ಕಾರವಾರ- ಉತ್ತರ ಕನ್ನಡ ಜಿಲ್ಲೆಯಾದ್ಯಂತ ಲಾಕ್ ಡೌನ್ ಮಾರ್ಗಸೂಚಿಯಲ್ಲಿ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಮಲ್ಲೈ ಮುಹಿಲನ್ ಆದೇಶ ಹೊರಡಿಸಿದ್ದಾರೆ.. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಸೂಚನೆಯಂತೆ ಪರಿಷ್ಕೃತ ಆದೇಶ ಹೊರಡಿಸಲಾಗಿದೆ. ವಾರದ ಎರಡು ದಿನಗಳಿಗೆ ಸೀಮಿತವಾಗಿದ್ದ ಅಗತ್ಯ ವಸ್ತುಗಳ ಖರೀದಿಯ ಅವಕಾಶವನ್ನು, ನಾಳೆಯಿಂದ ಜಿಲ್ಲೆಯಲ್ಲಿ ವಾರದ ನಾಲ್ಕು ದಿನಗಳಿಗೆ, ಅಂದರೆ, ಸೋಮವಾರ, ಮಂಗಳವಾರ, ಬುಧವಾರ ಹಾಗೂ ಗುರುವಾರಗಳಿಗೂ ವಿಸ್ತರಿಸಲಾಗಿದೆ. ಬೆಳಿಗ್ಗೆ 8 ಗಂಟೆಯಿಂದ 12 ಗಂಟೆಯವರೆಗೂ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ.. ಇನ್ನು ಜಿಲ್ಲೆಯಲ್ಲಿ ಶುಕ್ರವಾರದಿಂದ ರವಿವಾರದವರೆಗೆ ಮೂರುದಿನ ಕಠಿಣ ಲಾಕ್ ಡೌನ್ ಜಾರಿ ಮಾಡಲಾಗಿದ್ದು ಯಾರೂ ಮನೆಯಿಂದ ಹೊರಬರದಂತೆ ಎಚ್ಚರಿಕೆ ನೀಡಲಾಗಿದೆ.. ಹಾಗಂತ ಉತ್ತರ ಕನ್ನಡ ಜಿಲ್ಲಾಧಿಕಾರಿ ಮಲ್ಲೈ ಮುಹಿಲನ್ ಪರಿಷ್ಕೃತ ಆದೇಶ ಹೊರಡಿಸಿದ್ದಾರೆ..
Top Stories
ಪತ್ರಕರ್ತನಿಗೆ ದಂಡ ತೀರ್ಪಿಗೆ ಜಿಲ್ಲಾ ಕೋರ್ಟ್ ತಡೆಯಾಜ್ಞೆ
ಮುಂಡಗೋಡಿನಲ್ಲಿ ಆರ್.ವಿ.ದೇಶಪಾಂಡೆ ಜನ್ಮದಿನ ಆಚರಣೆ, ಕಾಂಗ್ರೆಸ್ ವತಿಯಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ..!
ಅಗಡಿಯಲ್ಲಿ ಜೋಡೇತ್ತುಗಳ ಕಳ್ಳತನ, ಕೊಟ್ಟಿಗೆಯಲ್ಲಿ ಕಟ್ಟಿದ್ದ ಎತ್ತುಗಳನ್ನೇ ಹೊತ್ತೊಯ್ದ ಕಳ್ಳರು..!
ಮುಂಡಗೋಡ ನೆಹರು ನಗರದಲ್ಲಿ ಜೇನುದಾಳಿ 6 ಜನರಿಗೆ ಗಾಯ, ಮೂವರು ಗಂಭೀರ..!
ಸಭಾಪತಿ ಹೊರಟ್ಟಿ ಮನೆ ಬಳಿ ದರೋಡೆ ಮಾಡಿದ್ದ ಇಬ್ಬರ ಕಾಲಿಗೆ ಪೊಲೀಸರ ಗುಂಡೇಟು
ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಲಾರಿ, ಕಾರಿನಲ್ಲಿ ಇಬ್ಬರು ಸಿಲುಕಿ ನರಳಾಟ, ಹೊರತೆಗೆಯಲು ಹರಸಾಹಸ..!
