Police Raid; ಶಿರಸಿ ಸಮೀಪದ ಹೋಂ ಸ್ಟೇ ನಲ್ಲಿ ಅಂದರ್ ಬಾಹರ್ ಆಡುತ್ತಿದ್ದವರ ಹೆಡೆಮುರಿ ಕಟ್ಟಿರೋ ಕೇಸ್ ಹಿಂದೆ ಮುಂಡಗೋಡ ಪೊಲೀಸ್ರ ಬ್ರಿಲ್ಲಿಯಂಟ್ ಟ್ರೇಸಿಂಗ್ ಕಹಾನಿ ಇದೆ, ಹಾವೇರಿಯಿಂದ ಬಂದಿದ್ದ ಅದೊಂದು ಫೋನ್ ಕಾಲ್ ಬೆನ್ನತ್ತಿ ಹೋದ ರೋಚ”ಕತೆ”ಯಿದೆ. ಡಿವೈಎಸ್ಪಿ ಮೇಡಮ್ಮ ರವರ ದಕ್ಷತೆ ಇದೆ. ಈ ಕಾರಣಕ್ಕಾಗೆ ಎರಡು ವರ್ಷಗಳಿಂದ ಯಾರೂ ಕಂಡರಿಯದ ಬೃಹತ್ ಪೊಲೀಸ್ ದಾಳಿ ಯಶಸ್ವಿಯಾಗಿ ನಡೆದು ಹೋಗಿದೆ. ಅಸಲು, ದಾಳಿಯ ಕೆಲವು ರೋಚಕ ಕಹಾನಿಯನ್ನು ನಾವಿಲ್ಲಿ ನಿಮ್ಮ ಮುಂದೆ ಇಡ್ತಿದಿವಿ ಓದಿ..
ಅವ್ರೇಲ್ಲ ಇಲ್ಲಿಯವರಲ್ಲ…!
ಶಿರಸಿ ಸಮೀಪದ ಬೈರುಂಬೆ ಬಳಿಯ ಹೋಂ ಸ್ಟೇ ನಲ್ಲಿ ಅಂದರ್ ಬಾಹರ್ ಆಟದಲ್ಲಿ ಮೈ ಮರೆತಿದ್ದವರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಅಂದಹಾಗೆ, ಅಲ್ಲಿ ಪೊಲೀಸರ ಬಲೆಗೆ ಬಿದ್ದವರೇಲ್ಲ ಇಲ್ಲಿಯವರಲ್ಲ, ಬಹುತೇಕ ಹಾವೇರಿ, ಶಿಗ್ಗಾವಿ, ಹಾನಗಲ್, ರಾಣೇಬೆನ್ನೂರು, ದಾವಣಗೇರೆಯವರೇ ತಗಲ್ಲಾಕ್ಕೊಂಡಿದ್ದಾರೆ. ಅಸಲು, ಬಹುತೇಕ ಇವ್ರೇಲ್ಲ ಹಾವೇರಿ ಜಿಲ್ಲೆಯ ಇಸ್ಪೀಟು “ಅಡ್ಡೆಗಳ” ಖಾಯಂ ರಹವಾಸಿಗಳು ಎನ್ನಲಾಗ್ತಿದೆ. ಆದ್ರೆ, ಹಾವೇರಿಗೆ ಇತ್ತಿಚೆಗಷ್ಟೇ ನೂತನ ಎಸ್ಪಿ ಬಂದಿರೋ ಕಾರಣಕ್ಕಾಗಿ, ಅಲ್ಲಿನ ಇಸ್ಪೀಟು ಅಡ್ಡೆಗಳು ಕೊಂಚ ಬಾಗಿಲು ಜಡಿದುಕೊಂಡಿವೆ. ಈ ಕಾರಣಕ್ಕಾಗೇ ಅಲ್ಲಿನ ದಂಧೆಕೋರರೇಲ್ಲ, ಉತ್ತರ ಕನ್ನಡದ ಕಾಡುಗಳಲ್ಲಿನ ರೆಸಾರ್ಟುಗಳು, ಹೋಂ ಸ್ಟೇಗಳತ್ತ ಮುಖ ಮಾಡಿದ್ದಾರೆ ಎನ್ನಲಾಗ್ತಿದೆ.
