ಮುಂಡಗೋಡ: ತಾಲೂಕಿನ ವಿವಿಧ ಅರಣ್ಯ ಅತಿಕ್ರಮಣ ಪ್ರದೇಶಗಳ ಅತಿಕ್ರಮಣದಾರರು, ಇದೇ ಡಿ. 22 ಕ್ಕೆ ‘ಬೆಳಗಾವಿ ಚಲೋ’ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಹೀಗಾಗಿ ಇಂದು ಕಾರ್ಯಕ್ರಮದ ಪೂರ್ವಭಾವಿ ಸಭೆ ಮುಂಡಗೋಡಿನಲ್ಲಿ ಜರುಗಿತು. ಕೇಂದ್ರ ಮತ್ತು ರಾಜ್ಯ ಸರಕಾರಗಳು ಸುಪ್ರೀಂ ಕೋರ್ಟನಲ್ಲಿ ಅರಣ್ಯ ಹಕ್ಕು ಕಾಯಿದೆಯ ಅಡಿಯಲ್ಲಿ ಅರ್ಜಿ ಸಲ್ಲಿಸಿ ತೀರಸ್ಕಾರವಾಗಿರುವ ಅರಣ್ಯವಾಸಿಗಳನ್ನು ಹಂತ, ಹಂತವಾಗಿ ಒಕ್ಕಲೆಸಲಾಗುವದು ಎಂಬ ಪ್ರಮಾಣ ಪತ್ರ ಸಲ್ಲಿಸಿರುವ ಹಿನ್ನೆಲೆಯಲ್ಲಿ ಅರಣ್ಯವಾಸಿಗಳು ಅತಂತ್ರವಾಗಿರುವ ಆತಂಕದಲ್ಲಿ ಇರುವುದರಿಂದ, ಅರಣ್ಯವಾಸಿಗಳ ಪರ ಸರಕಾರ ನಿಲುವು ಪ್ರಕಟಿಸಬೇಕೆಂದು ಆಗ್ರಹಿಸಿ ಡಿ. 22 ರಂದು ‘ಬೆಳಗಾವಿ ಚಲೋ’ ಏರ್ಪಡಿಸಲಾಗಿದೆ ಅಂತಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ್ ತಿಳಿಸಿದರು.
Top Stories
ಕಾತೂರು ಅರಣ್ಯಾಧಿಕಾರಿಗಳ ಭರ್ಜರಿ ದಾಳಿ, ಜಿಂಕೆ ಚರ್ಮ, ಕಾಡು ಹಂದಿ ಮಾಂಸ ಸಾಗಿಸುತ್ತಿದ್ದ ಐವರು ಅಂದರ್..!
ಗೋವಾ; ನೈಟ್ ಕ್ಲಬ್ ನಲ್ಲಿ ಬೆಂಕಿ ಅವಘಡ, 23 ಮಂದಿ ಸಾವು..!
ಮುಂಡಗೋಡಿನಲ್ಲಿ ಬೆಳ್ಳಂ ಬೆಳಿಗ್ಗೆ ಭಾರೀ ಬೆಂಕಿ ಅನಾಹುತ, ಸುಟ್ಟು ಕರಕಲಾಯ್ತು ಪರ್ನಿಚರ್ ಅಡ್ಡೆ..! ಲಕ್ಷಾಂತರ ಬೆಲೆಯ ಪರ್ನಿಚರ್ ಗಳು ಬೆಂಕಿಗಾಹುತಿ..!
ಶಿರಸಿ ಎಸಿ ಕಾವ್ಯಾರಾಣಿ ವರ್ಗಾವಣೆಗೆ ಹಲವರ ಆಕ್ರೋಶ, ಆದೇಶ ರದ್ದುಗೊಳಿಸುವಂತೆ ಶೇಖರ್ ಲಮಾಣಿ ಆಗ್ರಹ..!
