ಮುಂಡಗೋಡ: ಪಟ್ಟಣದ ನ್ಯಾಸರ್ಗಿ ರಸ್ತೆಯ ಮೈಲಾರಲಿಂಗ ದೇವಸ್ಥಾನದ ಹತ್ತಿರ ವ್ಯಕ್ತಿಯೋರ್ವ ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ಮುಂಡಗೋಡ ಪೊಲೀಸರು ದಾಳಿ ನಡೆಸಿ ಗಾಂಜಾ ವಶಪಡಿಸಿಕೊಂಡ ಘಟನೆ ನಡೆದಿದೆ. ಶಿಗ್ಗಾವಿ ತಾಲೂಕಿನ ಜೊಂಡಲಗಟ್ಟಿಯ ಮಾಧುರಾವ್ ಶಂಕರ್ ರಾವ್ ಭೋಸ್ಲೆ (26) ಎಂಬುವವನೇ ಆರೋಪಿಯಾಗಿದ್ದಾನೆ. ಈತ ಇಂದು ನ್ಯಾಸರ್ಗಿ ರಸ್ತೆಯ ಮೈಲಾರಲಿಂಗ ದೇವಸ್ಥಾನದ ಹತ್ತಿರ ಗಾಂಜಾ ಮಾರಾಟ ಮಾಡುತ್ತಿದ್ದ ಹಿನ್ನೆಲೆ ಖಚಿತ ಮಾಹಿತಿ ಮೇರೆಗೆ ಮುಂಡಗೋಡ ಪಿಎಸ್ಐ ಬಸವರಾಜ್ ಮಬನೂರು ಮತ್ತವರ ತಂಡ ದಾಳಿ ಮಾಡಿದೆ. ಸುಮಾರು 4 ಸಾವಿರ ಮೌಲ್ಯದ 62 ಗ್ರಾಂ ತೂಕದ ಗಾಂಜಾ ಹಾಗೂ 350 ರೂ. ನಗದು ಆರೋಪಿ ಸಮೇತ ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಮುಂಡಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Top Stories
ಕಾತೂರು ಅರಣ್ಯಾಧಿಕಾರಿಗಳ ಭರ್ಜರಿ ದಾಳಿ, ಜಿಂಕೆ ಚರ್ಮ, ಕಾಡು ಹಂದಿ ಮಾಂಸ ಸಾಗಿಸುತ್ತಿದ್ದ ಐವರು ಅಂದರ್..!
ಗೋವಾ; ನೈಟ್ ಕ್ಲಬ್ ನಲ್ಲಿ ಬೆಂಕಿ ಅವಘಡ, 23 ಮಂದಿ ಸಾವು..!
ಮುಂಡಗೋಡಿನಲ್ಲಿ ಬೆಳ್ಳಂ ಬೆಳಿಗ್ಗೆ ಭಾರೀ ಬೆಂಕಿ ಅನಾಹುತ, ಸುಟ್ಟು ಕರಕಲಾಯ್ತು ಪರ್ನಿಚರ್ ಅಡ್ಡೆ..! ಲಕ್ಷಾಂತರ ಬೆಲೆಯ ಪರ್ನಿಚರ್ ಗಳು ಬೆಂಕಿಗಾಹುತಿ..!
ಶಿರಸಿ ಎಸಿ ಕಾವ್ಯಾರಾಣಿ ವರ್ಗಾವಣೆಗೆ ಹಲವರ ಆಕ್ರೋಶ, ಆದೇಶ ರದ್ದುಗೊಳಿಸುವಂತೆ ಶೇಖರ್ ಲಮಾಣಿ ಆಗ್ರಹ..!
ಅಗಡಿ ಶ್ರೀಗಂಧ ತುಂಡುಗಳು ಸಿಕ್ಕ ಕೇಸ್, ಕಚೇರಿಗೇ ಬಂದ್ರೂ ಆರೋಪಿಯನ್ನ ಬಿಟ್ಟು ಕಳಿಸಿದ್ರಾ ಅಧಿಕಾರಿಗಳು..? RFO ಕಚೇರಿಯಿಂದಲೇ ಆರೋಪಿ ಮತ್ತೆ ಎಸ್ಕೇಪ್..!
ಅಗಡಿಯಲ್ಲಿ ಅರಣ್ಯ ಅಧಿಕಾರಿಗಳ ಭರ್ಜರಿ ದಾಳಿ, 60 ಕೆಜಿಗೂ ಹೆಚ್ಚು ಶ್ರೀಗಂಧದ ಮರದ ತುಂಡುಗಳು ವಶಕ್ಕೆ, ಆರೋಪಿ ಪರಾರಿ..!
