Home mundgod news

Tag: mundgod news

Post
ಚೌಡಳ್ಳಿ ಗ್ರಾಪಂ “ಅವಿಶ್ವಾಸ” ಸಭೆ ರದ್ದು, ಅಧ್ಯಕ್ಷರ ರಾಜೀನಾಮೆ ಹಿನ್ನೆಲೆ ರದ್ದುಪಡಿಸಿದ ಎಸಿ..!

ಚೌಡಳ್ಳಿ ಗ್ರಾಪಂ “ಅವಿಶ್ವಾಸ” ಸಭೆ ರದ್ದು, ಅಧ್ಯಕ್ಷರ ರಾಜೀನಾಮೆ ಹಿನ್ನೆಲೆ ರದ್ದುಪಡಿಸಿದ ಎಸಿ..!

ಮುಂಡಗೋಡ: ತಾಲೂಕಿನ ಚೌಡಳ್ಳಿ ಗ್ರಾಮ ಪಂಚಾಯತಿಯಲ್ಲಿ ಇಂದು ನಡೆಯಬೇಕಿದ್ದ, ಅವಿಶ್ವಾಸ ಗೊತ್ತುವಳಿ ಮಂಡನಾ ಸಭೆ ರದ್ದಾಗಿದೆ. ಅಧ್ಯಕ್ಷೆ ನೇತ್ರಾವತಿ ಬಿಸವಣ್ಣವರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಇವತ್ತಿಗೆ ಹತ್ತು ದಿನವಾದ ಹಿನ್ನೆಲೆ ರಾಜೀನಾಮೆ ಅಂಗೀಕಾರವಾಗಿದೆ. ಈ ಹಿನ್ನೆಲೆಯಲ್ಲಿ ಶಿರಸಿ ಉಪ ವಿಭಾಗಾಧಿಕಾರಿ ದೇವರಾಜು, ಚೌಡಳ್ಳಿ ಗ್ರಾಪಂ ಸದಸ್ಯರಿಗೆ ತಿಳುವಳಿಕೆ ಪತ್ರ ನೀಡಿದ್ದಾರೆ. ಅಧ್ಯಕ್ಷರು ರಾಜೀನಾಮೆ ನೀಡಿರೋ ಹಿನ್ನೆಲೆಯಲ್ಲಿ ಈಗಾಗಲೇ ರಾಜೀನಾಮೆ ಅಂಗೀಕಾರವಾಗಿದ್ದು, ಈ ಹಿನ್ನೆಲೆಯಲ್ಲಿ ಅವಿಶ್ವಾಸ ನಿರ್ಣಯದ ಸಭೆ ನಡೆಸುವ ಅವಶ್ಯಕತೆ ಇಲ್ಲ. ಹೀಗಾಗಿ, ಸಭೆಯನ್ನು ರದ್ದುಗೊಳಿಸಲಾಗಿದೆ...

Post
ಇಂದೂರು ಬಳಿ ಕ್ರೂಸರ್ ಹಾಗೂ ಬೈಕ್ ನಡುವೆ ಡಿಕ್ಕಿ, ಬೈಕ್ ಸವಾರನಿಗೆ ಗಾಯ..!

ಇಂದೂರು ಬಳಿ ಕ್ರೂಸರ್ ಹಾಗೂ ಬೈಕ್ ನಡುವೆ ಡಿಕ್ಕಿ, ಬೈಕ್ ಸವಾರನಿಗೆ ಗಾಯ..!