ಅಗಡಿ ಶ್ರೀಗಂಧ ತುಂಡುಗಳು ಸಿಕ್ಕ ಕೇಸ್, ಕಚೇರಿಗೇ ಬಂದ್ರೂ ಆರೋಪಿಯನ್ನ ಬಿಟ್ಟು ಕಳಿಸಿದ್ರಾ ಅಧಿಕಾರಿಗಳು..? RFO ಕಚೇರಿಯಿಂದಲೇ ಆರೋಪಿ ಮತ್ತೆ ಎಸ್ಕೇಪ್..!
ಅಗಡಿಯಲ್ಲಿ ಅರಣ್ಯ ಅಧಿಕಾರಿಗಳ ಭರ್ಜರಿ ದಾಳಿ, 60 ಕೆಜಿಗೂ ಹೆಚ್ಚು ಶ್ರೀಗಂಧದ ಮರದ ತುಂಡುಗಳು ವಶಕ್ಕೆ, ಆರೋಪಿ ಪರಾರಿ..!
ಚಿಗಳ್ಳಿ ಪ್ರೌಢಶಾಲೆಯ ಶಿಕ್ಷಕ ದಾಸಪ್ಪ, ಸಸ್ಪೆಂಡ್..! ಹಲವು ದಿನಗಳ ಗುದುಮುರುಗಿ ಬಳಿಕ ಶಿರಸಿ ಡಿಡಿಪಿಐ ಖಡಕ್ ಆದೇಶ..!
ಮುಂಡಗೋಡ ಮಾದರಿ ಶಾಲೆಯ ಬಿಸಿಯೂಟ ಸೇವಿಸಿದ ವಿದ್ಯಾರ್ಥಿಗಳು ಅಸ್ವಸ್ಥ..! ಆಸ್ಪತ್ರೆಗೆ ದಾಖಲು..!
ಒಂದೇ ಕುಟುಂಬದ ನಾಲ್ವರು ಬಾವಿಗೆ ಹಾರಿ ಆತ್ಮಹತ್ಯೆ..! ಮೊಮ್ಮಕ್ಕಳು, ಮಗನೊಂದಿಗೆ ಸಾವು ಕಂಡ ತಂದೆ..!
ಮುಂಡಗೋಡ ಪೊಲೀಸರ ತಡರಾತ್ರಿ ಕಾರ್ಯಾಚರಣೆ..! “ಚರಸ್” ದಂಧೆಯಲ್ಲಿ ತೊಡಗಿದ್ದ ಇಂಜಿನೀಯರ್ ಅಂದರ್..!
ಸನವಳ್ಳಿ ಬಳಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರ್, ತುಂಡಾಗಿ ಬಿದ್ದ ವಿದ್ಯುತ್ ಕಂಬ..!
ಯಲ್ಲಾಪುರ ಪೊಲೀಸ್ರ ಸಿನಿಮಿಯ ರೀತಿ ದಾಳಿ..!! ಉಮ್ಮಚಗಿ ಬ್ಯಾಂಕ್ ದರೋಡೆಗೆ ಯತ್ನಿಸಿದ್ದ ನಟೋರಿಯಸ್ ಕಳ್ಳನ ಗ್ಯಾಂಗ್ ಅಂದರ್..!
ಹನುಮಾಪುರದಲ್ಲಿ ಭೀಕರ ಬೆಂಕಿ ಅವಘಡ..! ಬೆಂಕಿಯಲ್ಲಿ ಮನೆಯ ಸಮೇತ ಬೆಂದು ಹೋದ ವೃದ್ದೆ..!
ಪಾಳಾದ ಇಂದಿರಾ ಗಾಂಧಿ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಇದೇಂಥ ಸ್ಥಿತಿ..? ಈ ಮಕ್ಕಳಿಗೆ ನುಸಿ ತುಂಬಿರೋ ದವಸದ ಆಹಾರವೇ ಗತಿಯಾ..?
ಹುಬ್ಬಳ್ಳಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಮುಂಡಗೋಡಿನ ಮಹದೇಶ್ವರ ಲಿಂಗದಾಳ, RTI ಹೆಸ್ರಲ್ಲಿ ಈ ವಂಚಕ ಪಡೆ ಮಾಡಿದ್ದೇನು..?