ಚಿಗಳ್ಳಿ ಪ್ರೌಢಶಾಲೆಯ ಶಿಕ್ಷಕ ದಾಸಪ್ಪ, ಸಸ್ಪೆಂಡ್..! ಹಲವು ದಿನಗಳ ಗುದುಮುರುಗಿ ಬಳಿಕ ಶಿರಸಿ ಡಿಡಿಪಿಐ ಖಡಕ್ ಆದೇಶ..!
ಮುಂಡಗೋಡ ಮಾದರಿ ಶಾಲೆಯ ಬಿಸಿಯೂಟ ಸೇವಿಸಿದ ವಿದ್ಯಾರ್ಥಿಗಳು ಅಸ್ವಸ್ಥ..! ಆಸ್ಪತ್ರೆಗೆ ದಾಖಲು..!
ಒಂದೇ ಕುಟುಂಬದ ನಾಲ್ವರು ಬಾವಿಗೆ ಹಾರಿ ಆತ್ಮಹತ್ಯೆ..! ಮೊಮ್ಮಕ್ಕಳು, ಮಗನೊಂದಿಗೆ ಸಾವು ಕಂಡ ತಂದೆ..!
ಮುಂಡಗೋಡ ಪೊಲೀಸರ ತಡರಾತ್ರಿ ಕಾರ್ಯಾಚರಣೆ..! “ಚರಸ್” ದಂಧೆಯಲ್ಲಿ ತೊಡಗಿದ್ದ ಇಂಜಿನೀಯರ್ ಅಂದರ್..!
ಸನವಳ್ಳಿ ಬಳಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರ್, ತುಂಡಾಗಿ ಬಿದ್ದ ವಿದ್ಯುತ್ ಕಂಬ..!
ಯಲ್ಲಾಪುರ ಪೊಲೀಸ್ರ ಸಿನಿಮಿಯ ರೀತಿ ದಾಳಿ..!! ಉಮ್ಮಚಗಿ ಬ್ಯಾಂಕ್ ದರೋಡೆಗೆ ಯತ್ನಿಸಿದ್ದ ನಟೋರಿಯಸ್ ಕಳ್ಳನ ಗ್ಯಾಂಗ್ ಅಂದರ್..!
ಹನುಮಾಪುರದಲ್ಲಿ ಭೀಕರ ಬೆಂಕಿ ಅವಘಡ..! ಬೆಂಕಿಯಲ್ಲಿ ಮನೆಯ ಸಮೇತ ಬೆಂದು ಹೋದ ವೃದ್ದೆ..!
ಪಾಳಾದ ಇಂದಿರಾ ಗಾಂಧಿ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಇದೇಂಥ ಸ್ಥಿತಿ..? ಈ ಮಕ್ಕಳಿಗೆ ನುಸಿ ತುಂಬಿರೋ ದವಸದ ಆಹಾರವೇ ಗತಿಯಾ..?
ಹುಬ್ಬಳ್ಳಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಮುಂಡಗೋಡಿನ ಮಹದೇಶ್ವರ ಲಿಂಗದಾಳ, RTI ಹೆಸ್ರಲ್ಲಿ ಈ ವಂಚಕ ಪಡೆ ಮಾಡಿದ್ದೇನು..?
ಸಾಲಬಾಧೆ, ಬಾಚಣಕಿಯಲ್ಲಿ ನೇಣಿಗೆ ಶರಣಾದ ಅನ್ನದಾತ..! ತನ್ನ ದನದ ಕೊಟ್ಟಿಗೆಯಲ್ಲೇ ಆತ್ಮಹತ್ಯೆ..!
ಅಭಿಮಾನಿಗಳ ನೆಚ್ಚಿನ “ಹೈಸ್ಪೀಡ್ ಮಣಿ” ಟಗರು ಅಕಾಲಿಕ ಸಾವು..! ಸಾವಿರಾರು ಅಭಿಮಾನಿಗಳ ಕಂಬನಿ..!
ವಯಸ್ಸು 45 ಆದ್ರೂ ಮದುವೆ ಆಗಲಿಲ್ಲ, ಅದೇ ಕೊರಗಲ್ಲೇ ಚಾಕು ಇರಿದುಕೊಂಡ, ಆತ್ಮಹತ್ಯೆಗೆ ಯತ್ನಿಸಿದ..!
ಮುಂಡಗೋಡಿನ ಕಿರಣ್ ಸಾಳುಂಕೆಗೆ ಗಡಿಪಾರು..!ಯಾದಗಿರಿ ಜಿಲ್ಲೆಗೆ ಗಡಿಪಾರು ಮಾಡಿ ಶಿರಸಿ ಎಸಿ ಆದೇಶ..!!
