ಸಂಪಾಯಿತಲೇ ಪರಾಕ್” ಇದು ಪ್ರಸಕ್ತ ವರ್ಷದ ಶ್ರೀ ಕ್ಷೇತ್ರ ಮೈಲಾರಲಿಂಗನ ಕಾರಣಿಕ ನುಡಿ. ಹೂವಿನ ಹಡಗಲಿ ತಾಲೂಕಿನ ಮೈಲಾರ ಗ್ರಾಮದ ಡೆಂಕನಮರಡಿಯಲ್ಲಿ ಸೋಮವಾರ ಸಂಜೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಗೊರವಯ್ಯ ಕಾರಣೀಕ ನುಡಿದಿದ್ದಾರೆ. ಲಕ್ಷಾಂತರ ಭಕ್ತರ ನಡುವೆ ಸರಸರನೇ ಬಿಲ್ಲನ್ನೇರಿದ ವರ್ಷದ ಭವಿಷ್ಯ ವಾಣಿ ನುಡಿಯುವ ಗೊರವಯ್ಯ ರಾಮಣ್ಣ ಸದ್ದಲೇ ಎನ್ನುತ್ತ ದೇವವಾಣಿ ಎನ್ನಲಾಗುವ ವರ್ಷದ ದೇವವಾಣಿ “ಸಂಪಾಯಿತಲೇ ಪರಾಕ್” ಕಾರ್ಣಿಕದ ನುಡಿ ನುಡಿದರು. ಈ ಭವಿಷ್ಯವಾಣಿ ಆಡಳಿತದ ಏಳುಬೀಳು ಹಾಗೂ ಪ್ರಕೃತಿ ಬದಲಾವಣೆ ಮುನ್ಸೂಚನೆ ಎನ್ನುವುದು ಭಕ್ತರ ನಂಬಿಕೆಯಾಗಿದೆ. ಸೋಮವಾರ ಪ್ರಾತಃಕಾಲ 4 ರಿಂದ ಮೈಲಾರಲಿಂಗೇಶ್ವರ, ಗಂಗಿ ಮಾಳಮ್ಮ ಹಾಗೂ ಹೆಗ್ಗಪ್ಪ ದೇವರ ಉತ್ಸವ ಡೆಂಕನಮರಡಿಗೆ ಗುಪ್ತ ಮೌನ ಸವಾರಿ ಕಾರ್ಯಕ್ರಮಗಳು ನಡೆದವು. ಭಾರತ ಹುಣ್ಣಿಮೆ ಮೈಲಾರಲಿಂಗೇಶ್ವರನ ಭಕ್ತರಿಗೆ ಮಹತ್ವದ ಹುಣ್ಣಿಮೆಯಾಗಿದ್ದು, ಪ್ರಸಕ್ತ ವರ್ಷವು ಭಾರತ ಹುಣ್ಣಿಮೆಗೆ ಮೈಲಾರಕ್ಕೆ ಲಕ್ಷಾಂತರ ಭಕ್ತರು ಆಗಮಿಸಿದ್ದರು. ನಾಲೈದು ದಿನಗಳ ಕಾಲ ಭಕ್ತರು ಕ್ಷೇತ್ರದಲ್ಲಿದ್ದು, ಸಾಂಪ್ರದಾಯಕ ಪೂಜೆ ಕೈಂಕರ್ಯ ಕೈಗೊಂಡು ಶ್ರೀಸ್ವಾಮಿಯ ದರ್ಶನ...
Top Stories
ಉದ್ಯೋಗ ಖಾತರಿಯಲ್ಲಿ ಮಹಿಳಾ ಕಾರ್ಮಿಕರು ಭಾಗವಹಿಸುವಿಕೆ ಹೆಚ್ಚಿಸಲು ಸ್ತ್ರೀ ಚೇತನ ಅಭಿಯಾನ..!
ಯತ್ನಾಳ ಉಚ್ಚಾಟನೆಯ ಪರಿಣಾಮ ಎರಡ್ಮೂರು ದಿನದಲ್ಲಿ ಗೊತ್ತಾಗತ್ತೆ: ಶಿವರಾಮ್ ಹೆಬ್ಬಾರ್
ಮುಂಡಗೋಡ ತಾಲೂಕಿನ ಹಲವು ಕಾರ್ಯಕ್ರಮಗಳಲ್ಲಿ ಶಾಸಕ ಶಿವರಾಮ್ ಹೆಬ್ಬಾರ ಭಾಗಿ..!
