Pakistan Suicide Attack; ಪಾಕಿಸ್ತಾನಿ ತಾಲಿಬಾನ್ ನಡೆಸಿರುವ ಆತ್ಮಹತ್ಯಾ ದಾಳಿಯಲ್ಲಿ 13 ಸೈನಿಕರು ಸಾವಿಗೀಡಾಗಿದ್ದಾರೆ. ಅಲ್ಲದೆ, ನಾಗರಿಕರು, ಸ್ಥಳೀಯ ಸರ್ಕಾರಿ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಸೇರಿದಂತೆ 29 ಜನರು ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿದೆ “ಆತ್ಮಹತ್ಯಾ ಬಾಂಬರ್ ಸ್ಫೋಟಕ ತುಂಬಿದ ವಾಹನವನ್ನು ಮಿಲಿಟರಿ ಬೆಂಗಾವಲು ಪಡೆ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾರೆ. ಈ ಸ್ಫೋಟದಲ್ಲಿ 13 ಸೈನಿಕರು ಸಾವಿಗೀಡಾಗಿದ್ದಾರೆ. ಅಲ್ಲದೆ, 10 ಸೇನಾ ಸಿಬ್ಬಂದಿ ಮತ್ತು 19 ನಾಗರಿಕರು ಗಾಯಗೊಂಡಿದ್ದಾರೆ” ಎಂದು ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಉತ್ತರ ವಜೀರಿಸ್ತಾನ್ ಜಿಲ್ಲೆಯ ಹೆಸರು ಬಹಿರಂಗಪಡಿಸಲಿ ಇಚ್ಛಿಸದ ಸ್ಥಳೀಯ ಸರ್ಕಾರಿ ಅಧಿಕಾರಿಯೊಬ್ಬರು ಎಎಫ್ಪಿ(AFP)ಗೆ ತಿಳಿಸಿದ್ದಾರೆ. “ಸ್ಫೋಟದ ಪರಿಣಾಮವಾಗಿ ಎರಡು ಮನೆಗಳ ಛಾವಣಿಗಳು ಕುಸಿದವು, ಆರು ಮಕ್ಕಳು ಗಾಯಗೊಂಡರು” ಎಂದು ಜಿಲ್ಲೆಯಲ್ಲಿ ಪೋಸ್ಟ್ ಮಾಡಲಾದ ಪೊಲೀಸ್ ಅಧಿಕಾರಿಯೊಬ್ಬರು ಎಎಫ್ಪಿಗೆ ತಿಳಿಸಿದ್ದಾರೆ. ನಾಲ್ವರು ಗಾಯಗೊಂಡ ಸೈನಿಕರ ಸ್ಥಿತಿ ಗಂಭೀರವಾಗಿದೆ ಎಂದು ಆಡಳಿತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. Pakistan Suicide Attack; ಪಾಕಿಸ್ತಾನ ತಾಲಿಬಾನ್ನ ಒಂದು ಬಣವಾದ ಹಫೀಜ್ ಗುಲ್...
Top Stories
ಕಾತೂರು ಅರಣ್ಯಾಧಿಕಾರಿಗಳ ಭರ್ಜರಿ ದಾಳಿ, ಜಿಂಕೆ ಚರ್ಮ, ಕಾಡು ಹಂದಿ ಮಾಂಸ ಸಾಗಿಸುತ್ತಿದ್ದ ಐವರು ಅಂದರ್..!
ಗೋವಾ; ನೈಟ್ ಕ್ಲಬ್ ನಲ್ಲಿ ಬೆಂಕಿ ಅವಘಡ, 23 ಮಂದಿ ಸಾವು..!
ಮುಂಡಗೋಡಿನಲ್ಲಿ ಬೆಳ್ಳಂ ಬೆಳಿಗ್ಗೆ ಭಾರೀ ಬೆಂಕಿ ಅನಾಹುತ, ಸುಟ್ಟು ಕರಕಲಾಯ್ತು ಪರ್ನಿಚರ್ ಅಡ್ಡೆ..! ಲಕ್ಷಾಂತರ ಬೆಲೆಯ ಪರ್ನಿಚರ್ ಗಳು ಬೆಂಕಿಗಾಹುತಿ..!
ಶಿರಸಿ ಎಸಿ ಕಾವ್ಯಾರಾಣಿ ವರ್ಗಾವಣೆಗೆ ಹಲವರ ಆಕ್ರೋಶ, ಆದೇಶ ರದ್ದುಗೊಳಿಸುವಂತೆ ಶೇಖರ್ ಲಮಾಣಿ ಆಗ್ರಹ..!