ಮುಂಡಗೋಡ: ತಾಲೂಕಿನ ಇ‌ಂದೂರು ಹೊರವಲಯದ ಶರೀಪ ಗೋವಿಂದ ದೇವಸ್ಥಾನದ ಹತ್ತಿರ, ಬೈಕ್ ಹಾಗೂ ಕ್ರೂಸರ್ ನಡುವೆ ಅಪಘಾತವಾಗಿದೆ‌. ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡಿದ್ದಾನೆ. ಇಂದೂರು ಗ್ರಾಮದ ಬೈಕ್ ಸವಾರ ಮಲ್ಲೇಶ್ ದೊಡ್ಡಮನಿ ಗಾಯಗೊಂಡ ವ್ಯಕ್ತಿಯಾಗಿದ್ದಾ‌ನೆ. ಇಂದೂರಿನಿಂದ ಮುಂಡಗೋಡ ಕಡೆಗೆ ಹೊರಟಿದ್ದ ಬೈಕ್ ಸವಾರನಿಗೆ, ಮುಂಡಗೋಡ ಕಡೆಯಿಂದ ಇಂದೂರು ಕಡೆಗೆ ಬರುತ್ತಿದ್ದ ಕ್ರೂಸರ್ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರನಿಗೆ ಗಂಭೀರ ಗಾಯಗೊಂಡಿದ್ದಾನೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Post
ಇಂದೂರು ಪಂಚಾಯತಿಯಲ್ಲಿ ಪಕ್ಷಾಂತರ, ಗ್ರಾಪಂ ಸದಸ್ಯ ರಾಜೂ ಹರಿಜನ್ ಬಿಜೆಪಿ ಸೇರ್ಪಡೆ..!

ಇಂದೂರು ಪಂಚಾಯತಿಯಲ್ಲಿ ಪಕ್ಷಾಂತರ, ಗ್ರಾಪಂ ಸದಸ್ಯ ರಾಜೂ ಹರಿಜನ್ ಬಿಜೆಪಿ ಸೇರ್ಪಡೆ..!

ಮುಂಡಗೋಡ: ತಾಲೂಕಿನ ಇಂದೂರು ಗ್ರಾಮ‌ ಪಂಚಾಯತಿ ಸದಸ್ಯ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಕಾಂಗ್ರೆಸ್ ಬೆಂಬಲಿತ ಗ್ರಾಪಂ ಸದಸ್ಯ ರಾಜೂ ಫಕ್ಕೀರವ್ವ ಹರಿಜನ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಇದ್ರೊಂದಿಗೆ, ಗ್ರಾಮ ಪಂಚಾಯತಿ ಮಟ್ಟದ ರಾಜಕೀಯ ಮೇಲಾಟ ಮತ್ತೊಂದು ಮಗ್ಗಲಿಗೆ ಹೊರಳಿದೆ. ಅಧ್ಯಕ್ಷರ ಬದಲಾವಣೆ ಎಫೆಕ್ಟ್..? ಅಸಲು, ಇಂದೂರು ಗ್ರಾಮ ಪಂಚಾಯತಿಯಲ್ಲಿ ಈ ಹಿಂದೆ ಅಧ್ಯಕ್ಷರಾಗಿದ್ದ ಅನ್ನಪೂರ್ಣ ಬೆಣ್ಣಿ ಮೇಡಂ ಒಪ್ಪಂದದಂತೆ ತಮ್ಮ ಪದವಿಗೆ ರಾಜೀನಾಮೆ ನೀಡಲು ಕೊಂಚ ತಡ ಮಾಡಿದ್ರು. ಹೀಗಾಗಿ, ತಮ್ಮದೇ ಪಕ್ಷದ ಸದಸ್ಯರಲ್ಲಿ ಸಾಕಷ್ಟು ತಳಮಳಕ್ಕೆ...

Post
ನಿರಂತರ ಮಳೆಗೆ ಬಾಚಣಕಿ ಜಲಾಶಯ ಭರ್ತಿ, ರೈತರಲ್ಲಿ ಸಂತಸ..!

ನಿರಂತರ ಮಳೆಗೆ ಬಾಚಣಕಿ ಜಲಾಶಯ ಭರ್ತಿ, ರೈತರಲ್ಲಿ ಸಂತಸ..!