ತಿಂಗಳಾಂತ್ಯಕ್ಕೆ ಹೆಬ್ಬಾರ್ ಹಾಗೂ ST ಸೋಮಶೇಖರ್, ಬಿಜೆಪಿ ಪಕ್ಷದಿಂದ ಉಚ್ಚಾಟನೆ ಗ್ಯಾರಂಟಿ- ಲಿಂಗರಾಜ ಪಾಟೀಲ್
ಮೈನಳ್ಳಿ ಪಂಚಾಯತಿಯ ಕಳಕೀಕಾರೆಯಲ್ಲಿ ಕುಡಿಯುವ ನೀರಿಗೆ ಬರ..! ಟ್ಯಾಂಕರ್ ಮೂಲಕ ನೀರು ಪೂರೈಕೆ..!
ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆಯಡಿ ಈ ತಿಂಗಳಿಂದ ಹಣ ನೀಡಲ್ಲ, ಬದಲಾಗಿ ಅಕ್ಕಿ ವಿತರಣೆೆ ; ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯ
ಇದುವರೆಗೆ 2500 ಕ್ಕೂ ಆಧಿಕ ಕಡಲಾಮೆ ಮರಿಗಳು ಸಮುದ್ರಕ್ಕೆ : ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿ.ರವಿಶಂಕರ್
SSLC ಪರೀಕ್ಷೆಗಳು ವ್ಯವಸ್ಥಿತ ಮತ್ತು ಪಾರದರ್ಶಕವಾಗಿರಲಿ, ಪೂರ್ವಭಾವಿ ಸಭೆಯಲ್ಲಿ ಡೀಸಿ ಲಕ್ಷ್ಮಿಪ್ರಿಯ ಅಧಿಕಾರಿಗಳಿಗೆ ತಾಕೀತು..!
ಹಿರಿಯೂರು ಬಳಿ ಅಪಘಾತ, ವಿಧಾನಸಭಾ ಉಪಾಧ್ಯಕ್ಷ ರುದ್ರಪ್ಪ ಲಮಾಣಿಗೆ ಗಂಭೀರ ಗಾಯ..!
ಹುನಗುಂದದಲ್ಲಿ ರೇಣುಕಾಚಾರ್ಯರ ಜಯಂತಿ ಉತ್ಸವ..!
ಬಂಕಾಪುರ ಬಳಿ ಮುಡಸಾಲಿ ವ್ಯಕ್ತಿಯ ಅನುಮಾನಾಸ್ಪದ ಸಾವು..? ಅಪಘಾತವಾ..? ಕೊಲೆಯಾ..?
ಹುನಗುಂದ ಗ್ರಾಪಂ PDO ಮಂಜುನಾಥ್ ಗೆ “ಬೆಸ್ಟ್ ಪಿಡಿಒ ಆಫ್ ದಿ ಮಂತ್” ಪ್ರಶಸ್ತಿ..!
ಮಾರ್ಚ್ 9 ರಂದು ರವಿವಾರ ಕಾರವಾರದಲ್ಲಿ ಪೊಲೀಸ್ ರನ್ 2025ರ ಮ್ಯಾರಾಥಾನ್ 5K ಓಟ..!
ಪತ್ರಕರ್ತ ಶಿವಶಂಕರ್ ಕೋಲಸಿರ್ಸಿ ಹೃದಯಾಘಾತದಿಂದ ನಿಧನ..!
ಮುಂದಿನ ಎರಡು ದಿನ ಜಿಲ್ಲೆಯಲ್ಲಿ ಬಿಸಿಗಾಳಿ ಪರಿಸ್ಥಿತಿಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ :ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯ
ಭೀಮಾತೀರದಲ್ಲಿ ಸಾಂಸ್ಕೃತಿಕ ಸಂಭ್ರಮ, ಬರಗುಡಿ ಗ್ರಾಮದ ಜಾತ್ರೆಗೆ ಕ್ಷಣಗಣನೆ..! ಲಕ್ಷ್ಮೀ ದೇವಿಯ ಸನ್ನಿಧಿಯಲ್ಲಿ ವಿಶೇಷ ಪಾರಂಪರಿಕ ಮೆರಗು..!