ಅಗಡಿ ಶ್ರೀಗಂಧ ತುಂಡುಗಳು ಸಿಕ್ಕ ಕೇಸ್, ಕಚೇರಿಗೇ ಬಂದ್ರೂ ಆರೋಪಿಯನ್ನ ಬಿಟ್ಟು ಕಳಿಸಿದ್ರಾ ಅಧಿಕಾರಿಗಳು..? RFO ಕಚೇರಿಯಿಂದಲೇ ಆರೋಪಿ ಮತ್ತೆ ಎಸ್ಕೇಪ್..!
ಅಗಡಿಯಲ್ಲಿ ಅರಣ್ಯ ಅಧಿಕಾರಿಗಳ ಭರ್ಜರಿ ದಾಳಿ, 60 ಕೆಜಿಗೂ ಹೆಚ್ಚು ಶ್ರೀಗಂಧದ ಮರದ ತುಂಡುಗಳು ವಶಕ್ಕೆ, ಆರೋಪಿ ಪರಾರಿ..!
ಚಿಗಳ್ಳಿ ಪ್ರೌಢಶಾಲೆಯ ಶಿಕ್ಷಕ ದಾಸಪ್ಪ, ಸಸ್ಪೆಂಡ್..! ಹಲವು ದಿನಗಳ ಗುದುಮುರುಗಿ ಬಳಿಕ ಶಿರಸಿ ಡಿಡಿಪಿಐ ಖಡಕ್ ಆದೇಶ..!
ಮುಂಡಗೋಡ ಮಾದರಿ ಶಾಲೆಯ ಬಿಸಿಯೂಟ ಸೇವಿಸಿದ ವಿದ್ಯಾರ್ಥಿಗಳು ಅಸ್ವಸ್ಥ..! ಆಸ್ಪತ್ರೆಗೆ ದಾಖಲು..!
ಒಂದೇ ಕುಟುಂಬದ ನಾಲ್ವರು ಬಾವಿಗೆ ಹಾರಿ ಆತ್ಮಹತ್ಯೆ..! ಮೊಮ್ಮಕ್ಕಳು, ಮಗನೊಂದಿಗೆ ಸಾವು ಕಂಡ ತಂದೆ..!
ಮುಂಡಗೋಡ ಪೊಲೀಸರ ತಡರಾತ್ರಿ ಕಾರ್ಯಾಚರಣೆ..! “ಚರಸ್” ದಂಧೆಯಲ್ಲಿ ತೊಡಗಿದ್ದ ಇಂಜಿನೀಯರ್ ಅಂದರ್..!
ಸನವಳ್ಳಿ ಬಳಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರ್, ತುಂಡಾಗಿ ಬಿದ್ದ ವಿದ್ಯುತ್ ಕಂಬ..!
ಯಲ್ಲಾಪುರ ಪೊಲೀಸ್ರ ಸಿನಿಮಿಯ ರೀತಿ ದಾಳಿ..!! ಉಮ್ಮಚಗಿ ಬ್ಯಾಂಕ್ ದರೋಡೆಗೆ ಯತ್ನಿಸಿದ್ದ ನಟೋರಿಯಸ್ ಕಳ್ಳನ ಗ್ಯಾಂಗ್ ಅಂದರ್..!
ಹನುಮಾಪುರದಲ್ಲಿ ಭೀಕರ ಬೆಂಕಿ ಅವಘಡ..! ಬೆಂಕಿಯಲ್ಲಿ ಮನೆಯ ಸಮೇತ ಬೆಂದು ಹೋದ ವೃದ್ದೆ..!
ಪಾಳಾದ ಇಂದಿರಾ ಗಾಂಧಿ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಇದೇಂಥ ಸ್ಥಿತಿ..? ಈ ಮಕ್ಕಳಿಗೆ ನುಸಿ ತುಂಬಿರೋ ದವಸದ ಆಹಾರವೇ ಗತಿಯಾ..?
ಹುಬ್ಬಳ್ಳಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಮುಂಡಗೋಡಿನ ಮಹದೇಶ್ವರ ಲಿಂಗದಾಳ, RTI ಹೆಸ್ರಲ್ಲಿ ಈ ವಂಚಕ ಪಡೆ ಮಾಡಿದ್ದೇನು..?
ಸಾಲಬಾಧೆ, ಬಾಚಣಕಿಯಲ್ಲಿ ನೇಣಿಗೆ ಶರಣಾದ ಅನ್ನದಾತ..! ತನ್ನ ದನದ ಕೊಟ್ಟಿಗೆಯಲ್ಲೇ ಆತ್ಮಹತ್ಯೆ..!
