ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಪ್ರವಾಸ..!

ಕಾರವಾರ; ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ಉತ್ತರ ಕನ್ನಡ ಜಿಲ್ಲೆಯಲ್ಲಿ ಫೆ.22 ಮತ್ತು 23 ರಂದು ಪ್ರವಾಸ ಕೈಗೊಂಡಿದ್ದು, ಫೆ.22 ರಂದು ಸಂಜೆ 6 ಗಂಟೆಗೆ ಹೊನ್ನಾವರದ ಪ್ರಭಾತನಗರ ಸೆಂಟ್ ಅಂತೋನಿ ಮೈದಾನದಲ್ಲಿ ಹೊನ್ನಾವರ ಉತ್ಸವ ಸಮಿತಿಯಿಂದ ಆಯೋಜಿಸಿರುವ ಹೊನ್ನಾವರ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಕುಮಟಾದಲ್ಲಿ ವಾಸ್ತವ್ಯ ಮಾಡಲಿದ್ದಾರೆ.

ಫೆ.23 ರಂದು ಬೆಳಗ್ಗೆ 11 ಗಂಟೆಗೆ ಕುಮಟಾ ತಾಲೂಕಿನ ಹೆಗ್ಡೆ ಗ್ರಾಮದಲ್ಲಿ ಅಘನಾಶಿನಿ ನದಿಗೆ ನಬಾರ್ಡ್ ವತಿಯಿಂದ ನಿರ್ಮಾಣವಾಗಿರುವ ಸೇತುವೆ ಪರಿಶೀಲನೆ ನಡೆಸಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಕುಮಟಾ ತಾಲೂಕಿನ ಕಲಭಾಗ್ ಬಗೋಣ- ಉರಕೇರಿ ರಸ್ತೆಯಲ್ಲಿ ಮೂವತ್ತುಗುಂಡಿ ಸೇತುವೆ ಪುನರ್ ನಿರ್ಮಾಣ ಕಾಮಗಾರಿಯ ಅಡಿಗಲ್ಲು ಕಾರ್ಯಕ್ರಮವನ್ನು ನೆರವೇರಿಸಲಿದ್ದು, ಮಧ್ಯಾಹ್ನ 1 ಗಂಟೆಗೆ ಹೊನ್ನಾವರ ತಾಲೂಕಿನ ಹಳದಿಪುರದಲ್ಲಿ ಪಾವಿನಕುರುವ ಸೇತುವೆ ಪರಿಶೀಲನೆ ನಡೆಸಲಿದ್ದಾರೆ ಎಂದು ಸಚಿವರ ಆಪ್ತ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.