Home admin

Author: admin (ಶ್ರೀ ಆದಿಶಕ್ತಿ ಮಿಡಿಯಾ ಪ್ರೈವೇಟ್ ಲಿಮಿಟೆಡ್)

Post
ಭಾರೀ ಮಳೆ; ಜಿಲ್ಲೆಯ ಈ ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢ  ಶಾಲೆಗಳಿಗೆ ನಾಳೆಯೂ ರಜೆ..!

ಭಾರೀ ಮಳೆ; ಜಿಲ್ಲೆಯ ಈ ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ನಾಳೆಯೂ ರಜೆ..!

School Holiday News; ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಮುನ್ನೆಚ್ಚರಿಕೆ ಹಿನ್ನೆಲೆ, ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಹೀಗಾಗಿ, ನಾಳೆ ಜೂನ್ 13 ರಂದು ಉತ್ತರ ಕನ್ನಡ ಜಿಲ್ಲೆಯ ಕೆಲ ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ತಾಲೂಕಿನ ಎಲ್ಲಾ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ.

Post
ಶಕ್ತಿ ಯೋಜನೆ: 7.41 ಕೋಟಿ ಮಹಿಳೆಯರ ಉಚಿತ ಪ್ರಯಾಣ..!

ಶಕ್ತಿ ಯೋಜನೆ: 7.41 ಕೋಟಿ ಮಹಿಳೆಯರ ಉಚಿತ ಪ್ರಯಾಣ..!

Guarantee News: ರಾಮನಗರ : ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆ ಜಾರಿಯಾಗಿ 2 ವರ್ಷ ಸಂದಿದೆ. ಈ ಅವಧಿಯಲ್ಲಿ 7 ಕೋಟಿ 41 ಲಕ್ಷ ಮಹಿಳೆಯರು ಶೂನ್ಯ ದರದ ಟಿಕೆಟ್ ಪಡೆದು ಪ್ರಯಾಣ ಮಾಡಿದ್ದಾರೆ. 2023ರ ಜೂನ್ 11 ರಿಂದ 2025ರ ಜೂನ್ 11ರವರೆಗೆ ಅಂದರೆ ಎರಡು ವರ್ಷಗಳಲ್ಲಿ 7,41,90,451 ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದು, ಇದರ ಟಿಕೆಟ್ ಮೌಲ್ಯ 206 ಕೋಟಿ ರುಪಾಯಿಗಳಾಗಿದೆ. ಯೋಜನೆ ಪ್ರಾರಂಭವಾದ ದಿನದಿಂದಲೂ ಮಹಿಳೆಯರಿಂದ ಪ್ರಶಂಸೆ ವ್ಯಕ್ತವಾಗುತ್ತಿದ್ದು, ಭರ್ಜರಿಯಾಗಿ ಯಶಸ್ಸು...

Post
ಮತ್ತಷ್ಟು ಹೆಚ್ಚಾಯ್ತು ಚಿನ್ನದ ಬೆಲೆ : ಗುರುವಾರ 10ಗ್ರಾಂ 24 ಕ್ಯಾರೆಟ್ ಬಂಗಾರದ ಬೆಲೆ ₹880 ಜಿಗಿತ..!

ಮತ್ತಷ್ಟು ಹೆಚ್ಚಾಯ್ತು ಚಿನ್ನದ ಬೆಲೆ : ಗುರುವಾರ 10ಗ್ರಾಂ 24 ಕ್ಯಾರೆಟ್ ಬಂಗಾರದ ಬೆಲೆ ₹880 ಜಿಗಿತ..!

