Department of Horticulture;ಮುಂಡಗೋಡ ತಾಲೂಕಿನ ಬಾಚಣಕಿ ಬಳಿಯ ತೋಟಗಾರಿಕಾ ಇಲಾಖೆಯ “ಸರ್ಕಾರಿ ಅಡಿಕೆ ಗಿಡಗಳ ಮಾರಣ ಹೋಮ” ಘಟನೆಗೆ ಸಂಬಂಧಿಸಿದಂತೆ, ತೋಟಗಾರಿಕಾ ಇಲಾಖೆಯ ಡಿಡಿ ಡಾ. ಬಿ.ಪಿ.ಸತೀಶ್ ಪಬ್ಲಿಕ್ ಫಸ್ಟ್ ನ್ಯೂಸ್ ವರದಿಗೆ ಸ್ಪಂಧಿಸಿದ್ದಾರೆ. ತಕ್ಷಣವೇ ಸೂಕ್ತ ಕ್ರಮದ ಭರವಸೆ ನೀಡಿದ್ದಾರೆ.
ನಾಳೆ (ಶುಕ್ರವಾರ) ಅಧಿಕಾರಿಗಳ ವಿಸಿಟ್..!
ಅಂದಹಾಗೆ, ಕಳೆದ 15 ದಿನಗಳ ಹಿಂದೆ ನಡೆದಿದ್ದ ಹೀನ ಕೃತ್ಯವನ್ನು, ಮುಂಡಗೋಡಿನ ತೋಟಗಾರಿಕಾ ಇಲಾಖೆಯ ಸನ್ಮಾನ್ಯ ತಾಲೂಕಾಧಿಕಾರಿಗಳು ಒಳಗೊಳಗೇ ಮುಚ್ಚಿ ಹಾಕುವ ಧಾವಂತದಲ್ಲಿದ್ದರೇನೋ..? ಆದ್ರೆ, ಪಬ್ಲಿಕ್ ಫಸ್ಟ್ ನ್ಯೂಸ್ ನೀಡಿದ ಪ್ರತ್ಯಕ್ಷ ವರದಿಯಿಂದ ಸನ್ಮಾನ್ಯ ತಾಲೂಕಾ ಅಧಿಕಾರಿಗಳ ಗುಟ್ಟು ರಟ್ಟಾಗಿದೆ. ಹೀಗಾಗಿ, ಮದ್ಯಾಹ್ನ ಸುದ್ದಿ ಪ್ರಸಾರವಾಗ್ತಿದ್ದಂತೆ, ಗಮನಸಿರೋ ಡಿಡಿ ಡಾ.ಬಿ.ಪಿ. ಸತೀಶ್ ರವರು ಮಮ್ಮಲ ಮರುಗಿದ್ದಾರೆ. ಪಬ್ಲಿಕ್ ಫಸ್ಟ್ ನೊಂದಿಗೆ ಮಾತನಾಡಿದ ಅವ್ರು, ಘಟನೆ ಬಗ್ಗೆ ವಿಷಾಧ ವ್ಯಕ್ತ ಪಡಿಸಿದ್ದಾರೆ. ನನ್ನ ಗಮನಕ್ಕೆ ನಿಮ್ಮ ವಾಹಿನಿಯ ಸುದ್ದಿಯಿಂದಲೇ ತಿಳಿದಿದೆ. ಹೀಗಾಗಿ, ತಕ್ಷಣವೇ ನಮ್ಮ ಅಧಿಕಾರಿಗಳ ಟೀಂ ಗೆ ನಾಳೆಯೇ ಭೇಟಿ ಕೊಟ್ಟು ವರದಿ ನೀಡುವಂತೆ ಸೂಚನೆ ನೀಡಿದ್ದಿನಿ ಅಂತಾ ತಿಳಿಸಿದ್ರು.
ಕ್ರಮ ಕೈಗೊಳ್ಳಬೇಕಿತ್ತು..!
ಘಟನೆ ನಡೆದು ಹದಿನೈದು ದಿನಗಳು ಕಳೆದ್ರೂ ಈ ಬಗ್ಗೆ ತಾಲೂಕಾ ತೋಟಗಾರಿಕಾ ಅಧಿಕಾರಿಗಳು ತುಟಿಬಿಚ್ಚದ ಹಿನ್ನೆಲೆ, ಬೇಸರ ವ್ಯಕ್ತ ಪಡಿಸಿದ ಡಿಡಿ ಸಾಹೇಬ್ರು, ನಮ್ಮ ಗಮನಕ್ಕಾದ್ರೂ ತರಬೇಕಿತ್ತು ಅಂದ್ರು. ತಕ್ಷಣವೇ ತನಿಖೆ ಕೈಗೊಂಡು ತಪ್ಪಿತಸ್ಥರು ಹಾಗೂ ನಿರ್ಲಕ್ಷ ವಹಿಸಿರೋರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನಿಡೀದ್ರು.
50 ಎಕರೆಯಲ್ಲಿ ಹಲವು ಕನಸುಗಳಿವೆ..!
ಅಸಲು, ಮುಂಡಗೋಡ ತಾಲೂಕಿನ ಬಾಚಣಕಿಯ ತೋಟಗಾರಿಕಾ ನರ್ಸರಿಯಲ್ಲಿ ಬರೋಬ್ಬರಿ 50 ಎಕರೆ ಪ್ರದೇಶ ಇದೆ. ಅಲ್ಲಿ ನಾವು ಕಳೆದ ಮೂರು ವರ್ಷಗಳಿಂದ ಸಾಕಷ್ಟು ಯೋಜನೆಗಳ “ಕನಸು” ಕಂಡಿದ್ದೇವೆ. ಹೀಗಾಗಿ ಅಲ್ಲಿ ನಿರ್ಲಕ್ಷ ವಹಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ತಿವಿ ಅಂತಾ ತೋಟಗಾರಿಕಾ ಡಿಡಿ ಡಾ. ಬಿ.ಪಿ. ಸತೀಶ್ ತಿಳಿಸಿದ್ದಾರೆ.
ಒಟ್ನಲ್ಲಿ..!!
ಬಾಚಣಕಿ ತೋಟಗಾರಿಕಾ ಇಲಾಖೆಯ ನರ್ಸರಿ ಯಲ್ಲಿನ ಸರ್ಕಾರಿ ಅಡಿಕೆ ಗಿಡಗಳ ಮಾರಣಹೋಮಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ತಾಲೂಕಾ ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ನಿರ್ಲಕ್ಷಕ್ಕೆ ಸೂಕ್ತ ಕ್ರಮದ ಅವಶ್ಯಕತೆ ಇದೆ. ಇಲ್ಲವಾದಲ್ಲಿ, ನರಳಿ,ನರಳಿ ಸತ್ತು ಹೋಗಿರೋ ಎಳೆಯ ಅಡಿಕೆ ಗಿಡಗಳ ಶಾಪ ಆ ಅಧಿಕಾರಿಗಳ ಬೆನ್ನು ಹತ್ತೋದರಲ್ಲಿ ಸಂದೇಹವೇ ಇಲ್ಲ “ಪರ” ಮಾತ್ಮ..!