Karwar News : ಕಾರವಾರ, ಜೂ.10 ರಂದು ಜಿಲ್ಲಾ ಪಂಚಾಯತ ಕಛೇರಿಯಲ್ಲಿ ಮೇ-2025 ಮಾಹೆಯ “ಬೆಸ್ಟ್ ಪಿಡಿಓ ಆಪ್ ದ ಮಂತ್” ಪ್ರಶಸ್ತಿಗೆ ಭಾಜನರಾದ ಸಿದ್ದಾಪೂರ ತಾಲೂಕಿನ ದೊಡ್ಮನೆ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಉಮೇಶ ಡಿ. ಗೌಡರ ಅವರಿಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕಾಂದೂ ಮಂಗಳವಾರ ಪ್ರಶಸ್ತಿ ನೀಡಿ, ಅಭಿನಂದಿಸಿದರು. ನಂತರ ಮಾತನಾಡಿದ ಅವರಿ ಉತ್ತರ ಕನ್ನಡ ಜಿಲ್ಲಾ ಪಂಚಾಯತನ ಎಲ್ಲ ಪಿಡಿಓಗಳು ತುಂಬ ಚೆನ್ನಾಗಿ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಮ್ಮ ಜಿಲ್ಲಾ ಪಂಚಾಯತ ಕರ್ನಾಟಕದ ಪ್ರಮುಖ ಐದರಲ್ಲಿ ಒಂದು ಎಂದು ಗುರುತಿಸಲು ಪಿಡಿಓಗಳ ಕಾರ್ಯ ಮಹತ್ತರವಾಗಿದೆ. ಹಾಗಾಗಿ ಅವರುಗಳನ್ನು ಗುರುತಿಸಿ ಸತ್ಕಾರ ಮಾಡಿ, ಅಭಿನಂದಿಸುವುದರಿಂದ ಎಲ್ಲರಲ್ಲಿ ಕಾರ್ಯಪ್ರವರ್ತತೆ ಹೆಚ್ಚಿಸಲು ಸಾಧ್ಯವೆಂದು ಹೇಳಿದರು. ಇದನ್ನೂ ಓದಿ👉 ಬಾಚಣಕಿ ಬಳಿ ಬೈಕ್ ಗಳ ನಡುವೆ ಭೀಕರ ಅಪಘಾತ, ನಾಲ್ವರಿಗೆ ಗಾಯ..! ಮೂವರು ಗಂಭೀರ, ಓರ್ವನ ಸ್ಥಿತಿ ಚಿಂತಾಜನಕ..! ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿಯ ಯೋಜನಾ ನಿರ್ದೇಶಕರು ಕರೀಂ ಆಸದಿ, ಮುಖ್ಯ...
Top Stories
ಕಾತೂರು ಅರಣ್ಯಾಧಿಕಾರಿಗಳ ಭರ್ಜರಿ ದಾಳಿ, ಜಿಂಕೆ ಚರ್ಮ, ಕಾಡು ಹಂದಿ ಮಾಂಸ ಸಾಗಿಸುತ್ತಿದ್ದ ಐವರು ಅಂದರ್..!
ಗೋವಾ; ನೈಟ್ ಕ್ಲಬ್ ನಲ್ಲಿ ಬೆಂಕಿ ಅವಘಡ, 23 ಮಂದಿ ಸಾವು..!
ಮುಂಡಗೋಡಿನಲ್ಲಿ ಬೆಳ್ಳಂ ಬೆಳಿಗ್ಗೆ ಭಾರೀ ಬೆಂಕಿ ಅನಾಹುತ, ಸುಟ್ಟು ಕರಕಲಾಯ್ತು ಪರ್ನಿಚರ್ ಅಡ್ಡೆ..! ಲಕ್ಷಾಂತರ ಬೆಲೆಯ ಪರ್ನಿಚರ್ ಗಳು ಬೆಂಕಿಗಾಹುತಿ..!
ಶಿರಸಿ ಎಸಿ ಕಾವ್ಯಾರಾಣಿ ವರ್ಗಾವಣೆಗೆ ಹಲವರ ಆಕ್ರೋಶ, ಆದೇಶ ರದ್ದುಗೊಳಿಸುವಂತೆ ಶೇಖರ್ ಲಮಾಣಿ ಆಗ್ರಹ..!
ಅಗಡಿ ಶ್ರೀಗಂಧ ತುಂಡುಗಳು ಸಿಕ್ಕ ಕೇಸ್, ಕಚೇರಿಗೇ ಬಂದ್ರೂ ಆರೋಪಿಯನ್ನ ಬಿಟ್ಟು ಕಳಿಸಿದ್ರಾ ಅಧಿಕಾರಿಗಳು..? RFO ಕಚೇರಿಯಿಂದಲೇ ಆರೋಪಿ ಮತ್ತೆ ಎಸ್ಕೇಪ್..!