 ಮುಂಡಗೋಡ: ತಾಲೂಕಿನ ಬಾಚಣಕಿ ಜಲಾಶಯ ಭರ್ತಿಯಾಗಿದೆ. ನಿರಂತರವಾಗಿ ಕಳೆದ ಹಲವು ದಿನಗಳಿಂದ ಸುರಿದ ಮಳೆಗೆ ಬಾಚಣಕಿ ಜಲಾಶಯ ಭರ್ತಿಯಾಗಿದ್ದು, ಉಬ್ಬು ಬಿದ್ದಿದೆ. ಹೀಗಾಗಿ, ರೈತರ ಸಂತಸಕ್ಕೆ ಕಾರಣವಾಗಿದೆ. ಇನ್ನು ಬಾಚಣಕಿ ಜಲಾಶಯ ಬಾಚಣಕಿ, ಮಜ್ಜಿಗೇರಿ, ಇಂದೂರು, ಕೊಪ್ಪ, ಇಂದಿರಾನಗರ ಸೇರಿದಂತೆ ಹಲವು ಗ್ರಾಮಗಳ ರೈತರಿಗೆ ಜೀವನಾಡಿಯಾಗಿದೆ. ಹೀಗಾಗಿ, ಸದ್ಯ ಜಲಾಶಯ ಭರ್ತಿಯಾಗಿದ್ದು ರೈತರ ಸಂತಸಕ್ಕೆ ಕಾರಣವಾಗಿದೆ‌. ಇನ್ನು, ಜಲಾಶಯ ಭರ್ತಿ ಹಿನ್ನೆಲೆ ನಿತ್ಯವೂ ಪ್ರವಾಸಿಗರು ಬರುತ್ತಿದ್ದಾರೆ. ಅದ್ರಲ್ಲೂ ಟಿಬೇಟಿಗರು ಈ ಜಲಾಶಯದಲ್ಲಿ ಬಂದು ಮೋಜು ಮಸ್ತಿ‌ಮಾಡುತ್ತಿದ್ದಾರೆ.

Post
ಮುಂದುವರೆದ ರಾಜೀನಾಮೆ ಪರ್ವ, ನಾಗನೂರು ಗ್ರಾಪಂ ಅಧ್ಯಕ್ಷ ಸುನಿಲ್ ಸಳಕೆ ರಾಜೀನಾಮೆ..!

ಮುಂದುವರೆದ ರಾಜೀನಾಮೆ ಪರ್ವ, ನಾಗನೂರು ಗ್ರಾಪಂ ಅಧ್ಯಕ್ಷ ಸುನಿಲ್ ಸಳಕೆ ರಾಜೀನಾಮೆ..!

ಮುಂಡಗೋಡ: ತಾಲೂಕಿನ ನಾಗನೂರು ಗ್ರಾಮ ಪಂಚಾಯತಿ ಅಧ್ಯಕ್ಷ ರಾಜೀನಾಮೆ ನೀಡಿದ್ದಾರೆ. ಇದ್ರೊಂದಿಗೆ, ಇ‌ನ್ನೇನು ಅವಿಶ್ವಾಸ ನಿರ್ಣಯಕ್ಕೆ ವೇದಿಕೆ ರೆಡಿ ಮಾಡಿಕೊಂಡಿದ್ದ ಸದಸ್ಯರಿಗೆ ಅಧ್ಯಕ್ಷರ ರಾಜೀನಾಮೆಯಿಂದ ಬೇಗುದಿ ತಣ್ಣಗಾದಂತಾಗಿದೆ‌. ಬಿಜೆಪಿ ತಾಲೂಕಾ ಮುಖಂಡರ ಹಾಗೂ ಸಚಿವ ಶಿವರಾಮ ಹೆಬ್ಬಾರ ಅವರ ಮಾತಿಗೆ ಒಪ್ಪಿ, ತಮ್ಮ ಸ್ವ ಇಚ್ಛೆಯಿಂದ ಗ್ರಾಮ ಪಂಚಾಯತಿ ಅಧ್ಯಕ್ಷ ಸುನೀಲ್ ವಾಗು ಸಳಕೆ ಅವರು ಶನಿವಾರ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಶಿರಸಿ ಉಪವಿಭಾಗಾಧಿಕಾರಿ ಆರ್. ದೇವರಾಜ್ ಅವರಿಗೆ ರಾಜೀನಾಮೆ ನೀಡಿದ್ದಾರೆ. ಈ...

