ಮುಂಡಗೋಡ ತಾಲೂಕಿನ ಇಂದೂರು ಹಾಗೂ ಕೊಪ್ಪ ನಡುವೆ ಬೈಕ್ ಸ್ಕಿಡ್ ಆಗಿ ಬಿದ್ದ ಪರಿಣಾಮ ಸವಾರನಿಗೆ ಗಂಭೀರ ಗಾಯವಾದ ಘಟನೆ ನಡೆದಿದೆ. ಹೆಸ್ಕಾಂ ನಲ್ಲಿ ಕಾರ್ಯನಿರ್ವಹಿಸುತ್ತಿರೊ ಬೆಳಗಾವಿ ಮೂಲದ ಮಂಜುನಾಥ್ ದಡ್ಡಿ ಎಂಬುವವನೇ ಗಾಯಗೊಂಡ ಬೈಕ್ ಸವಾರನಾಗಿದ್ದಾನೆ. ಇಂದು ಈತ ಬೈಕ್ ಮೇಲೆ ಬರುತ್ತಿದ್ದಾಗ, ಕೊಪ್ಪ ಬಳಿಯಲ್ಲಿ ಸ್ಕಿಡ್ ಆಗಿ ಬಿದ್ದಿದೆ. ಹೀಗಾಗಿ, ತಲೆಗೆ, ಹಾಗೂ ಮುಖಕ್ಕೆ ಗಾಯವಾಗಿದ್ದು ಆಸ್ಪತ್ರೆಗೆ ರವಾನಿಸಲಾಗಿದೆ. ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಗಾಯಾಳುವನ್ನು ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿದೆ. ಮುಂಡಗೋಡ...
Top Stories
ಯಲ್ಲಾಪುರ ರಂಜಿತಾ ಮರ್ಡರ್ ಕೇಸ್ ಗೆ ಬಿಗ್ ಟ್ವಿಸ್ಟ್, ನಿಸರ್ಗ ಮನೆ ಜಂಗಲ್ ನಲ್ಲಿ ಹೆಣವಾಗಿ ಪತ್ತೆಯಾದ ಆರೋಪಿ ರಫೀಕ್, ಆತ್ಮಹತ್ಯೆ ಮಾಡಿಕೊಂಡ್ನಂತೆ..!
ಯಲ್ಲಾಪುರ ರಂಜಿತಾ ಮರ್ಡರ್ ಕೇಸ್ ಗೆ ಬಿಗ್ ಟ್ವಿಸ್ಟ್, ನಿಸರ್ಗ ಮನೆ ಜಂಗಲ್ ನಲ್ಲಿ ಹೆಣವಾಗಿ ಪತ್ತೆಯಾದ ಆರೋಪಿ ರಫೀಕ್, ಆತ್ಮಹತ್ಯೆ ಮಾಡಿಕೊಂಡ್ನಂತೆ..!
ಮುಂಡಗೋಡ ತಾಲೂಕಿನ ಪ.ಪಂಗಡದ ಮೀನುಗಾರರಿಗೆ ವಾಹನ ಖರೀದಿಗೆ ಸಹಾಯಧನಕ್ಕೆ ಅರ್ಜಿ ಅಹ್ವಾನ..!
ತಟ್ಟಿಹಳ್ಳಿ ಬಳಿ ಕಾರ್, ಟ್ರಾಕ್ಟರ್ ನಡುವೆ ಮುಖಾಮುಕಿ ಡಿಕ್ಕಿ, ಕಾರ್ ಪಲ್ಟಿ, ಮಗುವಿಗೆ ಗಾಯ..!
ಜಸ್ಟ್ ಅದೊಂದು ವಾಟ್ಸಾಪ್ ಕಾಲ್, ಈ ಟಿಬೇಟಿಗನಿಂದ ಆ ವಂಚಕರು ದೋಚಿದ್ದು ಬರೋಬ್ಬರಿ 1 ಕೋಟಿ 61 ಲಕ್ಷ..!
ಪ.ಜಾತಿ, ಪಂಗಡ ಯೋಜನೆಗಳಲ್ಲಿ 100% ಗುರಿ ಸಾಧಿಸಲು ಅಧಿಕಾರಿಗಳಿಗೆ ಡೀಸಿ ಕಟ್ಟುನಿಟ್ಟಿನ ಸೂಚನೆ..!
