ಅದು ಅಕ್ಷರಶಃ ಇಡೀ ಮುಂಡಗೋಡ ತಾಲೂಕನ್ನೇ ಬೆಚ್ಚಿ ಬೀಳಿಸಿರೋ ಮಹಿಳೆಯ ಮರ್ಡರ್ ಕೇಸ್, ಮುಂಡಗೋಡ ಪೊಲೀಸರಿಗೆ ಅಕ್ಷರಶಃ ಸವಾಲಾಗಿದೆ. ಕೊಳಗಿ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿರೋ ರುಂಡವಿಲ್ಲದ ಮಹಿಳೆಯ ಶವ ಭೀಕರ ಹತ್ಯೆಯ ಕರಾಳತೆಗೆ ಸಾಕ್ಷಿಯಾಗಿದೆ. ಅದೇಲ್ಲಿಯೋ ಭಯಾನಕವಾಗಿ ಮರ್ಡರ್ ಮಾಡಿ, ರುಂಡ ಚಂಡಾಡಿ ಜಸ್ಟ್ ದೇಹವನ್ನು ಮಾತ್ರ ಕೊಳಗಿಯ ಅರಣ್ಯಕ್ಕೆ ತಂದು ಎಸೆದು ಹೋದ್ರಾ ಹಂತಕರು..? ಅಥವಾ ಮತ್ತೇನಾದ್ರೂ ಬೇರೆಯದ್ದೇ ಕಾರಣಕ್ಕೆ ಇಂತಹದ್ದೊಂದು ಭೀಕರ ಹತ್ಯೆ ನಡೆದು ಹೋಯ್ತಾ..? ಗೊತ್ತಿಲ್ಲ.

ಎರಡು ದಿನಗಳಾಯ್ತಾ..?
ಅಸಲು, ಫೆ.20 ರ, ಶುಕ್ರವಾರ ಸಂಜೆ ಸಿಕ್ಕಿರೋ ಭಯಾನಕ ಶವ, ಬಹುಶಃ ಎರಡು ದಿನಗಳ ಹಿಂದೆ ಅದೇಲ್ಲಿಯೊ ಹತ್ಯೆ ಮಾಡಿ ಇಲ್ಲಿ ತಂದು ಬೀಸಾಕಿರೋ ಅನುಮಾನವಿದೆ. ಹಾಗೆ ನೋಡಿದ್ರೆ, ಶವದ ಹತ್ತಿರ ಕೊರಳಲ್ಲಿ ಧರಿಸುವ ಲಿಂಗ ಸಿಕ್ಕಿದೆ. ಬಿಟ್ಟರೆ ಪೊಲೀಸರಿಗೆ ಸಹಕಾರಿಯಾಗಬಲ್ಲ ಯಾವೊಂದೂ ಕುರುಹುಗಳೂ ಸಿಕ್ಕಿರೋ ಮಾಹಿತಿ ಇಲ್ಲ. ಇನ್ನು, ಯಾರಿಗೂ ಪರಿಚಯ ಆಗದೇ ಇರಲಿ ಅಂತಾ ಮಹಿಳೆಯ ರುಂಡವನ್ನೇ ಬೇರ್ಪಡಿಸಿ ಮುಂಡವನ್ನಷ್ಟೇ ಎಸೆದಿದ್ದಾರೆ ಹಂತಕರು. ಹೀಗಾಗಿ, ಮುಂಡಗೋಡ ಪೊಲೀಸರು ರುಂಡ ಎಲ್ಲಿದೆ ಅಂತಾ ಶೋಧ ಕಾರ್ಯ ನಡೆಸಿದ್ದಾರೆ..