ಅಗಡಿಯಲ್ಲಿ ಅರಣ್ಯ ಅಧಿಕಾರಿಗಳ ಭರ್ಜರಿ ದಾಳಿ, 60 ಕೆಜಿಗೂ ಹೆಚ್ಚು ಶ್ರೀಗಂಧದ ಮರದ ತುಂಡುಗಳು ವಶಕ್ಕೆ, ಆರೋಪಿ ಪರಾರಿ..!
ಚಿಗಳ್ಳಿ ಪ್ರೌಢಶಾಲೆಯ ಶಿಕ್ಷಕ ದಾಸಪ್ಪ, ಸಸ್ಪೆಂಡ್..! ಹಲವು ದಿನಗಳ ಗುದುಮುರುಗಿ ಬಳಿಕ ಶಿರಸಿ ಡಿಡಿಪಿಐ ಖಡಕ್ ಆದೇಶ..!
ಮುಂಡಗೋಡ ಮಾದರಿ ಶಾಲೆಯ ಬಿಸಿಯೂಟ ಸೇವಿಸಿದ ವಿದ್ಯಾರ್ಥಿಗಳು ಅಸ್ವಸ್ಥ..! ಆಸ್ಪತ್ರೆಗೆ ದಾಖಲು..!
ಒಂದೇ ಕುಟುಂಬದ ನಾಲ್ವರು ಬಾವಿಗೆ ಹಾರಿ ಆತ್ಮಹತ್ಯೆ..! ಮೊಮ್ಮಕ್ಕಳು, ಮಗನೊಂದಿಗೆ ಸಾವು ಕಂಡ ತಂದೆ..!
ಮುಂಡಗೋಡ ಪೊಲೀಸರ ತಡರಾತ್ರಿ ಕಾರ್ಯಾಚರಣೆ..! “ಚರಸ್” ದಂಧೆಯಲ್ಲಿ ತೊಡಗಿದ್ದ ಇಂಜಿನೀಯರ್ ಅಂದರ್..!
ಸನವಳ್ಳಿ ಬಳಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರ್, ತುಂಡಾಗಿ ಬಿದ್ದ ವಿದ್ಯುತ್ ಕಂಬ..!
ಯಲ್ಲಾಪುರ ಪೊಲೀಸ್ರ ಸಿನಿಮಿಯ ರೀತಿ ದಾಳಿ..!! ಉಮ್ಮಚಗಿ ಬ್ಯಾಂಕ್ ದರೋಡೆಗೆ ಯತ್ನಿಸಿದ್ದ ನಟೋರಿಯಸ್ ಕಳ್ಳನ ಗ್ಯಾಂಗ್ ಅಂದರ್..!
ಹನುಮಾಪುರದಲ್ಲಿ ಭೀಕರ ಬೆಂಕಿ ಅವಘಡ..! ಬೆಂಕಿಯಲ್ಲಿ ಮನೆಯ ಸಮೇತ ಬೆಂದು ಹೋದ ವೃದ್ದೆ..!
ಪಾಳಾದ ಇಂದಿರಾ ಗಾಂಧಿ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಇದೇಂಥ ಸ್ಥಿತಿ..? ಈ ಮಕ್ಕಳಿಗೆ ನುಸಿ ತುಂಬಿರೋ ದವಸದ ಆಹಾರವೇ ಗತಿಯಾ..?
ಹುಬ್ಬಳ್ಳಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಮುಂಡಗೋಡಿನ ಮಹದೇಶ್ವರ ಲಿಂಗದಾಳ, RTI ಹೆಸ್ರಲ್ಲಿ ಈ ವಂಚಕ ಪಡೆ ಮಾಡಿದ್ದೇನು..?
ಸಾಲಬಾಧೆ, ಬಾಚಣಕಿಯಲ್ಲಿ ನೇಣಿಗೆ ಶರಣಾದ ಅನ್ನದಾತ..! ತನ್ನ ದನದ ಕೊಟ್ಟಿಗೆಯಲ್ಲೇ ಆತ್ಮಹತ್ಯೆ..!
ಅಭಿಮಾನಿಗಳ ನೆಚ್ಚಿನ “ಹೈಸ್ಪೀಡ್ ಮಣಿ” ಟಗರು ಅಕಾಲಿಕ ಸಾವು..! ಸಾವಿರಾರು ಅಭಿಮಾನಿಗಳ ಕಂಬನಿ..!