ಅಭಿಮಾನಿಗಳ ನೆಚ್ಚಿನ “ಹೈಸ್ಪೀಡ್ ಮಣಿ” ಟಗರು ಅಕಾಲಿಕ ಸಾವು..! ಸಾವಿರಾರು ಅಭಿಮಾನಿಗಳ ಕಂಬನಿ..!
ವಯಸ್ಸು 45 ಆದ್ರೂ ಮದುವೆ ಆಗಲಿಲ್ಲ, ಅದೇ ಕೊರಗಲ್ಲೇ ಚಾಕು ಇರಿದುಕೊಂಡ, ಆತ್ಮಹತ್ಯೆಗೆ ಯತ್ನಿಸಿದ..!
ಮುಂಡಗೋಡಿನ ಕಿರಣ್ ಸಾಳುಂಕೆಗೆ ಗಡಿಪಾರು..!ಯಾದಗಿರಿ ಜಿಲ್ಲೆಗೆ ಗಡಿಪಾರು ಮಾಡಿ ಶಿರಸಿ ಎಸಿ ಆದೇಶ..!!
ಮಣಿಪಾಲದಲ್ಲಿ ಬೈಕ್ ಅಪಘಾತ, ಮುಂಡಗೋಡಿನ ಅತ್ತಿವೇರಿ ಗೌಳಿ ದಡ್ಡಿಯ ಯುವಕ ದಾರುಣ ಸಾವು..!
Accident News; ಮುಂಡಗೋಡ ತಾಲೂಕಿನ ಅತ್ತಿವೇರಿ ಗೌಳಿ ದಡ್ಡಿಯ ಯುವಕನೋರ್ವ, ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡು, ಚಿಕಿತ್ಸೆ ಫಲಕಾರಿಯಾಗದೇ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಮೃತಪಟ್ಟಿದ್ದಾನೆ. ಅತ್ತಿವೇರಿ ಗೌಳಿ ದಡ್ಡಿಯ ಬಮ್ಮು ಜನ್ನು ಬೋಡೇಕರ್(20), ಮೃತಪಟ್ಟ ಯುವಕನಾಗಿದ್ದಾನೆ. ಈತ ಕೆಲಸ ನಿಮಿತ್ತ, ಅತ್ತಿವೇರಿ ಗೌಳಿ ದಡ್ಡಿಯಿಂದ ಉಡುಪಿಯ ಮಣಿಪಾಲಕ್ಕೆ ತೆರಳುತ್ತಿದ್ದ ವೇಳೆ, ಜೂನ್ 26 ರಂದು ಸಂಜೆ ಬೈಕ್ ಅಪಘಾತವಾಗಿದೆ. Accident News; ಹೀಗಾಗಿ, ಗಂಭೀರ ಗಾಯಗೊಂಡಿದ್ದ ಯುವಕನನ್ನು ಮಣಿಪಾಲದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ತರಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಬಮ್ಮು ಮೃತಪಟ್ಟಿದ್ದಾನೆ. ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಅರಣ್ಯಾಧಿಕಾರಿಗಳ ಭರ್ಜರಿ ಕಾರ್ಯಾಚರಣೆ, ಖಾನಾಪುರದಲ್ಲಿ ಕಡವೆ ಬೇಟೆಯಾಡಿದ್ದ 9ಜನರ ಬಂಧನ..! ಗಾಂಜಾ ಮಾರಾಟ ಮಾಡುತ್ತಿದ್ದ ಮಹಿಳೆಯನ್ನು ಬಂಧಿಸಿದ ಪೊಲೀಸರು..!
ಅರಣ್ಯಾಧಿಕಾರಿಗಳ ಭರ್ಜರಿ ಕಾರ್ಯಾಚರಣೆ, ಖಾನಾಪುರದಲ್ಲಿ ಕಡವೆ ಬೇಟೆಯಾಡಿದ್ದ 9ಜನರ ಬಂಧನ..!
