ಬೆಂಗಳೂರು: ನಟ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ವಿಧಿವಶ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ಅಂತ್ಯಕ್ರಿಯೆ ನಾಳೆ ನಡೆಸಲು ತೀರ್ಮಾನಿಸಲಾಗಿದೆ. ಹಾಗಂತ, ಪುನೀತ್ ಸಹೋದರ ನಟ ರಾಘವೇಂದ್ರ ರಾಜಕುಮಾರ್ ತಿಳಿಸಿದ್ದಾರೆ. ಇನ್ನು ನಟ ಪುನೀತ್ ಪುತ್ರಿ ದೃತಿ, ನ್ಯೂಯಾರ್ಕ್ ನಿಂದ ದೆಹಲಿಗೆ ಆಗಮಿಸಿದ್ದಾರೆ. ಏರ್ ಇಂಡಿಯಾ 102 ವಿಮಾನದಲ್ಲಿ ದೆಹಲಿಗೆ ಆಗಮಿಸಿರೋ ದೃತಿ, ದೆಹಲಿಯಿಂದ 1.30 ರ ಏರ್ ಇಂಡಿಯಾ ವಿಮಾನ ಹತ್ತಿ, 502 ವಿಮಾನದ ಮೂಲಕ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಜೆ 4.15 ಕ್ಕೆಆಗಮಿಸೋ ಸಾಧ್ಯತೆ...
Top Stories
ಸಾಲಬಾಧೆ, ಬಾಚಣಕಿಯಲ್ಲಿ ನೇಣಿಗೆ ಶರಣಾದ ಅನ್ನದಾತ..! ತನ್ನ ದನದ ಕೊಟ್ಟಿಗೆಯಲ್ಲೇ ಆತ್ಮಹತ್ಯೆ..!
ಅಭಿಮಾನಿಗಳ ನೆಚ್ಚಿನ “ಹೈಸ್ಪೀಡ್ ಮಣಿ” ಟಗರು ಅಕಾಲಿಕ ಸಾವು..! ಸಾವಿರಾರು ಅಭಿಮಾನಿಗಳ ಕಂಬನಿ..!
ವಯಸ್ಸು 45 ಆದ್ರೂ ಮದುವೆ ಆಗಲಿಲ್ಲ, ಅದೇ ಕೊರಗಲ್ಲೇ ಚಾಕು ಇರಿದುಕೊಂಡ, ಆತ್ಮಹತ್ಯೆಗೆ ಯತ್ನಿಸಿದ..!
ಮುಂಡಗೋಡಿನ ಕಿರಣ್ ಸಾಳುಂಕೆಗೆ ಗಡಿಪಾರು..!ಯಾದಗಿರಿ ಜಿಲ್ಲೆಗೆ ಗಡಿಪಾರು ಮಾಡಿ ಶಿರಸಿ ಎಸಿ ಆದೇಶ..!!
ಟ್ರಾಕ್ಟರ್ ರೂಟರ್ ನಲ್ಲಿ ಕಾಲು ಸಿಲುಕಿ ಕಾಲೇ ಕಟ್, ಮುಂಡಗೋಡ ತಾಲೂಕಿನ ಹುನಗುಂದದಲ್ಲಿ ಭೀಕರ ಘಟನೆ..!
ಮುಂಡಗೋಡ ಪೊಲೀಸರ ನೇತೃತ್ವದಲ್ಲಿ ಏಕತಾ ವಾಕ್ ಥಾನ್..! ಸರ್ದಾರ್ ಪಟೇಲರ ಜನ್ಮದಿನದಂದು ಏಕತಾ ದಿವಸ್ ಆಚರಣೆ..!
ಮುಂಡಗೋಡಿನ ಹಿರಿಯ ರಥಶಿಲ್ಪಿ ವಿರೂಪಾಕ್ಷಪ್ಪ ಬಡಿಗೇರ ನಿಧನ…!
ಮುಂಡಗೋಡ ಪಪಂ ಮಾಜಿ ಅಧ್ಯಕ್ಷ ರಾಮಣ್ಣ ಕುನ್ನೂರ್ ನಿಧನ..!
ಮಳಗಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಸರಿದ ಶಿರಸಿ ಹುಬ್ಬಳ್ಳಿ KSRTC ಬಸ್, ತಪ್ಪಿದ ಅನಾಹುತ..!
ಪಾಳಾದಲ್ಲಿ KSRTC ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ, ಬಸ್ ಗಾಗಿ ಬಸ್ ತಡೆದು ಪ್ರತಿಭಟನೆ..!
ತಡಸ ತಾಯವ್ವ ದೇವಸ್ಥಾನದ ಬಳಿ ಕ್ರೂಸರ್ ವಾಹನ ಪಲ್ಟಿ ಹಲವರಿಗೆ ಗಾಯ..!
ಹುಬ್ಬಳ್ಳಿಯಲ್ಲಿ ಮತ್ತೊಂದು ಚಾಕು ಇರಿತ ಪ್ರಕರಣ: ಹಳೇ ದ್ವೇಷದ ಹಿನ್ನೆಲೆ ವ್ಯಕ್ತಿ ಮೇಲೆ ಅಟ್ಯಾಕ್..!
ಉತ್ತರ ಕನ್ನಡ ಸೇರಿ ಹಲವು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಭಾರೀ ಮಳೆಯ ಮುನ್ಸೂಚನೆ..!
KDCC ಕುಸ್ತಿಯಲ್ಲಿ ಹೆಬ್ಬಾರ್ ಬಣದ್ದೇ ಮೇಲುಗೈ, ಮಂಕಾಳು ವೈದ್ಯರ ಬಣಕ್ಕೆ ನಿರಾಸೆ..!
ಮುಂಡಗೋಡ ಹೊರವಲಯದ ಖಬರಸ್ಥಾನ ಬಳಿ ಭಯಾನಕ ಕಾರ್ ಪಲ್ಟಿ..! ಚಾಲಕ ಬದುಕಿದ್ದೇ ಪವಾಡ..!!
ಭಾರೀ ಮಳೆ ಮುನ್ಸೂಚನೆ ಉತ್ತರ ಕನ್ನಡದಲ್ಲಿ ಆರೆಂಜ್ ಅಲರ್ಟ್, ಮುನ್ನೆಚ್ಚರಿಕೆ ವಹಿಸಿ: ಜಿಲ್ಲಾಧಿಕಾರಿ ಕರೆ
ನೈರುತ್ಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಉತ್ತರ ಕನ್ನಡ ಸೇರಿ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ..!
ಸನವಳ್ಳಿ ಬಳಿ ಕಾರ್ ಹಾಗೂ ಬೈಕ್ ನಡುವೆ ಅಪಘಾತ, ಬೈಕ್ ಸವಾರನಿಗೆ ಗಂಭೀರ ಗಾಯ..!
ಕಲಿಯುಗದ ಕುಡುಕ ಖ್ಯಾತಿಯ ಹಾಸ್ಯನಟ ರಾಜು ತಾಳಿಕೋಟಿ ವಿಧಿವಶ..!
Author: admin (ಶ್ರೀ ಆದಿಶಕ್ತಿ ಮಿಡಿಯಾ ಪ್ರೈವೇಟ್ ಲಿಮಿಟೆಡ್)
ಮತ್ತೊಬ್ಬ “ಅಪ್ಪು” ಅಭಿಮಾನಿ ನೇಣಿಗೆ ಶರಣು..! ಪುನೀತ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಆತ್ಮಹತ್ಯೆ..! ಇದೇಲ್ಲಾ ಬೇಕಾ..?