ಮಳಗಿ ಬಳಿ KSRTC ಬಸ್ ಮೇಲೆ ಉರುಳಿ ಬಿದ್ದ ಮರ, ರಸ್ತೆ ಸಂಚಾರ ಅಸ್ತವ್ಯಸ್ತ, ತಪ್ಪಿದ ಭಾರೀ ಅನಾಹುತ..!
ಜಿಲ್ಲೆಯಲ್ಲಿ ಗೃಹ ಸಚಿವ: ಗೋವಾ ಗಡಿಯಲ್ಲಿ ಎಚ್ಚರಿಕೆ ವಹಿಸಿ: ಡಾ.ಜಿ. ಪರಮೇಶ್ವರ್
ಯತ್ನಾಳ್ ಉಚ್ಚಾಟನೆ, ಇದು ಅನಿವಾರ್ಯವಾಗಿ ತೆಗೆದು ಕೊಂಡಿರೋ ಕ್ರಮ, ವಿಜಯೇಂದ್ರ ಸ್ಪಷ್ಟನೆ..!
ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿಯಿಂದ ಉಚ್ಚಾಟನೆ..! ಕೊನೆಗೂ ಶಾಕ್ ಕೊಟ್ಟ ಹೈಕಮಾಂಡ್..!
ಮುಂಡಗೋಡಲ್ಲಿ SSLC ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ ನೇಣಿಗೆ ಶರಣು..! ಫೇಲ್ ಆಗೋ ಆತಂಕದಲ್ಲಿ ಸಾವಿಗೆ ಕೊರಳೊಡ್ಡಿದ ಬಾಲಕ..!
ಭಾರೀ ಮಳೆ ಗಾಳಿಗೆ ಹಾರಿಬಿದ್ದ ಸಿಡ್ಲಗುಂಡಿ ಶಾಲೆಯ ಮೇಲ್ಚಾವಣಿ, ಅದೃಷ್ಟವಶಾತ್ ವಿದ್ಯಾರ್ಥಿಗಳು ಬಚಾವ್..!
ಮಾರ್ಚ 26 ರಿಂದ ಎರಡು ದಿನ ಜಿಲ್ಲೆಯಲ್ಲಿ ಗೃಹ ಸಚಿವರ ಪ್ರವಾಸ..! ಏನೇನು ಕಾರ್ಯಕ್ರಮ..?
ಖಾಸಗಿ ಫೈನಾನ್ಸ್ ಉದ್ಘಾಟನೆಗೆ ಹೋಗಿದ್ದ ಮತ್ತೋರ್ವ ಶಿಕ್ಷಕಗೂ ನೋಟೀಸ್ ಜಾರಿ..!
IPL ಬೆಟ್ಟಿಂಗ್ ದಂಧೆಕೋರರು ಜಿಲ್ಲೆಯಲ್ಲಿ ಬಾಲ ಬಿಚ್ಚಂಗಿಲ್ಲ, ಎಸ್ಪಿ ನಾರಾಯಣ್ ಖಡಕ್ ಸಂದೇಶ..! ದಂಧೆ ಮಟ್ಟ ಹಾಕಲು ಗಟ್ಟಿ ಪ್ಲಾನ್ ರೆಡಿ..!
ಖಾಸಗಿ ಫೈನಾನ್ಸ್ ಉದ್ಘಾಟನೆಯಲ್ಲಿ ಭಾಗಿಯಾಗಿದ್ದ ಮತ್ತೋರ್ವ ಶಿಕ್ಷಕ..! ಹಾಗಿದ್ರೆ ಅವರ ಮೇಲೆ ಕ್ರಮ ಯಾಕಿಲ್ಲ ಬಿಇಓ ಮೇಡಂ..?
ಮಾ.21 ರಿಂದ SSLC ಪರೀಕ್ಷೆ, ಸುಸೂತ್ರವಾಗಿ ನಡೆಸಲು ಸನ್ನದ್ಧ- ಡಿಸಿ ಲಕ್ಷ್ಮೀ ಪ್ರಿಯ
ಖಾಸಗಿ ಫೈನಾನ್ಸ್ ಉದ್ಘಾಟನೆಗೆ ಸರ್ಕಾರಿ ಅಧಿಕಾರಿ ಭಾಗಿ ಕೇಸ್, ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ ಬಿಇಓ..!
ಪ್ರಯಾಣಿಕರ ಚಿನ್ನದ ಒಡವೆ ಕದಿಯುತ್ತಿದ್ದ ಕಳ್ಳಿಯರ ಗ್ಯಾಂಗ್ ಅರೇಸ್ಟ್..
ಪೊಲೀಸ್ ಠಾಣೆಯಲ್ಲಿ ಇಸ್ಪೀಟ್ ಆಟ.. ಐವರು ಪೋಲೀಸರು ಅಮಾನತು..!