ವಯಸ್ಸು 45 ಆದ್ರೂ ಮದುವೆ ಆಗಲಿಲ್ಲ, ಅದೇ ಕೊರಗಲ್ಲೇ ಚಾಕು ಇರಿದುಕೊಂಡ, ಆತ್ಮಹತ್ಯೆಗೆ ಯತ್ನಿಸಿದ..!
ಮುಂಡಗೋಡಿನ ಕಿರಣ್ ಸಾಳುಂಕೆಗೆ ಗಡಿಪಾರು..!ಯಾದಗಿರಿ ಜಿಲ್ಲೆಗೆ ಗಡಿಪಾರು ಮಾಡಿ ಶಿರಸಿ ಎಸಿ ಆದೇಶ..!!
ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂದಿನ 3 ದಿನ ರೆಡ್ ಅಲರ್ಟ್: ಎಚ್ಚರವಹಿಸಲು, ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ಸೂಚನೆ..!
Rain Red alert; ಕಾರವಾರ; ಭಾರತೀಯ ಹವಾಮಾನ ಇಲಾಖೆ/ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬೆಂಗಳೂರು ಇವರ ಮುನ್ಸೂಚನೆಯಂತೆ ರಾಜ್ಯದ ಕರಾವಳಿ ಭಾಗದಲ್ಲಿ ಮುಂದಿನ ಮೂರು ದಿನಗಳಿಗೆ (ದಿನಾಂಕ:12.06.2025 ರಿಂದ 14.06.2025 ವರೆಗೆ) ರೆಡ್ ಅಲರ್ಟ್ ಇದ್ದು, ಈ ದಿನಗಳಲ್ಲಿ ಜಿಲ್ಲೆಯ ಭಾಗಗಳಲ್ಲಿ ಗುಡುಗು ಸಿಡಿಲಿನೊಂದಿಗೆ ಕೆಲವು ಪ್ರದೇಶಗಳಲ್ಲಿ ಹೆಚ್ಚಿನ ಗಾಳಿಯಿಂದ ಕೂಡಿದ ಮಳೆಯಾಗುವ ಸಾಧ್ಯತೆಯಿದ್ದು, ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಕೆಲವು ಪ್ರದೇಶಗಳಲ್ಲಿ ಹೆಚ್ಚಿನ ಗಾಳಿ ಬೀಸುವ ಸಾಧ್ಯತೆಯಿರುವ ಹಿನ್ನಲೆಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರಿಗೆ ಹಾಗೂ ಅಧಿಕಾರಿಗಳಿಗೆ ಈ ಕೆಳಕಂಡoತೆ ಸೂಚನೆಗಳನ್ನು ನೀಡಲಾಗಿದೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರವನ್ನು ತೆರೆಯಲಾಗಿದ್ದು, ಸಾರ್ವಜನಿಕರು ಜಿಲ್ಲೆಯ ಹರಾಮಾನ ಪರಿಸ್ಥಿತಿಯ ಕುರಿತಂತೆ 24×7 ವರದಿಗಳನ್ನು ಜಿಲ್ಲಾಧಿಕಾರಿಗಳ ಸಾಮಾಜಿಕ ಜಾಲಚಾಣ ಹಾಗೂ ಸ್ಥಳೀಯ ಸುದ್ದಿ ಪತ್ರಿಕೆಗಳನ್ನು ಪರಿಶೀಲಿಸಬಹುದಾಗಿರುತ್ತದೆ ಸಾರ್ವಜನಿಕರು ಯಾವುದೇ ಅನಧೀಕೃತ/ವದಂತಿಗಳಿಗೆ ಕಿವಿಗೊಡಬಾರದು. ಮೇಲೆ ತಿಳಿಸಿದ ಅವಧಿಯಲ್ಲಿ...
ಬಾಚಣಕಿ ಬಳಿ ಬೈಕ್ ಗಳ ನಡುವೆ ಭೀಕರ ಅಪಘಾತ, ನಾಲ್ವರಿಗೆ ಗಾಯ..! ಮೂವರು ಗಂಭೀರ, ಓರ್ವನ ಸ್ಥಿತಿ ಚಿಂತಾಜನಕ..!