ಸಾಲಬಾಧೆ, ಬಾಚಣಕಿಯಲ್ಲಿ ನೇಣಿಗೆ ಶರಣಾದ ಅನ್ನದಾತ..! ತನ್ನ ದನದ ಕೊಟ್ಟಿಗೆಯಲ್ಲೇ ಆತ್ಮಹತ್ಯೆ..!
ಅಭಿಮಾನಿಗಳ ನೆಚ್ಚಿನ “ಹೈಸ್ಪೀಡ್ ಮಣಿ” ಟಗರು ಅಕಾಲಿಕ ಸಾವು..! ಸಾವಿರಾರು ಅಭಿಮಾನಿಗಳ ಕಂಬನಿ..!
ವಯಸ್ಸು 45 ಆದ್ರೂ ಮದುವೆ ಆಗಲಿಲ್ಲ, ಅದೇ ಕೊರಗಲ್ಲೇ ಚಾಕು ಇರಿದುಕೊಂಡ, ಆತ್ಮಹತ್ಯೆಗೆ ಯತ್ನಿಸಿದ..!
ಮುಂಡಗೋಡಿನ ಕಿರಣ್ ಸಾಳುಂಕೆಗೆ ಗಡಿಪಾರು..!ಯಾದಗಿರಿ ಜಿಲ್ಲೆಗೆ ಗಡಿಪಾರು ಮಾಡಿ ಶಿರಸಿ ಎಸಿ ಆದೇಶ..!!
ನಂದಿಕಟ್ಟಾದಲ್ಲಿ ನಟ ಪುನೀತ್ ನೆನಪಲ್ಲಿ, ಮುಕ್ತ ಕಬಡ್ಡಿ ಪಂದ್ಯಾವಳಿ..!
ಮುಂಡಗೋಡ: ತಾಲೂಕಿನ ನಂದಿಕಟ್ಟಾ ಗ್ರಾಮದಲ್ಲಿ ದಿವಂಗತ ನಟ ಪುನೀತ್ ರಾಜಕುಮಾರ್ ಸವಿನೆನಪಿಗಾಗಿ ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾವಳಿ ಏರ್ಪಡಿಸಲಾಗಿದೆ. ಪಂದ್ಯಾವಳಿಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು ಸೇರಿದಂತೆ ಹಲವರ ಉಪಸ್ಥಿತಿಯಲ್ಲಿ ಉದ್ಘಾಟಿಸಲಾಯಿತು. ಇನ್ನು ಕಬಡ್ಡಿ ಪಂದ್ಯಾವಳಿಗೆ ದೂರ ದೂರದ ಕಬಡ್ಡಿ ತಂಡಗಳು ಬಂದು ಭಾಗವಹಿಸಿವೆ. ಪ್ರಥಮ ಬಹುಮಾನವಾಗಿ 20 ಸಾವಿರ ರೂ. ಎರಡನೇ ಬಹುಮಾನವಾಗಿ 15 ಸಾವಿರ ರೂಪಾಯಿ ಮೂರನೇ ಬಹುಮಾನವಾಗೊ 10 ಸಾವಿರ ರೂಪಾಯಿ, ನಾಲ್ಕನೇ ಬಹುಮಾನವಾಗಿ 5 ಸಾವಿರ ರೂಪಾಯಿ ಇಡಲಾಗಿದೆ. ಇನ್ನು ಪದ್ಯಾವಳಿಯಲ್ಲಿ ಯಾರು ಬಹುಮಾನ ಪಡೆಯುತ್ತಾರೋ ಕಾದು ನೋಡಬೇಕಿದೆ.
ಅತ್ತಿವೇರಿಯಲ್ಲಿ ಅಕ್ರಮವಾಗಿ ಕಟ್ಟಿಕೊಂಡಿದ್ದ ಮನೆ ತೆರವು..!