ಆಹಾರ ಸಂಸ್ಕರಣಾ ಉದ್ಯಮದ ಬಗ್ಗೆ ಅರಿವು ಮೂಡಿಸಿ : ಈಶ್ವರ ಕಾಂದೂ
ಬನವಾಸಿ ಕದಂಬೋತ್ಸವಕ್ಕೆ ಅಗತ್ಯ ಸಿದ್ದತೆ ಕೈಗೊಳ್ಳಿ : ಅಧಿಕಾರಿಗಳಿಗೆ ಸೂಚಿಸಿದ ಕೆ.ಲಕ್ಷ್ಮೀಪ್ರಿಯ
ಮುಂಡಗೋಡಿಗೆ ಸ್ಲಂ ಬೋರ್ಡ್ ಅಧ್ಯಕ್ಷ ಪ್ರಸಾದ್ ಅಬ್ಬಯ್ಯ ಭೇಟಿ ಹಿಂದೆ, ಹೆಬ್ಬಾರ್ ಸಾಹೇಬ್ರು “ಕೈ” ಹಿಡಿಯುವ ಮುಹೂರ್ತ ಫಿಕ್ಸ್..?
ಮುಂಡಗೋಡ ಹಾಗೂ ಯಲ್ಲಾಪುರ ಪಟ್ಟಣಕ್ಕೆ ಇಂದು ಕರ್ನಾಟಕ ಸ್ಲಂ ಬೋರ್ಡ್ ಅಧ್ಯಕ್ಷ, ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ಭೇಟಿ ನೀಡಿದ್ರು. ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ವತಿಯಿಂದ ಮುಂಡಗೋಡ ಹಾಗೂ ಯಲ್ಲಾಪುರದಲ್ಲಿ ನಿರ್ಮಾಣವಾಗುತ್ತಿರುವ ಜಿ + 2 ಮಾದರಿಯ ಆಶ್ರಯ ವಸತಿ ಸಮುಚ್ಚಯಗಳ ಕಾಮಗಾರಿ ಪರಿಶೀಲನೆ ನಡೆಸಿ, ಕಾಮಗಾರಿಯ ಪ್ರಗತಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ್ರು. ಅಸಲು ಶಾಸಕ ಶಿವರಾಮ್ ಹೆಬ್ಬಾರ್ ಹಾಗೂ ಮಾಜಿ ಶಾಸಕ ವಿ.ಎಸ್. ಪಾಟೀಲ್ ಈ ವೇಳೆ ಸ್ಲಂ ಬೋರ್ಡ್ ಅಧ್ಯಕ್ಷರಿಗೆ ಸಾಥ್ ನೀಡಿದ್ರು. ಇದು ಸತ್ಯ..! ಅಸಲು, ಇವತ್ತಿನ ಕಾರ್ಯಕ್ರಮ ನೋಡಿದ್ರೆ ಹೆಬ್ಬಾರ್ ಸಾಹೇಬ್ರು ಕಾಂಗ್ರೆಸ್ ಪಡಸಾಲೆಯಲ್ಲಿ ಬಹುತೇಕ ಹೆಜ್ಜೆ ಇಟ್ಟು ತಳವೂರಿಯೂ ಆಗಿದೆ ಅನಿಸತ್ತೆ. ಇನ್ನೇನು ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಾದ ಗಳಿಗೆಯಲ್ಲೇ ಕಾಂಗ್ರೆಸ್ ಸೇರ್ಪಡೆಯ ಮುಹೂರ್ತ ಫಿಕ್ಸ್ ಆಗಲಿದೆ ಅನ್ನೋ ಮಾತುಗಳಿಗೆ ಪುಷ್ಟಿ ಸಿಕ್ಕಿದೆ. ಅದ್ರಲ್ಲೂ, ಕಳೆದ ಚುನಾವಣೆಯಲ್ಲಿ ಪರಸ್ಪರ ಎದುರಾಳಿಗಳಾಗಿ ಹಾವು ಮುಂಗುಸಿಯಂತೆ ಆಡುತ್ತಿದ್ದ ವಿ.ಎಸ್.ಪಾಟೀಲರು ಹಾಗೂ ಶಿವರಾಮ್ ಹೆಬ್ಬಾರರು...
ಪಾಳಾ ಹತ್ತಿರ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯೂ ಸಾವು..! ಬೈಕ್ ಸವಾರರಿಬ್ಬರೂ ದುರ್ಮರಣ..!