Mundgod Accident News; ಮುಂಡಗೋಡ ತಾಲೂಕಿನ ಬಾಚಣಕಿ ಬಳಿ ಭೀಕರ ಅಪಘಾತವಾಗಿದೆ. ಬೈಕುಗಳ ನಡುವೆ ಮುಖಾಮುಕಿ ಡಿಕ್ಕಿಯಾಗಿದೆ. ಪರಿಣಾಮ ನಾಲ್ಕು ಜನರಿಗೆ ಗಾಯವಾಗಿದೆ. ಮೂವರಿಗೆ ಗಂಭೀರ ಗಾಯವಾಗಿದೆ. ಬಾಚಣಕಿ ಬೀಗರ ಮನೆಗೆ ಬಂದಿದ್ದ ಮಂಜುನಾಥ್ (25), ಬಾಚಣಕಿಯ ಶಿವಯ್ಯ ಈರ್ಪಯ್ಯ ಮಠದ (28) ನಿಂಗಪ್ಪ ಕುಸೂರು(65), ಎಂಬುವ ಮೂವರಿಗೆ ಗಂಭೀರ ಗಾಯವಾಗಿದೆ ಅಂತಾ ಮಾಹಿತಿ ಬಂದಿದೆ. ಇನ್ನು ನಾಗರಾಜ ನಿಂಗಪ್ಪ ಸಾಗರ್(28) ಸಣ್ಣಪುಟ್ಟ ಗಾಯವಾಗಿದೆ. ಇದ್ರಲ್ಲಿ ಮಂಜುನಾಥ್ ಎಂಬುವ ಯುವಕನ ಸ್ಥಿತಿ ಚಿಂತಾಜನಕವಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ. ರಾಯಲ್ ಎನ್ಫೀಲ್ಡ್ ಹಾಗೂ ಅಪಾಚಿ ಬೈಕಗಳ ನಡುವೆ ಅಪಘಾತ ಸಂಭವಿಸಿದ್ದು. ಗಾಯಾಳುಗಳನ್ನು ಮುಂಡಗೋಡ ತಾಲೂಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರು ಕ್ರಿಕೆಟ್ ಕಾಲ್ತುಳಿತ ಘಟನೆ ಯಲ್ಲಿ ಮೃತ ಅಕ್ಷತಾ ಕುಟುಂಬಕ್ಕೆ ರೂ.25 ಲಕ್ಷ ಪರಿಹಾರ ವಿತರಣೆ..!
Siddapur News; ಸಿದ್ದಾಪುರ; ಇತ್ತೀಚೆಗೆ ಬೆಂಗಳೂರಿನಲ್ಲಿ ಆರ್ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತಕ್ಕೆ ಒಳಗಾಗಿ ಮೃತಪಟ್ಟ ಸಿದ್ಧಾಪುರದ ಗೃಹಿಣಿ ಅಕ್ಷತಾ ಅವರ ಕುಟುಂಬದವರಿಗೆ ರಾಜ್ಯ ಸರ್ಕಾರದ ವತಿಯಿಂದ ರೂ. 25 ಲಕ್ಷ ಪರಿಹಾರದ ಚೆಕ್ ನ್ನು ಶಿರಸಿ-ಸಿದ್ದಾಪುರ ಶಾಸಕ ಭೀಮಣ್ಣ ನಾಯ್ಕ ಸೋಮವಾರ ಮೃತರ ಮನೆಗೆ ತೆರಳಿ ವಿತರಿಸಿದರು. ನಂತರ ಮಾತನಾಡಿದ ಅವರು ಆರ್ಸಿಬಿ ವಿಜಯೋತ್ಸವ ವೇಳೆ ಕಾಲ್ತುಳಿತಕ್ಕೆ ಒಳಗಾದ ಕುಟುಂಬಕ್ಕೆ ರಾಜ್ಯ ಸರ್ಕಾರ ಘೋಷಣೆ ಮಾಡಿದ 25 ಲಕ್ಷ ಪರಿಹಾರವನ್ನು ಮೃತ ಕುಟುಂಬದ ಮನೆ ಬಾಗಿಲಿಗೆ ತೆರಳಿ ಕುಟುಂಬಸ್ಥರಿಗೆ ಚೆಕ್ ವಿತರಿಸಲಾಗಿದೆ ಎಂದರು. ಈ ಪರಿಹಾರದ ಹಣದಿಂದ ಮೃತರ ಕುಟುಂಬಸ್ಥರ ದುಃಖವನ್ನು ಭರಿಸಲು ಸಾಧ್ಯವಿಲ್ಲ. ಈ ಘಟನೆ ನಡೆಯಬಾರದಿತ್ತು ಆದರೆ ನಡೆದಿದೆ. ಈ ನೋವುನ್ನು ಭರಿಸುವ ಶಕ್ತಿಯನ್ನು ಹಾಗೂ ಕುಟುಂಬಕ್ಕೆ ಆತ್ಮಸ್ಥೆರ್ಯ ತುಂಬಿ ಜನ ಸಾಮಾನ್ಯರ ಜೊತೆ ಬೆರೆಯುವಂತ ಶಕ್ತಿ ಆ ಪರಮಾತ್ಮ ನೀಡಲಿ ಎಂದರು. ಜಿಲ್ಲಾಧಿಕಾರಿ ಕೆ. ಲಕ್ಷ್ನೀಪ್ರಿಯ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಕುಟುಂಬಸ್ಥರಿಗೆ ಯಾವುದೇ ನೆರವಿನ ಅಗತ್ಯವಿದ್ದಲ್ಲಿ ಜಿಲ್ಲಾಡಳಿತದ...