ಮುಂಡಗೋಡ ಪೊಲೀಸ್ರಿಗೆ ಬಂತು ಬಾತ್ಮಿ..!
ಅಸಲು, ನಿನ್ನೆ ರಾತ್ರಿ ಶಿರಸಿಯಲ್ಲಿ ನಡೆದ ಬಹುದೊಡ್ಡ ಪೊಲೀಸ್ ದಾಳಿಯ ಹಿಂದೆ ರೋಚ”ಕತೆ” ಇದೆ. ಮುಂಡಗೋಡ ಪೊಲೀಸರಿಗೆ ಮಟಮಟ ಮದ್ಯಾನ ಬಂದ ಅದೊಂದು ಫೋನ್ ಕಾಲ್ ಇಡೀ ಪ್ರಕರಣಕ್ಕೆ ಮುಹೂರ್ತ ಇಟ್ಟಿರತ್ತೆ. ಹೌದು, ಮುಂಡಗೋಡ ಪೊಲೀಸ್ ಠಾಣೆಯ ಪಿಐ ರಂಗನಾಥ್ ನೀಲಮ್ಮನರ್ ಹಾಗೂ ಕ್ರೈಂ ಟೀಂಗೆ ನಿನ್ನೆ ಅಂದ್ರೆ, ಬುಧವಾರ ಮದ್ಯಾಹ್ನವೇ, ಅದೊಂದು ಫೋನ್ ಕಾಲ್ ಬಂದಿರತ್ತೆ.. ಆ ಕಡೆಯಿಂದ ಮಾತಾಡಿದವನು, “ಸಾರ್ ನಮ್ಮ ಕಡೆ ಇವಾಗ ಇಸ್ಪೀಟು ಅಡ್ಡೆ ಎಲ್ಲಾ ಬಂದ್ ಅದಾವ್ ರೀ” ಹೊಸಾ ಎಸ್ಪಿ ಮೇಡಮ್ಮು ಬಂದಿದ್ದಕ್ ಆಟ ಬಂದ್ ಆಗೇದ್ ರೀ” ಅದಕ್ಕ ನಮ್ಮಕಡೆ ಮಂದಿ ನಿಮ್ಮ ಊರಿನ ಕಡೆ ಬಂದಾರರಿ, ಅವ್ರನ್ನ ನೀವು ಅಲ್ಲಿ ಆಡಾಕ್ ಕೊಡಬ್ಯಾಡ್ರಿ ಅಂತ” ಹಾವೇರಿ ಮೂಲದವನೊಬ್ಬ ಮಾತಾಡಿ ಕಾಲ್ ಕಟ್ ಮಾಡಿದ್ದ. ಅದ್ರ ಜೊತೆ ಅಲ್ಲಿ ಆಟಕ್ಕೆ ಬಂದಿದ್ದವನೊಬ್ಬನ ಫೊನ್ ನಂಬರ್ ಕೂಡ ಕೊಟ್ಟಿದ್ದ. ಅಷ್ಟೇ,…
ಪಿಐ ರಂಗನಾಥ್ ಆ್ಯಂಡ್ ಟೀಂ ಅಲರ್ಟ್..!