ಅಗಡಿ ಗ್ರಾಮಕ್ಕೆ ಸಂಪೂರ್ಣ ಸ್ಯಾನಿಟೈಸ್..!
ಮುಂಡಗೋಡ- ತಾಲೂಕಿನ ಹುನಗುಂದ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಗಡಿ ಗ್ರಾಮದಲ್ಲಿ ಇಂದು ಇಡೀ ಗ್ರಾಮದ ಗಲ್ಲಿ ಗಲ್ಲಿಗಳಿಗೂ ಗ್ರಾಮ ಪಂಚಾಯತಿ ವತಿಯಿಂದ ಸ್ಯಾನಿಟೈಸ್ ಮಾಡಲಾಯಿತು.. ಗ್ರಾಮ ಪಂಚಾಯತಿ ಆವರಣದಲ್ಲಿ ಸ್ಯಾನಿಟೈಸ್ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯತಿ ಅಧ್ಯಕ್ಷರು ಚಾಲನೆ ನೀಡಿದ್ರು.. ನಂತರ ಅಗಡಿ ಗ್ರಾಮದ ಬಹುತೇಕ ಗಲ್ಲಿಗಳಿಗೆ ತೆರಳಿ ಸ್ಯಾನಿಟೈಸ್ ಮಾಡಲಾಯಿತು.. ಅದಕ್ಕೂ ಮೊದಲು ಗ್ರಾಮದಲ್ಲಿ ಧ್ವನಿ ವರ್ದಕದ ಮೂಲಕ ಗ್ರಾಮಸ್ತರಿಗೆ ತಿಳುವಳಿಕೆ ನೀಡಲಾಯಿತು..ಈ ವೇಳೆ ಗ್ರಾಮ ಪಂಚಾಯತಿ ಸದಸ್ಯರು ಮುಂದೆ ನಿಂತು ಸ್ಯಾನಿಟೈಸ್ ಕಾರ್ಯ ನೆರವೇರಿಸಿದ್ರು…
ಕೊಪ್ಪ ಗ್ರಾಮದಲ್ಲಿ ಕೊರೋನಾ ಸೋಂಕಿತೆ ಸಾವು; ಕೋವಿಡ್ ನಿಯಮದಂತೆ ಅಂತ್ಯಸಂಸ್ಕಾರ..!
ಮುಂಡಗೋಡ ತಾಲೂಕಿನ ಕೊಪ್ಪ ಗ್ರಾಮದಲ್ಲಿ ಕೊವಿಡ್ ನಿಂದ ಮೃತಪಟ್ಟ 55 ವರ್ಷದ ಮಹಿಳೆಯ ಅಂತಿಮ ಸಂಸ್ಕಾರವನ್ನು ಕೋವಿಡ್ ಮಾರ್ಗಸೂಚಿಯ ಅನ್ವಯ ಇಂದು ಕೊಪ್ಪ ಗ್ರಾಮದ ಹೊರವಲಯದಲ್ಲಿ ನೆರವೇರಿಸಲಾಯಿತು.. ಇಂದೂರು ಗ್ರಾಮ ಪಂಚಾಯತಿ ಸದಸ್ಯರು, ಮುಂಡಗೋಡ ತಾಲೂಕಾಡಳಿತದ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯವರ ನೇತೃತ್ವದಲ್ಲಿ ಕೋವಿಡ್ ನಿಯಮದ ಅನ್ವಯ ಅಂತ್ಯ ಸಂಸ್ಕಾರ ಮಾಡಲಾಯಿತು.. ಇಂದು ಬೆಳಿಗ್ಗೆ ಉಸಿರಾಟದ ತೊಂದರೆಯಿಂದ ಕೊಪ್ಪ ಗ್ರಾಮದ ಮಹಿಳೆ ಮೃತಪಟ್ಟಿದ್ದರು..