ಆ ಘಟನೆ ನೆನಪಿಸಿದ ಕ್ರೌರ್ಯ..!
ನಿಮಗೆ ನೆನಪಿರಬಹುದು, ಅದು ಬಹುಶಃ 2016- 17 ರ ಸಮಯ. ಮಳಗಿ ಧರ್ಮಾಜಲಾಶಯದಲ್ಲಿ ಮಟ ಮಟ ಮದ್ಯಾಹ್ನವೇ ಇಂತದ್ದೇ ಭಯಾನಕ ಮರ್ಡರ್ ನಡೆದಿತ್ತು. ಅವತ್ತು ದಾಸನಕೊಪ್ಪದ ಪುಟ್ಟ ಬಾಲನೊಬ್ಬ ಧರ್ಮಾಜಲಾಶಯದ ಅಂಗಳದಲ್ಲಿ ಹೆಣವಾಗಿ ಹೋಗಿದ್ದ. ಅವತ್ತೂ ಕೂಡ ಇಂತದ್ದೇ ಮಾದರಿಯಲ್ಲಿ ಆ ಬಾಲಕನ ರುಂಡ ಬೇರ್ಪಡಿಸಿ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಪೊಲೀಸರ ತನಿಖೆಯ ನಂತರ ಅಲ್ಲಿ ಸಿಕ್ಕಿಬಿದ್ದಿದ್ದ ಕೊಲೆಗಾರ. ಅಸಲು, ಮಾರಿಗೆ ಬಲಿ ನೀಡಿ ವರ ಪಡೆಯಲು ಅಂತಹದ್ದೊಂದು ಭೀಕರ ಹತ್ಯೆ ಮಾಡಿದ್ದನಂತೆ ಹಂತಕ, ಮಾಂಸವನ್ನು ತನ್ನ ಮನೆಯ “ಮಾರಿ”ಗೆ ನೈವೇದ್ಯ ಮಾಡಿದ್ದ ಪಾಪಿ. ಹೀಗಾಗಿ, ಸದ್ಯ ನಡೆದಿರೋ ಭಯಾನಕ ಕೊಲೆ ಅವತ್ತಿನ ಕೃತ್ಯವನ್ನ ಮತ್ತೆ ನೆನಪಿಗೆ ತರಿಸಿದೆ.

ಯಾವ ಕಾರಣಕ್ಕೆ?
ನಿಜ, ಕೊಳಗಿ ಅರಣ್ಯ ಪ್ರದೇಶದಲ್ಲಿ ಸಿಕ್ಕಿರೋ ರುಂಡವಿಲ್ಲದ ಮಹಿಳೆಯ ಶವ ಹಲವು ಅನುಮಾನಗಳಿಗೆ ಕಾರಣವಾಗಿದೆ. ಇಷ್ಟೊಂದು ಭೀಕರ ಕೊಲೆ ಯಾವ ಕಾರಣಕ್ಕಾಗಿ ಮಾಡಿರಬಹುದು ಅನ್ನೋ ಪ್ರಶ್ನೆಗಳ ಬೆನ್ನತ್ತಿ ಹೊರಟರೆ, ಈ ಕೊಲೆಯ ಭೀಕರತೆ ನೋಡಿದಾಗ, ಮೇಲ್ನೋಟಕ್ಕೆ ಇದೊಂದು ಅನೈತಿಕತೆಯ ಧ್ವೇಷದ? ಕಿಚ್ಚಿನಲ್ಲಿ ನಡೆದ ಹತ್ಯೆ ಅನಿಸ್ತಿದೆ. ಯಾಕಂದ್ರೆ , ಇಷ್ಟೊಂದು ಭೀಕರತೆ, ಕ್ರೌರ್ಯತೆಯಲ್ಲಿ ರುಂಡ ಚೆಂಡಾಡಿದ್ದಾರೆ ಅಂದ್ರೆ ಇದ್ರಲ್ಲಿ ಬಹುತೇಕ ಅಂತದ್ದೇ ಕಿಚ್ಚು ಕೆಲಸ ಮಾಡಿರಬಹುದು ಅನ್ನೋ ಅನುಮಾನವಿದೆ. ಪೊಲೀಸ್ರು ತನಿಖೆಗಿಳಿದಿದ್ದಾರೆ.