“ಟಿಕ್ ಟಾಕ್” ನಲ್ಲೇ ರೀಲು ಬಿಟ್ಟ ನಂದಿಕಟ್ಟಾ ಹುಡುಗ, ಬೆಂಗಳೂರಿನಿಂದ್ಲೇ “ಲವ್ ಯೂ” ಅಂದ್ಲು ಹುಡುಗಿ..! ಮುಂದೆ ಆಗಿದ್ದೇನು..?
ಅದು ಅಪ್ಪಟ ಒಂದೂವರೇ ವರ್ಷದ ಪ್ರೇಮ್ ಕಹಾನಿ. ಆಕೆ ದೂರದ ಬೆಂಗಳೂರಿನವಳು, ಈತ ಮುಂಡಗೋಡ ತಾಲೂಕಿನ ನಂದಿಕಟ್ಟಾದವನು. ಟಿಕ್ ಟಾಕ್ ನಲ್ಲೇ ಶುರುವಾದ ಪ್ರೇಮ ಎರಡು ಮಕ್ಕಳ ತಾಯಿಯೊಂದಿಗೆ ಪ್ರೀತಿ, ಪ್ರೇಮದ ಹೆಸರಲ್ಲಿ ಕೊನೆಗೆ ಮದುವೆಯ ಮೂರು ಗಂಟು ಬೀಳುವಂತೆ ಮಾಡಿತ್ತು. ಆದ್ರೀಗ ಆ ಸಂಬಂಧ ಅಕ್ಷರಶಃ ಮೂರಾಬಟ್ಟೆಯಾಗಿದೆ. ಹಾಗಂತ, ಆ ಮಹಿಳೆ ಬೆಂಗಳೂರಿನ ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ತನ್ನ ನೂತನ ಪತಿಯ ವಿರುದ್ಧ ಕೇಸು ದಾಖಲಿಸಿದ್ದಾಳೆ. ಅದ್ರ ಜೊತೆ ನಂಗೆ ನನ್ನ ಪತಿಯನ್ನ ಹುಡುಕಿ ಕೊಡಿ ಅಂತಾ ಮೊರೆ ಇಟ್ಟಿದ್ದಾಳೆ. ಏನಿದು ಕತೆ..? ಆಕೆಯ ಹೆಸ್ರು ಸಿಂಧು ಅಂತಾ. ಹಾಗಂತ ಇದು ಆಕೆಯ ಈಗಿನ ಹೆಸರು. ಮೊದಲನೇಯ ಹೆಸರು ಬೇರೆ ಇದೆ. ರೇಷ್ಮಾ ಅನ್ನೋದು ಆಕೆಯ ಮೊದಲ ಹೆಸರು. ನೋಡಲು ಸೌಂದರ್ಯವತಿ. ಕಳೆದ ಏಳು ವರ್ಷದ ಹಿಂದೆ ವಯಸ್ಸಲ್ಲದ ವಯಸ್ಸಲ್ಲಿ, ಗಾರೆ ಕೆಲಸ ಮಾಡಿಕೊಂಡಿದ್ದ ಯುವಕನ ಜೊತೆ “ನಿಖಾಹ” ಮಾಡಿಕೊಂಡಾಕೆ. ಆತನಿಂದ ಎರಡು ಹೆಣ್ಣು ಮಕ್ಕಳನ್ನು ಕರುಣಿಸಿಕೊಂಡಾಕೆ. ಆ ನಂತರದಲ್ಲಿ...