Khanapur Forest Crime; ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಲೋಂಡಾ ಅರಣ್ಯ ವಲಯದ ವ್ಯಾಪ್ತಿಯಲ್ಲಿ ಒಂದು ಕಡವೆ ಬೇಟೆಯಾಡಿದ್ದ 9 ಜನ ಆರೋಪಿಗಳು ಅಂದರ್ ಆಗಿದ್ದಾರೆ. ಖಚಿತ ಮಾಹಿತಿ ಮೇರೆಗೆ ಖಾನಾಪುರ ಎಸಿಎಫ್ ಸುನೀತಾ ನಿಂಬರಗಿ ನೇತೃತ್ವದಲ್ಲಿ ಅರಣ್ಯಾಧಿಕಾರಿಗಳು ದಾಳೊ ನಡೆಸಿ, 9 ಜನ ಆರೋಪಿಗಳ ಬಂಧನವಾಗಿದೆ. Khanapur Forest Crime; ಖಾನಾಪುರ ತಾಲೂಕಿನ ನೇರಸೆ ಗ್ರಾಮದ ರಂಜಿತ್ ದೇಸಾಯಿ, ಬಲವಂತ ದೇಸಾಯಿ, ಆತ್ಮರಾಮ್ ದೇವಳಿ, ಪ್ರಮೋದ್ ದೇಸಾಯಿ, ದತ್ತರಾಜ್ ಹವಾಲ್ದಾರ್, ಜ್ಞಾನೇಶ ಗಾವಡೆ, ಗೋವಿಂದ ದೇಸಾಯಿ, ಅಪ್ಪಿ ಹಣಬರ, ಬರಮಪ್ಪ ಹಣಬರ ಬಂಧಿತ ಆರೋಪಿಗಳು. ಬಂಧಿತರಿಂದ ಎರಡು ಬಂದೂಕು, ಒಂದು ಕುಡಗೋಲು, ಕಡವೆ ಮಾಂಸ ಜಪ್ತಿ ಪಡಿಸಿಕೊಳ್ಳಲಾಗಿದೆ. ಬಂಧಿತರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಕೇಸ್ ದಾಖಲು ಮಾಡಲಾಗಿದೆ. ಬಂಧಿತರನ್ನ ಅರಣ್ಯ ಇಲಾಖೆ ಅಧಿಕಾರಿಗಳು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಗಾಂಜಾ ಮಾರಾಟ ಮಾಡುತ್ತಿದ್ದ ಮಹಿಳೆಯನ್ನು ಬಂಧಿಸಿದ ಪೊಲೀಸರು..! ಉತ್ತರ ಕನ್ನಡ ಜಿಲ್ಲೆಯ ಇಂದಿನ ಸಂಕ್ಷಿಪ್ತ ಸುದ್ದಿಗಳು..!
ಗಾಂಜಾ ಮಾರಾಟ ಮಾಡುತ್ತಿದ್ದ ಮಹಿಳೆಯನ್ನು ಬಂಧಿಸಿದ ಪೊಲೀಸರು..!
Crime News; ಗಾಂಜಾ ಮಾರಾಟ ಮಾಡುತ್ತಿದ್ದ ಓರ್ವ ಮಹಿಳೆಯನ್ನು, ಯಲ್ಲಾಪುರ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ತಾಲೂಕಿನ ಮದನೂರು ಗ್ರಾಮದ ಗೌಳಿವಾಡ ಹತ್ತಿರದ ಮನೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಸಗ್ಗಿ ಬಾಬು ಪಾಟೀಲ್ (40) ಎಂಬುವಳೇ ಬಂಧಿತ ಮಹಿಳೆಯಾಗಿದ್ದಾಳೆ. ಖಚಿತ ಬಾತ್ಮೀ ಆಧಾರದಲ್ಲಿ, ಮೇಲಾಧಿಕಾರಿಯವರ ಮಾರ್ಗದರ್ಶನದಂತೆ ಯಲ್ಲಾಪುರ ಪೊಲೀಸ ಉಪನಿರೀಕ್ಷಕ ಮಹಾವೀರ ಕಾಂಭೈರವರು ಠಾಣೆಯ ಸಿಬ್ಬಂದಿಯವರೊಂದಿಗೆ ಮದನೂರು ಗ್ರಾಮಕ್ಕೆ ಹೋಗಿ ದಾಳಿ ನಡೆಸಿದ್ದಾರೆ. ಬಂಧಿತ ಆರೋಪಿಯಿಂದ 10 ಸಾವಿರ ರೂ. ಮೌಲ್ಯದ, 340 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಇಂದಿನ ಸಂಕ್ಷಿಪ್ತ ಸುದ್ದಿಗಳು..!
Uttar Kannada News Today : ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ..! ಕಾರವಾರ : ಜೂ.27 ರಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ಅಯೋಜಿಸಲಾದ ನಾಡ ಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು, ಕೆಂಪೇಗೌಡ ಅವರ ಭಾವ ಚಿತ್ರಕ್ಕೆ ಪುಷ್ಟ ನಮನ ಸಲ್ಲಿಸುವ ಮೂಲಕ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಲತಾ ನಾಯಕ, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಲಾ ವೆಂ ನಾಯ್ಕ ಸ್ವಾಗತಿಸಿದರು. ಶಿಕ್ಷಕಿ ವನಿತಾ ಶೆಟ್ ನಿರೂಪಿಸಿ, ವಂದಿಸಿದರು. *************************** ವಾಹನ ಚಾಲಕರು ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಿ..! ಕಾರವಾರ: ಪ್ರಸುತ್ತ ಬೇಸಿಗೆಯ ರಜೆಯು, ಕಳೆದು ಶಾಲಾ/ಕಾಲೇಜುಗಳ ಪ್ರಾರಂಭವಾಗಿದ್ದು, ಮಳೆಗಾಲವೂ ಸಹ ಪ್ರಾರಂಭವಾಗಿರುವುದರಿಂದ , ವಾಹನಗಳ ಚಾಲಕರು ಮತ್ತು ಮಾಲೀಕರು ವಾಹನ ಚಲಾಯಿಸುವಾಗ, ರಸ್ತೆ...