ಮುಂಡಗೋಡ ತಾಲೂಕಿನ ಪಾಳಾ ಹತ್ತಿರ KSRTC ಬಸ್ ಹಾಗೂ ಬೈಕ್ ನಡುವೆ, ಮುಕಾಮುಖಿ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿಯೂ ಮೃತಪಟ್ಟಿದ್ದಾನೆ. ಮುಂಡಗೋಡ ತಾಲೂಕಾಸ್ಪತ್ರೆಗೆ ಚಿಕಿತ್ಸೆಗೆಂದು ರವಾನಿಸುತ್ತಿದ್ದ ವೇಳೆ ಮೃತಪಟ್ಟಿದ್ದಾನೆ ಅಂತಾ ಮಾಹಿತಿ ತಿಳಿದು ಬಂದಿದೆ. ಈ ಮೂಲಕ ಘಟನೆಯಲ್ಲಿ ಸಾವಿನ ಸಂಖ್ಯೆ ಎರಡಕ್ಕೆ ಏರಿದಂತಾಗಿದೆ. ಅಂದಹಾಗೆ, ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹುಡೆ ಗ್ರಾಮದ ಜಾಫರ್ ದೇವಸೂರ್(32) ಎಂಬುವವನೇ ಘಟನೆಯಲ್ಲಿ ಮೃತಪಟ್ಟ ಮತ್ತೋರ್ವ ವ್ಯಕ್ತಿಯಾಗಿದ್ದಾನೆ. ಇನ್ನು ಘಟನೆಯಲ್ಲಿ ಹಾನಗಲ್ ತಾಲೂಕಿನ ಆರೆಗೊಪ್ಪ ಗ್ರಾಮದ ಮಾಹಬಲೇಶ್ವರ ಸಂಕಪಾಳೆ(38) ಸ್ಥಳದಲ್ಲೇ ಮೃತಪಟ್ಟಿದ್ದ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪಾಳಾ ಹತ್ತಿರ, KSRTC ಬಸ್ ಹಾಗೂ ಬೈಕ್ ನಡುವೆ ಭಯಾನಕ ಅಪಘಾತ, ಓರ್ವ ಬೈಕ್ ಸವಾರ ಸ್ಥಳದಲ್ಲೇ ಸಾವು, ಮತ್ತೋರ್ವ ಗಂಭೀರ..!
ಮುಂಡಗೋಡ ತಾಲೂಕಿನ ಪಾಳಾ ಹತ್ತಿರ KSRTC ಬಸ್ ಹಾಗೂ ಬೈಕ್ ನಡುವೆ, ಮುಕಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಓರ್ವ ಸ್ಥಳದಲ್ಲೇ ಮೃತಪಟ್ಟು, ಮತ್ತೋರ್ವ ಗಂಭೀರ ಗಾಯಗೊಂಡಿರೋ ಘಟನೆ ನಡೆದಿದೆ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಆರೆಗೊಪ್ಪ ಗ್ರಾಮದ ಮಾಹಬಲೇಶ್ವರ ಸಂಕಪಾಳೆ(38) ಸ್ಥಳದಲ್ಲೇ ಮೃತಪಟ್ಟ ಬೈಕ್ ಸವಾರನಾಗಿದ್ದಾನೆ. ಇನ್ನು ಹಾನಗಲ್ ತಾಲೂಕಿನ ಹುಡೆ ಗ್ರಾಮದ ಜಾಫರ್ ದೇವಸೂರ್(32) ಎಂಬುವವನು ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದಾನೆ. ಪಾಳಾ ಹಾಗೂ ಸಿಂಗನಳ್ಳಿ ನಡುವಿನ ರಸ್ತೆಯಲ್ಲಿ ಘಟನೆ ನಡೆದಿದ್ದು, ಗಾಯಾಳುವನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಮುಂಡಗೋಡ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಸಂಸದ ಅನಂತಕುಮಾರ ಹೆಗಡೆ ವಿರುದ್ಧ ಮುಂಡಗೋಡ ಠಾಣೆಯಲ್ಲಿ FIR ದಾಖಲು..! ವಿವಾದಿತ ಹೇಳಿಕೆ ಆರೋಪದ ಮೇಲೆ ದಾಖಲಾಯ್ತು ಕೇಸ್..!!
