Home admin

Author: admin (ಶ್ರೀ ಆದಿಶಕ್ತಿ ಮಿಡಿಯಾ ಪ್ರೈವೇಟ್ ಲಿಮಿಟೆಡ್)

Post
ಸಾಲಗಾಂವ್ ಗ್ರಾಮ ಪಂಚಾಯತಿಗೆ ಇಂದು ಆಧ್ಯಕ್ಷರ ಆಯ್ಕೆ ಕಸರತ್ತು, ಪಟ್ಟಕ್ಕೇರ್ತಾರಾ ರೇಣುಕಾ..?

ಸಾಲಗಾಂವ್ ಗ್ರಾಮ ಪಂಚಾಯತಿಗೆ ಇಂದು ಆಧ್ಯಕ್ಷರ ಆಯ್ಕೆ ಕಸರತ್ತು, ಪಟ್ಟಕ್ಕೇರ್ತಾರಾ ರೇಣುಕಾ..?

ಮುಂಡಗೋಡ: ತಾಲೂಕಿನ ಸಾಲಗಾಂವ್ ಗ್ರಾಮ ಪಂಚಾಯತಿಗೆ ಇಂದು ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಈ ಹಿಂದೆ ಅಧ್ಯಕ್ಷರಾಗಿದ್ದ ನೇತ್ರಾ ಹನುಮಂತ್ ಜಾಡರ್ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಒಟ್ಟೂ 13 ಸದಸ್ಯ ಬಲದ ಸಾಲಗಾಂವ್ ಗ್ರಾಮ ಪಂಚಾಯತಿಯಲ್ಲಿ ಬಹುತೇಕ ಬಿಜೆಪಿ ಬೆಂಬಲಿತರದ್ದೇ ಪಾರುಪತ್ಯ. ಹೀಗಾಗಿ, 15 ತಿಂಗಳ ಅಧಿಕಾರ ನಡೆಸಿರೋ ನೇತ್ರಾ ಹನುಮಂತ್ ಜಾಡರ್ ಅಧಿಕಾರ ಬಿಟ್ಟು ಕೊಟ್ಟಿದ್ದಾರೆ. ಈ ಮೂಲಕ ಮತ್ತೊಂದು 15 ತಿಂಗಳ ಅವಧಿಗೆ ನೂತನ ಅಧ್ಯಕ್ಷರ ಆಯ್ಕೆಗೆ ಅನುವು...

Post
ಬಾಚಣಕಿ ಗ್ರಾಪಂ ನೂತನ ಅಧ್ಯಕ್ಷರಾಗಿ ಸಂತೋಷ ಸಣ್ಣಮನಿಗೆ ಭರ್ಜರಿ  ಗೆಲುವು..!

ಬಾಚಣಕಿ ಗ್ರಾಪಂ ನೂತನ ಅಧ್ಯಕ್ಷರಾಗಿ ಸಂತೋಷ ಸಣ್ಣಮನಿಗೆ ಭರ್ಜರಿ ಗೆಲುವು..!

ಮುಂಡಗೋಡ: ತಾಲೂಕಿನ ಬಾಚಣಕಿ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಸಂತೋಷ ಸಣ್ಣಮನಿ ಆಯ್ಕೆಯಾಗಿದ್ದಾರೆ‌. ಇದ್ರೊಂದಿಗೆ ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಅಧ್ಯಕ್ಷೀಯ ಚುನಾವಣೆಯಲ್ಲಿ ಕಮಲ ಪಾಳಯಕ್ಕೆ ಭರ್ಜರಿ ಜಯ ಸಿಕ್ಕಿದೆ‌. 13 ಸದಸ್ಯರಲ್ಲಿ 9 ರ ಬಲ..! ಅಂದಹಾಗೆ, 13 ಸದಸ್ಯ ಬಲದ ಬಾಚಣಕಿ ಗ್ರಾಮ ಪಂಚಾಯತಿಯಲ್ಲಿ, ಈಗಾಗಲೇ ಕಾಂಗ್ರೆಸ್ ಬೆಂಬಲಿತ 8 ಸದಸ್ಯರು, ಬಿಜೆಪಿ ಬೆಂಬಲಿತ 5 ಸದಸ್ಯರು ಇದ್ರು. ಆದ್ರೆ, ಇಂದು ನಡೆದ ಚುನಾವಣೆಯಲ್ಲಿ ಬರೋಬ್ಬರಿ 9 ಜನರ ಬೆಂಬಲದೊಂದಿಗೆ ಸಂತೋಷ ಸಣ್ಣಮನಿ...