ಲಾಕ್ ಡೌನ್ ಹಿನ್ನೆಲೆ ಸಂಕಷ್ಟಕ್ಕೆ ಸಿಲುಕಿವೆ ಬಡ ಕಾರ್ಮಿಕ ಕುಟುಂಬಗಳು..!
ಮುಂಡಗೋಡ-ಪಟ್ಟಣದಲ್ಲಿ ಲಾಕ್ ಡೌನ್ ಸಂಕಷ್ಟದಲ್ಲಿ ಸಿಲುಕಿ ಐದು ಕಾರ್ಮಿಕ ಕುಟುಂಬಗಳು ನರಳುತ್ತಿವೆ.. ಗಾರೆ ಕೆಲಸಕ್ಕೆಂದು ಆಂದ್ರ ಪ್ರದೇಶದಿಂದ ಬಂದಿದ್ದ ಕುಟುಂಬಗಳು, ಲಾಕ್ ಡೌನ್ ಘೋಷಣೆಯಾದ ನಂತ್ರ ವಾಪಸ್ ತಮ್ಮ ರಾಜ್ಯಕ್ಕೆ ತೆರಳಲು ಆಗದೇ ಸಂಕಷ್ಟಕ್ಕೆ ಸಿಲುಕಿವೆ.. ಪುಟ್ಟ ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ದರೂ ಈ ಕಾರ್ಮಿಕರ ಕುಟುಂಬದಲ್ಲಿದ್ದು ಒಂದೊತ್ತಿನ ಊಟಕ್ಕೂ ಪರದಾಡುತ್ತಿವೆ.. ಲಾಕ್ ಡೌನ್ ಗೂ ಮುಂಚೆ ದುಡಿದು ಶೇಖರಿಸಿಟ್ಟುಕೊಂಡಿದ್ದ ದಿನಸಿ ಖಾಲಿಯಾಗಿ ಈಗ ಕುಟುಂಬ ಪರದಾಡುವಂತಾಗಿದೆ.. ಕೈಯಲ್ಲಿ ಹಣವಿಲ್ಲ, ಮಾಡಲು ಕೆಲಸವಿಲ್ಲ, ಹೇಗಾದ್ರೂ ಸರಿ ಪುಟ್ಟ ಮಕ್ಕಳಿಗೆ ಒಂದೊತ್ತಿನ ಊಟ ನೀಡಬೇಕು ಅಂತಾ ಕುಟುಂಬದ ಯಜಮಾನ ಪರದಾಡುತ್ತಿದ್ದಾನೆ.. ಆದ್ರೆ ಲಾಕ್ ಡೌನ್ ಹಿನ್ನೆಲೆ ಎಲ್ಲೂ ಏನೂ ಸಿಗುತ್ತಿಲ್ಲ.. ಕೆಲವು ದಾನಿಗಳು ಅಲ್ಪ ಸ್ವಲ್ಪ ದಿನಸಿ ತಂದು ಕೊಟ್ಟಿದ್ದಾರೆ.. ಆದ್ರೆ ಸುಮಾರು 25 ಕ್ಕೂ ಹೆಚ್ಚು ಜನ ಇರುವ ಕುಟುಂಬಕ್ಕೆ ದಿನಸಿ ಸಾಕಾಗುತ್ತಿಲ್ಲ.. ಹೀಗಾಗಿ ದಾನಿಗಳು ಈ ಕುಟುಂಬಗಳ ಸಂಕಷ್ಟಕ್ಕೆ ಸ್ಪಂಧಿಸಬೇಕಿದೆ.. ತಾಲೂಕಾಡಳಿತ ಗಮನ ಹರಿಸಬೇಕಿದೆ..