ಸಿನಿಮೀಯ ರೀತಿಯಲ್ಲಿ ಉದ್ಯಮಿಯಿಂದ, 2 ಕೋಟಿ ರೂ. ಎಗರಿಸಿದ ಖದೀಮರು..!
Robbery News; ಬೆಂಗಳೂರು: ಹಾಡಹಗಲೇ ಸಿನಿಮೀಯ ರೀತಿಯಲ್ಲಿ 2 ಕೋಟಿ ರೂಪಾಯಿ ದರೋಡೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ. ಜೂನ್ 25ರಂದು ವಿದ್ಯಾರಣ್ಯಪುರ ಠಾಣೆ ವ್ಯಾಪ್ತಿಯ ಎಂ.ಎಸ್. ಪಾಳ್ಯದಲ್ಲಿ ಘಟನೆ ನಡೆದಿದ್ದು, ಹಣ ಕಳೆದುಕೊಂಡ ಉದ್ಯಮಿ ಶ್ರೀಹರ್ಷ ವಿ. ಅವರು ನೀಡಿರುವ ದೂರಿನ ಅನ್ವಯ ವಿದ್ಯಾರಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಂಗೇರಿ ಮೂಲದ ಶ್ರೀಹರ್ಷ ತಮ್ಮ ಉದ್ಯಮಕ್ಕೆ ಅಗತ್ಯವಿರುವ ಯಂತ್ರವೊಂದನ್ನು ಜರ್ಮನಿಯಿಂದ ಆಮದು ಮಾಡಿಕೊಳ್ಳಬೇಕಿದ್ದುದರಿಂದ 2 ಕೋಟಿ ರೂ. ಹಣವನ್ನು ಯುಎಸ್ಡಿಐಟಿಗೆ ಕನ್ವರ್ಟ್ ಮಾಡಿಸಿಕೊಳ್ಳಬೇಕಿತ್ತು. ಈ ಸಂದರ್ಭದಲ್ಲಿ ತನ್ನ ಸ್ನೇಹಿತರೊಬ್ಬರ ಮೂಲಕ ಶ್ರೀಹರ್ಷ ಅವರಿಗೆ ಬೆಂಜಮಿನ್ ಹರ್ಷ ಎಂಬಾತನ ಪರಿಚಯವಾಗಿತ್ತು. ಯುಎಸ್ಡಿಐಟಿಗೆ ಹಣ ಕನ್ವರ್ಟ್ ಮಾಡಿಸುವ ಸಲುವಾಗಿ ಚರ್ಚಿಸಿದಾಗ ಎಂ.ಎಸ್. ಪಾಳ್ಯದಲ್ಲಿರುವ ಎ.ಕೆ. ಎಂಟರ್ಪ್ರೈಸಸ್ ಬಳಿ ಬರುವಂತೆ ಬೆಂಜಮಿನ್ ಹರ್ಷ ಸೂಚಿಸಿದ್ದ. ಅದರಂತೆ ಜೂನ್ 25ರಂದು ಮಧ್ಯಾಹ್ನ 3 ಗಂಟೆಗೆ ಎಂ.ಎಸ್.ಪಾಳ್ಯದ ಎ.ಕೆ. ಎಂಟರ್ಪ್ರೈಸಸ್ನಲ್ಲಿ ಬೆಂಜಮಿನ್ ಹರ್ಷ ಹಾಗೂ ಶ್ರೀಹರ್ಷ ಭೇಟಿಯಾಗಿದ್ದರು ಎಂದು ದೂರಿನಲ್ಲಿ ವಿವರಿಸಲಾಗಿದೆ. Robbery News;ಶ್ರೀಹರ್ಷ, ಬೆಂಜಮಿನ್ ಮತ್ತು...
ಪತಿಯ ಕೊಲೆಗೆ ಪ್ರತಿಕಾರ; ಆ ಹೆಣ್ಣಿನ ಸೇಡಿಗೆ ಅಲ್ಲಿ ಹೆಣವಾಗಿ ಬಿದ್ದವರು ಬರೋಬ್ಬರಿ ಮೂರು ಜನ..!