ಅತ್ತಿವೇರಿ ಪಕ್ಷಿಧಾಮದ ಕೂಗಳತೆ ದೂರದಲ್ಲಿ ಮತ್ತೆ ಎರಡು ಶ್ರೀಗಂಧದ ಮರ ಕಳ್ಳತನ..! ಇಲ್ಲಿನ ಅಧಿಕಾರಿಗಳ ನಿರ್ಲಕ್ಷಕ್ಕೆ ಇನ್ನೇಷ್ಟು ಬಲಿ ಬೇಕು..?
Forest News; ಅತ್ತಿವೇರಿ ಪಕ್ಷಿಧಾಮದ ಕೂಗಳತೆ ದೂರದಲ್ಲಿ, ಅಂದ್ರೆ ಅತ್ತಿವೇರಿ ಗ್ರಾಮದಲ್ಲೇ ಶ್ರೀಗಂಧದ ಮರಗಳ ಕಳ್ಳತನವಾಗಿದೆ. ಎರಡು ಮರಗಳನ್ನು ಕಳ್ಳತನ ಮಾಡಲು ಯತ್ನಿಸಿರೋ ಖದೀಮರು ಒಂದು ಮರವನ್ನು ಕಡಿದು ಸಾಗಿಸಿದ್ದಾರೆ. ಮತ್ತೊಂದು ಮರವನ್ನು ಅರ್ಧಮರ್ದ ಕಡಿದು ಅಲ್ಲೇ ಬಿಟ್ಟು ಹೋಗಿದ್ದಾರೆ. ವಿಚಿತ್ರ ಅಂದ್ರೆ ಇಲ್ಲಿ ಕರ್ತವ್ಯ ನಿರ್ವಹಿಸ್ತಿರೋ ಅರಣ್ಯ ಅಧಿಕಾರಿಗಳು, ಸಿಬ್ಬಂದಿಗಳು ಅದೇಲ್ಲಿಗೆ ಹೋಗಿ ನಿದ್ದೆಗೆ ಜಾರಿದ್ದಾರೋ ಗೊತ್ತಿಲ್ಲ, ಈ ಭಾಗದಲ್ಲಿ ಅರಣ್ಯ ಸಂಪತ್ತು ಅನ್ನೋದು ನಿತ್ಯವೂ ಲೂಟಿಯಾಗ್ತಿದೆ. ಅದು ಜಸ್ಟ್ ಜನವಸತಿ ಏರಿಯಾ..! ಅಂದಹಾಗೆ, ಅತ್ತಿವೇರಿಯಲ್ಲಿ ಮೆಹಬೂಬ್ ಸುಭಹಾನಿ ಜಂಡೇ ಕಟ್ಟೆ ಇದೆ. ಅದರ ಹತ್ತಿರ ಹುಲುಸಾಗಿ ಬೆಳೆದಿದ್ದ ಎರಡು ಶ್ರೀಗಂಧದ ಮರ ಕಳ್ಳರ ಪಾಲಾಗಿದೆ. ಅಸಲು, ಇದೇ ಅತ್ತಿವೇರಿ ಪಕ್ಷಿಧಾಮದ ಮಡಿಲಲ್ಲೇ ಇದ್ದ ಅದೇಷ್ಟೋ ಶ್ರೀಗಂಧದ ಮರಗಳು ಕಳ್ಳರ ಕೈ ಸೇರಿವೆ. ಹಾಡಹಗಲೇ ಇಲ್ಲಿ ಕಳ್ಳತನ ನಡೆದ್ರೂ ಅದರ ಬಗ್ಗೆ ಇಲ್ಲಿನ ಅಧಿಕಾರಿಗಳು ತುಟಿ ಬಿಚ್ಚೋದೇ ಇಲ್ಲ. ಅದ್ರಲ್ಲೂ ಇಲ್ಲಿನ ಕೆಲ ಸಿಬ್ಬಂದಿಗಳು ಅರಣ್ಯದ ರಕ್ಷಣೆಗೆ ಇದ್ದಾರೋ ಇಲ್ವೊ...