Post
ಕೊಪ್ಪದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಕ್ಷೌರಿಕ..!

ಕೊಪ್ಪದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಕ್ಷೌರಿಕ..!

ಮುಂಡಗೋಡ:ತಾಲೂಕಿನ ಕೊಪ್ಪ ಗ್ರಾಮದಲ್ಲಿ ವ್ಯಕ್ತಿಯೋರ್ವ ನೇಣಿಗೆ ಶರಣಾಗಿದ್ದಾನೆ. ಶ್ರೀನಿವಾಸ್ ನರಸಿಂಹ ಬಾರಬಾರ್ (45) ಎಂಬುವವನೇ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾನೆ. ಮದ್ಯಾನ ಕೊಪ್ಪ ಗ್ರಾಮದ ತನ್ನ ಹಳೆಯ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೊಪ್ಪ ಗ್ರಾಮದಲ್ಲೇ ಹೇರ್ ಕಟ್ಟಿಂಗ್ ಸಲೂನ್ ನಡೆಸುತ್ತಿದ್ದ ಶ್ರೀನಿವಾಸ್, ಇಂದು ಮದ್ಯಾಹ್ನ ಏಕಾಏಕಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆದ್ರೆ, ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ‌.

Post
ಹುನಗುಂದ ಸೊಸೈಟಿ ಅಧ್ಯಕ್ಷರಾಗಿ ಶಂಕ್ರಪ್ಪ ಲಮಾಣಿ, ಉಪಾಧ್ಯಕ್ಷರಾಗಿ ಈರಪ್ಪ ಯಲಿವಾಳ ಅವಿರೋಧ ಆಯ್ಕೆ..!

ಹುನಗುಂದ ಸೊಸೈಟಿ ಅಧ್ಯಕ್ಷರಾಗಿ ಶಂಕ್ರಪ್ಪ ಲಮಾಣಿ, ಉಪಾಧ್ಯಕ್ಷರಾಗಿ ಈರಪ್ಪ ಯಲಿವಾಳ ಅವಿರೋಧ ಆಯ್ಕೆ..!

ಮುಂಡಗೋಡ: ತಾಲೂಕಿನ ಹುನಗುಂದ ವೀರೇಶ್ವರ ಸೇವಾ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಶಂಕ್ರಪ್ಪ ಲಮಾಣಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅದ್ರಂತೆ ಉಪಾಧ್ಯಕ್ಷರಾಗಿ ಈರಪ್ಪ ಯಲಿವಾಳ ಆಯ್ಕೆಯಾಗಿದ್ದಾರೆ. ಇಂದು ಸಹಕಾರಿ ಸಂಘದ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷರು ಉಪಾಧ್ಯಕ್ಷರ ಅವಿರೋಧ ಆಯ್ಕೆ‌ ನಡೆಯಿತು. ಅಂದಹಾಗೆ, ಈ ಹಿಂದೆ ಅಧ್ಯಕ್ಷರಾಗಿದ್ದ ಅಬ್ದುಲ್ ರೆಹಮಾನ್ ಹಕೀಂ ಹಾಗೂ ಉಪಾಧ್ಯಕ್ಷರಾಗಿದ್ದ ಪರಶುರಾಮ್ ತಳವಾರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಗಳಿಗೆ ಆಯ್ಕೆ ನಡೆಯಿತು. ಈ ವೇಳೆ ಕಾಂಗ್ರೆಸ್ ಮುಖಂಡ ಎಚ್.ಎಂ.ನಾಯ್ಕ್, ಮಾಜಿ ಅಧ್ಯಕ್ಷ ಸಿದ್ದಪ್ಪ ಹಡಪದ್ ಸೇರಿದಂತೆ...

Post
ಇಂದೂರು ಗ್ರಾಪಂ ಅಧ್ಯಕ್ಷೆ ಅನ್ನಪೂರ್ಣ ಬೆಣ್ಣಿ ರಾಜೀನಾಮೆ, ಕೊನೆಗೂ ಬಗೆಹರಿದ ಗೊಂದಲ..!