ಸಂಸದ ಅನಂತಕುಮಾರ್ ಹೆಗಡೆ ವಿರುದ್ಧ ಮುಂಡಗೋಡ ಠಾಣೆಯಲ್ಲಿ ಕೇಸು ದಾಖಲಾಗಿದೆ. ಮೊನ್ನೆ ದಿನಾಂಕ 23 ರಂದು ಮುಂಡಗೋಡ ತಾಲೂಕಿನ ಪಾಳಾ, ಇಂದೂರು ಭಾಗದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಿವಾದಿತ ಹೇಳಿಕೆ ನೀಡಿದ್ದರು ಅನ್ನೋ ಆರೋಪದ ಮೇಲೆ ಸಂಸದರ ವಿರುದ್ಧ FIR ದಾಖಲಿಸಲಾಗಿದೆ. ಅಂದಹಾಗೆ, ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಬಾಯಿ ಹರಿಬಿಟ್ಟಿದ್ದ ಅನಂತಣ್ಣ, ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಸಿದ್ದರಾಮುಲ್ಲಾಖಾನ್ ಅಂತಾ ವ್ಯಂಗ್ಯವಾಡಿದ್ದರು. ಅಲ್ದೆ, ಅಲ್ಪಸಂಖ್ಯಾತರ ತುಷ್ಟಿಕರಣಕ್ಕಾಗಿ ಹಿಂದೂ ದೇವಸ್ಥಾನಗಳ ಹುಂಡಿಗೆ ಹಾಕಿದ ಹಣವನ್ನು, ಚರ್ಚ್, ಮಸೀದಿಗಳಿಗೆ ನೀಡುತ್ತಾರೆ. ಇವ್ರ ಕೈಯಲ್ಲಿ ಅಧಿಕಾರ ಕೊಟ್ರೆ ನಮ್ಮನ್ನೇಲ್ಲ ಮಾರಿ ಬಿಡುತ್ತಾರೆ ಅಂತಾ ಮಾತನಾಡಿದ್ದ ಅನಂತಕುಮಾರ್ ಹೆಗಡೆ ವಿರುದ್ಧ ಮಾದ್ಯಮಗಳ ವಿಡಿಯೊ ಆಧರಿಸಿ ಮುಂಡಗೋಡ ಪೊಲೀಸರು ಸುಮೊಟೋ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನು, ಮುಂಡಗೋಡ ಠಾಣೆಯ ಪೇದೆ ಗಣಪತಿ ಬಸವಂತಪ್ಪ ಹುನ್ನಳ್ಳಿ, ಸಂಸದರ ವಿರುದ್ಧ ದೂರು ನೀಡಿದ್ದು, ಎಎಸ್ಐ ಪರಮೇಶ್ವರ ಮೇಸ್ತಾ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಾಚಣಕಿ ನಾಡಬಾಂಬ್ ಸ್ಪೋಟ ಕೇಸ್ ಮಂಗಳೂರಿನಿಂದ ಸ್ಥಳಕ್ಕೆ ಬಂದ FSL ಟೀಂ, ಸ್ಪೋಟ ಸ್ಥಳದಲ್ಲಿ ಶ್ಯಾಂಪಲ್ ಸಂಗ್ರಹ..!
ಮುಂಡಗೋಡ ತಾಲೂಕಿನ ಬಾಚಣಕಿಯ ಅಂಗಡಿ ಕೆರೆಯಲ್ಲಿ ನಾಡಬಾಂಬ್ ಸ್ಪೋಟ ಪ್ರಕರಣ ಭಾರೀ ಸಂಚಲನ ಮೂಡಿಸಿದೆ. ಘಟನಾ ಸ್ಥಳಕ್ಕೆ ಉತ್ತರ ಕನ್ನಡ ಎಸ್ಪಿ ವಿಷ್ಣುವರ್ಧನ್ ಭೇಟಿ ನೀಡಿ ಹೋದ ನಂತರ, ಇಂದು ಮಂಗಳೂರಿನಿಂದ FSL ತಂಡ ಬೇಟಿ ನೀಡಿ ಪರಿಶೀಲನೆ ಕೈಗೊಂಡಿದೆ. ಶ್ಯಾಂಪಲ್ ಸಂಗ್ರಹ..! ಅಂದಹಾಗೆ, ಶನಿವಾರ ಬೆಳಿಗ್ಗೆ ಮಂಗಳೂರಿನಿಂದ ಬಾಚಣಕಿಯ ಘಟನಾ ಸ್ಥಳಕ್ಕೆ ಭೇಟಿ ನೀಡಿರೋ ವಿಧಿ ವಿಜ್ಞಾನ ಪ್ರಯೋಗಾಲಯ (FSL) ತಂಡ, ನಾಡಬಾಂಬ್ ಸ್ಪೋಟಗೊಂಡ ಸ್ಥಳದಿಂದ ಅವಶೇಷಗಳನ್ನು ಸಂಗ್ರಹಿಸಿದೆ. ಅಲ್ಲದೇ ಸ್ಪೋಟದ ತೀವ್ರತೆಯ ಬಗ್ಗೆ ಸಮಗ್ರ ತನಿಖೆಗಾಗಿ ಸಂಬಂಧಿಸಿದ ಶ್ಯಾಂಪಲ್ ಗಳನ್ನು ಪಡೆದಿದೆ. ಹಾಗೇ, ಸ್ಥಳದಲ್ಲಿ ಬಿದ್ದಿದ್ದ ರಕ್ತದ ಶ್ಯಾಂಪಲ್ ಪಡೆದುಕೊಂಡಿದೆ. ಇದ್ರಿಂದ ಘಟನೆಯ ತೀವ್ರತೆಯ ಬಗ್ಗೆ ಸಂಶೋಧನೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ವೇಳೆ ಮುಂಡಗೋಡಿನ ಸಿಂಗಂ ಸಿಪಿಐ ಬರಮಪ್ಪ ಲೋಕಾಪುರ, ಪಿಎಸ್ ಐ ಪರಶುರಾಮ್ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಸಾಥ್ ನೀಡಿದ್ರು.