Post
ಬಾಚಣಕಿ ಗ್ರಾಪಂ ಅಧ್ಯಕ್ಷ  ಚುನಾವಣೆ, ಸಂತೋಷ ಸಣ್ಣಮನಿಗೆ ಒಲಿಯತ್ತಾ ಖುರ್ಚಿ..?

ಬಾಚಣಕಿ ಗ್ರಾಪಂ ಅಧ್ಯಕ್ಷ ಚುನಾವಣೆ, ಸಂತೋಷ ಸಣ್ಣಮನಿಗೆ ಒಲಿಯತ್ತಾ ಖುರ್ಚಿ..?

ಮುಂಡಗೋಡ: ತಾಲೂಕಿನ ಬಾಚಣಕಿ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷರ ಆಯ್ಕೆ ನಡೆಯುತ್ತಿದೆ. ಇಂದು ಮದ್ಯಾನ 1 ಗಂಟೆಯ ನಂತರ ನಡೆಯಲಿರೋ ಚುನಾವಣೆಯಲ್ಲಿ ಯಾರ ಕೈಗೆ ಅಧಿಕಾರದ ಚುಕ್ಕಾಣಿ..? ಅನ್ನೋ ಕುತೂಹಲಕ್ಕೆ ಉತ್ತರ ಸಿಗಲಿದೆ. 13 ಸದಸ್ಯ ಬಲ..! ಅಂದಹಾಗೆ, 13 ಸದಸ್ಯ ಬಲದ ಬಾಚಣಕಿ ಗ್ರಾಮ ಪಂಚಾಯತಿಯಲ್ಲಿ, ಈಗಾಗಲೇ ಕಾಂಗ್ರೆಸ್ ಬೆಂಬಲಿತ 8 ಸದಸ್ಯರು, ಬಿಜೆಪಿ ಬೆಂಬಲಿತ 5 ಸದಸ್ಯರು ಇದ್ರು. ಹೀಗಾಗಿನೇ ಕಾಂಗ್ರೆಸ್ ಬೆಂಬಲಿತ ನಾಗರಾಜ್ ಉಪಾದ್ಯೆ ಅಧ್ಯಕ್ಷರಾಗಿ ಅಧಿಕಾರದಲ್ಲಿದ್ರು. ಅದ್ರಂತೆ, ಅರಶಿಣಗೇರಿಯ ತಿಪ್ಪವ್ವ ಢಾಕಪ್ಪ...

Post
9 ತಿಂಗಳ ಹಿಂದೆ ಸಿಕ್ಕಿದೆ ಅನಾಥ ಶವ, ಕೊಲೆಯಾಗಿ ನದಿಯಲ್ಲಿ ತೇಲಿಬಂದಿದೆ ಹೆಣ, ಈ ವ್ಯಕ್ತಿ ನಿಮಗೇನಾದ್ರೂ ಗೊತ್ತಾ..?

9 ತಿಂಗಳ ಹಿಂದೆ ಸಿಕ್ಕಿದೆ ಅನಾಥ ಶವ, ಕೊಲೆಯಾಗಿ ನದಿಯಲ್ಲಿ ತೇಲಿಬಂದಿದೆ ಹೆಣ, ಈ ವ್ಯಕ್ತಿ ನಿಮಗೇನಾದ್ರೂ ಗೊತ್ತಾ..?

ಬಹುಶಃ ಅದೊಂದು ಭೀಕರ ಕೊಲೆ. ಅದ್ಯಾವ ಕಾರಣಕ್ಕೋ ಗೊತ್ತಿಲ್ಲ, ಅದ್ಯಾರೋ ಗೊತ್ತಿಲ್ಲ, ಕುತ್ತಿಗೆಗೆ ಟವೇಲ್ ಬಿಗಿದು ಬರ್ಬರವಾಗಿ ಕೊಂದಿದ್ದಾರೆ ದುಷ್ಟರು. ಅದೇಲ್ಲಿ ಕೊಲೆ ಮಾಡಿದ್ದಾರೋ ಅದೂ ಕೂಡ ಇವತ್ತಿಗೂ ಗೊತ್ತಾಗಿಲ್ಲ. ಹಾಗೆ ನಿರ್ದಯವಾಗಿ ಕೊಲೆ ಮಾಡಿ, ಮಲಪ್ರಭಾ ನದಿಯಲ್ಲಿ ತಂದು ಬೀಸಾಕಿ ಹೋಗಿದ್ದಾರೆ. ಆ ಶವ ತೇಲುತ್ತ ಬಂದು ಬೆಳಗಾವಿ ಜಿಲ್ಲೆಯ ಚಾಪಗಾಂವ್ ಸಮೀಪದ ಮಲಪ್ರಭಾ ನದಿಯ ದಂಡೆಯ ಮೇಲೆ ಸಿಕ್ಕಿದೆ. 9 ತಿಂಗಳ ಹಿಂದೆ.. ಅಷ್ಟಕ್ಕೂ, ಈ ಶವ ಸಿಕ್ಕಿದ್ದು ನಿನ್ನೆ ಮೊನ್ನೆಯಲ್ಲ. ಬರೋಬ್ಬರಿ 9...

