ಸ್ವಿಪ್ಟ್ ಕಾರ್ ಹಾಗೂ ಬೊಲೆರೋ ಪಿಕ್ ಅಪ್ ವಾಹನದ ನಡುವೆ ಮುಖಾಮುಕಿ ಡಿಕ್ಕಿಯಾದ ಪರಿಣಾಮ ಹಲವರು ಗಾಯಗೊಂಡ ಘಟನೆ ಮುಂಡಗೋಡ ತಾಲೂಕಿನ ಗಡಿಭಾಗದ ತಡಸದ ತಾಯವ್ವನ ದೇವಸ್ಥಾನದ ಸಮೀಪ ಸಂಭವಿಸಿದೆ.

ತಾಯವ್ವನ ದೇವಸ್ಥಾನದ ಸಮೀಪ ಘಟನೆ ನಡೆದಿದ್ದು, ಬೊಲೆರೋ ಪಿಕ್ ಅಪ್ ವಾಹನ ಮಾರುತಿ ಸ್ವಿಪ್ಟ್ ಕಾರಿಗೆ ಡಿಕ್ಕಿ ಹೊಡೆದಿದೆ. ಹೀಗಾಗಿ ಕಾರಲ್ಲಿದ್ದವರಿಗೆ ಸಣ್ಣಪುಟ್ಟ ಗಾಯವಾಗಿದೆ, ಇನ್ನು ಡಿಕ್ಕಿಯ ರಭಸಕ್ಕೆ ಬೊಲೆರೋ ಪಿಕ್ ಅಪ್ ವಾಹನ ಪಲ್ಟಿಯಾಗಿದೆ.

ಹೆಚ್ಚಿನ ಮಾಹಿತಿ ಇನ್ನೂ ತಿಳಿದು ಬರಬೇಕಿದೆ. ಗಾಯಗೊಂಡವರು ಎಷ್ಟು ಜನ, ಎಲ್ಲಿಯ ವಾಹನಗಳು ಅನ್ನೋ ಮಾಹಿತಿ ತಿಳಿದುಬರಬೇಕಿದೆ.