ಗುಂಜಾವತಿ ಅರಣ್ಯದಲ್ಲಿ ಅಪ್ಪಟ ರೌಡಿಸಂ, ಅರಣ್ಯ ರಕ್ಷಕನ ಮೇಲೆ ಭಂಡರ ಗೂಂಡಾಗಿರಿ.. ಶ್..! ನಿದ್ದೆಯಲ್ಲಿದ್ದಾರೆ ಅಧಿಕಾರಿಗಳು
ಮುಂಡಗೋಡ: ತಾಲೂಕಿನಲ್ಲಿ ಅರಣ್ಯ ಸಂಪತ್ತು ರಕ್ಷಿಸುವ ಅರಣ್ಯ ರಕ್ಷಕರ ಜೀವಗಳಿಗೆ ಬೆಲೆಯೇ ಇಲ್ವಾ..? ಅಥವಾ ತಾಲೂಕಿನ ಅರಣ್ಯ ಇಲಾಖೆಯ ಏಸಿ ರೂಮಲ್ಲಿ ತಣ್ಣಗೆ ಕುಳಿತ ಹಿರಿಯ ಅಧಿಕಾರಿಗಳಿಗೆ “ಬಿಟ್ಟೂ ಬ್ಯಾಸರಕಿ” ಬಂದಿದೆಯಾ..? ಅರ್ಥವೇ ಆಗ್ತಿಲ್ಲ. ತಮ್ಮ ಇಲಾಖೆಯ ಅರಣ್ಯ ರಕ್ಷಕನೊಬ್ಬನ ಮೇಲೆ ಮನಬಂದಂತೆ ಎಗರಾಡಿದವರ ಪರವಾಗಿ “ದೊಡ್ಡ ಗುಣ” ತೋರಿಸಿ ಥೇಟು ಗಾಂಧಿ ತತ್ವದ ನಾಟಕ ಮಾಡ್ತಿದಾರಾ ಮುಂಡಗೋಡಿನ ಅರಣ್ಯ ಅಧಿಕಾರಿಗಳು..? ಯದ್ವಾ ತದ್ವಾ ರೌಡಿಸಂ..! ಅಂದಹಾಗೆ, ನಾವೀಗ ನಿಮಗೆ ಒಂದು ವಿಡಿಯೊ ತುಣುಕು ತೋರಿಸಲು ಹೊರಟಿದ್ದಿವಿ..ಈ ವಿಡಿಯೊ ನೋಡಿದ್ರೆ ಮುಂಡಗೋಡ ತಾಲೂಕಿನಲ್ಲಿ ಹೀಗೂ ಆಗ್ತಿದೆಯಾ ಅನ್ನೋ ಕೆಟ್ಟ ಬೇಸರ ಆಗತ್ತೆ. ತಾಲೂಕಿನಲ್ಲಿ ಹೇರಳವಾಗಿರೋ ಅರಣ್ಯ ಸಂಪತ್ತಿನ ರಕ್ಷಣೆಗೆ ನಿಂತಿರೋ ಪ್ರಾಮಾಣಿಕ ಸಿಬ್ಬಂದಿಗಳಿಗೆ ರಕ್ಷಣೆ ಇಲ್ವಾ..? ಅನ್ನೋ ನೋವು ಕಾಡತ್ತೆ. ಅದು ಗುಂಜಾವತಿ..! ಮುಂಡಗೋಡ ತಾಲೂಕಿನ ಗುಂಜಾವತಿ ಅರಣ್ಯ ಭಾಗದಲ್ಲಿ ಕೆಲವು ಅರಣ್ಯಗಳ್ಳರ ಅಂಧಾ ದರ್ಬಾರ್ ನಡೀತಿದೆ. ಕೆಲವು ರಾಜಕೀಯ ವ್ಯಕ್ತಿಗಳ ಬೆಂಗಾವಲಿನಲ್ಲಿ ಇನ್ನಿಲ್ಲದ ಅಕ್ರಮಗಳು ನಡೀತಿವೆ ಅನ್ನೋ ಆರೋಪ ಇದೆ....
“ಮುಂದಿನ ಮುಖ್ಯಮಂತ್ರಿ ಶ್ರೀರಾಮುಲು” ಅಭಿಮಾನಿಯ ಘೋಷಣೆ..! ಬಿಜೆಪಿಯಲ್ಲೂ ಮೊಳಗಿದ ಮುಂದಿನ ಸಿಎಂ ಕೂಗು
ಮುಂಡಗೋಡ: ಪಟ್ಟಣಕ್ಕೆ ಇಂದು ಹಲವು ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಾರಿಗೆ ಸಚಿವ ಶ್ರೀರಾಮುಲುರವರಿಗೆ ಭವ್ಯ ಸ್ವಾಗತ ಕೋರಲಾಯಿತು. ಜೊತೆಗೆ ಇದೇ ವೇಳೆ ಸಚಿವರು ಗಲಿಬಿಲಿಗೊಳ್ಳುವಂತಹ ಘಟನೆಯೂ ನಡೆಯಿತು. ಸಾರಿಗೆ ಸಚಿವ ಶ್ರೀರಾಮುಲು ಮುಂಡಗೋಡ ಪಟ್ಟಣಕ್ಕೆ ಬಂದಿಳಿಯುತ್ತಿದ್ದಂತೆ, ಸಚಿವ ಶಿವರಾಮ್ ಹೆಬ್ಬಾರ್ ಶ್ರೀರಾಮುಲುರವರಿಗೆ ಸ್ವಾಗತಿಸಲು