಿತಿ ನೀಡಿದ್ದಾರೆ. ದಕ್ಷಿಣಕನ್ನಡ ಜಿಲ್ಲಾ ಆರೋಗ್ಯ ಇಲಾಖೆ, ಕಾರವಾರ ಮೂಲದ ಯುವಕನ ಬ್ಲಡ್, ಯುರಿನ್ ಮತ್ತು ಸ್ವಾಬ್ ಸ್ಯಾಂಪಲನ್ನು ಟೆಸ್ಟ್ ಗೆ ಕಳಿಸಿತ್ತು. ಗೋವಾದಲ್ಲಿ...

Post
ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸದಸ್ಯೆ ನೇಣಿಗೆ ಶರಣು..!

ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸದಸ್ಯೆ ನೇಣಿಗೆ ಶರಣು..!

ಉಡುಪಿ: ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ಕಾರ್ಯಕಾರಿಣಿ ಸದಸ್ಯೆ ಮಂಗಳವಾರ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉಡುಪಿ ನಗರದ ಹೊರವಲಯದ ಕುಕ್ಕಿಕಟ್ಟೆ ಎಂಬಲ್ಲಿ ಆಶಾ ಶೆಟ್ಟಿ (48) ಎಂಬವರು ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಅವರು ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದ ಕಾರ್ಯಕಾರಿಣಿ ಸದಸ್ಯೆ ಹಾಗೂ ತುಳು ಕೂಟ, ಭಜನಾ ಮಂಡಳಿ, ಚಂಡೆ ಬಳಗ ಇವುಗಳಲ್ಲಿ ಸಕ್ರಿಯವಾಗಿದ್ದರೆಂದು ತಿಳಿದು ಬಂದಿದೆ. ಮೃತಳ ಬಳಿ ಡೆತ್ ನೋಟ್ ಲಭ್ಯವಾಗಿದ್ದು, ಪತ್ರದಲ್ಲಿ ನೇತ್ರದಾನ ಮಾಡುವಂತೆ ಹಾಗೂ ಇನ್ನಿತರ ವಿಷಯಗಳು...

Post
ಮುಂಡಗೋಡಿಗೆ ಸಿಮಾನಿ ಎಸ್.ಎಸ್. ನೂತನ ಪೊಲೀಸ್ ಇನ್ಸ್ ಪೆಕ್ಟರ್..!

ಮುಂಡಗೋಡಿಗೆ ಸಿಮಾನಿ ಎಸ್.ಎಸ್. ನೂತನ ಪೊಲೀಸ್ ಇನ್ಸ್ ಪೆಕ್ಟರ್..!

ಮುಂಡಗೋಡಿಗೆ ನೂತನ ಪಿಐ ಆಗಿ, ಸಿಮಾನಿ ಎಸ್.ಎಸ್. ಬರಲಿದ್ದಾರೆ. ಸದ್ಯ ವಿಜಯಪುರದ DCRE (Directorate of Civil Rights Enforcement) ನಲ್ಲಿ ಕಾರ್ಯ ನಿರ್ವಹಿಸುತ್ತಿರೋ ಸಿಮಾನಿ ಎಸ್.ಎಸ್. ರವರನ್ನು ತಕ್ಷಣವೇ ವರ್ಗಾವಣೆಗೊಳಿಸಿ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ. ಈ ಹಿಂದೆ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪಿಐ ಆಗಿದ್ದ, ಪ್ರಭುಗೌಡ ಕಿರೆದಳ್ಳಿ, ಡಿವೈಎಸ್ಪಿಯಾಗಿ ಬಡ್ತಿ ಹೊಂದಿ ಬಾಗಲಕೋಟೆ ಜಿಲ್ಲೆಗೆ ವರ್ಗಾವಣೆಯಾಗಿದ್ದರು.

Post
ಕಾತೂರಿನಲ್ಲಿ ಸರಳ ಗಣೇಶೋತ್ಸವ, ಸಂತೋಷ ಶೇಟ್ ರಾಯ್ಕರ್ ದಂಪತಿಯಿಂದ ವಿಶೇಷ ಪೂಜೆ..!

ಕಾತೂರಿನಲ್ಲಿ ಸರಳ ಗಣೇಶೋತ್ಸವ, ಸಂತೋಷ ಶೇಟ್ ರಾಯ್ಕರ್ ದಂಪತಿಯಿಂದ ವಿಶೇಷ ಪೂಜೆ..!