ಪೌರಕಾರ್ಮಿಕರಿಗೆ ಆದ್ಯತೆಯಲ್ಲಿ ಮನೆಗಳನ್ನು ಒದಗಿಸಿ: ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ಸೂಚನೆ..!
ಪೊಲೀಸ್ ಇಲಾಖೆ ವತಿಯಿಂದ ಪ್ರತಿ ತಿಂಗಳು ಪ.ಜಾತಿ ಪಂಗಡದವರ ಕುಂದುಕೊರತೆ ಸಭೆ: ಎಸ್ಪಿ ದೀಪನ್
ಖಾಸಗಿ ಆಸ್ಪತ್ರೆ, ಆರೋಗ್ಯ ಸಂಸ್ಥೆಗಳಲ್ಲಿ ನಕಲಿ ವೈದ್ಯರು ಕಂಡುಬಂದಲ್ಲಿ ಕಠಿಣ ಕ್ರಮ: ಡೀಸಿ ಖಡಕ್ ಎಚ್ಚರಿಕೆ..!
ಉತ್ತರ ಕನ್ನಡದಲ್ಲಿ ಹೊಸ ವರ್ಷ ಆಚರಣೆಗೆ ಡೀಸಿ ರೂಲ್ಸ್: ಈ ಸೂಚನೆ ಪಾಲಿಸಲೇಬೇಕು ಅಂದ್ರು ಜಿಲ್ಲಾಧಿಕಾರಿ..!
ಹುಬ್ಬಳ್ಳಿಯ ಅಂಚಟಗೇರಿ ಬಳಿ ಭೀಕರ ಅಪಘಾತ- ತಂದೆ, ಎರಡು ಮಕ್ಕಳು ದುರಂತ ಸಾವು..!
ಹುನಗುಂದದಲ್ಲಿ ಬೆಂಕಿ ಅವಘಡ, ಸಿಲಿಂಡರ ಸ್ಪೋಟಗೊಂಡು ಹೊತ್ತಿಉರಿದ ಆಟೋ ರಿಕ್ಷಾ, ಮನೆಗೂ ಹಾನಿ..!
ಚಿಗಳ್ಳಿ ಪ್ರೌಢಶಾಲಾ ಆವರಣದಲ್ಲಿ ಡಿ.26 ರಂದು ಧರಣಿ ಸತ್ಯಾಗ್ರಹಕ್ಕೆ ವಿರೋಧ, ಮನವಿ ಅರ್ಪಣೆ..!
ಇಂದೂರು ಸೊಸೈಟಿಯ ನೂತನ ಕಛೇರಿ ಕಟ್ಟಡದ ಉದ್ಘಾಟನೆ ನೆರವೇರಿಸಿದ ಶಾಸಕ ಶಿವರಾಮ್ ಹೆಬ್ಬಾರ್..!
ಕರ್ನಾಟಕದ ಹಲವೆಡೆ ತೀವ್ರ ಶೀತ ಗಾಳಿ ; ಇಂದು 7 ಜಿಲ್ಲೆಗಳಿಗೆ ಆರೆಂಜ್, 16 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ವಿಧಿವಶ..!
ತಡಸ ತಾಯವ್ವನ ದೇವಸ್ಥಾನ ಬಳಿ ಭೀಕರ ಕಾರು ಅಪಘಾತ, ಮುಂಡಗೋಡ ತಹಶೀಲ್ದಾರ ಕಚೇರಿಯ ಓರ್ವ ತಲಾಟಿ ಸ್ಥಳದಲ್ಲೇ ಸಾವು, ಮತ್ತಿಬ್ಬರು ಗಂಭೀರ..!
ಎಚ್ಚರ, ಎಚ್ಚರ..! ತಡಸ ತಾಯವ್ವನ ದೇವಸ್ಥಾನದ ಸಮೀಪ ಚಿರತೆ ಪ್ರತ್ಯಕ್ಷ..!