ಮುಂದಾಗಿದ್ರು. ಈ ವೇಳೆ ಸಚಿವ ಶ್ರೀರಾಮುಲುರಿಗೆ, ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಶಾಲು ಹೊದಿಸಿ ಹಾರ ಹಾಕಿ ನೆನಪಿನ ಕಾಣಿಕೆ ಕೊಟ್ಟು ಸ್ವಾಗತಿಸಿದ್ರು. ಇದೇ ವೇಳೆ ಅಭಿಮಾನಿಗಳ ಮದ್ಯದಿಂದ “ಮುಂದಿನ ಮುಖ್ಯಮಂತ್ರಿ ಶ್ರೀರಾಮುಲುಗೆ ಜಯವಾಗಲಿ” ಅನ್ನೋ ಘೋಷಣೆ ಕೇಳಿ ಬಂತು. ಹೀಗಾಗಿ ಕೆಲಹೊತ್ತು ಸಚಿವ ಹೆಬ್ಬಾರ್ ಹಾಗೂ ಶ್ರೀರಾಮುಲು ಗಲಿಬಿಲಿಗೊಂಡ್ರು. ಹಾಗೆ ಘೋಷಣೆ ಕೂಗಿದ ವ್ಯಕ್ತಿಗೆ ಕೂಗದಂತೆ ನಿಲ್ಲಿಸಿದ್ರು. ಇದರ ಜೊತೆಗೆ ಸದ್ಯ ಬಿಜೆಪಿ ರಾಜ್ಯ ನಾಯಕತ್ವ ಬದಲಾವಣೆಯ ಮಾತುಗಳ ನಡುವೆ, ಮುಂದಿನ ಸಿಎಂ ಬಗ್ಗೆ ಕೂಗುಗಳು ಏಳುತ್ತಿವೆಯಾ ಅನ್ನೋ ಪ್ರಶ್ನೆಯೂ ಎದ್ದಿದೆ.
ಪೊಲೀಸ್ ಇಲಾಖೆ ಯಾವ ಸರ್ಕಾರದ ಅಡಿಯಲ್ಲಿದೆ..? ಹೆಚ್ಡಿಕೆ ಆರೋಪಕ್ಕೆ ಸಚಿವ ಹೆಬ್ಬಾರ್ ತಿರುಗೇಟು..!
ಮುಂಡಗೋಡ: ಪೊಲೀಸ್ ಇಲಾಖೆ ಯಾವ ಸರ್ಕಾರದ ಅಡಿಯಲ್ಲಿ ಕೆಲಸ ಮಾಡ್ತಿದೆ..? ಕಮಲ್ ಪಂಥ್ ಯಾವ ಸರ್ಕಾರದಲ್ಲಿ ನೌಕರರಾಗಿದ್ದಾರೆ..? ಯಾರ ಸೂಚನೆಯ ಮೇರೆಗೆ ಕೆಲಸ ನಿರ್ವಹಿಸ್ತಾರೆ..? ಅದು ಕುಮಾರಸ್ವಾಮಿಯವರಿಗೆ ಅರ್ಥವಾಗಲಿ ಅಂತಾ ಶಿವರಾಮ್ ಹೆಬ್ಬಾರ್ ತಿರುಗೇಟು ನೀಡಿದ್ರು. ಪಿಎಸ್ಐ ಅಕ್ರಮ ಪ್ರಕರಣ ಬೆಳಕಿಗೆ ತಂದಿದ್ದು ಪೊಲೀಸ್ ಇಲಾಖೆ, ಹೊರತು ಬಿಜೆಪಿ ಸರ್ಕಾರವಲ್ಲ ಅಂತಾ ಮಾಜಿ ಸಿಎಂ ಕುಮಾರಸ್ವಾಮಿ ಆರೋಪಕ್ಕೆ ಮುಂಡಗೋಡಿನಲ್ಲಿ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಪಬ್ಲಿಕ್ ಫಸ್ಟ್ ನ್ಯೂಸ್ ಗೆ ಪ್ರತಿಕ್ರಿಯಿಸುತ್ತ ಮಾತನಾಡಿದ್ರು.. ಪಿಎಸ್ಐ ಅಕ್ರಮ ಪ್ರಕರಣ ಇನ್ನೂ ತನಿಖಾ ಹಂತದಲ್ಲಿದೆ, ತನಿಖೆ ಮುಗಿಯುವವರೆಗೂ ತಾಳ್ಮೆಯಿಂದ ಇರಬೇಕು, ಈಗಾಗಲೇ ಸಾಕಷ್ಟು ಆರೋಪಿಗಳನ್ನ ಪ್ರಕರಣ ಸಂಬಂಧ ಬಂಧಿಸಲಾಗಿದೆ. ಇನ್ನೂ ಹಲವರನ್ನು ಈ ಕೇಸ್ ನಲ್ಲಿ ಬಂಧಿಸುವ ಪ್ರಕ್ರಿಯೆ ಜಾರಿಯಲ್ಲಿದೆ ಹೀಗಿರುವಾಗ ಇಲ್ಲ ಸಲ್ಲದ ಆರೋಪ ಮಾಡುವುದು ಸರಿಯಲ್ಲ ಅಂತಾ ಇದೇ ವೇಳೆ ಶಿವರಾಮ್ ಹೆಬ್ಬಾರ್ ಹೇಳಿದ್ರು.
