ಶಿವಶಕ್ತಿ ತಂಡಕ್ಕೆ ‘ಗಜಾನನ ಟ್ರೋಫಿ-2026’ ಮಕುಟ; ಗಣೇಶ್ ನಗರದ ದ್ವಿತೀಯ ವರ್ಷದ ಕ್ರಿಕೆಟ್ ಪಂದ್ಯಾವಳಿ ಸಂಪನ್ನ

ಶಿರಸಿ : ನಗರದ ಗಣೇಶ ನಗರ ಗೆಳೆಯರ ಬಳಗ ಹಮ್ಮಿಕೊಂಡಿದ್ದ ದ್ವಿತೀಯ ವರ್ಷದ ಅದ್ದೂರಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ‘ಶಿವಶಕ್ತಿ ತಂಡ’ ವು ಅಮೋಘ ಪ್ರದರ್ಶನ ನೀಡಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಅತ್ಯಂತ ರೋಚಕವಾಗಿ ನಡೆದ ಫೈನಲ್ ಪಂದ್ಯದಲ್ಲಿ ಶಿವಂ ತಂಡವನ್ನು ಪರಾಭವಗೊಳಿಸುವ ಮೂಲಕ ಶಿವಶಕ್ತಿ ತಂಡವು ಈ ವರ್ಷದ ಪ್ರತಿಷ್ಠಿತ ಗಜಾನನ ಟ್ರೋಫಿ-2026 ಅನ್ನು ತನ್ನದಾಗಿಸಿಕೊಂಡಿತು.

ಭಾನುವಾರ ಗಣೇಶ ನಗರ ಕ್ರೀಡಾಂಗಣದಲ್ಲಿ ನಡೆದ ಜಿದ್ದಾಜಿದ್ದಿನ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶಿವಂ ತಂಡವು ನಿಗದಿತ 8 ಓವರ್‌ಗಳಲ್ಲಿ ಮೊತ್ತವನ್ನು ಕಲೆಹಾಕಿತ್ತು. ಈ ಗುರಿಯನ್ನು ಬೆನ್ನಟ್ಟಿದ ಶಿವಶಕ್ತಿ ತಂಡವು ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿ, ಕೇವಲ 7 ಓವರ್‌ಗಳಲ್ಲಿಯೇ ಗೆಲುವಿನ ದಡ ಸೇರುವ ಮೂಲಕ ಜಯಭೇರಿ ಬಾರಿಸಿತು.

ಒಟ್ಟೂ 8 ತಂಡಗಳು ಭಾಗವಹಿಸಿದ್ದ ಪಂದ್ಯಾವಳಿಯಲ್ಲಿ
ವಿಜೇತ ಶಿವಶಕ್ತಿ ತಂಡವು ಆಕರ್ಷಕ ಟ್ರೋಫಿಯೊಂದಿಗೆ 1,55,555 ರೂ. ಗಳ ಬೃಹತ್ ನಗದು ಬಹುಮಾನವನ್ನು ಪಡೆದು ಸಂಭ್ರಮಿಸಿತು. ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟ ಶಿವಂ ತಂಡವು ಆಕರ್ಷಕ ಟ್ರೋಫಿ ಹಾಗೂ 77,777 ರೂ. ಗಳ ನಗದು ಬಹುಮಾನವನ್ನು ತನ್ನದಾಗಿಸಿಕೊಂಡಿತು.

ಪಂದ್ಯಾವಳಿಯ ಸಮಾರೋಪ ಹಾಗೂ ಬಹುಮಾನ ವಿತರಣಾ ಸಮಾರಂಭದಲ್ಲಿ ಶಾಸಕ ಭೀಮಣ್ಣ ನಾಯ್ಕ ಭಾಗವಹಿಸಿ ಬಹುಮಾನ ವಿತರಿಸಿದತು. ಮುಖಂಡರಾದ ಪ್ರದೀಪ್ ಶೆಟ್ಟಿ, ಕೃಷ್ಣ ಗಾಂವ್ಕರ್, ಸುಬ್ಬು ದೇವಾಡಿಗ, ನಾಗರಾಜ್ ಶೆಟ್ಟಿ, ಗಣೇಶ ಶೆಟ್ಟಿ, ಸಂಕೇತ್ ಶೆಟ್ಟಿ ಹಾಗೂ ಆನಂದ ಶೆಟ್ಟಿ ಅವರು ಉಪಸ್ಥಿತರಿದ್ದು ವಿಜೇತ ಕ್ರೀಡಾಪಟುಗಳನ್ನು ಅಭಿನಂದಿಸಿದರು.

ಪ್ರಮುಖ ಸುದ್ದಿ KDCC ಬ್ಯಾಂಕ್ ನೂತನ ಅಧ್ಯಕ್ಷರಾಗಿ ಶಿವರಾಮ್ ಹೆಬ್ಬಾರ್ ಆಯ್ಕೆ, ಕೃಷ್ಣ ದೇಸಾಯಿಗೆ ಒಲಿದ ಉಪಾಧ್ಯಕ್ಷ ಸ್ಥಾನ..!