ಜೈನ ಸಮುದಾಯದ ಬೇಡಿಕೆ ಈಡೇರಿಸದಿದ್ದರೆ, ಸಲ್ಲೇಖನ ವೃತ ಕೈಗೊಳ್ಳುತ್ತೇನೆ- ಸರ್ಕಾರಕ್ಕೆ ರಾಷ್ಟ್ರಸಂತ ಗುಣಧರ ನಂದಿ ಮುನಿಗಳ ಎಚ್ಚರಿಕೆ..!
Jain Samavesh News: ಐನಾಪುರ(ಚಿಕ್ಕೋಡಿ) ಜೈನ ಸಮುದಾಯ ಬೇಡಿಕೆಗಳನ್ನು ಹಲವು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ, ಆದ್ರೆ, ಇದುವರೆಗೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ನಮ್ಮ ಬೇಡಿಕೆ ಈಡೇರದಿದ್ದರೆ ಸಲ್ಲೇಖನ ವೃತ ಕೈಗೊಳ್ಳುವುದಾಗಿ ರಾಷ್ಟ್ರ ಸಂತ ಶ್ರೀ ಗುಣಧರನಂದಿ ಮಹಾರಾಜರು ಎಚ್ಚರಿಕೆ ನೀಡಿದ್ದಾರೆ. ಕಾಗವಾಡ ತಾಲೂಕಿನ ಐನಾಪುರ ಗ್ರಾಮದಲ್ಲಿ ಆಯೋಜಿಸಿದ್ದ ಅಖಿಲ ಭಾರತ ಭಟ್ಟಾರಕ ಸಮ್ಮೇಳನ ಹಾಗೂ ಜೈನ ಸಮಾವೇಶದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಈ ಸಮಾವೇಶದಿಂದ ಇನ್ನು ಮುಂದೆ ಸಿದ್ದರಾಮಯ್ಯ ನಿದ್ದೆಗೆ ಭಂಗ ತರುವುದು ಸಿದ್ದ. ನಾವು ನಿಮಗೆ ಮತ ನೀಡಿದ್ದೇವೆ. ನೀವು ನಮಗೆ ಉಪಕಾರ ಮಾಡಿ, ನಮ್ಮ ಮಠಗಳಿಗೆ ಅನುದಾನ ಕೊಡಬೇಡಿ, ನಮ್ಮ ಜೈನ ಸಮುದಾಯ ಮಹಿಳೆಯರಿಗೆ ಸರ್ಕಾರ ವತಿಯಿಂದ ಶಿಖರಜೀ ಯಾತ್ರೆ ಹೊಗಲು ಯೋಜನೆ ಮಾಡಿ, ಜೈನ ಸಮುದಾಯಕ್ಕೆ ನಿಗಮ ಮಂಡಳಿ ರಚನೆ ಜತೆಗೆ ಪ್ರಮುಖ ಏಳು ಬೇಡಿಕೆ ಈಡೇರಿಕೆಗೆ ಮನವಿ ಸಲ್ಲಿಸಲಾಗಿದೆ ಎಂದರು. ಜಾತಿಗಣತಿಯಲ್ಲೂ ನಿರ್ಲಕ್ಷ…! ನಾವು ಚಿಕ್ಕೋಡಿಯಲ್ಲಿ ಲಕ್ಷಾಂತರ ಮಂದಿ ಇದ್ದೆವೆ....
KSRTC ಬಸ್ ಹಾಗೂ ಬೈಕ್ ನಡುವೆ ಮುಖಾಮುಕಿ ಡಿಕ್ಕಿ, ಬೈಕ್ ಸವಾರ ಸಾವು, ಮತ್ತೋರ್ವನಿಗೆ ಗಾಯ..!
