ಕಾರವಾರದಲ್ಲಿ ಕಾರಿನ ಮೇಲೆ ಉರುಳಿಬಿದ್ದ ಬೃಹತ್ ಮರ, ಕಾರಲ್ಲಿ ಕೂತಿದ್ದ ಮಹಿಳೆ ಸಾ*ವು..!


Karwar Women Death News;
ಕಾರವಾರ : ನಗರದ ಡಿಸಿ ಕಚೇರಿ ಸಮೀಪ ದುರಂತ ಸಂಭವಿಸಿದೆ. ಪಿಕಳೆ ಆಸ್ಪತ್ರೆಯ ಮುಂಭಾಗದಲ್ಲಿದ್ದ ಬೃಹತ್ ಮರ, ಮಳೆ ಗಾಳಿಗೆ ಬಿದ್ದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಇಬ್ಬರಿಗೆ ಸಣ್ಣಪುಟ್ಟ ಗಾಯವಾಗಿದೆ. ಅದೃಷ್ಟವಶಾತ್ ಹೆಚ್ಚಿನ ಅನಾಹುತ ಸಂಭವಿಸಿಲ್ಲ.

ಕಾರವಾರದಲ್ಲಿ ಇಂದು ಸಂತೆಯ ದಿ‌ನವಾದ ಕಾರಣ ಪಿಕಳೆ ರಸ್ತೆಯಲ್ಲಿ ಜನ ಸಂಚಾರ ಹೆಚ್ಚಾಗಿತ್ತು‌. ಈ ವೇಳೆ ಮರದ ಕೆಳಗಿದ್ದ ಕಾರ್ ಮೇಲೆ ಉರುಳಿಬಿದ್ದ ಬೃಹತ್ ಮರದ ಬೃಹತ್ ಟೊಂಗೆ ಅನಾಹುತ ಸೃಷ್ಟಿಸಿದೆ. ಕಾರ್ ಮೇಲೆ ಮರದ ಬೈಹತ್ ಟೊಂಗೆ ಬಿದ್ದ ಪರಿಣಾಮ ಮಲ್ಲಾಪುರದ 60 ವರ್ಷದ ಮಹಿಳೆ ಸಾವನ್ನಪ್ಪಿದ್ದಾಳೆ. ಇಂದು ಅವ್ರು ತಮ್ಮ ಸೊಸೆಯನ್ನು ಆಸ್ಪತ್ರೆಗೆ ಕರೆತಂದಿದ್ದರು. ಮಗ ಸೊಸೆ ಆಸ್ಪತ್ರೆಯ ಒಳಗೆ ಚೆಕ್ ಅಪ್ ಮಾಡಿಸುವಾಗ ಅತ್ತೆ ಕಾರ್ ನಲ್ಲಿ ಕುಳಿತಿದ್ದರು‌. ಆಗ ಮರ ಉರುಳಿ ಬಿದ್ದಿದೆ.. ಮರದ ಕೆಳಗಿದ್ದ ಮೂರು ಜನ ವ್ಯಾಪಾರಿಗಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ತಕ್ಷಣವೇ, ಸಂಚಾರಿ ಪೊಲೀಸರು ಕ್ರೇನ್ ತರಿಸಿ, ಮರ ತೆರವು ಕಾರ್ಯಾಚರಣೆ ನಡೆಸಿ ಕಾರಲ್ಲಿದ್ದ ಮಹಿಳೆಯ ರಕ್ಷಣೆಗೆ ಧಾವಿಸಿದ್ರು. ಅಂಬುಲೆನ್ಸ ಮೂಲಕ ಕಾರ್ ನಲ್ಲಿದ್ದ ಮಹಿಳೆಯನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಕ್ರೇನ್ ನಗರದಲ್ಲಿ ತಕ್ಷಣ ಸಿಕ್ಕ ಕಾರಣ ಹೆಚ್ಚಿನ ಅನಾಹುತ ತಡೆಯಲು ಸಾಧ್ಯವಾಯಿತು.70 ವರ್ಷದ ಹಳೆಯ ಮರ‌ ಉರುಳಿ ಬಿದ್ದಿದ್ದು, ಮರ ತೆರವಿಗೆ ನಗರಸಭೆ ಕಾರ್ಯಚರಣೆ ಪ್ರಾರಂಭಿಸಿದೆ.‌ಮರದದ ಜೊತೆ ಒಂದು ಟ್ರಾನ್ಸಫರ್ಮರ್ ಸಹಿತ ನಾಲ್ಕಾರು ಕಂಬಗಳು ಉರುಳಿವೆ.

ಈ ಸುದ್ದಿಗಳನ್ನೂ ಓದಿ👇

ಶಿರಸಿ ಪೊಲೀಸರ ಕಾರ್ಯಾಚರಣೆ ಪಡಿತರ ಅಕ್ಕಿ ಅಕ್ರಮವಾಗಿ ಸಾಗಾಟ, ಇಬ್ಬರು ಆರೋಪಿಗಳು ಮಾಲು ಸಹಿತ ಅಂದರ್..! 

Heavy Rain Warning; ಇಂದಿನಿಂದ 2 ದಿನ ಭಾರೀ ಮಳೆ ಎಚ್ಚರಿಕೆ; ಉತ್ತರ ಕನ್ನಡ ಸೇರಿ ಕೆಲ ಜಿಲ್ಲೆಗಳಿಗೆ ರೆಡ್ ಅಲರ್ಟ್..!

ಉತ್ತರ ಕನ್ನಡದಲ್ಲಿ ಭಾರೀ ಮಳೆ ಸಂಭವ, ಎಚ್ಚರವಹಿಸಿ; ಜಿಲ್ಲಾಧಿಕಾರಿ

error: Content is protected !!