ಬೆಳಗಾವಿ: ನಟ ಪುನೀತ್ ರಾಜಕುಮಾರ್ ವಿಧಿವಶವಾದ ಹಿನ್ನೆಲೆಯಲ್ಲಿ ಮನನೊಂದ ಅಭಿಮಾನಿಯೊಬ್ಬ ನೇಣಿಗೆ ಶರಣಾಗಿದ್ದಾನೆ. ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಘಟನೆ ನಡೆದಿದ್ದು, ರಾಹುಲ್ ಗಾಡಿವಡ್ಡರ ಎಂಬ ಯುವಕ ನೆಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಅಭಿಮಾನಿಯಾಗಿದ್ದಾನೆ. ಪುನಿತ್ ರಾಜಕುಮಾರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪುನೀತ್ ಆತ್ಮಕ್ಕೆ ಶಾಂತಿ ಸಿಗಲಿ ಅಂತಾ ಪ್ರಾರ್ಥಿಸಿದ ಮಂತ್ರಾಲಯದ ಶ್ರೀಗಳು..!
ನಟ ಪುನೀತ್ ರಾಜಕುಮಾರ್ ನಿಧನ ಹಿನ್ನೆಲೆಯಲ್ಲಿ ಮಂತ್ರಾಲಯ ರಾಯರ ಮಠದ ಪೀಠಾಧಿಪತಿ ಶ್ರೀ ಸುಬುದೇಂದ್ರ ತೀರ್ಥರು ಪುನೀತ್ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಪುನೀತ್ ಇನ್ನಿಲ್ಲ ಎನ್ನುವುದನ್ನ ಅರಗಿಸಿಕೊಳ್ಳುವುದು ಕಷ್ಟ, ಪುನೀತ್ ಅಗಲಿಕೆ ರಾಜ್ಯಕ್ಕೆ ತುಂಬಲಾರದ ನಷ್ಟ ಡಾ.ರಾಜಕುಮಾರ ಕುಟುಂಬ ರಾಯರ ಮಠದೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ, ವಿಶೇಷ ಸಂದರ್ಭಗಳಲ್ಲಿ ಮಠಕ್ಕೆ ತಪ್ಪದೇ ಬಂದು ಹೋಗುತ್ತಾರೆ, ಮೂರು ಜನ ಅಣ್ಣತಮ್ಮಂದಿರು ಮಠದಲ್ಲಿ ಸಂಗೀತ ಕಾರ್ಯಕ್ರಮ ನಡೆಸುವುದಾಗಿ ಪುನೀತ್ ಹೇಳಿದ್ದರು, ರಾಯರ ಆರಾಧನ ಸಂದರ್ಭದಲ್ಲಿ ಸಂಗೀತ ಕಾರ್ಯಕ್ರಮ ನಡೆಸುತ್ತೇವೆ ಎಂದಿದ್ದರು...
ಆ ದಿನಾಂಕಕ್ಕೂ ಆ ಮೂವರೂ ಯುವ ನಟರ ಸಾವಿಗೂ ಏನಯ್ಯಾ ಲಿಂಕು..?
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಸ್ತಂಗತರಾಗಿದ್ದಾರೆ. ಅದ್ರಂತೆ ಇತ್ತಿಚೇಗಷ್ಟೇ ಕನ್ನಡ ಚಿತ್ರರಂಗ ಇನ್ನಿಬ್ಬರು ನಟರನ್ನು ಕಳೆದುಕೊಂಡಿದೆ. ಚಿರಂಜೀವಿ ಸರ್ಜಾ ಹಾಗೂ ಸಂಚಾರಿ ವಿಜಯ್ ಕೂಡ ವಯಸ್ಸಲ್ಲದ ವಯಸ್ಸಲ್ಲಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದು ಅಭಿಮಾನಿಗಳಿಗೆ ಇನ್ನೂ ಅರಗಿಸಿಕೊಳ್ಳಲಾರದ ಸಂಗತಿ. ಅಂದಹಾಗೆ, ಇಲ್ಲಿ ಕಾಕತಾಳಿಯವೋ ಅಥವಾ ಕನ್ನಡ ಚಿತ್ರರಂಗದಲ್ಲಿ 17 ಅನ್ನೋ ಸಂಖ್ಯೆಯ ಅರಿಷ್ಟವೋ ಗೊತ್ತೇ ಆಗುತ್ತಿಲ್ಲ. ಯಾಕಂದ್ರೆ, ಇವತ್ತು ಅಸ್ತಂಗತರಾಗಿರೋ ಪುನೀತ್ ರಾಜಕುಮಾರ್, ಚಿರಂಜೀವಿ ಸರ್ಜಾ ಹಾಗೂ ಸಂಚಾರಿ ವಿಜಯ್ ಇವ್ರೇಲ್ಲರ ಹುಟ್ಟಿದ ದಿನಾಂಕ 17… ಹೀಗಾಗಿ,...