Post
ಮುಂಡಗೋಡ ಪಟ್ಟಣ ಪಂಚಾಯತಿಯಲ್ಲಿ ಅವಿಶ್ವಾಸಕ್ಕೆ ಅರ್ಜಿ, ಹೆಬ್ಬಾರ್ ಸಾಹೇಬ್ರ ನಿರ್ಲಕ್ಷಕ್ಕೆ ಸಿಡಿದೆದ್ರಾ ಸದಸ್ಯರು..!

ಮುಂಡಗೋಡ ಪಟ್ಟಣ ಪಂಚಾಯತಿಯಲ್ಲಿ ಅವಿಶ್ವಾಸಕ್ಕೆ ಅರ್ಜಿ, ಹೆಬ್ಬಾರ್ ಸಾಹೇಬ್ರ ನಿರ್ಲಕ್ಷಕ್ಕೆ ಸಿಡಿದೆದ್ರಾ ಸದಸ್ಯರು..!

ಸಚಿವ ಶಿವರಾಂ ಹೆಬ್ಬಾರ್ ಅದ್ಯಾಕೋ ಏನೋ ಕಾರ್ಯಕರ್ತರ ಮನಸಿನಾಳ ಅರ್ಥೈಸಿಕೊಳ್ಳುವಲ್ಲಿ ವಿಫಲರಾಗ್ತಿದಾರಾ..? ಇಂತಹದ್ದೊಂದು ಅನುಮಾನ, ಕ್ಷೇತ್ರದ ಸದ್ಯದ ಸ್ಥಿತಿ ನೋಡಿದ್ರೆ ಎಂಥವರಿಗೂ ಅರ್ಥವಾಗ್ತಿದೆ. ಅಸಲು, ಸಚಿವರು ಮಾಡಿರೋ ಸಣ್ಣದೊಂದು ನಿರ್ಲಕ್ಷಕ್ಕೆ ಮುಂಡಗೋಡ ಪಟ್ಟಣ ಪಂಚಾಯತಿ ಸದ್ಯ ಕೊತ ಕೊತ ಕುದಿಯುತ್ತಿದೆ. ಬಿಜೆಪಿಯೊಳಗಿನ ಆಂತರಿಕ ಬೇಗುದಿ ಸ್ಫೋಟಗೊಂಡಿದೆ. ಅವಿಶ್ವಾಸ ಮಂಡನೆಗೆ ಅರ್ಜಿ..! ಮುಂಡಗೋಡ ಪಟ್ಟಣ ಪಂಚಾಯತ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯಿಸಲು ಅರ್ಜಿ ಸಲ್ಲಿಕೆಯಾಗಿದೆ. ಅದ್ಯಕ್ಷೆ ರೇಣುಕಾ ರವಿ ಹಾವೇರಿ ಹಾಗೂ ಉಪಾಧ್ಯಕ್ಷ ಮಂಜುನಾಥ್ ಹರ್ಮಲಕರ್...

Post
ಭೀಕರ ರಸ್ತೆ ಅಪಘಾತ, ಕ್ರೂಸರ್ ನಾಲೆಗೆ ಬಿದ್ದು 9 ಜನರ ದಾರುಣ ಸಾವು, 8 ಜನರಿಗೆ ಗಾಯ..!

ಭೀಕರ ರಸ್ತೆ ಅಪಘಾತ, ಕ್ರೂಸರ್ ನಾಲೆಗೆ ಬಿದ್ದು 9 ಜನರ ದಾರುಣ ಸಾವು, 8 ಜನರಿಗೆ ಗಾಯ..!

