ಸನವಳ್ಳಿ ಜಲಾಶಯದಲ್ಲಿ ಈಜಲು ತೆರಳಿದ್ದ ಬಾಲಕ ನೀರುಪಾಲು..! ಸ್ನೇಹಿತರೊಂದಿಗೆ ಈಜಲು ತೆರಳಿದ್ದವ ಹೆಣವಾಗಿಬಿಟ್ಟ..!!

ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಬಾಲಕ ನೀರು ಪಾಲಾಗಿರೋ ಘಟನೆ ಮುಂಡಗೋಡ ತಾಲೂಕಿನ ಸನವಳ್ಳಿ ಜಲಾಶಯದಲ್ಲಿ ನಡೆದಿದೆ. ಮೃತ ಬಾಲಕನನ್ನು ಅಜಯ್ ರಮೇಶ ಕೆರಿಹೊಂಡದವರ್ (17) ಅಂತ ಗುರುತಿಸಲಾಗಿದೆ.

ಈಜಲು ತೆರಳಿದ್ದವರು..!
ಅಸಲು, ನಿನ್ನೆ ರವಿವಾರ ಸಂಜೆ ನಾಲ್ಕು ಗಂಟೆಯ ಹೊತ್ತಿಗೆ, ಸನವಳ್ಳಿ ಗ್ರಾಮದ ಆರು ಜನ ಸ್ನೇಹಿತರು ಸನವಳ್ಳಿ ಜಲಾಶಯಕ್ಕೆ ಈಜಲು ತೆರಳಿದ್ದರು. ಬಾಲಕರಾದ ನಾಗರಾಜ ಯಲ್ಲಪ್ಪ ಕೆರೆಹೊಲದವರ, ಚೇತನ ರವಿ ಆದಿಕರ್ನಾಟಕ, ತರುಣ ದೇವೆಂದ್ರ ನಾಗೋಜಿ, ನೀತಿನ ಲಾಲಬಹೂದ್ದೂರ ಶಾಸ್ತ್ರಿ ಕಳಸಗೇರಿ, ಪುನೀತ ಜಗದೀಶ್ ಕ್ಯಾಮನಕೇರಿ ಹಾಗೂ ಮೃತ ಬಾಲಕ ಅಜಯ್ ರಮೇಶ್ ಕೆರಿಹೊಲದವರ್ ಸನವಳ್ಳಿ ಜಲಾಶಯಕ್ಕೆ ಈಜಲು ತೆರಳಿದ್ದಾರೆ. ಈ ವೇಳೆ ಈಜಾಡುತ್ತಿದ್ದಾಗ ಆಕಸ್ಮಿಕವಾಗಿ ಮೃತ ಬಾಲಕ ಅಜಯ್ ನೀರಲ್ಲಿ ಕಾಣೆಯಾಗಿದ್ದಾನೆ.

ರಾತ್ರಿಯಾದರೂ ಹೇಳಿರಲಿಲ್ಲ‌..!
ಇನ್ನು, ತಮ್ಮೊಂದಿಗೆ ಈಜಲು ತೆರಳಿದ್ದ ಸ್ನೇಹಿತ ನೀರುಪಾಲಾಗಿದ್ದ ಕಾರಣಕ್ಕೆ ಅಕ್ಷರಶಃ ಗಾಬರಿಗೊಂಡಿದ್ದ ಉಳಿದ ಬಾಲಕರು, ಆ ವಿಷಯವನ್ನು ಗ್ರಾಮದಲ್ಲಿ ಯಾರಿಗೂ ಹೇಳಿರಲಿಲ್ಲ. ಆ ಓರ್ವ ಬಾಲಕ ಮಾತ್ರ ವಾಪಸ್ ಬರದೇ ಇದ್ದಾಗ, ಕುಟುಂಬಸ್ಥರು ಉಳಿದ ಬಾಲಕರನ್ನು ವಿಚಾರಿಸಿದ್ದಾರೆ. ಹೀಗಾಗಿ ರಾತ್ರಿ ನಡೆದ ವಿಷಯವನ್ನು ಬಾಲಕರು ತಿಳಿಸಿದ್ದಾರೆ. ಹೀಗಾಗಿ, ತಕ್ಷಣವೇ ಮುಂಡಗೋಡ ಪೊಲೀಸರಿಗೆ ಮಾಹಿತಿ ನೀಡಿದ ಗ್ರಾಮಸ್ಥರು ರಾತ್ರಿಯೇ ನೀರಿಪಾಲಾದ ಬಾಲಕನಿಗಾಗಿ ಜಲಾಶಯದಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಆದ್ರೆ ಬಾಲಕ ಪತ್ತೆಯಾಗಿರಲಿಲ್ಲ.

ಬೆಳ್ಳಂ ಬೆಳಿಗ್ಗೆ ಶೋಧ..!
ತಡರಾತ್ರಿಯವರೆಗೂ ಶೋಧ ಕಾರ್ಯನಡೆಸದ್ದರೂ ಬಾಲಕನ ಪತ್ತೆಯಾಗದ ಕಾರಣ, ಬೆಳ್ಳಂ ಬೆಳಿಗ್ಗೆ ಅಗ್ನಿಶಾಮಕ ಸಿಬ್ಬಂದಿಗಳು, ಪೊಲೀಸರು ಗ್ರಾಮಸ್ಥರ ಸಹಕಾರದೊಂದಿಗೆ ಬಾಲಕನ ಶವ ಪತ್ತೆ ಹಚ್ಚಿದ್ದಾರೆ. ಬಾಲಕನ ಶವ ಕಂಡು ಪೋಷಕರು, ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ‌.

ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.