ಮುಂಡಗೋಡ: ತಾಲೂಕಿನ ಕಾತೂರಿನಲ್ಲಿ ಗಣೇಶ ಚತುರ್ಥಿಯ ನಿಮಿತ್ತ ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮಳಗಿಯ ಸಂತೋಷ ಶೇಟ್ ರಾಯ್ಕರ್ ದಂಪತಿಗಳು ಪೂಜಾ ಕಾರ್ಯಕ್ರಮ ನೆರವೇರಿಸಿದ್ರು. ಕಾತೂರಿನ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಪ್ರತಿಷ್ಟಾಪಿಸಲಾಗಿರೋ ಗಣೇಶ ಮೂರ್ತಿಗೆ ಸಂತೋಷ ರಾಯ್ಕರ್ ದಂಪತಿಗಳು ಇಂದು ವಿಶೇಷ ಪೂಜೆ ಸಲ್ಲಿಸಿದ್ರು. ಈ ವೇಳೆ ಗ್ರಾಮದ ಹಲವು ಮುಖಂಡರು ಭಾಗಿಯಾಗಿದ್ರು. ****************** ಜಾಹೀರಾತು

Post
ಹುನಗುಂದದಲ್ಲಿ ಸರಳವಾಗಿ ನಡೆದ ಗಣೇಶ ವಿಸರ್ಜನಾ ಮೆರವಣಿಗೆ..!

ಹುನಗುಂದದಲ್ಲಿ ಸರಳವಾಗಿ ನಡೆದ ಗಣೇಶ ವಿಸರ್ಜನಾ ಮೆರವಣಿಗೆ..!

  ಮುಂಡಗೋಡ: ತಾಲೂಕಿನ ಹುನಗುಂದ ದೇಶಪಾಂಡೆ ನಗರದಲ್ಲಿ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆ ನಡೆಯಿತು. ಕೋವಿಡ್ ಮಾರ್ಗಸೂಚಿಯ ಅನ್ವಯ ಸರಳವಾಗಿ ಆಚರಿಸಲಾದ ಗಣೇಶೋತ್ಸವಕ್ಕೆ, ಸರಳವಾದ ಮೆರವಣಿಗೆ ಮೂಲಕ ಗಣೇಶ ವಿಸರ್ಜನೆ ನಡೆಸಲಾಯಿತು. ಅದಕ್ಕೂ ಮೊದಲು, ಇಂದು ಗಣೇಶನಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಭಜನಾ ಪದಗಳ ಮೂಲಕ ಗಣೇಶನಿಗೆ ಜಯ ಘೋಷಗಳನ್ನು ಕೂಗಿ ಭಕ್ತಿ ಸಮರ್ಪಿಸಲಾಯಿತು..

Post
ಮುಂಡಗೋಡಿನಲ್ಲಿ ಇಂದು ವೀರಭದ್ರೇಶ್ವರ ಸ್ವಾಮಿಯ ಜಯಂತಿ ಕಾರ್ಯಕ್ರಮ..!

ಮುಂಡಗೋಡಿನಲ್ಲಿ ಇಂದು ವೀರಭದ್ರೇಶ್ವರ ಸ್ವಾಮಿಯ ಜಯಂತಿ ಕಾರ್ಯಕ್ರಮ..!

ಮುಂಡಗೋಡ: ಪಟ್ಟಣದಲ್ಲಿ ಇಂದು ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ಪುರೋಹಿತರ ಬಳಗದಿಂದ ವೀರಭದ್ರೇಶ್ವರ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇಲ್ಲಿನ ಬಸವಣ್ಣ ದೇವಸ್ಥಾನದಲ್ಲಿ ಸೇರಿದ್ದ ಪುರೋಹಿತರು ಹಾಗೂ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ಕಾರ್ಯಕರ್ತರು ಶ್ರೀ ವೀರಭದ್ರೇಶ್ವರ ಸ್ವಾಮಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಜಯಂತಿ ಆಚರಣೆ ಮಾಡಿದ್ರು. ವೀರಭದ್ರೇಶ್ವರ ನಾಮಾವಳಿ ಸೇರಿದಂತೆ ಧಾರ್ಮಿಕ ಪೂಜಾ ಕೈಂಕರ್ಯಗಳ ಕುರಿತು ಚರ್ಚಿಸಿದ್ರು..