 ಬೆಳಗಾವಿ: ಬೆಳ್ಳಂ ಬೆಳಿಗ್ಗೆ ಬೆಳಗಾವಿ ಸಮೀಪ ಕಣಬರಗಿ ಬಳಿ ಭೀಕರ ಅಪಘಾತವಾಗಿದೆ. ಕ್ರೂಸರ್ ನಾಲೆಗೆ ಉರುಳಿ ಬಿದ್ದ ಪರಿಣಾಮ, 9 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 8 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮೃತರು ಗೋಕಾಕ ತಾಲೂಕಿನ ಅಕ್ಕತಂಗೇರಹಾಳ ಗ್ರಾಮದವರು ಎನ್ನಲಾಗಿದೆ. ಕೂಲಿ ಕೆಲಸಕ್ಕಾಗಿ ಕ್ರೂಸರ್ ವಾಹನದಲ್ಲಿ ಬೆಳಗಾವಿಯತ್ತ ಬರುತ್ತಿದ್ರು. ಇದೇ ವೇಳೆ ಚಾಲಕನ ನಿಯಂತ್ರಣ ತಪ್ಪಿ, ಬಳ್ಳಾರಿ ನಾಲೆಗೆ ಕ್ರೂಸರ್ ವಾಹನ ಪಲ್ಟಿಯಾಗಿ ಬಿದ್ದು 9 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ದಿನಗೂಲಿ ನೌಕರರು ರೈಲ್ವೆ ಬ್ರಿಡ್ಜ್...

Post
ಅಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಗೂಡಂಗಡಿಯ ಮೇಲೆ ಪೊಲೀಸರ ದಾಳಿ, ಕೇಸು ದಾಖಲು..!

ಅಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಗೂಡಂಗಡಿಯ ಮೇಲೆ ಪೊಲೀಸರ ದಾಳಿ, ಕೇಸು ದಾಖಲು..!

ಮುಂಡಗೋಡ: ತಾಲೂಕಿನ ಅಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಅಂಗಡಿಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಪಿಐ ಸಿದ್ದಪ್ಪ ಸಿಮಾನಿ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ, ಓರ್ವನ ಮೇಲೆ ಕೇಸು ದಾಖಲಿಸಲಾಗಿದೆ. ಅಗಡಿಯ ನಾಗರಾಜ್ ರೇಖಪ್ಪ ಲಮಾಣಿ ಎಂಬುವವನ ಮೇಲೆ ಕೇಸು ದಾಖಲಿಸಲಾಗಿದ್ದು, ರಸ್ತೆ ಪಕ್ಕದ ಗೂಡಂಗಡಿಯಲ್ಲಿ ಅಕ್ರಮವಾಗಿ ಯಾವುದೇ ಪರ್ಮಿಟ್ ಇಲ್ಲದೇ ಮದ್ಯ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಮುಂಡಗೋಡ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Post
ಭಾರೀ ಮಳೆ ಗಾಳಿಗೆ, ಚಲಿಸುತ್ತಿದ್ದ ಓಮಿನಿ ಮೇಲೆ ಬಿದ್ದ ಮರ, ವಾಹನ ಜಖಂ..!

ಭಾರೀ ಮಳೆ ಗಾಳಿಗೆ, ಚಲಿಸುತ್ತಿದ್ದ ಓಮಿನಿ ಮೇಲೆ ಬಿದ್ದ ಮರ, ವಾಹನ ಜಖಂ..!

ಸಿದ್ದಾಪುರ: ಉತ್ತರ ಕನ್ನಡ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಗಾಳಿ ಸಮೇತ ಭಾರೀ ಮಳೆಯಾಗುತ್ತಿದೆ. ಪರಿಣಾಮ ಸಿದ್ದಾಪುರ ಪಟ್ಟಣದ ಬಳಿ ಚಲಿಸುತ್ತಿದ್ದ ಓಮಿನಿ ವಾಹನದ ಮೇಲೆ ಮರ ಉರುಳಿ ಬಿದ್ದಿದೆ. ಸಿದ್ದಾಪುರ ಹೊರವಲಯದಲ್ಲಿ ಚಲಿಸುತ್ತಿದ್ದ ಓಮಿನಿ ವಾಹನದ ಮೇಲೆ ಮರ ಬಿದ್ದಿದೆ. ವಿದ್ಯುತ್ ಕಂಬ ಇರೋ ಕಾರಣಕ್ಕೆ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಓಮಿನಿ ವಾಹನ ನುಜ್ಜುಗುಜ್ಜಾಗಿದ್ದು, ಓಮಿನಿಯಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ‌. ಸಿದ್ದಾಪುರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ..

Post
ಮುಂಡಗೋಡ ತಾಲೂಕಿನಲ್ಲಿ ಜಿಪಂ, ತಾಪಂ ಕ್ಷೇತ್ರಗಳ ಮರುವಿಂಗಡನೆ, 4 ಜಿಪಂ ಕ್ಷೇತ್ರಗಳು ಚಾಲ್ತಿಗೆ..?

