ಮುಂಡಗೋಡ ಠಾಣೆಗೆ ನೂತನ ಪಿಎಸ್ಐ ಆಗಿ ಮಂಜುನಾಥ್ ಗೌಡರ್..! ದಿ. ಯಲ್ಲಾಲಿಂಗ್ ಕುನ್ನೂರ್ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಹೊಸ ಅಧಿಕಾರಿ..!

ಮುಂಡಗೋಡ ಪೊಲೀಸ್ ಠಾಣೆಗೆ ನೂತನ ಪಿಎಸ್ಐ ಆಗಿ ಮಂಜುನಾಥ್ ಗೌಡರ್ ಬರಲಿದ್ದಾರೆ‌. ಈ ಹಿಂದೆ ಪಿಎಸ್ ಐ ಆಗಿದ್ದ ಯಲ್ಲಾಲಿಂಗ್ ಕುನ್ನೂರ್ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಮಂಜುನಾಥ್ ಗೌಡರ್ ನಿಯುಕ್ತಿಗೊಂಡಿದ್ದಾರೆ‌.

ಅಸಲು, ಕಳೆದ ಕೆಲವೇ ತಿಂಗಳುಗಳ ಹಿಂದೆ ಮುಂಡಗೋಡ ಠಾಣೆಗೆ ಎರಡನೇ ಬಾರಿಗೆ ಪಿಎಸ್ಐ ಆಗಿ ಯಲ್ಲಾಲಿಂಗ್ ಕುನ್ನೂರ್ ವರ್ಗಾವಣೆಯಾಗಿ ಯಲ್ಲಾಪುರದಿಂದ ಬಂದಿದ್ದರು.ಆದ್ರೆ, ತೀವ್ರ ಅನಾರೋಗ್ಯದಿಂದ ಬಳಲಿದ ಅವ್ರು ಕಳೆದ ಮಂಗಳವಾರ ನಿಧನರಾಗಿದ್ದರು. ಹೀಗಾಗಿ, ಖಾಲಿ ಇದ್ದ ಹುದ್ದೆಗೆ ಮಂಜುನಾಥ್ ಗೌಡರ್ ರನ್ನು ನೇಮಕಗೊಳಿಸಿ ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಆದೇಶಿಸಿದ್ದಾರೆ‌.