ಮುಂಡಗೋಡ: ತಾಲೂಕಿನ ಅತ್ತಿವೇರಿ ದರ್ಗಾ ಹತ್ತಿರ ಅಕ್ರಮವಾಗಿ ಕಟ್ಟಿಕೊಂಡಿದ್ದ ಮನೆಯನ್ನು ಹುನಗುಂದ ಗ್ರಾಮ ಪಂಚಾಯತಿಯವರು ತೆರವುಗೊಳಿಸಿದ್ರು. ಅತ್ತಿವೇರಿ ಗ್ರಾಮದಲ್ಲಿ ಮನೆ ಹೊಂದಿದ್ದರೂ ಸರ್ಕಾರದ ಗಾಂವಠಾಣ ಜಾಗದಲ್ಲಿ ಮತ್ತೊಂದು ಮನೆ ನಿರ್ಮಿಸಿಕೊಂಡಿದ್ದ ವ್ಯಕ್ತಿಗೆ ಗ್ರಾಮ ಪಂಚಾಯತಿಯಿಂದ ನೋಟೀಸ್ ನೀಡಲಾಗಿತ್ತು. ನೋಟೀಸ್ ಮೂಲಕ ಮನೆ ತೆರವು ಮಾಡಲು ಸೂಚನೆ ನೀಡಲಾಗಿತ್ತು. ಆದ್ರೂ ಸಹಿತ ಮನೆ ತೆರವು ಮಾಡಿಕೊಳ್ಳದ ಕಾರಣ ಇಂದು ಪೊಲೀಸರ ಸಹಾಯದೊಂದಿಗೆ ಅಕ್ರಮ ಮನೆ ತೆರವು ಮಾಡಲಾಯಿತು. ಈ ವೇಳೆ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಿಡಿಓ ಸೇರಿದಂತೆ ಸಿಬ್ಬಂದಿಗಳು ಅಕ್ರಮ ಮನೆ ತೆರವು ಕಾರ್ಯಾಚರಣೆ ಮಾಡಿದ್ರು.
ವಡಗಟ್ಟಾ ಬಳಿ ಬೈಕ್ ಗೆ ಅಡ್ಡ ಬಂದ ಕಾಡುಹಂದಿ, ಬೈಕ್ ಬಿದ್ದು, ಬೈಕ್ ಸವಾರನಿಗೆ ಗಾಯ..!
ಮುಂಡಗೋಡ ತಾಲೂಕಿನ ವಡಗಟ್ಟಾ- ಹುನಗುಂದ ರಸ್ತೆಯಲ್ಲಿ ಬೈಕ್ ಗೆ ಕಾಡು ಹಂದಿ ಅಡ್ಡ ಬಂದ ಪರಿಣಾಮ ಬೈಕ್ ಬಿದ್ದು ಸವಾರನಿಗೆ ಗಾಯವಾದ ಘಟನೆ ನಡೆದಿದೆ. ಪ್ರಸಾದ್ ಕುಂಜು (51) ಎಂಬುವವರೇ ಗಾಯಗೊಂಡ ವ್ಯಕ್ತಿಯಾಗಿದ್ದಾರೆ. ನಿನ್ನೆ ರಾತ್ರಿ ಹುನಗುಂದ ಹಾಗೂ ವಡಗಟ್ಟಾ ರಸ್ತೆಯಲ್ಲಿ ಬೈಕ್ ಮೇಲೆ ಬರುತ್ತಿರುವಾಗ ಘಟನೆ ನಡೆದಿದೆ. ಬೈಕ್ ಮೇಲಿಂದ ಬಿದ್ದು ಗಾಯಗೊಂಡು ಒದ್ದಾಡುತ್ತಿದ್ದ ವೇಳೆ ಗ್ರಾಮಸ್ಥರು ರಕ್ಷಿಸಿದ್ದಾರೆ. ಮುಂಡಗೋಡ ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಮುಂಡಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂದೂರಿನಲ್ಲಿ ಪರಿಷತ್ ಗೆಲುವಿಗೆ ಬಿಜೆಪಿಗರ ಸಂಭ್ರಮ..!