Kalaburgi Triple Murder; ಕಲಬುರ್ಗಿ: ಹೆಣ್ಣಿನ ಸೇಡಿಗಾಗಿ ಇಲ್ಲಿ ತ್ರಿಬಲ್ ಮರ್ಡರ್ ನಡೆದಿದೆ. ಗಂಡನ ಕೊಂದವರನ್ನು ಮುಗಿಸದೇ ತಾಳಿ ತೆಗೆಯಲ್ಲ ಅಂತ ಪ್ರತಿಜ್ಞೆ ಮಾಡಿದ್ದ ಆ ಹೆಣ್ಣಿನ ಕೋಪಜ್ವಾಲೆಯಲ್ಲಿ, ಮೂವರು ಹೆಣವಾಗಿದ್ದಾರೆ. ಕಲಬುರ್ಗಿ ತ್ರಿಬಲ್ ಮರ್ಡರ್ ಕೇಸಿನಲ್ಲಿ ರೋಚಕ ಕಹಾನಿಗಳು ಹೊರ ಬರುತ್ತಿವೆ. 8 ತಿಂಗಳ ಹಿಂದೆ ಕೊಲೆಯಾಗಿದ್ದ ರೌಡಿಶೀಟರ್ ಸೋಮು ತಾಳಿಕೋಟಿ ಪತ್ನಿಯ ಶಪಥ ಮತ್ತೆ ಮೂರು ಜೀವ ತೆಗೆಯುವಂತೆ ಮಾಡಿದೆ. ಹೆಣ್ಣಿನ ದ್ವೇಷ ಎಷ್ಟೊಂದು ಕೆಟ್ಟದು ಎಂಬುದು ಇಲ್ಲಿ ಸಾಬೀತಾಗಿದೆ. ಕಲಬುರ್ಗಿ ಹೊರವಲಯದ ಡ್ರೈವರ್ ಧಾಬಾದಲ್ಲಿ ಮಂಗಳವಾರ ತಡರಾತ್ರಿ ನಡೆದ ಮೂರು ಕೊಲೆಗಳು ಇದಕ್ಕೆ ಸಾಕ್ಷಿಯಾಗಿವೆ. ಗುರುತು ಸಿಗಲಾರದಷ್ಟು ಭಯಂಕರವಾಗಿ ಕೊಲ್ಲಲು ಅದೆಂಥಾ ದ್ವೇಷ ಮನದಲ್ಲಿ ಮನೆ ಮಾಡಿತ್ತು ಎಂಬುದು ಸಾರ್ವಜನಿಕರಲ್ಲಿ ಕಾಡುತ್ತಿರುವ ಪ್ರಶ್ನೆಯಾಗಿದೆ. ಅದು ನವೆಂಬರ್, 2024….! 2024ರ ನವೆಂಬರ್ನಲ್ಲಿ ಡ್ರೈವರ್ ದಾಬಾ ಮಾಲೀಕ ಸಿದ್ಧಾರೂಢ ಹಾಗೂ ಇತರರು ಸೇರಿಕೊಂಡು ರೌಡಿಶೀಟರ್ ಸೋಮು ತಾಳಿಕೋಟಿಯನ್ನು ಬರ್ಬರವಾಗಿ ಹತ್ಯೆ ಮಾಡಿ, ಶವವನ್ನು ಅನಾಥವಾಗಿ ಎಸೆದು ಹೋಗಿದ್ದರು. ಈ ವೇಳೆ...
ತಡಸ ತಾಯವ್ವ ದೇವಸ್ಥಾನ ಸಮೀಪ ಲಾರಿ ಅಪಘಾತ..! ಮುಂಡಗೋಡ- ಹುಬ್ಬಳ್ಳಿ ರಸ್ತೆ ಸಂಚಾರ ಸ್ಥಗಿತ..!