ಕಾತೂರು ಅರಣ್ಯಾಧಿಕಾರಿಗಳ ಭರ್ಜರಿ ದಾಳಿ, ಜಿಂಕೆ ಚರ್ಮ, ಕಾಡು ಹಂದಿ ಮಾಂಸ ಸಾಗಿಸುತ್ತಿದ್ದ ಐವರು ಅಂದರ್..!
Author: ಪಬ್ಲಿಕ್ ಫಸ್ಟ್ ನ್ಯೂಸ್ ಡೆಸ್ಕ್ (ಶ್ರೀ ಆದಿಶಕ್ತಿ ಮಿಡಿಯಾ ಪ್ರೈವೇಟ್ ಲಿಮಿಟೆಡ್)
ಶಿರಸಿ ಸಬ್ ಜೈಲಿನಿಂದ ಎಸ್ಕೇಪ್ ಆಗಿದ್ದವ ಮತ್ತೆ ಸಿಕ್ಕಿಬಿದ್ದ, ಅಷ್ಟಕ್ಕೂ ಆ ನಟೋರಿಯಸ್ ಪಡೆಯ ಸದಸ್ಯ ಸಿಕ್ಕಿದ್ದಾದ್ರೂ ಹೇಗೆ ಗೊತ್ತಾ..?
ಶಿರಸಿ ಸಬ್ ಜೈಲಿನಿಂದ ತಪ್ಪಿಸಿಕೊಂಡು ಎಸ್ಕೇಪ್ ಆಗಿದ್ದ ರಾಬರಿ ಗ್ಯಾಂಗ್ ನ ಸದಸ್ಯ ಆರೋಪಿ, ಪ್ರಕಾಶ್ ಸಿದ್ದಿ ಮತ್ತೆ ತಗಲಾಕ್ಕೊಂಡಿದ್ದಾನೆ. ಇನ್ನೇನು ದಟ್ಟ ಕಾಡಿನಲ್ಲಿ ಲೀನವಾಗಲು ಹೊಂಚು ಹಾಕಿದ್ದ ರಾಬರಿ ಪಡೆಯ ವಾರಸುದಾರನನ್ನು ಬಲೆಗೆ ಕೆಡವಿದ್ದಾರೆ. ಶಿರಸಿ ಗ್ರಾಮೀಣ ಠಾಣೆಯ ದಕ್ಷ ಪಿಎಸ್ಐ ಸೀತಾರಾಮ್ ಮತ್ತವರ ಟೀಂ, ಆರೋಪಿ ಪ್ರಕಾಶನ ರೆಕ್ಕೆ ಪುಕ್ಕಗಳನ್ನೇಲ್ಲ ಕಟ್ ಮಾಡಿ ಎತ್ತಾಕೊಂಡು ಬಂದಿದ್ದಾರೆ. ಶಿರಸಿ ತಾಲೂಕಿನ ಜಡ್ಡಿಮನೆ ಹರೆಪಾಲ್ ಗ್ರಾಮದ ಅಂಚಿನಲ್ಲಿ ಆರೋಪಿ ಮತ್ತೆ ಸಿಕ್ಕಿ ಬಿದ್ದಿದ್ದಾನೆ. ಈ ಮೂಲಕ ಆತಂಕಕ್ಕೆ...
ಶಿರಸಿ ಸಬ್ ಜೈಲಿನಿಂದ ರಾಬರಿ ಗ್ಯಾಂಗ್ ನ ಆರೋಪಿ ಗ್ರೇಟ್ ಎಸ್ಕೇಪ್..! ಜೈಲಾಧಿಕಾರಿಯ “ಕಡ್ಲೆ” ಪುರಾಣವಾ ಇದು..?