ಮುಂಡಗೋಡ ಅಭಿಮಾನಿಗಳಿಂದ “ಅಪ್ಪು” ನಿಧನಕ್ಕೆ ಅಶ್ರುತರ್ಪಣ..! ಕ್ಯಾಂಡಲ್ ಹಚ್ಚಿ ಕಂಬನಿ ಮಿಡಿದ ಯುವಕರು..!!
ಮುಂಡಗೋಡ: ನಟ ಪುನೀತ್ ರಾಜಕುಮಾರ್ ವಿಧಿವಶರಾದ ಹಿನ್ನೆಲೆಯಲ್ಲಿ ಮುಂಡಗೋಡ ಶಿವಾಜಿ ಸರ್ಕಲ್ ನಲ್ಲಿ ಪುನೀತ್ ಅಭಿಮಾನಿಗಳು ಶೃದ್ಧಾಂಜಲಿ ಅರ್ಪಿಸಿದ್ರು. ಪುನೀತ್ ಭಾವಚಿತ್ರಕ್ಕೆ ಗೌರವ ಸಲ್ಲಿಸಿದ ಅಭಿಮಾನಿಗಳು, ಮೇಣದ ಬತ್ತಿ ಹಚ್ಚಿ ಮೌನಾಚರಣೆ ಮಾಡಿದ್ರು. ಕನ್ನಡ ಚಿತ್ರರಂಗಕ್ಕೆ ಪುನೀತ್ ರಾಜಕುಮಾರ್ ನಿಧನ ತುಂಬಲಾರದ ನಷ್ಟ ಅಂತಾ ಕಂಬನಿ ಮಿಡಿದ ಯುವ ಅಭಿಮಾನಿಗಳು “We miss you ಅಪ್ಪು” ಅಂತಾ ಅಭಿಮಾನ ತೋರಿಸಿದ್ರು. ಈ ವೇಳೆ ಮುಂಡಗೋಡಿನ ಸಮಸ್ತ ಅಪ್ಪು ಅಭಿಮಾನಿಗಳು ಹಾಜರಿದ್ರು.
ನಟ ಪುನೀತ್ ಸಾವಿನ ಸುದ್ದಿಗೆ ಹೃದಯಾಘಾತ: ಮೃತಪಟ್ಟ ಅಪ್ಪು ಅಭಿಮಾನಿ..!!
ಚಾಮರಾಜನಗರ: ಪುನೀತ್ ರಾಜಕುಮಾರ್ ನಿಧನ ವಿಷಯ ಕೇಳಿ ಹೃದಯಾಘಾತವಾಗಿ ಪುನೀತ್ ಅಭಿಮಾನಿ ಸಾವಿಗೀಡಾಗಿದ್ದಾನೆ. ಚಾಮರಾಜನಗರ ಜಿಲ್ಲೆ ಹನೂರು ತಾಲೋಕು ಪೊನ್ನಾಚಿ ಗ್ರಾಪಂ ವ್ಯಾಪ್ತಿಯ ಮರೂರು ಗ್ರಾಮದ, ಮುನಿಯಪ್ಪ(29) ಹೃದಯಾಘಾತದಿಂದ ಮೃತಪಟ್ಟ ಅಭಿಮಾನಿ. ಪುನೀತ್ ರಾಜಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿದ್ದ ಮುನಿಯಪ್ಪ, ಪುನೀತ್ ಸಾವಿನ ವಿಷಯ ಕೇಳುತ್ತಲೇ ಕುಸಿದುಬಿದ್ದಿದ್ದಾನೆ. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದ್ರೆ, ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮದ್ಯೆ ಕೊನೆಯುಸಿರು ಎಳೆದಿದ್ದಾನೆ ಪುನೀತ್ ಅಭಿಮಾನಿ. ಪುನೀತ್ ಅವರ ಪ್ರತಿಯೊಂದು ಚಿತ್ರವನ್ನು ತಪ್ಪದೆ ನೋಡುತ್ತಿದ್ದ ಮುನಿಯಪ್ಪ, ಆಗಾಗ್ಗೆ ಬೆಂಗಳೂರಿಗೆ ತೆರಳಿ...