Lorry accident; ಮುಂಡಗೋಡ ತಾಲೂಕಿನ ಗಡಿ ಭಾಗದ, ತಡಸ ಸಮೀಪದ ಹುಬ್ಬಳ್ಳಿ ರಸ್ತೆಯಲ್ಲಿ, ಲಾರಿಯೊಂದು ಅಪಘಾತವಾಗಿ ಬಿದ್ದಿದೆ. ಹೀಗಾಗಿ, ಮುಂಡಗೋಡ- ಹುಬ್ಬಳ್ಳಿ ರಸ್ತೆ ಸಂಚಾರ ಬಂದ್ ಆಗಿದೆ. ಕನಿಷ್ಟ ಎರಡರಿಂದ ಮೂರು ಗಂಟೆಗಳ ಸಂಚಾರ ಸ್ಥಗಿತವಾಗುವ ಸಾಧ್ಯತೆ ಇದೆ. ಹುಬ್ಬಳ್ಳಿ ರಸ್ತೆಯ ತಾಯವ್ವನ ದೇವಸ್ಥಾನದ ಸಮೀಪ ಲಾರಿ ಅಪಘಾತವಾಗಿ ಅಕ್ಷರಶಃ ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಹೀಗಾಗಿ, ರಸ್ತೆಯಲ್ಲಿ ವಾಹಮ ಸಂಚಾರಕ್ಕೆ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ, ಪೊಲೀಸರು ಶಿರಸಿಯಿಂದ ಹುಬ್ಬಳ್ಳಿಯೆಡೆಗೆ ಸಂಚರಿಸುವ ವಾಹನಗಳನ್ನು ಬಂಕಾಪುರ ರಸ್ತೆ ಮಾರ್ಗವಾಗಿ ಸಂಚರಿಸುವಂತೆ ಮಾರ್ಗ ಬದಲಾವಣೆ ಮಾಡಿಸುತ್ತಿದ್ದಾರೆ. ಇದನ್ನೂ ಓದಿ👇 ಅಬ್ಬಾ..! ಶಿರಸಿ ಶೈಕ್ಷಣಿಕ ಜಿಲ್ಲೆಯ DDPI ಬಸವರಾಜ್ ಎತ್ತಂಗಡಿ..! ಹೊಸ DDPI ಆಗಿ ಬಂದ್ರು ಡಿ. ಆರ್. ನಾಯ್ಕ್..! ಚಿಗಳ್ಳಿ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಕರು HM ಆಗಿದ್ದಾರಂತೆ, SDMC ರಚಿಸಿದ್ದು ಗೊತ್ತೇ ಇಲ್ಲವಂತೆ..! ಇದು ಪಾಲಕರ ಆಗ್ರಹದ ಅರ್ಜಿ..! ಬಿಇಓ ಮೇಡಂ ಏನ್ರಿ ಇದೇಲ್ಲ..?
ಅಬ್ಬಾ..! ಶಿರಸಿ ಶೈಕ್ಷಣಿಕ ಜಿಲ್ಲೆಯ DDPI ಬಸವರಾಜ್ ಎತ್ತಂಗಡಿ..! ಹೊಸ DDPI ಆಗಿ ಬಂದ್ರು ಡಿ. ಆರ್. ನಾಯ್ಕ್..!
DDPI Transfer News; ಶಿರಸಿ ಶೈಕ್ಷಣಿಕ ಜಿಲ್ಲೆಯ ಬಲು ಜನಪ್ರಿಯ DDPI ಆಗಿದ್ದ ಸನ್ಮಾನ್ಯ ಬಸವರಾಜ್ ರವರನ್ನು, ಸರ್ಕಾರ ಸ್ಥಳವನ್ನೂ ತೋರಿಸದೇ ಎತ್ತಂಗಡಿ ಮಾಡಿದೆ. ನೂತನ DDPI ಆಗಿ D.R. ನಾಯ್ಕ್ ನೇಮಕವಾಗಿದ್ದಾರೆ. ಬೆಳಗಾವಿ ಸರಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರವಾಚಕರಾಗಿ ಕಾರ್ಯನಿರ್ವಹಿಸುತಿದ್ದ ಡಿ. ಆರ್. ನಾಯ್ಕ್, ಶಿರಸಿ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ಆಗಿ ಬಂದಿದ್ದಾರೆ. ಹೀಗಾಗಿ, ಸದ್ಯ ಡಿಡಿಪಿಐ ಆಗಿದ್ದ ಬಸವರಾಜ್ ಅವರನ್ನು ಸ್ಥಳ ನಿಯುಕ್ತಿಗಾಗಿ ಸರಕಾರಕ್ಕೆ ವರದಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ಅಂದಹಾಗೆ, ಡಿ. ಆರ್. ನಾಯ್ಕ್ ರವರು ಈ ಹಿಂದೆ ಸಿದ್ದಾಪುರ BEO ಆಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದರು ಅನ್ನೊ ಮಾಹಿತಿ ಇದೆ. ಪುಣ್ಯಕ್ಕೆ, ಇವ್ರಿಂದಲಾದ್ರೂ ನಮ್ಮ ಮುಂಡಗೋಡಿನ ಶಿಕ್ಷಣ ಕ್ಷೇತ್ರ ಸುಧಾರಿಸಲಿ ಅನ್ನೋದು, ಅಸಂಖ್ಯ ಶಿಕ್ಷಣಾಭಿಮಾನಿಗಳ ಆಶಯ..! ಹೀಗಾಗಿ, ನಿರ್ಗಮಿಸುತ್ತಿರೋ DDPI ರವರಿಗೆ ಹೃದಯಪೂರ್ವಕವಾಗಿ, ಸಂಭ್ರಮ, ಸಡಗರದ ಖುಶಿಯಿಂದಲೇ ಇಲ್ಲಿನ ಜನ ಬೀಳ್ಕೊಡುತ್ತಿದ್ದಾರೆ.