ವಾಮಾಚಾರದ ಹುಚ್ಚಾ..?
ಅಸಲು, ಹೀಗೆ ಬೆತ್ತಲೆ ಮಾಡಿ, ರುಂಡ ಚಂಡಾಡಿ ಮರ್ಡರ್ ಮಾಡಿದ್ದಾರೆ ಅಂದ್ರೆ ಇಲ್ಲೇನಾದ್ರೂ,ವಾಮಾಚಾರಕ್ಕೆ ಬಲಿ ಕೊಟ್ರಾ ನೀಚರು..? ಅನ್ನೊ ಅನುಮಾನಗಳೂ ಕಾಡ್ತಿವೆ. ಯಾಕಂದ್ರೆ, ದೇಹದ ಮತ್ಯಾವ ಭಾಗದಲ್ಲೂ ರಕ್ತ, ಗಾಯದ ಕುರುಹುಗಳು ಇದ್ದಂತಿಲ್ಲ. ಇಡೀ ದೇಹದ ಮೇಲಿನ ಬಟ್ಟೆ ತೆಗೆದು, ಬೆತ್ತಲೆ ಮಾಡಿ, ರುಂಡವನ್ನೇ ಕತ್ತರಿಸಿ ಹಾಕಿದ್ದಾರೆ ಅಂದ್ರೆ ಏನಿದರ ಮರ್ಮ..? ಅಲ್ಲದೆ, ರುಂಡ ಕೂಡ ಆ ಸ್ಥಳದಲ್ಲಿ ಎಲ್ಲೂ ಸಿಕ್ಕಿಲ್ಲ. ಹಾಗಿದ್ದರೆ ಇದೇಲ್ಲ ವಾಮಾಚಾರಕ್ಕೆ ನಡೆದಿರಬಹುದಾದ ಬಲಿಯಾ..? ತನಿಖೆಯ ಉತ್ತರಕ್ಕಾಗಿ ಕಾಯಬೇಕಿದೆ..!

ಎಸ್ಪಿ ಭೇಟಿ..!
ರುಂಡವಿಲ್ಲದ ಮಹಿಳೆಯ ಶವ ದೊರೆತ ಮಾಹಿತಿ ತಿಳಿಯುತ್ತಿದ್ದಂತೆ, ಉತ್ತರ ಕನ್ನಡ ಎಸ್ಪಿ ದೀಪನ್ ಎಂ.ಎನ್, ಸ್ಥಳಕ್ಕೆ ಭೇಟಿ ನೀಡಿದ್ರು. ಶಿರಸಿ ಡಿವೈಎಸ್ಪಿ ಶ್ರೀಮತಿ ಗೀತಾ ಪಾಟೀಲ್ ಸೇರಿದಂತೆ ಮುಂಡಗೋಡ ಪಿಐ ರಂಗನಾಥ್ ನೀಲಮ್ಮನವರ್ ಘಟನೆಯ ಹಕೀಕತ್ತುಗಳನ್ನು ಹೆಕ್ಕಿ ತೆಗೆಯುವಲ್ಲಿ ಅಲರ್ಟ್ ಆಗಿದ್ದಾರೆ. ಇನ್ನು ಮುಂಡಗೋಡಿನ ಯುವ ಕ್ರೈಂ ಟೀಂ ಸ್ಥಳದಲ್ಲೇ ಮುಕ್ಕಾಂ ಹೂಡಿದೆ. ಎಲ್ಲಾ ಆಯಾಮಗಳಲ್ಲೂ ತನಿಖೆಗಿಳಿದಿದೆ. ಮುಂದೇನಾಗತ್ತೋ ಕಾಯಬೇಕಿದೆ.
ಪ್ರಮುಖ ಸುದ್ದಿ ಮಳಗಿ ಸಮೀಪದ ಕೊಳಗಿ ಅರಣ್ಯದಲ್ಲಿ ಅಪರಿಚಿತ ಮಹಿಳೆಯ ಬೆತ್ತಲೆ ಶವ ಪತ್ತೆ..! ಭೀಕರ ಹತ್ಯೆ ಮಾಡಿ ಬೀಸಾಕಿ ಹೋದ್ರಾ ಹಂತಕರು..?