ಹುನಗುಂದ ಗ್ರಾಮದಲ್ಲಿ ಸರಾಯಿ ನಿಷೇಧ, ಗ್ರಾಮಸ್ಥರ ತೀರ್ಮಾನ, ಸರಾಯಿ ಮಾರಿದ್ರೆ 50 ಸಾವಿರ ದಂಡ..!
ಮುಂಡಗೋಡ: ತಾಲೂಕಿನ ಹುನಗುಂದ ಗ್ರಾಮದಲ್ಲಿ ಐತಿಹಾಸಿಕ ನಿರ್ಣಯ ಕೈಗೊಳ್ಳಲಾಗಿದೆ. ಗ್ರಾಮವನ್ನು ಸರಾಯಿ ಮುಕ್ತ ಗ್ರಾಮವನ್ನಾಗಿ ಘೋಷಣೆ ಮಾಡಲಾಗಿದ್ದು, ಗ್ರಾಮದಲ್ಲಿ ಸರಾಯಿ ನಿಷೇಧ ಮಾಡಲಾಗಿದೆ. ಈ ಮೂಲಕ ಅದೇಷ್ಟೋ ಬಡ ಮಹಿಳೆಯರ ಬಹುದಿನದ ಆಸೆ ನೆರವೇರಿದಂತಾಗಿದೆ. ಗ್ರಾಮದಲ್ಲಿ ಇಂದು ಸಭೆ ಸೇರಿದ್ದ ಗ್ರಾಮಸ್ಥರು, ಮುಖಂಡರು ಈ ಬಗ್ಗೆ ಐತಿಹಾಸಿಕ ತೀರ್ಮಾನ ಕೈಗೊಂಡಿದ್ದಾರೆ. ಇಂದಿನಿಂದ ಗ್ರಾಮದಲ್ಲಿ ಸರಾಯಿ ನಿಷೇಧಿಸಿ ಠರಾವು ಬರೆದಿದ್ದಾರೆ. ಒಂದುವೇಳೆ ಗ್ರಾಮದಲ್ಲಿ ಸರಾಯಿ ಮಾರಾಟ ಮಾಡಿದ್ರೆ 50 ಸಾವಿರ ದಂಡ ವಿಧಿಸುವ ನಿರ್ಣಯ ಕೈಗೊಂಡಿದ್ದಾರೆ.
ವಡಗಟ್ಟಾ ಬಳಿ ಬೈಕ್ ಅಪಘಾತ: ಗಾಯಗೊಂಡಿದ್ದ ಅರಶಿಣಗೇರಿಯ ಉಮೇಶ್ ಲಮಾಣಿ ಸಾವು..!
ಮುಂಡಗೋಡ: ತಾಲೂಕಿನ ವಡಗಟ್ಟಾ ಸಮೀಪದ ಬೀರವಳ್ಳಿ ಕ್ರಾಸ್ ಬಳಿ, ಏ.29 ರಂದು ನಡೆದಿದ್ದ ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಅರಶಿಣಗೇರಿ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಮೃತಪಟ್ಟಿದ್ದಾನೆ. ಮುಂಡಗೋಡ ತಾಲೂಕಿನ ಅರಶಿಣಗೇರಿಯ ಉಮೇಶ್ ಶೇಖಪ್ಪಾ ಲಮಾಣಿ(55) ಮೃತಪಟ್ಟ ದುರ್ದೈವಿಯಾಗಿದ್ದಾನೆ. ಕಳೆದ ಏ.29 ರಂದು ಬೀರವಳ್ಳಿ ಕ್ರಾಸ್ ಬಳಿ ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಮಹಿಳೆಯರೂ ಸೇರಿ ನಾಲ್ವರು ಗಂಭೀರ ಗಾಯಗೊಂಡಿದ್ದರು. ಗಾಯಾಳುಗಳನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲಿಸಲಾಗಿತ್ತು.
ವಿ.ಎಸ್.ಪಾಟೀಲ್ “ಹಸ್ತ”ಲಾಘವಕ್ಕೆ ವೇದಿಕೆ ಸಜ್ಜು, ಅಷ್ಟಕ್ಕೂ “ಕೈ”ಮುಂದೆ ಪಾಟೀಲರ ಕಂಡೀಶನ್ಸ್ ಏನು..?