ಬಾಚಣಕಿ ನಾಡಬಾಂಬ್ ಸ್ಪೋಟ ಪ್ರಕರಣ, ಕಾರವಾರ ಎಸ್ಪಿ ಸ್ಥಳಕ್ಕೆ ಭೇಟಿ..! ಅರಣ್ಯ ಅಧಿಕಾರಿಗಳೇ ನಿಮಗೆ ಏನೂ ಅನಿಸ್ತಿಲ್ವಾ..?
ಮುಂಡಗೋಡ ತಾಲೂಕಿನ ಬಾಚಣಕಿ ಗ್ರಾಮದ ಅಂಗಡಿ ಕೆರೆ ಬಳಿ ನಾಡಬಾಂಬ್ ಸ್ಪೋಟಗೊಂಡ ಘಟನೆಗೆ ಸಂಬಂಧಿಸಿದಂತೆ, ಉತ್ತರ ಕನ್ನಡ ಎಸ್ಪಿ ವಿಷ್ಣುವರ್ಧನ್ ಶುಕ್ರವಾರ ರಾತ್ರಿ ಮಜ್ಜಿಗೇರಿ ಗ್ರಾಮಕ್ಕೆ ಭೇಟಿ ನೀಡಿದ್ರು. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರೋ ರೈತ, ಕುರಿಗಾಹಿ ಬರಮಪ್ಪ ವಡ್ಡರ್ ಆರೋಗ್ಯ ವಿಚಾರಿಸಿದ್ರು. ಅಲ್ಲದೇ ಘಟನೆಯ ಸಂಪೂರ್ಣ ಮಾಹಿತಿ ಪಡೆದುಕೊಂಡ್ರು. ಇದು ದುರಂತ..! ಅಸಲು, ಘಟನೆ ನಡೆದು ಎರಡು ದಿನವಾಗಿದೆ. ಯಾವಾಗ ನಿಮ್ಮ ಪಬ್ಲಿಕ್ ಫಸ್ಟ್ ನ್ಯೂಸ್ ಘಟನೆಯ ಸಂಪೂರ್ಣ ಚಿತ್ರಣ ತೆರೆದು ಇಟ್ಟಿತ್ತೋ ಅದೇ ಕ್ಷಣದಿಂದ ಪೊಲೀಸ್ ಇಲಾಖೆ ಅಲರ್ಟ್ ಆಗಿದೆ. ಮುಂಡಗೋಡಿನ ಸಿಂಗಂ ಸಿಪಿಐ ಬರಮಪ್ಪ ಲೋಕಾಪುರ್ ಸಾಹೇಬ್ರು, ಪಿಎಸ್ಐ ಪರಶುರಾಮ್ ಸೇರಿದಂತೆ ಕಾರವಾರದಿಂದ ಎಸ್ಪಿ ಸಾಹೇಬ್ರೇ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಘಟನೆಯ ಕರಾಳತೆಯ ಬಗ್ಗೆ ತನಿಖೆ ನಡೆಸಲು ಮುಂದಾಗಿದ್ದಾರೆ. ಇಲ್ಲಿನವರೇ ಇಲ್ಲ..! ಆದ್ರೆ, ಈ ಪ್ರಕರಣ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ನಡೆದು, ಕಾಡು ಪ್ರಾಣಿಗಳ ಜೀವ ತೆಗೆಯಲೆಂದೇ ವ್ಯವಸ್ಥಿತ ಗ್ಯಾಂಗ್ ಹೀನ ಕೃತ್ಯ ಮಾಡ್ತಿದೆ...