ನಂದಿಕಟ್ಟಾ ಗ್ರಾಮದಲ್ಲಿ ಸಂಪೂರ್ಣ ಸ್ಯಾನಿಟೈಸ್ ಸಿಂಪಡಣೆ..!
ಮುಂಡಗೋಡ-ತಾಲೂಕಿನ ನಂದಿಕಟ್ಟಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಿಗೆ ಇಂದು ಗ್ರಾಮ ಪಂಚಾಯತಿ ವತಿಯಿಂದ ಸ್ಯಾನಿಟೈಸ್ ಸಿಂಪಡಣೆ ಮಾಡಲಾಯಿತು.. ನಂದಿಕಟ್ಟಾ ಗ್ರಾಮ ಪಂಚಾಯತಿ ಆವರಣದಲ್ಲಿ ಸ್ಯಾನಿಟೈಸ್ ವಾಹನಕ್ಕೆ ಚಾಲನೆ ನೀಡಿದ ಗ್ರಾಮ ಪಂಚಾಯತಿ ಅಧ್ಯಕ್ಷೆ, ಗ್ರಾಮದಲ್ಲಿ ಸ್ಯಾನಿಟೈಸ್ ಕಾರ್ಯ ಸಂಪೂರ್ಣಗೊಳಿಸುವಂತೆ ಸೂಚಿಸಿದ್ರು.. ಆನಂತರದಲ್ಲಿ ಗ್ರಾಮದ ಗಲ್ಲಿ ಗಲ್ಲಿಗಳಲ್ಲಿ ಸ್ಯಾನಿಟೈಸ್ ಮಾಡಲಾಯಿತು.. ಈ ವೇಳೆ ಗ್ರಾಮ ಪಂಚಾಯತಿ ಸದಸ್ಯರು, ಸಿಬ್ಬಂದಿಗಳು ಹಾಜರಿದ್ದರು..
ಚೌಡಳ್ಳಿ ಗ್ರಾಮಕ್ಕೆ ಸಂಪೂರ್ಣ ಸ್ಯಾನಿಟೈಸ್..!
ಮುಂಡಗೋಡ- ತಾಲೂಕಿನ ಚವಡಳ್ಳಿ ಗ್ರಾಮದಲ್ಲಿ ಇಂದು ಇಡೀ ಗ್ರಾಮದ ಗಲ್ಲಿ ಗಲ್ಲಿಗಳಿಗೂ ಗ್ರಾಮ ಪಂಚಾಯತಿ ವತಿಯಿಂದ ಸ್ಯಾನಿಟೈಸ್ ಮಾಡಲಾಯಿತು.. ಗ್ರಾಮ ಪಂಚಾಯತಿ ಆವರಣದಲ್ಲಿ ಸ್ಯಾನಿಟೈಸ್ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯತಿ ಅಧ್ಯಕ್ಷರು ಚಾಲನೆ ನೀಡಿದ್ರು.. ನಂತರ ಅಗಡಿ ಗ್ರಾಮದ ಬಹುತೇಕ ಗಲ್ಲಿಗಳಿಗೆ ತೆರಳಿ ಸ್ಯಾನಿಟೈಸ್ ಮಾಡಲಾಯಿತು.. ಅದಕ್ಕೂ ಮೊದಲು ಗ್ರಾಮದಲ್ಲಿ ಧ್ವನಿ ವರ್ದಕದ ಮೂಲಕ ಗ್ರಾಮಸ್ತರಿಗೆ ತಿಳುವಳಿಕೆ ನೀಡಲಾಯಿತು..ಈ ವೇಳೆ ಗ್ರಾಮ ಪಂಚಾಯತಿ ಸದಸ್ಯರು ಮುಂದೆ ನಿಂತು ಸ್ಯಾನಿಟೈಸ್ ಕಾರ್ಯ ನೆರವೇರಿಸಿದ್ರು.
ತಾಲೂಕಿನಲ್ಲಿ ಮುಂಗಾರು ಹಂಗಾಮು ಜೋರು; ಭೂಮಿ ಹದಗೊಳಿಸಿ ಬಿತ್ತನೆ ಕಾರ್ಯ ಮಾಡುತ್ತಿರೋ ಅನ್ನದಾತರು..!
