ಮಧ್ಯಪ್ರಾಚ್ಯ ದೇಶಗಳಲ್ಲಿ ಯುದ್ಧದ ಕಾರ್ಮೋಡ ಹಿನ್ನೆಲೆ, ಮುಂಡಗೋಡ ಸೇರಿ ಉತ್ತರ ಕನ್ನಡ ಜಿಲ್ಲೆಯಿಂದ ಸಜ್ಜಾಗಿದ್ದ ಮುಸ್ಲಿಂರ ಉಮ್ರಾ ಯಾತ್ರೆ ರದ್ದು..!

ಮದ್ಯಪ್ರಾಚ್ಯ ದೇಶಗಳಲ್ಲಿ ಭಯಂಕರ ಯುದ್ಧದ ಕಾರ್ಮೋಡ ಹಿನ್ನೆಲೆಯಲ್ಲಿ, ಉತ್ತರ ಕನ್ನಡ ಜಿಲ್ಲೆಯಿಂದ ಈ ವರ್ಷ ಹೊರಡಲು ರೆಡಿಯಾಗಿದ್ದ ಸುಮಾರು 150 ಜನರ ಉಮ್ರಾ ಯಾತ್ರೆ ರದ್ದು ಮಾಡಲಾಗಿದೆ.

ಪ್ರತೀ ವರ್ಷದ ರಮಜಾನ್ ತಿಂಗಳಲ್ಲಿ ಇಲ್ಲಿನ ಮುಸ್ಲಿಂ ಸಮುದಾಯದವರು ಉಮ್ರಾ ಯಾತ್ರೆಗೆ ಸಜ್ಜಾಗಿದ್ದರು‌. ಅದ್ರಂತೆ, ಜಿಲ್ಲೆಯ ಮುಂಡಗೋಡ, ದಾಂಡೇಲಿ, ಕಾರವಾರ, ಭಟ್ಕಳ ಸೇರಿ ವಿವಿಧ ತಾಲೂಕುಗಳಿಂದ 150 ಕ್ಕೂ ಹೆಚ್ಚು ಯಾತ್ರಿಗಳು ಯಾತ್ರೆಗೆ ಸಜ್ಜಾಗಿದ್ದರು. 2 ತಿಂಗಳ ಹಿಂದೆಯೇ ವಿವಿಧ ಟ್ರಾವೆಲ್ಸ್ ಎಜೇನ್ಸಿಗಳ ಮೂಲಕ ಟಿಕೆಟ್ ಬುಕ್ ಮಾಡಿಕೊಂಡಿದ್ದರು.

ಆದ್ರೆ, ಸದ್ಯ ಮಧ್ಯಪ್ರಾಚ್ಯ ದೇಶಗಳಲ್ಲಿನ ಯುದ್ಧದ ಕಾರ್ಮೋಡದಿಂದ ಯಾತ್ರೆಯನ್ನು ರದ್ದುಗೊಳೊಸಿದ್ದಾರೆ ಎನ್ನಲಾಗಿದೆ. ವಿವಿಧ ಟ್ರಾವೆಲ್ಸ್ ಎಜೆನ್ಸಿಗಳ ಮೂಲಕ ಬುಕ್ ಮಾಡಿಕೊಂಡಿದ್ದ ಯಾತ್ರೆಯನ್ನು ರದ್ದು ಮಾಡಿಕೊಂಡಿದ್ದಾರೆ ಅನ್ನುವ ಮಾಹಿತಿ ಲಭ್ಯವಾಗ್ತಿದೆ.