ಯಲ್ಲಾಪುರ ಪೊಲೀಸರು ಬಂಧಿಸಿದ್ದ ರಾಬರಿ ಗ್ಯಾಂಗ್ ನ ಆರೋಪಿಯೊಬ್ಬ ಜೈಲಿನಿಂದಲೇ ಎಸ್ಕೇಪ್ ಆಗಿದ್ದಾನೆ. ಶಿರಸಿ ಸಬ್ ಜೈಲಿನ ಅಧಿಕಾರಿಗಳ ನಿರ್ಲಕ್ಷದಿಂದ ಇವತ್ತು ಬೆಳ್ಳಂ ಬೆಳಿಗ್ಗೆ ಜೈಲಿನಿಂದಲೇ ಕಾಲ್ಕಿತ್ತಿದ್ದಾನೆ. ಅಂದಹಾಗೆ, ಶಿರಸಿ ಸಬ್ ಜೈಲಿನ ಅಧಿಕಾರಿಗಳು ಅದೇನು ಕಡೆದು ಗುಡ್ಡೆ ಹಾಕ್ತಿದ್ರೋ ಏನೋ ಗೊತ್ತಿಲ್ಲ. ಯಲ್ಲಾಪುರ ಪೊಲೀಸರ ಶ್ರಮವನ್ನೇಲ್ಲ ನೀರಲ್ಲಿ ಹೋಮ ಹಾಕಿದಂತೆ ಮಾಡಿದ್ದಾರೆ. ಆತ ಪ್ರಕಾಶ್ ಸಿದ್ದಿ..! 24 ವರ್ಷ ವಯಸ್ಸಿನ ಪ್ರಕಾಶ್ ಕ್ರಷ್ಣಾ ಸಿದ್ದಿ ಎಂಬುವ ಆರೋಪಿ ಇವತ್ತು ಬೆಳಿಗ್ಗೆ 8.45 ರ ಸುಮಾರಿಗೆ ಜೈಲಿನಿಂದಲೇ...
ತಡಸ ಬಳಿ ಭೀಕರ ಅಪಘಾತ, ಇಬ್ಬರು ಸ್ಥಳದಲ್ಲೇ ಸಾವು..! ಮೈಲಾರಕ್ಕೆ ಟ್ರಾಕ್ಟರ್ ನಲ್ಲಿ ಹೊರಟಿದ್ದವರು ಮಸಣ ಸೇರಿದ್ರು,
ಶಿಗ್ಗಾವಿ: ತಾಲೂಕಿನ ಹೊನ್ನಾಪುರ ಬಳಿ ಭೀಕರ ಅಪಘಾತವಾಗಿದೆ. ಶ್ರೀ ಕ್ಷೇತ್ರ ಮೈಲಾರ ದೇವರ ದರ್ಶನಕ್ಕೆಂದು ಹೊರಟ್ಟಿದ್ದವರು ಮಸಣಕ್ಕೆ ಸೇರಿದ್ದಾರೆ. ವೇಗವಾಗಿ ಬಂದ್ ಸ್ವಿಪ್ಟ್ ಕಾರು ಟ್ಯಾಕ್ಟರ್ ಗೆ ಹಿಂಬದಿಯಿಂದ ಗುದ್ದಿದ ಪರಿಣಾಮ, ಸ್ಥಳದಲ್ಲೆ ಇಬ್ಬರ ಸಾವನ್ನಪ್ಪಿ, ನಾಲ್ವರಿಗೆ ಗಂಭೀರ ಗಾಯವಾಗಿದೆ. ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಹೊನ್ನಾಪುರ ಗ್ರಾಮದ ಬಳಿ ಘಟನೆ ನಡೆದಿದ್ದು, ಹನುಮಂತಪ್ಪ ಮುಲಗಿ (55), ಚಂದ್ರು ಸಿರಕೋಳ (40) ಮೃತ ದುರ್ದೈವಿಗಳಾಗಿದ್ದಾರೆ. ಮೃತರು ಹುಬ್ಬಳ್ಳಿ ಸಮೀಪದ ಸೆರೆವಾಡ ಗ್ರಾಮದ ನಿವಾಸಿಗಳು ಎನ್ನಲಾಗಿದೆ. ನೂಲ್ವಿ ಗ್ರಾಮದಿಂದ...
ಬಸವೇಶ್ವರಿ ಮಾತೆಯವರ ಬಗ್ಗೆ ಸಚಿವ್ರು ಹಗುರವಾಗಿ ಮಾತಾಡಿಲ್ಲ- ಪತ್ರಿಕಾಗೋಷ್ಟಿಯಲ್ಲಿ ಸ್ಪಷ್ಟನೆ ನೀಡಿದ ಮುಖಂಡರು..!