ಮುಂಡಗೋಡ- ತಾಲೂಕಿನಲ್ಲಿ ಮುಂಗಾರು ಹಂಗಾಮು ಶುರುವಾಗಿದೆ.. ಈಗಾಗಲೇ ತಾಲೂಕಿನ ರೈತರು ತಮ್ಮ ಗದ್ದೆಗಳನ್ನು ಸ್ವಚ್ಚಗೊಳಿಸಿದ್ದಾರೆ.. ಸಾಕಷ್ಟು ಮಳೆಯಾದ ಕಾರಣ ಭೂಮಿ ರಂಟೆ ಕುಂಟೆ ಹೊಡೆದು ಹದಗೊಳಿಸಿದ್ದಾರೆ.. ಅಲ್ದೇ ಸಾಕಷ್ಟು ಭಾಗಗಳಲ್ಲಿ ಈಗಾಗಲೇ ಬಿತ್ತನೆ ಕಾರ್ಯ ಚುರಿಕುಗೊಂಡಿದೆ.. ತಾಲೂಕಿನ ಸನವಳ್ಳಿ, ಬಾಚಣಕಿ, ಕಾತೂರು, ಪಾಳಾ ಸೇರಿದಂತೆ ಹಲವು ಕಡೆ ಈಗಾಗಲೇ ಗೋವಿನ ಜೋಳ, ಭತ್ತ ಸೇರಿದಂತೆ ಹಲವು ತಳಿಯ ಬೀಜಗಳ ಬಿತ್ತನೇ ಕಾರ್ಯ ಶುರುವಾಗಿದ್ದು ರೈತ ಲಾಕ್ ಡೌನ್ ಮದ್ಯೆಯೂ ಬ್ಯುಸಿಯಾಗಿದ್ದಾನೆ. ಇನ್ನು, ಬಿತ್ತನೆಗೆ ಬೇಕಾದ ಬೀಜ, ರಸಗೊಬ್ಬರಗಳ ಖರೀದಿಯೂ ಜೋರಾಗಿದ್ದು ತಾಲೂಕಾಡಳಿತ ರೈತರಿಗೆ ಬೀಜ ರಸಗೊಬ್ಬರಗಳ ಪೂರೈಕೆಗೆ ಸಮರ್ಪಕ ವ್ಯವಸ್ಥೆ ಕಲ್ಪಿಸಿದೆ..
ಲಾಕ್ ಡೌನ್ ಸಂಕಷ್ಟದಲ್ಲಿದ್ದ ಮಹಾರಾಷ್ಟ್ರದ ಕುಟುಂಬಗಳಿಗೆ ದಿನಸಿ ವಿತರಣೆ..!
ಮುಂಡಗೋಡ-ತಾಲೂಕಿನ ಇಂದೂರಿನಲ್ಲಿ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವಕ್ಕೆಂದು ಮಹಾರಾಷ್ಟ್ರದಿಂದ ಜೋಕಾಲಿ ಪ್ರದರ್ಶನಕ್ಕೆ ಬಂದಿದ್ದ ಕೂಲಿಕಾರ್ಮಿಕರಿಗೆ ಕೊಡುಗೈ ದಾನಿಗಳು ನೆರವಿನ ಹಸ್ತ ಚಾಚಿದ್ದಾರೆ.. ಇಂದೂ ಕೂಡ ಇಂದೂರಿನ ಅಂಗನವಾಡಿ ಹಾಗೂ ಆಶಾ ಕರ್ಯಕರ್ತರು ಸಂಕಷ್ಟದಲ್ಲಿದ್ದ ಕುಟುಂಬಗಳಿಗೆ ತರಕಾರಿ ಹಾಗೂ ದಿನಸಿ ವಿತರಿಸಿದ್ರು.. ಅಂಗನವಾಡಿ ಕಾರ್ಯಕರ್ತೆ ಜ್ಯೋತಿ ಸುರಕೋಡ್, ಆಶಾ ಕಾರ್ಯಕರ್ತೆ ಲಕ್ಮೀ ಕೊಮ್ಮರಿಸಿಕೊಪ್ಪ ಸೇರಿ ಸಂಕಷ್ಟದಲ್ಲಿದ್ದ ಮಹಾರಾಷ್ಟ್ರದ ಕುಟುಂಬಗಳಿಗೆ ತರಕಾರಿ ಹಾಗೂ ದಿನಸಿ ವಿತರಿಸಿದ್ರು..
