ಕೊಪ್ಪ ಬಳಿ ಬೈಕ್ ಗಳ ನಡುವೆ ಮುಖಾಮುಕಿ ಡಿಕ್ಕಿ,ಇಂದೂರಿನ ದಂಪತಿ ಸೇರಿ ಮೂವರಿಗೆ  ಗಾಯ..!

Accident News; ಮುಂಡಗೋಡ ತಾಲೂಕಿನ ಕೊಪ್ಪ ಬಳಿ ಬೈಕ್ ಗಳ ನಡುವೆ ಮುಖಾಮುಕಿ ಡಿಕ್ಕಿಯಾದ ಪರಿಣಾಮ ದಂಪತಿ ಸೇರಿ ಮೂವರಿಗೆ ಗಾಯವಾಗಿದೆ.

ಇಂದೂರು ಗ್ರಾಮದ ಶರಣು ನಿಂಗಯ್ಯ ಸುರಗಿಮಠ್ ಹಾಗೂ ಇವರ ಪತ್ನಿ ಸುಪ್ರೀತ ಸುರಗಿಮಠ ಎಂಬುವವರಿಗೆ ಗಾಯವಾಗಿದೆ. ಹುನಗುಂದದ ಪೊಸ್ಟಮೆನ್ ಸುನಿಲ್ ಹರಿಜನ್ ಎಂಬುವವರಿಗೂ ಗಾಯವಾಗಿದೆ. 

ಗಾಯಾಳಯಗಳನ್ನು ಮುಂಡಗೋಡ ತಾಲೂಕಾಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿದೆ.

ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

error: Content is protected !!