ಯಲ್ಲಾಪುರ ಕ್ಷೇತ್ರದಲ್ಲಿ ಸದ್ಯ ವಿಲಿ ವಿಲ ಒದ್ದಾಡುತ್ತಿರೋ ಕೈ ಪಾಳಯಕ್ಕೆ ಆಕ್ಸಿಜನ್ ಒದಗಿಸಬಲ್ಲ ವಿದ್ಯಮಾನಗಳು ಒಳಗೊಳಗೆ ಜಾರಿಯಲ್ಲಿವೆ. ಬಿಜೆಪಿಯ ಮಾಜಿ ಶಾಸಕ ಹಾಲಿ ವಾಯುವ್ಯ KSRTC ಅಧ್ಯಕ್ಷ ವಿ.ಎಸ್ ಪಾಟೀಲ್ ಕಾಂಗ್ರೆಸ್ ಸೇರೋದು ಬಹುತೇಕ ಫಿಕ್ಸ್ ಆಗಿರೋ ಎಲ್ಲಾ ಲಕ್ಷಣಗಳು ಕಾಣ್ತಿವೆ. ಆದ್ರೆ, ಚಾಣಾಕ್ಷ ವಿ.ಎಸ್. ಪಾಟೀಲ್ ಸುಮ್ಮ ಸುಮ್ಮನೇ ಕಾಂಗ್ರೆಸ್ ಸೇರ್ತಿಲ್ಲ, ಬದಲಾಗಿ ಅದಕ್ಕೊಂದು ಬಲಿಷ್ಟ “ಕಣ” ಕಾರ್ಯತಂತ್ರ ರೂಪಿಸಿಕೊಂಡೇ ಕೈ ಪಡೆಗೆ ಎಂಟ್ರಿ ಕೊಡುವ ಎಲ್ಲಾ ಸಾಧ್ಯತೆಗಳೂ ದಟ್ಟವಾಗಿದೆ. ಪ್ರಶಾಂತ್ ಯಡವಟ್ಟು..? ನಿಜ, ಸದ್ಯ ಯಲ್ಲಾಪುರ ಕಾಂಗ್ರೆಸ್ ಪರಿಸ್ಥಿತಿ ಚಿಂತಾಜನಕವಾಗಿದೆ. ಪ್ರಶಾಂತ್ ದೇಶಪಾಂಡೆಯವರ ಯಡವಟ್ಟು ನಿರ್ಧಾರಗಳಿಂದ ಈಗಷ್ಟೇ ಬಲಿಷ್ಟವಾಗುತ್ತಿದ್ದ “ಕೈ” ಬಲ ಕಳೆದುಕೊಂಡಿದೆ. ಪಕ್ಷಕ್ಕಾಗಿ ಹಗಲು ರಾತ್ರಿ ಬೆವರು ಹರಿಸಿದ್ದವರನ್ನು ಒಂದೇ ಏಟಿನಲ್ಲಿ ಚಿಮ್ಮಿ ಹಾಕಿದ್ದಾರೆ ಪ್ರಶಾಂತಣ್ಣ. ಹಾಗಂತ, ಇಲ್ಲಿ ನಾವು ಈ ಮಾತು ಹೇಳ್ತಿಲ್ಲ. ಬದಲಾಗಿ, ನೊಂದ ಕಾರ್ಯಕರ್ತರೇ ಬಾಯಿ ಬಾಯಿ ಬಡಕೊತಿದಾರೆ. ಯಲ್ಲಾಪುರ ಕ್ಷೇತ್ರದ ಕಾಂಗ್ರೆಸ್ ಅಕ್ಷರಶಃ ಎರಡು ಹೋಳಾಗಿದೆ. ಪ್ರಶಾಂತ್ ದೇಶಪಾಂಡೆ ಮುಂದಿನ ಚುನಾವಣೆಗೆ...
ವಡಗಟ್ಟಾ ಸಮೀಪದ ಬೀರವಳ್ಳಿ ಕ್ರಾಸ್ ಬಳಿ ಬೈಕ್ ಗಳ ನಡುವೆ ಭೀಕರ ಅಪಘಾತ, ನಾಲ್ವರು ಗಂಭೀರ..!