ಅರಟಾಳದಲ್ಲಿ ಸುಬ್ರಮ್ಮಣ್ಯ ಸ್ವಾಮಿಯ ಸನ್ನಿಧಾನ..!
ವಿಶೇಷ ವರದಿ ಕಾಳ ಸರ್ಪ ದೋಷ, ನಾಗದೋಷಗಳ ಪರಿಹಾರಕ್ಕಾಗಿ ಸಾಕಷ್ಟು ಜನ ಕುಕ್ಕೆ ಸುಬ್ರಮ್ಮಣ್ಯ ಕ್ಷೇತ್ರಕ್ಕೆ ಹೋಗ್ತಾರೆ.. ಆದ್ರೆ ಕುಕ್ಕೆ ಶ್ರೀ ಕ್ಷೇತ್ರದ ದಿವ್ಯ ಸನ್ನಿಧಾನದಂತೆಯೇ ಮತ್ತೊಂದು ಸನ್ನಿಧಾನ ನಮ್ಮ ಸಮೀಪದಲ್ಲೇ ಇದೆ.. ಹೌದು, ಶಿಗ್ಗಾವಿ ತಾಲೂಕಿನ ಅರಟಾಳ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಾಲಯ ಲದ ಆವರಣದಲ್ಲಿ ಶ್ರೀ ಸುಬ್ರಮ್ಮಣ್ಯ ಸ್ವಾಮಿ ನೆಲೆ ನಿಂತಿದ್ದಾರೆ.. ಭವ್ಯವಾದ ಆಲದ ಮರದ ಕೆಳಗೆ ವಿರಾಜಮಾನವಾಗಿರೋ ಸುಭ್ರಮ್ಮಣ್ಯ ಸ್ವಾಮಿಯ ದರ್ಶನಕ್ಕಾಗಿ ಭಕ್ತರ ದಂಡೇ ಹರಿದು ಬರತ್ತೆ.. ಇನ್ನು ಸರ್ಪದೋಷ, ಕಾಳಸರ್ಪದೋಷ ಮುಂತಾದ ದೋಷಗಳಿಂದ ಮುಕ್ತಿ ಪಡೆಯಲು ಇಲ್ಲಿ ಪ್ರತೀ ಗುರುವಾರ ಹಾಗೂ ಅಮವಾಸ್ಯೆ ದಿನಗಳಲ್ಲಿ ಇಲ್ಲಿಗೆ ನೂರಾರು ಸಂಖ್ಯೆಯಲ್ಲಿ ಭಕ್ತರು ಬರ್ತಾರೆ.. ಸುಬ್ರಮ್ಮಣ್ಯ ಶ್ರೀ ಕ್ಷೇತ್ರಕ್ಕೆ ಹೋಗಲು ಸಾಧ್ಯವಾಗದೇ ಇರೋ ಬಹುತೇಕರು ಅರಟಾಳದ ದಿವ್ಯ ಸನ್ನಿಧಾನದಲ್ಲೇ ತಮ್ಮ ಪೂಜಾ ಕೈಂಕರ್ಯಗಳನ್ನು ನೆರವೇರಿಸಿಕೊಳ್ತಾರೆ. ಅಲ್ದೇ ಇಲ್ಲಿಯೇ ತಮ್ಮ ದೋಷ ನಿವಾರಣೆಯ ವೃತಗಳನ್ನು ಮಾಡ್ತಾರೆ.. ಅರಟಾಳಕ್ಕೆ ಹೋಗೋದು ಹೇಗೆ..? ನೀವು ಹುಬ್ಬಳ್ಳಿಯಿಂದ ತಡಸ ಮಾರ್ಗವಾಗಿ, ಹಾನಗಲ್ ಗೆ ಹೊರಟಿರುವಿರಿ...