ತಕ್ಷಣವೇ ಅಲರ್ಟ್ ಆಗಿದ್ದ, ಮುಂಡಗೋಡ್ ಪಿಐ ರಂಗನಾಥ್ ನೀಲಮ್ಮನವರ್ ತಮ್ಮೊಂದಿಗೆ ಕ್ರೈಂ ಟೀಮಿನ ಕೊಟೇಶ್ ನಾಗರೊಳ್ಳಿ, ಅಣ್ಣಪ್ಪ ಬುಡಗೇರ್ ಜೊತೆ ಸೇರಿ, ಅವ್ರನ್ನ ಬೆನ್ನತ್ತಿದ್ದರು. ಬಹುತೇಕ ಮುಂಡಗೋಡಿನ ಕಾಡಿನಲ್ಲೋ ಅಥವಾ ಇಲ್ಲಿನ ಕೆಲ ರೆಸಾರ್ಟುಗಳಲ್ಲೋ ಬಂದು ಆಟಕ್ಕೆ ಕೂರಬಹುದು ಅಂತಾ ಅಂದಾಜಿಸಿದ್ದ ಮುಂಡಗೋಡ ಪೊಲೀಸರಿಗೆ, ಆ ಖತರ್ನಾಕ ಇಸ್ಪೀಟು ಗ್ಯಾಂಗ್ ಶಿರಸಿ ಕಡೆಗೆ ಸಾಗುತ್ತಿರೋ ಸೂಚನೆ ಸಿಗತ್ತೆ. ಎನೇ ಆಗಲಿ ಬಿಡಲೇ ಬಾರ್ದು ಅಂತಾ ತೀರ್ಮಾನಿಸಿದ್ದ, ಮುಂಡಗೋಡಿನ ಕ್ರೈಂ ಟೀಂ, ಶಿರಸಿ ಕಡೆಗೆ ಹೆಜ್ಜೆ ಹಾಕತ್ತೆ.
ಮೇಡಂ ಗೆ ಮಾಹಿತಿ ಕೊಟ್ರು..!
ಯಾವಾಗ, “ಇಸ್ಪೀಟು ಗ್ಯಾಂಗ್” ಹಾವೇರಿಯಿಂದ ಮುಂಡಗೋಡ ಮಾರ್ಗವಾಗಿ ಶಿರಸಿ ಕಡೆಗೆ ಮುಖ ಮಾಡಿದ್ರೋ, ಅವಾಗಲೇ ಮುಂಡಗೋಡಿನ ಪೊಲೀಸ್ರು, ಶಿರಸಿಯ ಖಡಕ್, ದಕ್ಷ ಡಿವೈಎಸ್ಪಿ ಶ್ರೀಮತಿ ಗೀತಾ ಪಾಟೀಲ್ ಮೇಡಮ್ಮಿಗೆ ತಮಗೆ ಬಂದ ಬಾತ್ಮಿ ಹಾಗೂ ತಾವು ಟ್ರೇಸ್ ಮಾಡಿದ ಸಂಗತಿ ಹೇಳ್ತಾರೆ. ಆಗಲೇ ನೋಡಿ ಖಡಕ್ ಡಿವೈಎಸ್ಪಿ ಗೀತಾ ಪಾಟೀಲರು ಮುಂಡಗೋಡಿನ ಕ್ರೈಂ ಟೀಮಿನ ಜೊತೆ ಮತ್ತಷ್ಟು ಪೊಲೀಸರೊಂದಿಗೆ ಸೇರಿ ಕಾರ್ಯಾಚರಣೆಗೆ ಇಳಿತಾರೆ.
ಆರೋಪಿಗಳ ಮೊಬೈಲ್ ಆಫ್..!