Gold Price Today : ಭಾರತೀಯ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆಯು ಸತತ ಏರಿಕೆಗೆ ಸಾಕ್ಷಿಯಾಗಿದ್ದು, ಬೆಳ್ಳಿ ಬೆಲೆಯಲ್ಲಿ ಅಲ್ಪ ಕುಸಿತ ದಾಖಲಾಗಿದೆ. ಬುಧವಾರ 820 ರೂಪಾಯಿ ಏರಿಕೆಗೊಂಡಿದ್ದ 10 ಗ್ರಾಂ ಶುದ್ಧ ಚಿನ್ನದ ಬೆಲೆ ಇದೀಗ ಮತ್ತಷ್ಟೇ ಹೆಚ್ಚಾಗಿದ್ದು, ಆಭರಣ ಖರೀದಿದಾರರ ಜೇಬಿಗೆ ಹೊರೆಯಾಗಿದೆ. ಆದ್ರೆ ಬೆಳ್ಳಿ ಬೆಲೆಯಲ್ಲಿ ಕೆಜಿಗೆ ಕೊಂಚ ವ್ಯತ್ಯಾಸಗೊಂಡು ವಹಿವಾಟು ನಡೆಸಿದೆ. ಕಳೆದ ವಾರದಲ್ಲಿ ಸತತ ನಾಲ್ಕು ದಿನ ಏರಿಕೆಗೊಂಡಿದ್ದ ಚಿನ್ನದ ಬೆಲೆಯು ನಂತರದ 4 ವಹಿವಾಟುಗಳಲ್ಲಿ ಇಳಿಕೆಗೆ ಸಾಕ್ಷಿಯಾಗಿತ್ತು. ಆದ್ರೀಗ ಸತತ...

Post
ಏರ್ ಇಂಡಿಯಾ ವಿಮಾನ ಪತನ; ಕುಸಿದು ಬಿದ್ದ ಟಾಟಾ ಸ್ಟಾಕ್ಸ್, ಬೋಯಿಂಗ್ ಷೇರು 8% ಇಳಿಕೆ..!

ಏರ್ ಇಂಡಿಯಾ ವಿಮಾನ ಪತನ; ಕುಸಿದು ಬಿದ್ದ ಟಾಟಾ ಸ್ಟಾಕ್ಸ್, ಬೋಯಿಂಗ್ ಷೇರು 8% ಇಳಿಕೆ..!

Air India Plane Crash: ಅಹಮದಾಬಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ಏರ್ ಇಂಡಿಯಾದ ಪ್ರಯಾಣಿಕ ವಿಮಾನ AI171 ಭೀಕರವಾಗಿ ಪತನಗೊಂಡಿದೆ. ಇದರ ಬೆನ್ನಲ್ಲೇ ಏರ್‌ಲೈನ್ ಷೇರುಗಳು ತೀವ್ರ ಕುಸಿತ ಕಂಡವು. ಲಂಡನ್‌ನ ಗ್ಯಾಟ್‌ವಿಕ್‌ಗೆ ಹೊರಟಿದ್ದ ಬೋಯಿಂಗ್ 787-8 ಡ್ರೀಮ್‌ಲೈನರ್, ಟೇಕ್ಆಫ್‌ ಆದ ನಂತರ ಅಪಘಾತ ಸಂಭವಿಸಿದ್ದು, ಇದು ವಾಯುಯಾನ ವಲಯದಲ್ಲಿ ತೀವ್ರ ಆಘಾತವನ್ನುಂಟುಮಾಡಿದೆ. ಇದರ ಪರಿಣಾಮ ಪ್ರಮುಖ ಏರ್‌ಲೈನ್ ಕಂಪನಿಗಳ ಷೇರುಗಳು ಮಧ್ಯಾಹ್ನ ವಹಿವಾಟಿನಲ್ಲಿ ಗಮನಾರ್ಹವಾಗಿ ಕುಸಿತಕ್ಕೆ ಒಳಗಾದವು. ವಿಮಾನದಲ್ಲಿ 242...

Post
ವಿಮಾನ ಪತನ; 242 ಪ್ರಯಾಣಿಕರೂ ಸಾವು, ವಿಮಾನ ಬಿದ್ದಿದ್ದು ಹಾಸ್ಟೆಲ್ ಕಟ್ಟಡದ ಮೇಲೆ; 20ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯ..!