ಮುಂಡಗೋಡ ತಾಲೂಕಿನಲ್ಲಿ ಜಿಪಂ, ತಾಪಂ ಕ್ಷೇತ್ರಗಳ ಮರುವಿಂಗಡನೆ, 4 ಜಿಪಂ ಕ್ಷೇತ್ರಗಳು ಚಾಲ್ತಿಗೆ..?

ಮುಂಡಗೋಡ; ತಾಲೂಕಿನಲ್ಲಿ ಈಗ ಬದಲಾವಣೆ ಗಾಳಿ ಬೀಸಿದೆ. ಬಹುತೇಕ ಕೋರ್ಟ್ ಆದೇಶದಂತೆ ಇನ್ನೇರಡು ತಿಂಗಳಲ್ಲಿ ಜಿಪಂ, ತಾಪಂ ಚುನಾವಣೆ ನಡಿಯೋದು ಬಹುತೇಕ ಫಿಕ್ಸ್ ಆದಂತಾಗಿದೆ. ಈ ಕಾರಣಕ್ಕಾಗೇ ಮುಂಡಗೋಡ ತಾಲೂಕಿನಲ್ಲಿ ಮೂರು ಇದ್ದ ಜಿಪಂ ಕ್ಷೇತ್ರಗಳನ್ನ ಮರು ವಿಂಗಡನೆ ಮಾಡಲಾಗಿದೆ. ಮತ್ತೊಂದು ಕ್ಷೇತ್ರವನ್ನು ಹುಟ್ಟು ಹಾಕುವ ಕಾರ್ಯ ಚಾಲ್ತಿ ಪಡೆದುಕೊಂಡಿದೆ. ಹಾಗಂತ, ಬಲ್ಲ ಮೂಲಗಳಿಂದ ಪಬ್ಲಿಕ್ ಫಸ್ಟ್ ಗೆ ಮಾಹಿತಿ ಸಿಕ್ಕಿದೆ. ಮುಂಡಗೋಡ ತಾಲೂಕಿನಲ್ಲಿ ಒಟ್ಟೂ 16 ಗ್ರಾಮ ಪಂಚಾಯತಿಗಳಿವೆ. ಇದುವರೆಗೂ ಚಿಗಳ್ಳಿ, ಪಾಳಾ ಹಾಗೂ ಇಂದೂರು,...

Post
ಶಂಕರ್ ಗೌಡಿ ಮುಂಡಗೋಡಿನ ನೂತನ ತಹಶೀಲ್ದಾರ್ ಆಗಿ ವರ್ಗಾವಣೆ..!

ಶಂಕರ್ ಗೌಡಿ ಮುಂಡಗೋಡಿನ ನೂತನ ತಹಶೀಲ್ದಾರ್ ಆಗಿ ವರ್ಗಾವಣೆ..!

ಮುಂಡಗೋಡಿಗೆ ನೂತನ ತಹಶೀಲ್ದಾರ್ ಆಗಿ ಶಂಕರ ಗೌಡಿ ವರ್ಗಾವಣೆಯಾಗಿದ್ದಾರೆ. ಸದ್ಯ ಬಾಗಲಕೋಟೆ ಜಿಲ್ಲೆ ಬೀಳಗಿ ತಹಶೀಲ್ದಾರ್ ಆಗಿ ಸೇವೆ ಸಲ್ಲಿಸುತ್ತಿದ್ದ ಶಂಕರ್ ಗೌಡಿಯವರನ್ನು ಮುಂಡಗೋಡಿಗೆ ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಶ್ರೀಧರ್ ಮುಂದಲಮನಿಯವರನ್ನು ಶಿರಸಿಗೆ ವರ್ಗಾವಣೆಗೊಳಿಸಿದ್ದರಿಂದ ಮುಂಡಗೋಡ ತಹಶೀಲ್ದಾರ್ ಹುದ್ದೆ ಖಾಲಿಯಾಗಿತ್ತು. ನಿನ್ನೆಯಷ್ಟೇ ಶ್ರೀಧರ್ ಮುಂದಲಮನಿ ಮುಂಡಗೋಡಿನಿಂದ ಬಿಡುಗಡೆಗೊಂಡು ಶಿರಸಿಗೆ ವರ್ಗಾವಣೆಯಾಗಿದ್ದರು. ಹೀಗಾಗಿ, ಇಂದು ನೂತನ ತಹಶಿಲ್ದಾರ್ ಶಂಕರ್ ಗೌಡಿಯವರನ್ನು ಸರ್ಕಾರ ಮುಂಡಗೋಡಿಗೆ ವರ್ಗಾವಣೆಗೊಳಿಸಿ ಆದೇಶಿಸಿದೆ.

error: Content is protected !!