ಪುನೀತ್ ನಿವಾಸಕ್ಕೆ ಪಾರ್ಥೀವ ಶರೀರ, ಕುಟುಂಬಸ್ಥರಿಂದ ಪೂಜೆ, ಪತಿಯ ಶವ ಅಪ್ಪಿ ಬಿಕ್ಕಿ ಬಿಕ್ಕಿ ಅತ್ತ ಪತ್ನಿ..!
ನಟ ಪುನೀತ್ ರಾಜಕುಮಾರ ವಿಧಿವಶರಾದ ಹಿನ್ನೆಲೆಯಲ್ಲಿ ಅವ್ರ ಪಾರ್ಥೀವ ಶರೀರವನ್ನು ವಿಕ್ರಂ ಆಸ್ಪತ್ರೆಯಿಂದ ಪುನೀತ್ ರಾಜಕುಮಾರ್ ನಿವಾಸಕ್ಕೆ ರವಾನಿಸಲಾಯಿತು. ಪುನೀತ್ ನಿವಾಸದಲ್ಲಿ ಕುಟುಂಬಸ್ಥರು ಪೂಜೆ ಸಲ್ಲಿಸಿದ್ರು. ನಂತರ ಸಾರ್ವಜನಿಕ ದರ್ಶನಕ್ಕಾಗಿ ಕಂಠೀರವ ಸ್ಟೇಡಿಯಂ ನಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಕಂಠೀರವ ಸ್ಟೇಡಿಯಂ ಗೆ ಕೆಲವೇ ಕ್ಷಣಗಳಲ್ಲಿ ಪಾರ್ಥೀವ ಶರೀರ ಆಗಮಿಸುವ ಸಾಧ್ಯತೆ ಇದೆ.
ಸ್ವಲ್ಪ ಮಿಸ್ಸಾಯ್ತು, ಮೊದಲು ನಾನು ಹೋಗಬೇಕಿತ್ತು, ಆದ್ರೆ ಅವನು ಮೊದಲು ಹೋದ” ರಾಘವೇಂದ್ರ ರಾಜಕುಮಾರ್ ಭಾವುಕ ನುಡಿ..!
ಬೆಂಗಳೂರು: ನಟ ಪವರ್ ಸ್ಟಾರ್, ಪುನೀತ್ ರಾಜಕುಮಾರ್ ಹೃದಯಾಘಾತದಿಂದ ವಿಧಿವಶ ಹಿನ್ನೆಲೆಯಲ್ಲಿ ಪುನೀತ್ ಸಹೋದರ ರಾಘವೇಂದ್ರ ರಾಜಕುಮಾರ್ ಮಾತನಾಡಿದ್ದಾರೆ. “ಸ್ವಲ್ಪ ಮಿಸ್ಸಾಯ್ತು, ಮೊದಲು ನಾನು ಹೋಗ್ಬೇಕಿತ್ತು, ಆದ್ರೆ ಅವನು ಮೊದಲು ಹೋಗಿದ್ದಾನೆ, ಅಪ್ಪ ಅಮ್ಮನ ಹತ್ರ ನನಗಿಂತ ಮುಂಚೆನೇ ಹೋಗಿಬಿಟ್ಟ” ಅಂತಾ ಪುನೀತ್ ರಾಜಕುಮಾರ್ ಹಿರಿಯ ಸಹೋದರ ನಟ ರಾಘವೇಂದ್ರ ರಾಜಕುಮಾರ್ ಬಾವುಕ ನುಡಿ ನುಡಿದಿದ್ದಾರೆ. ಅಭಿಮಾನಿಗಳೇ ಅಪ್ಪುವನ್ನು ಯಾವುದೇ ತೊಂದರೆ ಆಗದಂತೆ ಕಳಿಸಿಕೊಡೋಣ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸರ್ಕಾರದ ಜೊತೆಗೆ ನಿಂತು, ನನ್ನ ತಮ್ಮನನ್ನು...