ವಿಮಾನ ಪತನ; 242 ಪ್ರಯಾಣಿಕರೂ ಸಾವು, ವಿಮಾನ ಬಿದ್ದಿದ್ದು ಹಾಸ್ಟೆಲ್ ಕಟ್ಟಡದ ಮೇಲೆ; 20ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯ..!

Air India Plane Crash: ಅಹಮದಾಬಾದ್: ಅಹಮದಾಬಾದ್ ವಿಮಾನ ನಿಲ್ದಾಣದಿಂದ ಟೇಕಾಫ್ ಆದ ಕೆಲವೇ ಹೊತ್ತಿನಲ್ಲಿ 242 ಪ್ರಯಾಣಿಕರಿದ್ದ ವಿಮಾನ ಇಂದು ಪತನಗೊಂಡಿದೆ. ವಿಮಾನ ಪತನಕ್ಕೂ ಮುನ್ನ ಪೈಲಟ್ ಕೊನೇಯ ಎಚ್ಚರಿಕೆಯ ಸಂದೇಶ ರವಾನಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯ ವಿಮಾನದಲ್ಲಿದ್ದ 242 ಪ್ರಯಾಣಿಕರೂ ಕೂಡ ದುರ್ಮರಣವಾಗಿದ್ದಾರೆ ಅನ್ನೊ ಮಾಹಿತಿ ಲಭ್ಯವಾಗಿದೆ. ಇನ್ನು ಹಾಸ್ಟೆಲ್ ಮೇಲೆ ವಿಮಾನ ಪತನಗೊಂಡಿರೋ ಕಾರಣಕ್ಕೆ ಅಲ್ಲಿನ ಸಾವು ನೋವಿನ ಬಗ್ಗೆ ಇನ್ನೂ ನಿಖರ ಮಾಹಿತಿ ಲಭ್ಯವಾಗಿಲ್ಲ. ಎಟಿಸಿಗೆ ‘ಮೇ ಡೇ ಕಾಲ್’​...

Post
ಏರ್ ಇಂಡಿಯಾ ವಿಮಾನ ಪತನ, ಜಗತ್ತನ್ನೇ ಬೆಚ್ಚಿ ಬೀಳಿಸಿದ ಬಹುದೊಡ್ಡ ದುರಂತ..! ವಿಮಾನದಲ್ಲಿದ್ದ 242 ಪ್ರಯಾಣಿಕರು ಸಾವು?

ಏರ್ ಇಂಡಿಯಾ ವಿಮಾನ ಪತನ, ಜಗತ್ತನ್ನೇ ಬೆಚ್ಚಿ ಬೀಳಿಸಿದ ಬಹುದೊಡ್ಡ ದುರಂತ..! ವಿಮಾನದಲ್ಲಿದ್ದ 242 ಪ್ರಯಾಣಿಕರು ಸಾವು?

Air India Plane Crash: ಅಹಮದಾಬಾದ್ : 232 ಪ್ರಯಾಣಿಕರು ಮತ್ತು 10 ಸಿಬ್ಬಂದಿಯಿದ್ದ ಅಹಮದಾಬಾದಿನಿಂದ ಲಂಡನ್‌ನ ಗ್ಯಾಟ್ವಿಕ್ ವಿಮಾನ ನಿಲ್ದಾಣಕ್ಕೆ ಹೊರಟಿದ್ದ ಏರ್ ಇಂಡಿಯಾ ವಿಮಾನ AI-171 ಗುರುವಾರಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಪತನಗೊಂಡಿತು. ಪ್ರಾಥಮಿಕ ಮಾಹಿತಿಯ ಪ್ರಕಾರ, ವಿಮಾನವು ಮೇಘನಿ ನಗರ ಬಳಿ ಪತನಗೊಂಡಿದ್ದು, ಆ ಪ್ರದೇಶದಲ್ಲಿ ಬೃಹತ್‌ ಬೆಂಕಿ ಹಾಗೂ ನಂತರ ಹೊಗೆಯ ಉಂಡೆಗಳು ಕಾಣಿಸಿವೆ. ದುರಂತದಲ್ಲಿ ವಿಮಾನದಲ್ಲಿದ್ದ 242 ಪ್ರಯಾಣಿಕರು ಸಾವು ಕಂಡಿದ್ದಾರೆ...