ಇಂದೂರು ಗ್ರಾಪಂ ಅಧ್ಯಕ್ಷೆ ಅನ್ನಪೂರ್ಣ ಬೆಣ್ಣಿ ರಾಜೀನಾಮೆ, ಕೊನೆಗೂ ಬಗೆಹರಿದ ಗೊಂದಲ..!

ಮುಂಡಗೋಡ: ತಾಲೂಕಿನಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಇಂದೂರು ಗ್ರಾಮ ಪಂಚಾಯತಿ ಅಧ್ಯಕ್ಷರ ರಾಜೀನಾಮೆ ವಿಚಾರ ಕೊನೆಗೂ ಬಗೆ ಹರಿದಂತಾಗಿದೆ. ಕೊಟ್ಟ ಮಾತಿನಂತೆ ಇಂದು ಅಧ್ಯಕ್ಷ ಸ್ಥಾನಕ್ಕೆ ಅನ್ನಪೂರ್ಣ ಬೆಣ್ಣಿ ರಾಜೀನಾಮೆ ನೀಡಿದ್ದಾರೆ. ಅದ್ರಂತೆ ಉಪಾಧ್ಯಕ್ಷ ಸಿಖಂದರ್ ಬಂಕಾಪುರ ಕೂಡ ರಾಜೀನಾಮೆ ಸಲ್ಲಿಸಿದ್ದಾರೆ. ಶಿರಸಿ ಉಪವಿಭಾಗಾಧಿಕಾರಿಗೆ ರಾಜೀನಾಮೆ ಪತ್ರ ಸಲ್ಲಿಸಿರೋ ಅಧ್ಯಕ್ಷ, ಉಪಾಧ್ಯಕ್ಷರು ಪಕ್ಷದ ತೀರ್ಮಾನದಂತೆ ರಾಜೀನಾಮೆ ನೀಡಿದ್ದಾರೆ. ಅಂದಹಾಗೆ, ಇಂದೂರು ಗ್ರಾಮ ಪಂಚಾಯತಿ ಅಧ್ಯಕ್ಷರ ರಾಜೀನಾಮೆ ಕುರಿತು ಸಾಕಷ್ಟು ಚರ್ಚೆಗಳಾಗಿದ್ದವು. ಸಾಕಷ್ಟು ಬಾರಿ ಸಭೆಗಳು ನಡೆದಿದ್ದವು. ಒಪ್ಪಂದದಂತೆ...

Post
ಇಂದೂರಿನ ಈ ಬಡ ಕುಟುಂಬದ ಕೂಗು ಯಾರಿಗೂ ಕೇಳುತ್ತಿಲ್ಲವಾ..? ಗ್ರಾಪಂ ನಿರ್ಲಕ್ಷಕ್ಕೆ ಬಡವರ ಬದುಕೇ ತತ್ತರ..!

ಇಂದೂರಿನ ಈ ಬಡ ಕುಟುಂಬದ ಕೂಗು ಯಾರಿಗೂ ಕೇಳುತ್ತಿಲ್ಲವಾ..? ಗ್ರಾಪಂ ನಿರ್ಲಕ್ಷಕ್ಕೆ ಬಡವರ ಬದುಕೇ ತತ್ತರ..!