ಬಸವೇಶ್ವರಿ ಮಾತೆಯವರಿಗೆ, ಸಚಿವ ಶಿವರಾಮ್ ಹೆಬ್ಬಾರ್ ನಿಂದನೆ ಮಾಡಿದ್ದಾರೆ ಅನ್ನೋ ಆರೋಪಕ್ಕೆ ಸಂಬಂಧಿಸಿದಂತೆ, ಇವತ್ತು ಮುಂಡಗೋಡಿನಲ್ಲಿ ಮತ್ತೊಂದು ಪತ್ರಿಕಾಗೋಷ್ಟಿ ನಡೆದಿದೆ. ಬಿಜೆಪಿ ಮುಖಂಡರು ಹಾಗೂ ಉಗ್ನಿಕೇರಿ ಗ್ರಾಮದ ಹಲವರು ಪತ್ರಿಕಾಗೋಷ್ಟಿ ನಡೆಸಿದ್ದಾರೆ. ಮಾತೆ ಬಸವೇಶ್ವರಿಯವರಿಗೆ ಸಚಿವ್ರು ಏನಂದ್ರೆ ಏನೂ ಅಂದಿಲ್ಲ, ಯಾವುದೇ ರೀತಿ ಹಗುರವಾಗಿ ಮಾತನಾಡಿಲ್ಲ ಅಂತಾ ಈ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಇನ್ನು, ಪತ್ರಿಕಾಗೋಷ್ಟಿಯಲ್ಲಿ ಭಾಗವಸಿದ್ದ ಬಿಜೆಪಿ ಮಂಡಲಾಧ್ಯಕ್ಷ ನಾಗಭೂಷಣ ಹಾವಣಗಿ, ಮಾಜಿ ಜಿಪಂ ಸದಸ್ಯ ರವಿಗೌಡ ಪಾಟೀಲ್, ಗುಡ್ಡಪ್ಪ ಕಾತೂರ್, ಉಮೇಶ್...
ಕಾಡು ಔಡಲ ಬೀಜ ಸೇವಿಸಿ 9 ವಿದ್ಯಾರ್ಥಿಗಳು ಅಸ್ವಸ್ಥ, ಆಸ್ಪತ್ರೆಗೆ ದಾಖಲು..!
ಶಿಗ್ಗಾವಿ: ಶಾಲೆಯ ಆವರಣದಲ್ಲೇ ಕಾಡು ಔಡಲ ಬೀಜ ತಿಂದ ಪರಿಣಾಮ, 9 ವಿದ್ಯಾರ್ಥಿಗಳು ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ ಘಟನೆ ಶಿಗ್ಗಾವಿ ತಾಲೂಕಿನ ನೀರಲಕಟ್ಟಿ ತಾಂಡಾದಲ್ಲಿ ನಡೆದಿದೆ. ಇಂದು ಮದ್ಯಾಹ್ನ ಶಾಲೆಯ ಆವರಣದಲ್ಲಿ ಕಾಡ ಔಡಲ ಬೀಜವನ್ನು ಸೇವಿಸಿ ವಾಂತಿ ಹಾಗೂ ಜ್ವರದಿಂದ ಸುಮಾರು 9 ಜನ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ. ಹೀಗಾಗಿ, ತಕ್ಷಣವೇ ಅಸ್ವಸ್ಥ ವಿದ್ಯಾರ್ಥಿಗಳನ್ನು, ಶಿಗ್ಗಾವಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಯಾವುದೇ ವಿದ್ಯಾರ್ಥಿಗಳಿಗೂ ಪ್ರಾಣಾಪಾಯವಿಲ್ಲ ಅಂತಾ ತಿಳಿದು ಬಂದಿದೆ. ವೈದ್ಯರು ಮಕ್ಕಳ ಆರೋಗ್ಯದ ಮೇಲೆ ನಿಗಾ ಇಟ್ಟಿದ್ದಾರೆ...
ಅಯ್ಯೋ ದೇವ್ರೆ, ಅತ್ತಿವೇರಿ ಬಸವೇಶ್ವರಿ ಮಾತೆಗೆ ಏಕವಚನದಲ್ಲೇ ನಿಂದಿಸಿದ್ರಾ ಸಚಿವ್ರು..? ಅಷ್ಟಕ್ಕೂ, ಪತ್ರಿಕಾಗೋಷ್ಟಿಯಲ್ಲಿ ಮಾತೆಯ ಭಕ್ತರ ಆಕ್ರೋಶ ಎಂತಾದ್ದು..?