Accident News: ರಾಷ್ಟ್ರೀಯ ಹೆದ್ದಾರಿ-69 ರ ಹೊನ್ನಾವರ-ಗೇರುಸೊಪ್ಪ ರಸ್ತೆಯ ವಾಟೆಹಳ್ಳ ಬಳಿ KSRTC ಬಸ್ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ, ಹಿಂಬದಿ ಸವಾರ ಗಾಯಗೊಂಡಿದ್ದಾನೆ. ಭಟ್ಕಳ ಡಿಪೋ ಬಸ್ ಹೊನ್ನಾವರ ಕಡೆಯಿಂದ ಶಿರಸಿಗೆ ತೆರಳುತ್ತಿದ್ದು, ಬೈಕ್ ಸವಾರ ಜೋಗ ಕಡೆಯಿಂದ ಹೊನ್ನಾವರ ಕಡೆಗೆ ಬರುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಬೈಕ್ ಸವಾರ ಸಾಗರ ಮೂಲದ ನಜೀಮ್ ಪಾಶ(30) ಮೃತಪಟ್ಟಿದ್ದು, ಆಯಾನ್ ಸಾಗರ ಗಾಯಗೊಂಡ ಬೈಕ್ ಹಿಂಬದಿ ಸವಾರನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಭದ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಕೇಸ್, RCB ಯಿಂದ ಮೃತರ ಕುಟುಂಬಗಳಿಗೆ ತಲಾ 1 ಕೋಟಿ ರೂ. ಪರಿಹಾರ ನೀಡಲಿ; ಶಾಸಕ ಹೆಬ್ಬಾರ್
Shivaram Hebbar: ಯಲ್ಲಾಪುರ: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತದಿಂದ 11 ಜನ ಅಭಿಮಾನಿಗಳ ಸಾವಿಗೆ ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ್ ಹೆಬ್ಬಾರ್ ಮಮ್ಮಲ ಮರಗಿದ್ದಾರೆ. ಅಲ್ದೇ RCB ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಪತ್ರಿಕಾ ಪ್ರಕಟಣೆಗಾಗಿ ಆಡಿಯೊ ಬಿಡುಗಡೆ ಮಾಡಿರೋ ಹೆಬ್ಬಾರ್ ಅಭಿಯಾನವೊಂದನ್ನು ಶುರು ಮಾಡಿದ್ದಾರೆ. ಕೋಟಿ ರೂ ಪರಿಹಾರ ಬೇಕು..! IPL ಎಂಬ ಮಾಯಾಲೋಕದಲ್ಲಿ, ಅಭಿಮಾನಿಗಳಿಂದ ಸಾವಿರಾರು ಕೋಟಿ ಬಾಚಿರೋ RCB, ಮೃತರ ಕುಟುಂಬಗಳಿಗೆ ತಲಾ ಒಂದು ಕೋಟಿ ರೂ. ಪರಿಹಾರ ನೀಡಲೇಬೇಕು ಅಂತ ಹೆಬ್ಬಾರ್ ಆಗ್ರಹಿಸಿದ್ದಾರೆ. ಅಲ್ದೇ, ಈ ಬಗ್ಗೆ ರಾಜ್ಯಾದ್ಯಂತ ಅಭಿಯಾನ ಶುರು ಮಾಡೋದಾಗ ಶಿವರಾಮ್ ಹೆಬ್ಬಾರ್ ಘೋಷಿಸಿದ್ದಾರೆ. ತನಿಖೆ ಮಾಡಲಿ..! ಸರ್ಕಾರ ಸದ್ಯ ದುರಂತದ ಕುರಿತು ಹಲವು ಆಯಾಮದಲ್ಲಿ ತನಿಖೆಗೆ ನೀಡಿದೆ. ಅಲ್ಲಿ ತನಿಖೆಯ ನಂತರ ಅದ್ಯಾರೇ ತಪ್ಪಿತಸ್ಥರಾದ್ರೂ ಅಂತವರಿಗೆ ಶಿಕ್ಷೆಯಾಗಲಿ ಅಂತಾ ಹೆಬ್ಬಾರ್ ಆಗ್ರಹಿಸಿದ್ದಾರೆ.
ರಸ್ತೆ ದಾಟುತ್ತಿದ್ದ ಚಿರತೆಗೆ ವಾಹನ ಡಿಕ್ಕಿ, ರಸ್ತೆ ಪಕ್ಕದಲ್ಲೇ ಕುಳಿತ ಗಾಯಗೊಂಡ ಚಿರತೆ, ಜನ ಹೈರಾಣು..!