 ಇಂದೂರು ಗ್ರಾಮ ಪಂಚಾಯತಿಯ ನಿರ್ಲಕ್ಷಕ್ಕೆ ಇಂದೂರಿನ ಅದೊಂದು ಬಡ ಕುಟುಂಬ ಬೀದಿಗೆ ಬಿದ್ದಂತಾಗಿದೆ. ಕಳೆದ‌ ಮೂರು ವರ್ಷಗಳಿಂದ ಜೀವ ಅಂಗೈಯಲ್ಲಿ ಹಿಡಿದು ಬದುಕುತ್ತಿದೆ. ಆಗಲೋ ಈಗಲೋ ಬೀಳುವ ಮನೆಯಲ್ಲಿ ಬದುಕು ನಡೆಸುತ್ತಿದೆ. ನಿನ್ನೆ ರಾತ್ರಿಯೂ ಮಳೆಯಿಂದ ಅರ್ಧಕ್ಕರ್ದ ಗೋಡೆ ಕುಸಿದು ಬಿದ್ದಿದ್ದು ಮತ್ತಷ್ಟು ಆತಂಕದಲ್ಲಿ ಬಾಳುವಂತಾಗಿದೆ. ಹೌದು, ಇಂದೂರಿನ ಪ್ಲಾಟ್ ಏರಿಯಾದಲ್ಲಿ ಕಳೆದ ಮೂರು ವರ್ಷಗಳಿಂದ ಮನೆಯಿಲ್ಲದೇ ಮುರುಕು ಮನೆಯಲ್ಲಿ ವಾಸಿಸುತ್ತಿರೋ ಈ ಕುಟುಂಬ, ಈಗ ಅಕ್ಷರಶಃ ಆತಂಕದಲ್ಲಿದೆ. ಕಲ್ಪನಾ ಕಲಿವೀರ್ ಕಟ್ಟಿಮನಿ ಎಂಬುವ ಬಡ...

Post
ನಿಗಮ ಮಂಡಳಿ ಅಧ್ಯಕ್ಷರ ನೇಮಕಾತಿ ರದ್ದುಗೊಳಿಸಿದ ಸಿಎಂ, ಆದ್ರೆ, ವಿ.ಎಸ್.ಪಾಟೀಲರ “ಅಧ್ಯಕ್ಷಗಿರಿ” ಸೇಫ್..!

ನಿಗಮ ಮಂಡಳಿ ಅಧ್ಯಕ್ಷರ ನೇಮಕಾತಿ ರದ್ದುಗೊಳಿಸಿದ ಸಿಎಂ, ಆದ್ರೆ, ವಿ.ಎಸ್.ಪಾಟೀಲರ “ಅಧ್ಯಕ್ಷಗಿರಿ” ಸೇಫ್..!

ಬೆಂಗಳೂರು: ರಾಜ್ಯದಲ್ಲಿನ ಬಹುತೇಕ ನಿಗಮ ಮಂಡಳಿ ಅಧ್ಯಕ್ಷರ ನೇಮಕಾತಿ ರದ್ದುಗೊಂಡಿದೆ. ನೇಮಕಾತಿ ರದ್ದುಗೊಳಿಸಿ ಸಿಎಂ ಬಸವರಾಜ್ ಬೊಮ್ಮಾಯಿ ಆದೇಶ ಹೊರಡಿಸಿದ್ದಾರೆ. ಆದ್ರೆ, ಅಚ್ಚರಿಯೆಂಬಂತೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್.ಪಾಟೀಲ್ ಸೇಫ್ ಆಗಿದ್ದಾರೆ. 3 ವರ್ಷದಿಂದ..! ಕಳೆದ ಮೂರು ವರ್ಷಗಳಿಂದ ಅಂದ್ರೆ, ಬಿ.ಎಸ್.ಯಡಿಯೂರಪ್ಪನವರು ಸಿಎಂ ಆಗಿದ್ದಾಗಲೇ ಅಧ್ಯಕ್ಷರಾಗಿ ನೇಮಕಗೊಂಡಿದ್ದ, ವಿ.ಎಸ್. ಪಾಟೀಲ್ ರಿಗೆ ಈ ಬಾರಿ ಕೋಕ್ ನೀಡಲಾಗತ್ತೆ ಅನ್ನೊ ಮಾತುಗಳಿದ್ದವು. ಆದ್ರೆ, ಸಿಎಂ ಬಸವರಾಜ್ ಬೊಮ್ಮಾಯಿ ರದ್ದುಗೊಳಿಸಿರೋ ಪಟ್ಟಿಯಲ್ಲಿ ವಿ.ಎಸ್.ಪಾಟೀಲರ ಹೆಸರು ಇಲ್ಲ....

error: Content is protected !!