ಮುಂಡಗೋಡ ತಾಲೂಕಿನ ರಾಜಕೀಯ ಈ ಮಟ್ಟಿಗೆ ಹೀನ ಸ್ಥಿತಿಗೆ ತಲುಪಿತಾ..? ಅದ್ರಲ್ಲೂ ಈಗ ಬಂದಿರೋ ಆರೋಪ ನಿಜವೇ ಆಗಿದ್ದರೆ, ಮಾನ್ಯ ಸಚಿವ ಶಿವರಾಮ್ ಹೆಬ್ಬಾರ್ ಸಾಹೇಬ್ರು ಈ ಮಟ್ಟಕ್ಕೆ ರಾಜಕೀಯ ಮಗ್ಗುಲಿಗೆ ಅನಿವಾರ್ಯವಾಗಿ ಹೊರಳಿಕೊಂಡ್ರಾ..? ಹಾಗಾಗಿದ್ದರೆ ನಿಜಕ್ಕೂ ಇದು ಯಲ್ಲಾಪುರ ಕ್ಷೇತ್ರದ ಮಟ್ಟಿಗೆ ಬಹುದೊಡ್ಡ ದುರಂತ. ಅವ್ರು ಮಾತೆ ಬಸವೇಶ್ವರಿ..! ಮುಂಡಗೋಡ ತಾಲೂಕಿನಲ್ಲಿ ಮನೆ ಮನೆಗೂ ಪರಿಚಿತರಾಗಿ, ಗುರು ಸ್ಥಾನ ಪಡೆದುಕೊಂಡಿರೋ ಅತ್ತಿವೇರಿ ಬಸವಧಾಮದ ಶ್ರೀಮಾತೆ ಬಸವೇಶ್ವರಿಗೆ ಸಚಿವ ಶಿವರಾಮ್ ಹೆಬ್ಬಾರ್, ಏಕ ವಚನದಲ್ಲಿ ನಿಂದಿಸಿದ್ದಾರೆ...
ಕತ್ತಲಲ್ಲಿ ಸುಸ್ಸು ಮಾಡೋಕೆ ಹೋಗಿದ್ದ ಪ್ರವಾಸಿಗ ಬಾವಿಯಲ್ಲಿ ಬಿದ್ದ..! ಮುಂದೇನಾಯ್ತು..?
ಗೋಕರ್ಣ: ಮೂತ್ರ ವಿಸರ್ಜನೆಗೆ ಹೋಗಿ ಪ್ರವಾಸಿಗನೊಬ್ಬ ಬಾವಿಗೆ ಬಿದ್ದು ಕೆಲಹೊತ್ತು ಅಲ್ಲೇ ಪರದಾಡಿದ ವಿಚಿತ್ರ ಘಟನೆ ಕುಮಟಾ ತಾಲೂಕಿನ ಗೋಕರ್ಣದ ಮೇಲಿನಕೇರಿಯಲ್ಲಿ ನಡೆದಿದೆ. ದೆಹಲಿ ಮೂಲದ ರಾಮೇಶ್ವರ್ ಬಾವಿಗೆ ಬಿದ್ದ ಪ್ರವಾಸಿಗನಾಗಿದ್ದಾನೆ. ಯುವತಿಯೊಂದಿಗೆ ಗೋಕರ್ಣದ ಪ್ರವಾಸಕ್ಕೆ ಬಂದಿದ್ದ ಯುವಕ, ಮೂತ್ರವಿಸರ್ಜನೆಗೆ ಎಂದು ಕತ್ತಲಲ್ಲಿ ತೆರಳಿದ್ದಾಗ ತೆರದ ಬಾವಿಗೆ ಬಿದ್ದಿದ್ದ, ಹೀಗಾಗಿ, ಬಾವಿಯಲ್ಲಿ ಬಿದ್ದು ಹೊರಬರಲಾರದೇ ಕೆಲಹೊತ್ತು ಅಲ್ಲೇ ಪರದಾಡಿದ್ದ. ನಂತರ ಅಗ್ನಿಶಾಮಕದಳದ ಸಿಬ್ಬಂದಿ ಹಾಗೂ ಪೊಲೀಸರಿಂದ ರಕ್ಷಣೆ ಮಾಡಲಾಗಿದೆ. ಗೋಕರ್ಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವಿ.ಎಸ್.ಪಾಟೀಲರ ಕಾರಿಗೆ ಹಿಂಬದಿಯಿಂದ ಗುದ್ದಿದ ಟ್ರಾಕ್ಟರ್,ಅದೃಷ್ಟವಶಾತ್ ತಪ್ಪಿದ ಅನಾಹುತ..!