ನಟ ಪುನಿತ್ ರಾಜಕುಮಾರ್ ಇನ್ನು ನೆನಪು ಮಾತ್ರ..! ಬಾರದ ಲೋಕಕ್ಕೆ ತೆರಳಿದ “ಅಪ್ಪು”
ಬೆಂಗಳೂರು: ನಟ ಪುನಿತ್ ರಾಜಕುಮಾರ್ ಗೆ ತೀವ್ರ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಹಾಗಂತ, ವಿಕ್ರಂ ಆಸ್ಪತ್ರೆಯ ಮೂಲಗಳಿಂದ ಮಾಹಿತಿ ಲಭ್ಯವಾಗಿತ್ತು. ಬೆಳಿಗ್ಗೆಯೆ ತೀವ್ರ ಹೃದಯಾಘಾತದಿಂದ ಪುನಿತ್ ರಾಜಕುಮಾರ್, ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ವಿಕ್ರಂ ಆಸ್ಪತ್ರೆಯಲ್ಲಿ ಅಪ್ಪು ಕೊನೆಯುಸಿರು. ಬೆಳಿಗ್ಗೆ ಲಘು ಹೃದಯಾಘಾತಕ್ಕೆ ಒಳಗಾಗಿದ್ದ ಪುನಿತ್ ರಮಣಶ್ರೀ ಆಸ್ಪತ್ರೆಗೆ ದಾಖಲಾಗಿದ್ದರು. ಆನಂತರ ವಿಕ್ರಂ ಆಸ್ಪತ್ರೆಗೆ ರವಾನಿಸಲಾಗಿತ್ತು. ವಿಕ್ರಂ ಆಸ್ಪತ್ರೆಗೆ ರವಾನಿಸುವ ಮಾರ್ಗಮದ್ಯೆ ಮತ್ತೊಮ್ಮೆ ತೀವ್ರ ಹೃದಯಾಘಾತವಾಗಿತ್ತು. ಹೀಗಾಗಿ, ಸದ್ಯ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ ಚಿಕಿತ್ಸೆ...
ಕೆಲವೇ ಹೊತ್ತಲ್ಲಿ ಸಿಎಂ ಬೊಮ್ಮಾಯಿ ನಟ ಶಿವಣ್ಣನ ಜೊತೆ ಜಂಟಿ ಸುದ್ದಿಗೋಷ್ಠಿ ನಡೆಸಲಿರೋ ಸಿಎಂ..!
ಬೆಂಗಳೂರು: ಕೆಲವೇ ಕ್ಷಣಗಳಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸುದ್ದಿಗೋಷ್ಠಿ ನಡೆಸಿ ನಟ ಪುನಿತ್ ರಾಜಕುಮಾರ್ ಸ್ಥಿತಿಯ ಬಗ್ಗೆ ಮಾಹಿತಿ ನೀಡುವ ಸಾಧ್ಯತೆಯಿದೆ. ನಟ ಶಿವರಾಜ್ ಕುಮಾರ್ ಜೊತೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡುವ ಮಾಹಿತಿ ಲಭ್ಯವಾಗಿದೆ. ವಿಕ್ರಂ ಆಸ್ಪತ್ರೆಯ ವೈದ್ಯರಿಂದ ಅಪ್ಪುವಿನ ಆರೋಗ್ಯದ ಸಂಪೂರ್ಣ ಮಾಹಿತಿ ಪಡೆದುಕೊಂಡಿರೋ ಸಿಎಂ ಹಾಗೂ ಶಿವರಾಜ ಕುಮಾರ್ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟ ಚಿತ್ರಣ ನೀಡೋ ಸಾಧ್ಯತೆ ಇದೆ ಎನ್ನಲಾಗಿದೆ.