ಅಸಲು, ಆ ಒಂದು ಮೊಬೈಲ್ ನಂಬರನ್ನೇ ಬೆನ್ನತ್ತಿ ಹೊರಟಿದ್ದ ಟೀಂ ಗೆ, ಅಲ್ಲೊಂದು ಸವಾಲು ಎದುರಾಗಿರತ್ತೆ. ಶಿರಸಿ ಬಳಿಯ ಬೈರುಂಬೆ ವರೆಗೂ ಹೋಗಿದ್ದ ಆರೋಪಿ ಮೊಬೈಲ್ ನಂಬರ್ ಸ್ವಿಚ್ಡ್ ಆಫ್ ಆಗಿ ಬಿಡತ್ತೆ. ಆಗಲೇ ಬೆನ್ನತ್ತಿ ಇನ್ನೇನು ಸಮೀಪವೇ ಇದ್ದ ಪೊಲೀಸರಿಗೆ, ಅಲ್ಲಿ ಇದ್ದ ಮೂರು ರೆಸಾರ್ಟುಗಳಲ್ಲಿ ಯಾವುದರಲ್ಲಿ ದಂಧೆ ನಡೀತಿದೆ ಅನ್ನೋದನ್ನ ತಿಳಿಯಲು ಹೆಚ್ಚು ಹೊತ್ತು ಬೇಕಾಗಲಿಲ್ಲ. ಬೈರುಂಬೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಗಸಾಲ ಬಳಿಯ VRR ಹೋಂ ಸ್ಟೇಯಲ್ಲಿ ಕಿಲಾಡಿಗಳ ಆಟ ನಡೀತಿದೆ ಅನ್ನೋದು ಕನ್ಪರ್ಮ ಆಗಿರತ್ತೆ. ತಕ್ಷಣವೇ ಥೇಟು ಸಿನಿಮಾ ಸ್ಟೈಲಿನಲ್ಲೇ ದಾಳಿ ಮಾಡಿದ DySp ಗೀತಾ ಪಾಟೀಲ್ ನೇತೃತ್ವದ ಟೀಂ ಬರೋಬ್ಬರಿ 19 ಜನರನ್ನು ಮಿಸುಕಾಡಲೂ ಆಗದ ಹಾಗೆ ಬಲೆಗೆ ಬೀಳಿಸತ್ತೆ. 49 ಲಕ್ಷ ಹಣ, ಕಾರು, ಮೊಬೈಲ್ ಸೇರಿದಂತೆ ಇನ್ನಿತರ ವಸ್ತುಗಳನ್ನು ಜಪ್ತಿ ಮಾಡಿರತ್ತೆ.
ಉತ್ತರ ಕನ್ನಡ ಜಿಲ್ಲಾ ಎಸ್ಪಿ ದೀಪನ್, ಎಂ.ಎನ್., ಹೆಚ್ಚುವರಿ ಎಸ್ಪಿ ಜಿ. ಕೃಷ್ಣಮೂರ್ತಿ, ಕೆ., ಜಗದೀಶ ಎಂ. ಕೆ. ರವರ ಮಾರ್ಗದರ್ಶನದಲ್ಲಿ ಶಿರಸಿ ಡಿವೈಎಸ್ಪಿ ಶ್ರೀಮತಿ ಗೀತಾ ಪಾಟೀಲ್ ಇವರ ನೇತೃತ್ವದಲ್ಲಿ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯ ತನಿಖಾ ಪಿಎಸ್ ಐ ಅಶೋಕ ಆರ್ ರಾಠೋಡ, ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯ ಸಿಬ್ಬಂಧಿಗಳಾದ ಎ.ಎಸ್.ಐ ಪ್ರದೀಪ ರೇವಣಕರ, ಸಂತೋಷ ಕಮಟಗೇರಿ, ರಾಘವೇಂದ್ರ ಜಿ. ಗಣಪತಿ ಪಟಗಾರ, ಷಣ್ಮುಖ ಮಿರಾಶಿ,ರವಿ ಉಕ್ಕಡಗಾತ್ರಿ, ಭರತಕುಮಾರ, ಮಾರುತಿ ಗೌಡ ಹಾಗೂ ಮುಂಡಗೋಡ ಪೊಲೀಸ್ ಠಾಣೆಯ ಪಿ.ಸಿ ಕೋಟ್ರೇಶ ನಾಗರವಳ್ಳಿ, ಅಣ್ಣಪ್ಪ ಬುಡಗೇರಿ ಹಾಗೂ ಚಾಲಕರಾದ ಕೃಷ್ಣ ರೇವಣಕರ, ಮೌಲಾಲಿ ಮರಗಡಿ ಇವರುಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.