ಮುಂಡಗೋಡ: ಮಾಜಿ ಶಾಸಕ, ಯಲ್ಲಾಪುರ ಕ್ಷೇತ್ರದ ಸಂಭವನೀಯ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಪಾಟೀಲರ ಕಾರಿಗೆ ಪುಟ್ಟ ಅಪಘಾತವಾಗಿದೆ. ಮುಂಡಗೋಡ ಪಟ್ಟಣದ ಬನ್ನಿಕಟ್ಟಿ ಹತ್ತಿರ ಕಬ್ಬು ತುಂಬುವ ಟ್ರಾಕ್ಟರ್ ಹಿಂಬದಿಗೆ ಎರಡು ಬಾರಿ ಗುದ್ದಿದ ಪರಿಣಾಮ ಕಾರಿನ ಹಿಂಬದಿಯ ಭಾಗ ಕೊಂಚ ಜಖಂ ಆಗಿದೆ. ಅದೃಷ್ಟವಶಾತ್ ವಿ.ಎಸ್.ಪಾಟೀಲರಿಗೆ ಯಾವುದೇ ಅಪಾಯವಾಗಿಲ್ಲ. ಮುಂಡಗೋಡಿನಿಂದ ಯಲ್ಲಾಪುರ ಕಡೆಗೆ ಹೊರಟಿದ್ದ ಮಾಜಿ ಶಾಸಕ ವಿ.ಎಸ್.ಪಾಟೀಲರ ಕಾರಿಗೆ, ಹಿಂದಿನಿಂದ ಅದೇ ಮಾರ್ಗದಲ್ಲಿ ಹೊರಟಿದ್ದ ಕಬ್ಬು ಸಾಗಿಸುವ ಟ್ರಾಕ್ಟರ್ ಗುದ್ದಿದೆ ಅಂತಾ ಹೇಳಲಾಗ್ತಿದೆ. ಹೀಗಾಗಿ, ತಕ್ಷಣವೇ ಸ್ಥಳೀಯರು...
ಮೀನುಗಾರಿಕೆಗೆ ತೆರಳಿದ್ದ ದೋಣಿ ಮುಳುಗಡೆ, ಮೀನುಗಾರ ಸಾವು..!
ಕುಮಟಾ: ತಾಲೂಕಿನ ಅಘನಾಶಿನಿ ನದಿಯಲ್ಲಿ ಮೀನುಗಾರಿಕೆ ಮಾಡುತ್ತಿದ್ದ ವೇಳೆ ದೋಳಿ ಮುಳುಗಡೆಯಾಗಿ ಮೀನುಗಾರ ಸಾವು ಕಂಡಿದ್ದಾನೆ. ಕುಮಟಾದ ಲುಕ್ಕೇರಿ ನಿವಾಸಿಯಾಗಿದ್ದ ವಿಘ್ನೇಶ್ವರ ಅಂಬಿಗ (24) ಮೃತ ದುರ್ದೈವಿಯಾಗಿದ್ದಾನೆ. ಮೀನುಗಾರಿಕೆಗೆ ತೆರಳಿದ್ದ ವೇಳೆ ಒಳನೀರಿನ ಹರಿವಿನಿಂದ ದೋಣಿ ಮುಳುಗಿದೆ. ಹೀಗಾಗಿ, ನೀರಲ್ಲಿ ಮುಳುಗಿ ತೀವ್ರ ಅಸ್ವಸ್ಥನಾಗಿದ್ದ ವಿಘ್ನೇಶ್ವರ ಆಸ್ಪತ್ರೆಗೆ ಸಾಗಿಸುವ ಸಾವು ಕಂಡಿದ್ದಾನೆ. ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.