ಮುಂಡಗೋಡ: ತಾಲೂಕಿನ ಇಂದೂರು ಗ್ರಾಮದಲ್ಲೂ ಬಿಜೆಪಿ ಕಾರ್ಯಕರ್ತರ ಸಂಭ್ರಮ ಜೋರಾಗಿತ್ತು. ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗಣಪತಿ ಉಳ್ವೇಕರ್ ಗೆಲುವು ಪಡೆಯುತ್ತಿದ್ದಂತೆ ಇಲ್ಲಿನ ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದ್ರು. ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ರು. ಬಿಜೆಪಿ ಪರವಾಗಿ ಘೋಷಣೆ ಕೂಗಿದ್ರು..ಈ ವೇಳೆ ಗ್ರಾಮದ ಬಿಜೆಪಿ ಮುಖಂಡರು ಕಾರ್ಯಕರ್ತರು ಹಾಜರಿದ್ದರು.
ಹುನಗುಂದ ಗ್ರಾಮದಲ್ಲೂ ಬಿಜೆಪಿಗರ ಸಂಭ್ರಮ..!
ಮುಂಡಗೋಡ: ತಾಲೂಕಿನ ಹುನಗುಂದ ಗ್ರಾಮದಲ್ಲೂ ಬಿಜೆಪಿ ಕಾರ್ಯಕರ್ತರ ಸಂಭ್ರಮ ಜೋರಾಗಿತ್ತು. ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗಣಪತಿ ಉಳ್ವೇಕರ್ ಗೆಲುವು ಪಡೆಯುತ್ತಿದ್ದಂತೆ ಇಲ್ಲಿನ ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದ್ರು. ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ರು. ಬಿಜೆಪಿ ಪರವಾಗಿ ಘೋಷಣೆ ಕೂಗಿದ್ರು..ಈ ವೇಳೆ ಗ್ರಾಮದ ಬಿಜೆಪಿ ಮುಖಂಡರು ಕಾರ್ಯಕರ್ತರು ಹಾಜರಿದ್ದರು..
ಅರಶಿಣಗೇರಿ ಕಾಲುವೆ ಕಾಮಗಾರಿ ಕಳಪೆ, ದುರಸ್ಥಿ ಮಾಡುವಂತೆ ರೈತರ ಆಗ್ರಹ..!
ಮುಂಡಗೋಡ: ತಾಲೂಕಿನ ಅರಶಿಣಗೇರಿ ಕೆರೆಯ ಕಾಲುವೆಯನ್ನು ಆದಷ್ಟು ಬೇಗ ದುರಸ್ತಿ ಮಾಡಿಸಿ ರೈತರಿಗೆ ಬೇಸಿಗೆ ಬೆಳೆ ಬೆಳೆಯಲು ಅನುವು ಮಾಡಿಕೊಡಬೇಕಾಗಿ ರೈತರು ಮನವಿ ಮಾಡ್ತಿದಾರೆ. ಅರಶಿಣಗೇರಿ, ಅಗಡಿ ಹುನಗುಂದ ಗ್ರಾಮಗಳ ರೈತರ ಜೀವನಾಡಿಯಾಗಿರೋ ಅರಶಿಣಗೇರಿ ಕೆರೆಯ ಕಾಲುವೆಯನ್ನು ಈಗಾಗಲೇ ದುರಸ್ಥಿ ಕಾರ್ಯ ಮಾಡಿರೋ ಚಿಕ್ಕ ನೀರಾವರಿ ಇಲಾಖೆ ಅರ್ದಮರ್ದ ಕೆಲಸ ಮಾಡಿ ಹೋಗಿದ್ದಾರೆ ಅಲ್ಲದೇ ಹಾಗೆ ಮಾಡಿರೋ ಕೆಲಸವನ್ನೂ ಕಳಪೆಯಾಗಿ ಮಾಡಿದ್ದಾರೆ. ಹೀಗಾಗಿ ಈ ಕೂಡಲೇ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಕಾಲುವೆಯ ದುರಸ್ತಿ ಮಾಡಿ, ಕಾಮಗಾರಿ ನಡೆಸಬೇಕು ಅಂತಾ ರೈತರು ಆಗ್ರಹಿಸಿದ್ದಾರೆ..