ಚಿಗಳ್ಳಿ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಕರು HM ಆಗಿದ್ದಾರಂತೆ, SDMC ರಚಿಸಿದ್ದು ಗೊತ್ತೇ ಇಲ್ಲವಂತೆ..! ಇದು ಪಾಲಕರ ಆಗ್ರಹದ ಅರ್ಜಿ..! ಬಿಇಓ ಮೇಡಂ ಏನ್ರಿ ಇದೇಲ್ಲ..?
Education Department; ಮುಂಡಗೋಡ ತಾಲೂಕಿನ ಚಿಗಳ್ಳಿ ಪ್ರೌಢಶಾಲೆಯ ವಿದ್ಯಾರ್ಥಿಗಳ ಪಾಲಕರು ಮತ್ತೆ ಆಕ್ರೋಶಗೊಂಡಿದ್ದಾರೆ. ಪ್ರೌಢಶಾಲೆಯ ಇಡೀ ಅಂಗಳದಲ್ಲಿ ರಾಜಕೀಯ ಅನ್ನೋದು ಹಾಸು ಹೊಕ್ಕಾಗಿದೆ, ಹೀಗಾಗಿ, ಇಲ್ಲಿ ಕಾನೂನು ಅನ್ನೋದು ಯಾರಿಗೂ ಅನ್ವಯವಾಗ್ತಿಲ್ಲ, ತಮಗೆ ಇಷ್ಟ ಬಂದಂಗೆ ಎಲ್ಲವನ್ನೂ ನಡೆಸಿಕೊಂಡು ಹೋಗ್ತಿದಾರೆ. ಹೀಗಾಗಿ, ಇಲ್ಲಿನ ಶಿಕ್ಷಣ ಅಧೋಗತಿಗೆ ಇಳಿದಿದೆ ಅಂತಾ ಹಲವು ಪಾಲಕರು ಬಿಇಓ ಗೆ ಲಿಖಿತವಾಗಿ ದೂರು ನೀಡಿದ್ದಾರೆ. SDMC ಸಮಿತಿ ಆಯ್ಕೆ ಅದ್ವಾನ..? ಅಸಲು, ಆ ಪ್ರೌಢಶಾಲೆಯಲ್ಲಿ ಕಲಿಯುತ್ತಿರೋ ವಿದ್ಯಾರ್ಥಿಗಳ ಪಾಲಕರು ಸಭೆ ಮಾಡಿ, SDMC ರಚನೆ ಮಾಡಬೇಕಾಗಿರತ್ತೆ. ಆದ್ರೆ, ಈ ಪ್ರೌಢಶಾಲೆಯಲ್ಲಿ ಮಾತ್ರ ಅಂತಹ ಯಾವ ಸಭೆಯನ್ನೂ ಕರೆಯದೇ, ಕೆಲ ರಾಜಕೀಯದವರ ಮೂಗಿನ ನೇರಕ್ಕೆ ಸದಸ್ಯರುಗಳು, ಅಧ್ಯಕ್ಷರುಗಳ ಆಯ್ಕೆ ಮಾಡಿಕೊಳ್ಳಲಾಗಿದೆಯಂತೆ. ಹೀಗಾಗಿ, ಇದೇಲ್ಲ ಸರಿಯಲ್ಲ, ಕೂಡಲೇ ಪಾಲಕರ ಸಭೆ ಕರೆದು, ಕಾನೂನುಬದ್ಧ, ನಿಯಮಾನುಸಾರ SDMC ರಚನೆ ಆಗಬೇಕು ಅಂತ ಪಾಲಕರು ಬಿಇಓ ಗೆ ಒತ್ತಾಯಿಸಿದ್ದಾರೆ. ಇಲ್ಲಿ ದೈಹಿಕ ಶಿಕ್ಷಕರು HM ಆಗಬಹುದಾ..? ಇನ್ನು, ಇದೇ ಚಿಗಳ್ಳಿ ಪ್ರೌಢಶಾಲೆಯಲ್ಲಿ, ದೈಹಿಕ...