ಶೇಂಗಾ ಬೆಳೆದ ತಾಲೂಕಿನ ರೈತನ ಬದುಕು ಮೂರಾಬಟ್ಟೆ; ಇದೇಲ್ಲ ತೌಕ್ತೆ ಚಂಡ ಮಾರುತದ ಎಫೆಕ್ಟ್ ಕಣ್ರಿ..!
ಮುಂಡಗೋಡ- ತಾಲೂಕಿನ ಅನ್ನದಾತ ಅಕ್ಷರಶಃ ಸಂಕಷ್ಟದಲ್ಲಿದ್ದಾನೆ. ಬೇಸಿಗೆ ಬೆಳೆಯಾಗಿ ಸಾವಿರಾರು ರೂ. ಖರ್ಚು ಮಾಡಿ ಶೇಂಗಾ ಬೆಳೆದಿದ್ದ ರೈತನ ಬದುಕು ಈಗ ಮೂರಾಬಟ್ಟೆಯಾಗಿದೆ. ತೌಕ್ತೆ ಚಂಡ ಮಾರುತದ ಎಫೆಕ್ಟ್ ನಿಂದಾಗಿ ಶೇಂಗಾ ಬೆಳೆದಿದ್ದ ರೈತನಿಗೆ ಈಗ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.. ಯಸ್, ಬಂದಷ್ಟು ಬರಲಿ ಅಂತಾ ತನ್ನ ಗದ್ದೆಯಲ್ಲಿ ಬೆಳೆದು ಮಳೆಯ ನೀರಲ್ಲಿ ಕೊಳೆತು ಹೋಗಿರೋ ಶೇಂಗಾ ಬೆಳೆಯನ್ನು ಒಕ್ಕಲು ಮಾಡುತ್ತಿರೋ ರೈತನ ಮನಸಲ್ಲಿ ಅಕ್ಷರಶಃ ಆತಂಕವಿದೆ.. ಸಾಲ ಸೋಲ ಮಾಡಿ ಬೆಳೆದಿದ್ದ ಬೆಳೆಯೇಲ್ಲ ಬರ್ಬಾದಾಗಿ ಹೋಗಿ, ಇನ್ನು ಹೇಗಪ್ಪಾ ಸಾಲ ತೀರಿಸೋದು ಅಂತಾ ಅನ್ನದಾತ ಚಿಂತೆಗೀಡಾಗಿದ್ದಾನೆ.. ಅಂದಹಾಗೆ, ಇದು ಮುಂಡಗೋಡ ತಾಲೂಕಿನ ಹುನಗುಂದ, ಇಂದೂರು, ಕೊಪ್ಪ, ನಂದಿಕಟ್ಟಾ, ಅರಶಿಣಗೇರಿ, ಬಾಚಣಕಿ ಗ್ರಾಮಗಳ ರೈತರ ಗೋಳು. ಈ ವರ್ಷ ಬೇಸಿಗೆ ಬೆಳೆಯಾಗಿ ಶೇಂಗಾ ಬೆಳೆದಿದ್ದ ರೈತರು ಕಣ್ಣೀರು ಹಾಕುತ್ತಿದ್ದಾರೆ.. ಇತ್ತೀಚೆಗೆ ಸುರಿದ ಭಾರೀ ಮಳೆ ಈ ರೈತರ ಬದುಕನ್ನೇ ಕಿತ್ತುಕೊಂಡಿದೆ.. ಹುಲುಸಾಗಿ ಬೆಳೆದಿದ್ದ ಶೇಂಗಾ ಬೆಳೆಯೇಲ್ಲ, ಅಕಾಲಿಕ ಮಳೆಯ...