ಬಾಚಣಕಿಯಲ್ಲಿ ನಾಡಬಾಂಬ್ ಸ್ಪೋಟ, ಗಾಯಾಳು ರೈತನ ಮನೆಗೆ ಪಿಎಸ್ಐ ಸೇರಿ ಅರಣ್ಯಾಧಿಕಾರಿಗಳು ಭೇಟಿ..!
ಮುಂಡಗೋಡ ತಾಲೂಕಿನ ಬಾಚಣಕಿಯಲ್ಲಿ ನಾಡಬಾಂಬ್ ಸ್ಪೋಟಗೊಂಡು ಗಾಯಗೊಂಡಿದ್ದ ಮಜ್ಜಿಗೇರಿ ಗ್ರಾಮದ ರೈತನ ಮನೆಗೆ ಮುಂಡಗೋಡ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪಿಎಸ್ಐ ಪರಶುರಾಮ್ ಭೇಟಿ ನೀಡಿದ್ರು. ಗಾಯಾಳುವಿನ ಆರೋಗ್ಯ ವಿಚಾರಿಸಿದ ಅಧಿಕಾರಿಗಳು, ಘಟನೆಯ ಮಾಹಿತಿ ಪಡೆದುಕೊಂಡ್ರು. ಇದಕ್ಕೂ ಮೊದಲು, ಘಟನಾ ಸ್ಥಳದ ಪರಿಶೀಲನೆ ನಡೆಸಿದ ಪಿಎಸ್ಐ ಪರಶುರಾಮ್ ಹಾಗೂ ಅರಣ್ಯ ಅಧಿಕಾರಿಗಳು ಈ ಘಟನೆಯ ಕುರಿತು ಚರ್ಚಿಸಿದ್ರು.
ಬಾಚಣಕಿಯಲ್ಲಿ ನಾಡಬಾಂಬ್ ಸ್ಪೋಟ..? ರೈತನಿಗೆ ತೀವ್ರ ಗಾಯ, ಕೈ ಬೆರಳುಗಳೇ ಕಟ್..! ಅಲ್ರಿ ಅಧಿಕಾರಿಗಳೇ ಇದೇಲ್ಲ ನಿಮ್ಮ ಗಮನಕ್ಕೇ ಇಲ್ವಾ..?
ಮುಂಡಗೋಡ ತಾಲೂಕಿನ ಬಾಚಣಕಿ ಗ್ರಾಮದಲ್ಲಿ ನಡೆಯಬಾರದ ಭಯಾನಕ ಘಟನೆಯೊಂದು ನಡೆದಿದೆ. ಕುರಿ ಕಾಯುತ್ತಿದ್ದ ವ್ಯಕ್ತಿಯೋರ್ವ ನಾಡಬಾಂಬ್? ಸ್ಪೋಟಗೊಂಡು ಗಾಯಗೊಂಡಿದ್ದಾನೆ. ಘಟನೆ ನಡೆದು ಹತ್ತಾರು ಗಂಟೆಗಳೇ ಕಳೆದ್ರೂ ಮುಂಡಗೋಡಿನ ಯಾವೊಬ್ಬ ಅಧಿಕಾರಿಯೂ ಹೇಗಿದ್ದಿಯಪ್ಪಾ ಯಜಮಾನಾ ಅಂತಾ ಬಂದು ಮಾತಾಡಿಸಿಲ್ಲ. ಅದು ಭಯಾನಕ..! ಅಂದಹಾಗೆ, ಬಾಚಣಕಿಯ ಬರಮಪ್ಪ ವಡ್ಡರ್ ಎಂಬುವ ರೈತನೇ ಸದ್ಯ ನಾಡಬಾಂಬ್? ಸ್ಪೋಟಗೊಂಡು ತೀವ್ರ ಗಾಯಗೊಂಡಿದ್ದಾನೆ. ಈತ ತನ್ನ ಕುರಿಗಳನ್ನು ಮೇಯಿಸಲು ಊರ ಪಕ್ಕದಲ್ಲೇ ಇರೋ ಕೆರೆಯ ಹತ್ತಿರ ಹೋಗಿದ್ದ. ಈ ವೇಳೆ ಬಹಿರ್ದೆಸೆಗೆ ಅಂತಾ ಹೋಗಿದ್ದಾಗ ಹೊಳಪಿರೋ ಒಂದು ವಸ್ತು ಕಂಡಿದೆ. ಅದು ಏನಿರಬಹುದು ಅಂತಾ ಕೈಯಿಂದ ಅದನ್ನ ಹಿಡಿದು ಹಿಚುಕಿದ್ದಾನೆ ಅಷ್ಟೆ. ತಕ್ಷಣವೇ ಅದು ಭಯಾನಕವಾಗಿ ಸ್ಪೋಟಗೊಂಡಿದೆ. ಪರಿಣಾಮ ರೈತನ ಎಡಗೈನ ಎರಡು ಬೆರಳುಗಳೇ ಕಟ್ ಆಗಿವೆ. ಹೀಗಾಗಿ, ಮುಂಡಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ರೈತ ಚಿಕಿತ್ಸೆ ಪಡೆದು ಸದ್ಯ ಮನೆಗೆ ಬಂದಿದ್ದಾನೆ. ಆದ್ರೆ, ಇಷ್ಟೇಲ್ಲ ದುರಂತ ಆದ್ರೂ ಈ ಕ್ಷಣದವರೆಗೂ ಸಂಬಂಧಪಟ್ಟ ಇಲಾಖೆಯ ಯಾವೊಬ್ಬ ಅಧಿಕಾರಿಯೂ ಇತ್ತ ಸುಳಿದಿಲ್ಲ....