Post
20 ಕೆಜಿ ಕಾಸ್ಟ್ಯೂಮ್ ಧರಿಸಿ ಲಂಬಾಣಿಯಾಗಿ ಶುಭಾಪುಂಜಾ-ನಿರ್ದೇಶಕ ಶ್ರೀನಿ

20 ಕೆಜಿ ಕಾಸ್ಟ್ಯೂಮ್ ಧರಿಸಿ ಲಂಬಾಣಿಯಾಗಿ ಶುಭಾಪುಂಜಾ-ನಿರ್ದೇಶಕ ಶ್ರೀನಿ

ಬೆಂಗಳೂರು: ಸ್ಯಾಂಡಲ್ ವುಡ್ ಚಿತ್ರರಂಗದಲ್ಲಿ ಬಹುದಿನಗಳಿಂದ ಎಲ್ಲೂ ಕಾಣಿಸಿಕೊಳ್ಳದ ನಟಿ ಶುಭಾಪುಂಜಾ ಇದೀಗ ಲಂಬಾಣಿ ಹುಡುಗಿಯಾಗಿ ಮತ್ತೆ ತೆರೆ ಮೇಲೆ ರಂಜಿಸಲು ಸಿದ್ದಾರಾಗಿದ್ದಾರೆ. 2018ರಲ್ಲಿ ಸ್ಯಾಂಡಲ್ ವುಡ್ ಚಿತ್ರರಂಗದಲ್ಲಿ ಬಹು ನಿರೀಕ್ಷೆಯನ್ನು ಹುಟ್ಟಿಸಿ ಪ್ರೇಕ್ಷಕರನ್ನು ಗಮನಸೆಳೆದ ಕೆಲವು ದಿನಗಳ ನಂತರ ಎನ್ನುವ ಸಿನಿಮಾದ ನಿರ್ದೇಶಕ ಶ್ರೀನಿ ಇದೀಗ ಹೊಸತೊಂದು ಭಿನ್ನ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಶ್ರೀನಿ ಭರವಸೆಯ ಯುವ ನಿರ್ದೇಶಕ ಎನ್ನುವುದನ್ನು ಕೆಲವು ದಿನಗಳ ನಂತರ ಸಿನಿಮಾದಲ್ಲಿ ಸಾಬೀತು ಮಾಡಿದ್ದಾರೆ, ಕಣ್ಣಿಗೆ ಕಟ್ಟುವ ಕಥೆಯನ್ನು ಸೃಷ್ಟಿ ಮಾಡುವುದರಲ್ಲಿ ಶ್ರೀನಿ...

Post
ಅಗಡಿಯಲ್ಲಿ ತಮ್ಮ ನೆಚ್ಚಿನ ಹೋರಿಗೆ ಹುಟ್ಟು ಹಬ್ಬ ಆಚರಿಸಿದ ಗ್ರಾಮಸ್ಥರು..!

ಅಗಡಿಯಲ್ಲಿ ತಮ್ಮ ನೆಚ್ಚಿನ ಹೋರಿಗೆ ಹುಟ್ಟು ಹಬ್ಬ ಆಚರಿಸಿದ ಗ್ರಾಮಸ್ಥರು..!

ಮುಂಡಗೋಡ: ತಾಲೂಕಿನ ಅಗಡಿ ಗ್ರಾಮದಲ್ಲಿ ಗಾಡಾ ಓಡಿಸುವ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿರೋ ಹೋರಿಗೆ ಹುಟ್ಟು ಹಬ್ಬ ಆಚರಿಸಿದ್ರು. ಗ್ರಾಮಸ್ಥರೇಲ್ಲರೂ ಸೇರಿ ರಾಜಾ ಎಂಬ ಹೆಸರಿನ ಹೋರಿಗೆ ವಿಶೇಷ ಅಲಂಕಾರ ಮಾಡಿ, ತಳೀರು ತೋರಣ ಕಟ್ಟಿ, ಕೇಕ್ ಕತ್ತರಿಸಿ ಹುಟ್ಟು ಹಬ್ಬದ ಸಂಭ್ರಮಾಚರಣೆ ಮಾಡಿದ್ರು. ಅಲ್ಲದೇ ಗ್ರಾಮಸ್ಥರು ತಮ್ಮ‌ನೆಚ್ಚಿನ ಹೋರಿಗೆ ವಿಶೇಷ ಸಿಹಿ ತಿನ್ನಿಸಿ ಸಂಭ್ರಮಿಸಿದ್ರು. ಮಹಿಳೆಯರು ಆರತಿ ಬೆಳಗಿದರು, ಜಯಘೋಷಗಳೊಂದಿಗೆ ಕುಣಿದು ಕುಪ್ಪಳಿಸಿದ್ರು.

error: Content is protected !!