ಮುಂಡಗೋಡ: ತಾಲೂಕಿನ ಹುಬ್ಬಳ್ಳಿ ರಸ್ತೆಯ ವಡಗಟ್ಟಾ ಸಮೀಪ ಬೀರವಳ್ಳಿ ಕ್ರಾಸ್ ಬಳಿ ಭೀಕರ ಅಪಘಾತವಾಗಿದೆ. ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಇಬ್ಬರು ಮಹಿಳೆಯರೂ ಸೇರಿ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ಅದರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ. ಮುಂಡಗೋಡ ತಾಲೂಕಿನ ಅರಶಿಣಗೇರಿ ಗ್ರಾಮದ ಉಮೇಶ್ ಶೇಖಪ್ಪಾ ಲಮಾಣಿ ಗಂಭೀರ ಗಾಯಗೊಂಡಿದ್ದಾನೆ. ಇನ್ನುಳಿದಂತೆ ಶಿಗ್ಗಾವಿ ತಾಲೂಕಿನ ಕಮಲಾನಗರ ತಾಂಡಾದ ಇಬ್ಬರು ಮಹಿಳೆಯರು ಸೇರಿ ಮೂವರು ಗಾಯಗೊಂಡಿದ್ದಾರೆ. ಕಲಘಟಗಿ ತಾಲೂಕಿನ ಬೀರವಳ್ಳಿ ಗ್ರಾಮದಿಂದ ಕಮಲಾನಗರಕ್ಕೆ ಬೈಕ್ ಮೇಲೆ ಹೋಗುತ್ತಿದ್ದ ಮೂವರು, ತಡಸ ಕಡೆಯಿಂದ ಮುಂಡಗೋಡ ತಾಲೂಕಿನ ಅರಶಿಣಗೇರಿ ಗ್ರಾಮಕ್ಕೆ ಬರುತ್ತಿದ್ದ ಉಮೇಶ್ನ ಬೈಕ್ ಪರಸ್ಪರ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಎರಡು ಬೈಕ್ ಗಳು ನುಜ್ಜು ಗುಜ್ಜಾಗಿದೆ. ಅಪಘಾತದಿಂದ ಗಂಭೀರ ಗಾಯಗೊಂಡು ನರಳುತ್ತಿದ್ದ ವೇಳೆ ಅದೇ ಮಾರ್ಗದಿಂದ ತೆರಳುತ್ತಿದ್ದ ರಾಜು ಹಾಗೂ ಅವರ ಸ್ನೇಹಿತರು ಉಪಚರಿಸಿದ್ದಾರೆ. ಅಲ್ದೆ ಅಂಬ್ಯುಲೆನ್ಸ್ ಹಾಗೂ ಪೊಲೀಸರಿಗೆ ಕರೆಮಾಡಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ಕಾರ್ಯ ಮಾಡಿದ್ದಾರೆ. ಇನ್ನು...
ಅಮ್ಮಾಜಿ ಕೆರೆಯಲ್ಲಿ ಪಲ್ಟಿಯಾಗಿ ಬಿದ್ದಿದ್ದ ಲಾರಿ, ಕ್ರೇನ್ ಮೂಲಕ ಹೊರತೆಗೆದ ಸಿಬ್ಬಂದಿಗಳು..!
ಮುಂಡಗೋಡ: ಪಟ್ಟಣದ ಅಮ್ಮಾಜಿ ಕೆರೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಿದ್ದಿದ್ದ ಲಾರಿಯನ್ನು ಕ್ರೇನ್ ಮೂಲಕ ಹೊರತೆಗೆಯಲಾಗಿದೆ. ಇಂದು ಬೆಳಿಗ್ಗೆ ಯಲ್ಲಾಪುರದಿಂದ ಮುಂಡಗೋಡ ಕಡೆಗೆ ಬರುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಅಮ್ಮಾಜಿ ಕೆರೆಯಲ್ಲಿ ಧುಮುಕಿತ್ತು. ಹೀಗಾಗಿ, ಲಾರಿಯಲ್ಲಿದ್ದವರನ್ನು ಸಾರ್ವಜನಿಕರು ರಕ್ಷಣೆ ಮಾಡಿದ್ದರು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿರಲಿಲ್ಲ. ಸದ್ಯ ಕೆರೆಯಲ್ಲಿ ಪಲ್ಟಿಯಾಗಿ ಅರ್ದಮರ್ದ ಮುಳುಗಿದ್ದ ಲಾರಿಯನ್ನು ಕ್ರೇನ್ ಮೂಲಕ ಹೊರತೆಗೆಯಲಾಗಿದೆ. ಈ ವೇಳೆ ಯಲ್ಲಾಪುರ ಮುಂಡಗೋಡ ರಸ್ತೆಯಲ್ಲಿ ಕೆಲಹೊತ್ತು ರಸ್ತೆ ಸಂಚಾರ ಸ್ಥಗಿತವಾಗಿತ್ತು.