Post
ಭೂ ಕುಸಿತ ಪ್ರದೇಶದಲ್ಲಿ ವಾಹನ ನಿಲುಗಡೆಗೆ ನಿಷೇಧ ; ಡಿಸಿ ಲಕ್ಷ್ಮೀಪ್ರಿಯ ಆದೇಶ

ಭೂ ಕುಸಿತ ಪ್ರದೇಶದಲ್ಲಿ ವಾಹನ ನಿಲುಗಡೆಗೆ ನಿಷೇಧ ; ಡಿಸಿ ಲಕ್ಷ್ಮೀಪ್ರಿಯ ಆದೇಶ

Dc Order; ಕಾರವಾರ; ಜಿಲ್ಲೆಯಲ್ಲಿ ಮುಂಗಾರು ಮಳೆ ಆಗಮಿಸಿದ್ದು, ಭಾರೀ ಮಳೆ ಸುರಿಯುತ್ತಿರುವುದರಿಂದ ಭೂ ಕುಸಿತವಾಗುವ ರಾಷ್ಟ್ರೀಯ ಹೆದ್ದಾರಿಯ 19 ಸ್ಥಳಗಳಲ್ಲಿ ಎಲ್ಲಾ ತರಹದ ವಾಹನಗಳ ನಿಲುಗಡೆಯನ್ನು ಜೂನ್ 12 ರಿಂದ ಮಳೆಗಾಲ ಮುಕ್ತಾಯವಾಗುವವರೆಗೆ ನಿರ್ಭಂಧಿಸಿ, ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯ ಆದೇಶಿಸಿದ್ದಾರೆ.

Post
ಬೈಕ್ ಕಳ್ಳತನ ಕೇಸ್ ಭೇದಿಸಿದ ಮುಂಡಗೋಡ ಪೊಲೀಸ್ರು, ಮಂಚಿಕೇರಿಯ ಆರೋಪಿ ಅರೆಸ್ಟ್..!

ಬೈಕ್ ಕಳ್ಳತನ ಕೇಸ್ ಭೇದಿಸಿದ ಮುಂಡಗೋಡ ಪೊಲೀಸ್ರು, ಮಂಚಿಕೇರಿಯ ಆರೋಪಿ ಅರೆಸ್ಟ್..!

Mundgod Crime News; ಮುಂಡಗೋಡ ಪೊಲೀಸರು ಬೈಕ್ ಕಳ್ಳತನ ಪ್ರಕರಣವನ್ನು ಭೇದಿಸಿದ್ದಾರೆ. ಬೈಕ್ ಕಳ್ಳತನ ಮಾಡಿದ್ದ ಬೈಕ್ ಕಳ್ಳನನ್ನು ಹೆಡೆಮುರಿ ಕಟ್ಟಿರೋ ಪೊಲೀಸ್ರು ಯಲ್ಲಾಪುರ ತಾಲೂಕಿನ ಮಂಚಿಕೇರಿಯಿಂದ ಎಳೆದು ತಂದಿದ್ದಾರೆ. ಅಂದಹಾಗೆ, ಬೈಕ್ ಕಳ್ಳತನ ಮಾಡಿದ್ದ ಆರೋಪಿ, ಯಲ್ಲಾಪುರ ತಾಲೂಕಿನ ಮಂಚಿಕೇರಿಯ ನಾಸಿರ್ ಅಹಮ್ಮದ್ ಇಮಾಮಸಾಬ್ ಸಯ್ಯದ್‌ “ಸಿದ್ದಿ”(35) ಎಂಬಾತನನ್ನು ಬಂಧಿಸಿದ್ದಾರೆ. ಅಂದಹಾಗೆ, ಪಟ್ಟಣ ಪಂಚಾಯತಿಯ ಸಭಾಭವನದ ಹತ್ತಿರ ಕಳೆದ ಮೇ 30 ರಂದು, ಲಾಕ್ ಮಾಡಿ ನಿಲ್ಲಿಸಿದ್ದ ಪ್ಲಾಟಿನಾ ಬೈಕನ್ನು ಕಳ್ಳತನ ಮಾಡಲಾಗಿತ್ತು. ಹಾಗಂತ, ಮುಂಡಗೋಡ...