ಲೊಯೊಲಾ ಕಾಲೇಜು ಬಳಿ ಅಪಘಾತ, ಓರ್ವನಿಗೆ ಗಂಭೀರ ಗಾಯ, ಮನುಷ್ಯತ್ವ ಮರೆತ್ರಾ ಅಂಬ್ಯುಲೆನ್ಸ್ ಸಿಬ್ಬಂದಿ..?
ಮುಂಡಗೋಡ ಪಟ್ಟಣದ ಶಿರಸಿ ರಸ್ತೆಯ ಲೊಯೊಲಾ ಕಾಲೇಜು ಬಳಿ KSRTC ಬಸ್ ಗೆ ಲಾರಿಯೊಂದು ಡಿಕ್ಕಿ ಹೊಡೆದು ನಾಪತ್ತೆಯಾಗಿದೆ. ಪರಿಣಾಮ ಬಸ್ ನಲ್ಲಿದ್ದ ಓರ್ವ ವ್ಯಕ್ತಿಗೆ ತೀವ್ರ ಗಾಯವಾಗಿದೆ. ಗುರುವಾರ ನಡುರಾತ್ರಿಯಲ್ಲಿ ಘಟನೆ ನಡೆದಿದ್ದು ಮಂಗಳೂರಿಗೆ ಹೊರಟಿದ್ದ ಬಸ್ ಗೆ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಭೀಮಪ್ಪ ಮುತ್ತಪ್ಪ ಗಡಾದಿ(34) ತೀವ್ರ ಗಾಯಗೊಂಡಿದ್ದಾನೆ. ಅಂಬ್ಯುಲೆನ್ಸ್ ಸಿಬ್ಬಂದಿಗೆ ತರಾಟೆ..! ಗಾಯಗೊಂಡ ವ್ಯಕ್ತಿಯನ್ನು ತಕ್ಷಣವೇ ಮುಂಡಗೋಡ ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಇನ್ನು ಹೆಚ್ಚಿನ ಚಿಕಿತ್ಸೆ ಅಗತ್ಯಬಿದ್ದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲು ವೈದ್ಯರು ಸೂಚಿಸಿದ್ದರು. ಹೀಗಾಗಿ, ತಾಲೂಸ್ಪತ್ರೆಯ “ನಗು ಮಗು” ಅಂಬ್ಯುಲೆನ್ಸ್ ಗೆ ಸಂಪರ್ಕಿಸಿದಾಗ ಅಂಬ್ಯುಲೆನ್ಸ್ ಸಿಬ್ಬಂದಿಗಳು ಗಾಯಾಳುವನ್ನು ಸಾಗಿಸಲು ನಕರಾ ಮಾಡಿದ್ದಾರೆ. ಹೀಗಾಗಿ, ಸಾರ್ವಜನಿಕರು ಅಂಬ್ಯುಲೆನ್ಸ್ ಸಿಬ್ಬಂದಿಗಳೊಗೆ ಹಿಗ್ಗಾಮುಗ್ಗಾ ತರಾಟೆಗೆ ಪಡೆದಿದ್ದಾರೆ. ನಂತರ ಸಾರ್ವಜನಿಕರೇ ಅಂಬ್ಯುಲೆನ್ಸ್ ನಲ್ಲಿ ಗಾಯಾಳುವನ್ನು ಕೂರಿಸಿದ್ದಾರೆ. ಇನ್ನು ಮುಂಡಗೋಡ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.