Crime News; ಮುಂಡಗೋಡ ತಾಲೂಕಿನ ಕೊಪ್ಪ (ಇಂದೂರು) ಗ್ರಾಮದಲ್ಲಿ ವ್ಯಕ್ತಿಯೊಬ್ಬ ತನ್ನ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಕೊಪ್ಪ ಗ್ರಾಮದ ರವಿ ಯಲ್ಲಪ್ಪ ಎಗೇನವರ
(34) ಎಂಬುವವನೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರೋ ವ್ಯಕ್ತಿಯಾಗಿದ್ದಾನೆ. ಇಂದು ಬೆಳಿಗ್ಗೆ ಪಕ್ಕದ ಮನೇಲಿ ಇದ್ದ ತಾಯಿ ಬಾಗಿಲು ತೆಗೆದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರೋದು ಬೆಳಕಿಗೆ ಬಂದಿದೆ. ಆದ್ರೆ, ನೇಣಿಗೆ ಶರಣಾಗಿದ್ದು ಯಾವಾಗ ಅನ್ನೋದು ಖಚಿತವಾಗಿಲ್ಲ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.