Post
ಧಾರಾಕಾರ ಮಳೆ: ಚರಂಡಿ ನೀರಲ್ಲಿ ಕೊಚ್ಚಿಕೊಂಡು ಹೋದ ವ್ಯಕ್ತಿ..!

ಧಾರಾಕಾರ ಮಳೆ: ಚರಂಡಿ ನೀರಲ್ಲಿ ಕೊಚ್ಚಿಕೊಂಡು ಹೋದ ವ್ಯಕ್ತಿ..!

Rain Problem; ಹುಬ್ಬಳ್ಳಿಯಲ್ಲಿ ಧಾರಾಕಾರವಾಗಿ ಸುರಿದ ಮಳೆರಾಯನ ಅಬ್ಬರಕ್ಕೆ ವ್ಯಕ್ತಿಯೋರ್ವ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ. ಕಸಬಾಪೇಟ ಪೊಲೀಸ್ ಠಾಣೆ ವ್ಯಾಪ್ತಿಯ ಬೆಳಗಲಿ ರಸ್ತೆಯಲ್ಲಿ ಘಟನೆ ನಡೆದಿದ್ದು, ರಸ್ತೆಯ ಪಕ್ಕದಲ್ಲಿರುವ ಚರಂಡಿಯಲ್ಲಿ ಆಯ ತಪ್ಪಿ ಜಾರಿ ಬಿದ್ದು ಕೊಚ್ಚಿ ಕೊಂಡು ಹೋಗಿದ್ದಾನೆ. ಬೀರಬಂದ ಓಣಿಯ ಹುಸೇನ ಕಳಸ ಎಂಬುವವನೇ ಕೊಚ್ಚಿಕೊಂಡು ಹೋಗಿರುವ ವ್ಯಕ್ತಿಯಾಗಿದ್ದು, ಪೊಲೀಸ್ ರಿಂದ ಹುಡುಕಾಟ ನಡೆದಿದೆ. ಇದನ್ನೂ ಓದಿ👉 ಭಾರೀ ಮಳೆ ಮುನ್ನೆಚ್ಚರಿಕೆ ಹಿನ್ನೆಲೆ, ಜಿಲ್ಲೆಯ ಈ ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ರಜೆ...

Post
ಭಾರೀ ಮಳೆ ಮುನ್ನೆಚ್ಚರಿಕೆ ಹಿನ್ನೆಲೆ, ಜಿಲ್ಲೆಯ ಈ ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ರಜೆ..!

ಭಾರೀ ಮಳೆ ಮುನ್ನೆಚ್ಚರಿಕೆ ಹಿನ್ನೆಲೆ, ಜಿಲ್ಲೆಯ ಈ ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ರಜೆ..!

School holiday News; ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಮುನ್ನೆಚ್ಚರಿಕೆ ಹಿನ್ನೆಲೆ, ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಹೀಗಾಗಿ, ಇಂದು ಜೂನ್ 12 ರಂದು ಉತ್ತರ ಕನ್ನಡ ಜಿಲ್ಲೆಯ ಕೆಲ ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ತಾಲೂಕಿನ ಎಲ್ಲಾ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ.

error: Content is protected !!