Vehicle Hit a Leopard; ಕುಮಟಾ: ರಸ್ತೆ ದಾಟುತ್ತಿದ್ದ ಚಿರತೆಗೆ ವಾಹನ ಬಡಿದ ಪರಿಣಾಮ ಗಾಯಗೊಂಡು ರಸ್ತೆ ಪಕ್ಕದಲ್ಲೇ ಕುಳಿತ ಘಟನೆ ತಾಲ್ಲೂಕಿನ ಚಂದಾವರದ ಚರ್ಚ್ ಬಳಿ ನಡೆದಿದೆ. ಶನಿವಾರ ಚಂದಾವರ ಚರ್ಚ್ ಬಳಿ ಚಿರತೆಯೊಂದು ರಸ್ತೆ ದಾಟಲು ಮುಂದಾಗಿದ್ದು, ಈ ವೇಳೆ ರಸ್ತೆಯಲ್ಲಿ ವೇಗವಾಗಿ ಬಂದ ಅಪರಿಚಿತ ವಾಹನವೊಂದು ಚಿರತೆಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಚಿರತೆಯ ಸೊಂಟಕ್ಕೆ ತೀವ್ರ ಪೆಟ್ಟಾಗಿದ್ದು, ನಡೆದಾಡಲಾಗದೇ ಒದ್ದಾಡಿದ ಚಿರತೆ ರಸ್ತೆ ಪಕ್ಕದಲ್ಲಿಯೇ ಗಿಡಗಳ ಬಳಿ ಕುಳಿತಿದೆ. ಇದನ್ನೂ ಓದಿ👉 ಸಚಿವ ಮಂಕಾಳು ವೈದ್ಯರಿಗೆ ಸಾಮಾಜಿಕ ಜಾಲತಾಣದಲ್ಲಿ ತೇಜೋವಧೆ ಪೊಸ್ಟ್, ಇಬ್ಬರು ವಶಕ್ಕೆ..! ಚಿರತೆ ರಸ್ತೆ ಬಳಿ ಕುಳಿತ ಹಿನ್ನಲೆ ವಾಹನ ಸವಾರರು ಭಯದಿಂದ ಸಂಚರಿಸದೇ ರಸ್ತೆಯಲ್ಲೇ ನಿಂತಿದ್ದಾರೆ. ಇದರಿಂದಾಗಿ ಕುಮಟಾ ಸಿದ್ದಾಪುರ ಮಾರ್ಗದಲ್ಲಿ ವಾಹನ ದಟ್ಟಣೆ ಉಂಟಾಗಿದ್ದು, ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆ ಹಿಡಿಯಲು ಕಾರ್ಯಾಚರಣೆ ಕೈಗೊಂಡರು.
ಸಚಿವ ಮಂಕಾಳು ವೈದ್ಯರಿಗೆ ಸಾಮಾಜಿಕ ಜಾಲತಾಣದಲ್ಲಿ ತೇಜೋವಧೆ ಪೊಸ್ಟ್, ಇಬ್ಬರು ವಶಕ್ಕೆ..!
Mankalu Vaidya: ಭಟ್ಕಳ: ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯರಿಗೆ ಅವಮಾನ, ತೇಜೋವಧೆ ಮಾಡುವ ದೃಷ್ಟಿಯಲ್ಲಿ ಸುಳ್ಳು ವಿಡಿಯೋವನ್ನು ಹರಿಬಿಟ್ಟು ಜನರಿಗೆ ತಪ್ಪು ಸಂದೇಶ ಸಾರಿದ ಇಬ್ಬರು ಆರೋಪಿಗಳನ್ನು ಮುರ್ಡೇಶ್ವರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಾರ್ವಜನಿಕ ನೆಮ್ಮದಿ ವಿರುದ್ಧ ಅಪರಾಧ ಎಸಗುವಂತೆ ಮಾಡುವ ಉದ್ದೇಶವುಳ್ಳ ಮತ್ತು ಒಂದು ಪಕ್ಷದ ಕಾರ್ಯಕರ್ತರು ಅಪರಾಧವನ್ನು ಮಾಡುವಂತೆ ಪ್ರಚೋದಿಸುವ ಉದ್ದೇಶವುಳ್ಳ ಹೇಳಿಕೆಯನ್ನು ಸುಳ್ಳು ಮಾಹಿತಿಯನ್ನು ಅಥವಾ ಗಾಳಿಸುದ್ದಿಯನ್ನು ಸಾಮಾಜಿಕ ಜಾಲತಾಣವಾದ ಫೆಸ್ಟುಕ್ ಖಾತೆಯಿಂದ ಇರರರಿಗೆ ಶೇರ್ ಮಾಡಿದ್ದಾರೆ.ಬೈಲೂರಿನ ದೊಡ್ಡಬಟ್ಟೆಯ ನಾಗರಾಜ ಮಾದೇವ ನಾಯ್ಕ ಮತ್ತು ಬೈಲೂರಿನ ಸಣ್ಣಬಲ್ಲೆಯ ಭಾಸ್ಕರ ನಾರಾಯಣ ದೇವಾಡಿಗ ಪೊಲೀಸರ ವಶದಲ್ಲಿರುವ ಆರೋಪಿಗಳು. ಇವರು “ಭಟ್ಕಳಕ್ಕೆ ಬದಲಾವಣೆ” ಎಂಬ ಫೇಸ್ ಬುಕ್ ಖಾತೆಯಲ್ಲಿ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರಿಗೆ ಉದ್ದೇಶ ಪೂರ್ವಕವಾಗಿ ಅವಮಾನ ಆಗುವ ರೀತಿಯಲ್ಲಿ ವಿಡಿಯೋ ಹರಿಬಿಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಸುಮಾರು 1 ನಿಮಿಷ 29 ಸೆಕೆಂಡ್ ಇರುವ ವಿಡಿಯೋವನ್ನು ಹರಿಬಿಟ್ಟು...









