Death News: ಶಿರಸಿ :ಪವನ್ ಗಣಪತಿ ಜೋಗಿ
ಎಂಬ ಯುವಕ ತನ್ನ ಸ್ನೇಹಿತ ವಾಸುದೇವ್ ಶಶಿಧರ್ ನಾಯ್ಕ್ ನೊಂದಿಗೆ ಬೆಳಿಗ್ಗೆ 11:30 ಗಂಟೆಗೆ ಮನೆಯಿಂದ ಹೊರಟು ಮತ್ತಿಘಟ್ಟ ಹತ್ತಿರದ ಜೋಗನ ಹಕ್ಕಲು ಫಾಲ್ಸ್ ನೋಡಲು ಹೋಗಿದ್ದು, ಫಾಲ್ಸ್ ಹತ್ತಿರ ರಭಸವಾಗಿ ಹರಿಯುತ್ತಿದ್ದ ಹಳ್ಳವನ್ನ ದಾಟುವಾಗ ಕಾಲು ಜಾರಿ ಬಿದ್ದು ಹಳ್ಳ ದಲ್ಲಿ ಕೊಚ್ಚಿಕೊಂಡು ಹೋಗಿ ಕಣ್ಮರೆಯಾಗಿದ್ದಾನೆ ಎನ್ನಲಾಗಿದೆ.

ತಾಲೂಕಿನ ಸೋಮನಳ್ಳಿ ಗ್ರಾಮದ ಉಂಬಳೆಕೊಪ್ಪದ ಪವನ್ (24) ಎಂಬುವ ಯುವಕನೇ ಕಣ್ಮರೆಯಾಗಿದ್ದಾನೆ. ಹೀಗಾಗಿ, ಶಿರಸಿ ಗ್ರಾಮೀಣ ಪೊಲೀಸ್ ಠಾಣೆಗೆ ಬಂದು, ಪ್ರವೀಣ್ ಜೋಗಿ ಕಣ್ಮರೆ ಯಾದ ತನ್ನ ತಮ್ಮನನ್ನು ಹುಡುಕಿಕೊಡುವಂತೆ ದೂರು ನೀಡಿದ್ದು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳಕ್ಕೆ ಶಿರಸಿ ಗ್ರಾಮೀಣ ಪೊಲೀಸ್ ಠಾಣೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹೋಗಿ ಕಣ್ಮರೆಯಾದ ಪವನ್ ನನ್ನ ಹುಡುಕಿದರೂ ಫಲಕಾರಿಯಾಗಿಲ್ಲ. ರಾತ್ರಿಯಾದ್ದರಿಂದ ಬೆಳಿಗ್ಗೆ ಮತ್ತೆ ಈಜು ತಜ್ಞರೊಂದಿಗೆ ಹುಡುಕುವ ಕಾರ್ಯಾಚರಣೆ ಮಾಡಲಾಗುತ್ತದೆ ಎಂದು ಶಿರಸಿ ಗ್ರಾಮೀಣ ಪೊಲೀಸ್ ಠಾಣೆ ಪ್ರಕಟಣೆ ತಿಳಿಸಿದೆ.

error: Content is protected !!