ನಂದಿಕಟ್ಟಾದಲ್ಲಿ ಎಗ್ ರೈಸ್ ಅಂಗಡಿ ಕಳ್ಳತನಕ್ಕೆ ವಿಫಲ ಯತ್ನ..!
ಮುಂಡಗೋಡ: ತಾಲೂಕಿನ ನಂದಿಕಟ್ಟಾ ಗ್ರಾಮದ ಎಗ್ ರೈಸ್ ಅಂಗಡಿ ಕಳ್ಳತನಕ್ಕೆ ವಿಫಲ ಯತ್ನ ನಡೆದಿದೆ. ನಂದಿಕಟ್ಟಾ ಗ್ರಾಮದ ಮಂಜುನಾಥ್ ಎಂಬ ಯುವಕ ಕೆಲವರ್ಷಗಳಿಂದ ಎಗ್ ರೈಸ್ ಶಾಪ್ ನಡೆಸುತ್ತಿದ್ದ ನಿನ್ನೆ ಮಧ್ಯರಾತ್ರಿ ಕಳ್ಳರು ಕಳ್ಳತನ ಮಾಡಲು ಅಂಗಡಿಯ ಹಿಂದಿನ ಗೋಡೆಯನ್ನು ಒಡೆಯಲು ಯತ್ನಿಸಿದ್ದಾರೆ. ಆದ್ರೆ, ಅಂಗಡಿಯಲ್ಲಿ ಯಾವುದೇ ವಸ್ತುಗಳು ಕಳ್ಳತನವಾಗಿಲ್ಲ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಟ್ರ್ಯಾಕ್ಟರ್ ಟೇಪ್ ರಿಕಾರ್ಡರ್ ತೆಗೆದಿರೋ ಕಳ್ಳರು ಅದನ್ನ ಅಲ್ಲೇ ಬಿಟ್ಟು ಹೋಗಿದ್ದಾರೆ. ಅಂಗಡಿ ಹಿಂದುಗಡೆ ಗೋಡೆಗೆ ಕನ್ನ ಹಾಕಿರೋ ಕಳ್ಳರು ರಂದ್ರ ಕೊರೆಯಲು ಟ್ರ್ಯಾಕ್ಟರಿನ ಕಬ್ಬಿಣದ ರಾಡ್ ಉಪಯೋಗಿಸಿದ್ದಾರೆ ಅನ್ನೋದು ಮೇಲ್ನೊಟಕ್ಕೆ ಕಾಣುತ್ತಿದೆ.
ಮುಂಡಗೋಡಿನ ಶಿವಾಜಿ ಸರ್ಕಲ್ ನಲ್ಲಿ ಬಿಜೆಪಿ ಗೆಲುವಿನ ಸಂಭ್ರಮ..!
ಮುಂಡಗೋಡ ಪಟ್ಟಣದ ಶಿವಾಜಿ ಸರ್ಕಲ್ ನಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮ ಜೋರಾಗಿತ್ತು. ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗಣಪತಿ ಉಳ್ವೇಕರ್ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಬಿಜೆಪಿಗರು ಪಟಾಕಿ ಸಿಡಿಸಿ ಸಿಹಿ ತಿನ್ನಿಸಿ ಸಂಭ್ರಮಿಸಿದ್ರು. ಬಿಜೆಪಿ ಪರವಾಗಿ ಘೋಷಣೆ ಕೂಗಿದ್ರು. ಕುಣಿದು ಕುಪ್ಪಳಿಸಿದ ಕಾರ್ಯಕರ್ತರು ಶಿವರಾಮ್ ಹೆಬ್ಬಾರ್ ಪರವಾಗಿಯೂ ಘೋಷಣೆ ಕೂಗಿ ಸಂಭ್ರಮಿಸಿದ್ರು. ಈ ವೇಳೆ ಬಿಜೆಪಿಯ ಹಲವು ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ರು.
ಮುಂಡಗೋಡಿನಲ್ಲಿ ಮತ್ತೆ ಮಟ್ಕಾ ಶುರು..? ಬರಗೆಟ್ಟವನ ಮಂತ್ಲಿ ಆಸೆಗೆ ದಕ್ಕಿದ್ದು ಎಷ್ಟು ಲಕ್ಷ..?
ಮುಂಡಗೋಡ ತಾಲೂಕಿನ ಮಟ್ಕಾ ಪ್ರಿಯರಿಗೆ ಸಂತಸದ ಸುದ್ದಿಯಿದು. ಇನ್ನೇನು ಇವತ್ತಿನಿಂದ ಅಂದ್ರೆ ಸೋಮವಾರದಿಂದ ಮುಂಡಗೋಡ ತಾಲೂಕಿನಲ್ಲಿ ಮಟ್ಕಾ ಭರ್ಜರಿ ಶುಭಾರಂಭ ಮಾಡ್ತಿದೆಯಂತೆ. ಅಷ್ಟಕ್ಕೂ ಮಟ್ಕಾ ದಂಧೆಯ ಮಂತ್ಲಿ ಹಣದ ಕೈ ಬಿಸಿ ಇಲ್ಲದೇ ಈ ಛಳಿಗಾಲ ಸಾಗೋಕೆ ಸಾಧ್ಯವೇ ಇಲ್ಲ ಅಂತಾ ಅವನೊಬ್ಬ ಚಕ್ಕಂಬಕ್ಕಳ ಹಾಕ್ಕೊಂಡು ಡೀಲಿಗೆ ಕುಳಿತಿದ್ದನಂತೆ. ಅವನ ಪರಿಶ್ರಮದ ಫಲವಾಗೇ ಈಗ ಮತ್ತೆ ಮಟ್ಕಾ ಅನ್ನೋದು ಮನೆ ಮಾತಾಗುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿದೆಯಂತೆ. ಹೀಗೆ ಇತ್ಯಾದಿ ಇತ್ಯಾದಿಯಾಗಿ ಇಡೀ ಮುಂಡಗೋಡ ತಾಲೂಕಿನಲ್ಲಿ ಗುಲ್ಲೆದ್ದಿದೆ. ಗುಲ್ಲು ಅನ್ನೋದಕ್ಕಿಂತ ಅಲ್ಲೇ ಕೆಲಸ ಮಾಡೋ ಕೆಲವೊಂದಿಷ್ಟು ಪ್ರಾಮಾಣಿಕ ಬಡಪಾಯಿಗಳು ಎಲ್ಲೆಂದರಲ್ಲಿ ಹೇಳಿಕೊಂಡು ತಿರುಗಾಡ್ತಿದಾರೆ. ಇದ್ರೊಂದಿಗೆ ನಮ್ಮ ಜಿಲ್ಲೆಯ ನೂತನ, ದಕ್ಷ ಎಸ್ಪಿ ಡಾ. ಸುಮನಾ ಫನ್ನೇಕರ್ ಮೇಡಮ್ಮಿನ ಖಡಕ್ ಆದೇಶವೊಂದನ್ನ ಮುಂಡಗೋಡಿನಲ್ಲಿ ಗಪ್ ಚುಪ್ ಆಗಿ ಸಮಾಧಿ ಮಾಡಲಾಯ್ತಾ..? ಅನ್ನೋ ಪ್ರಶ್ನೆ ಎದ್ದಿದೆ. ಅವನೊಬ್ಬ..! ಅಸಲು, ಆತ ಈಗ ಇಡೀ ಠಾಣೆಯಲ್ಲೇ ಕಿಂಗ್ ಆಗಲು ಹೊರಟಿದ್ದಾನಂತೆ, ಅವನ ಇಶಾರೆಯಿಲ್ಲದೇ ಅಲ್ಲಿ ಏನಂದ್ರೆ ಏನೂ...









