ಮುಂಡಗೋಡ ಪೊಲೀಸರ ಭರ್ಜರಿ ಕಾರ್ಯಾಚರಣೆ, ಹೊರಬೀಡುವಿನಂದು ಕಳ್ಳತನ ಮಾಡಿದ್ದ ಅಂತರ ಜಿಲ್ಲಾ ಮನೆಗಳ್ಳನ ಬಂಧನ..!

ಮುಂಡಗೋಡ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ, ಹೊರಬೀಡು ದಿನದಂದು ಪಟ್ಟಣದ ಅಂಬೇಡ್ಕರ್ ಓಣಿಯ ಬಸವರಾಜ ಮಲ್ಲಪ್ಪ ಚಲವಾದಿ ಎಂಬುವವರ ಮನೆ ಕಳ್ಳತನ ಮಾಡಿದ್ದ, ಅಂತರ ಜಿಲ್ಲಾ ಕಳ್ಳನನ್ನು ಹೆಡೆ ಮುರಿಕಟ್ಟಿದ್ದಾರೆ.

ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ತಬಕದ ಹೊನ್ನಹಳ್ಳಿಯ, ಮಂಜುನಾಥ ಬಸವಂತಪ್ಪ ನಾಯಕ (34) ಎಂಬುವವನೇ ಬಂಧಿತ ಆರೋಪಿಯಾಗಿದ್ದಾನೆ.

ಕಳೆದ ಜನೆವರಿ 27 ರಂದು ಮಂಗಳವಾರ ಹೋರಬೀಡುವಿನ ದಿನ, ಮುಂಡಗೋಡ ಪಟ್ಟಣದ ಅಂಬೇಡ್ಕರ ಓಣಿಯಲ್ಲಿರುವ ಮನೆಯ ಮುಂದಿನ ಬಾಗಿಲನ್ನು ಯಾವುದೋ ಗಟ್ಟಿಯಾದ ವಸ್ತುವಿನಿಂದ ಒಡೆದು ತೆಗೆದು ಒಳಗಡೆ ಹೋಗಿ ರೂಮನಲ್ಲಿದ್ದ ಟ್ರಜರಿಯ ಬಾಗಿಲುನ್ನು ಮುರಿದು ಟ್ರಜರಿಯಲ್ಲಿಟ್ಟಿದ್ದ 96 ಸಾವಿರ ಮೌಲ್ಯದ 6 ಗ್ರಾಂ ಬಂಗಾರದ ಗುಂಡಿನ ಸರ,
64 ಸಾವಿರ ಮೌಲ್ಯದ 4 ಗ್ರಾಂ ಬಂಗಾರದ ಎರ್ ರಿಂಗ್, 16 ಸಾವಿರ ಮೌಲ್ಯದ 1 ಗ್ರಾಂ ಬಂಗಾರದ 03 ಗುಂಡುಗಳ ಇರುವ ಲಕ್ಷ್ಮೀ ಲಾಕೆಟ್, 48 ಸಾವಿರ 03 ಗ್ರಾಂ ಬಂಗಾರದ ಉಂಗುರ, 16ಸಾವಿರ ಮೌಲ್ಯದ 01 ಗ್ರಾಂ ಬಂಗಾರದ ಸೈಡ್ ರಿಂಗ್, 4ಸಾವಿರ ರೂ ಮೌಲ್ಯದ ಬೆಳ್ಳಿಯ ಚೈನ್ ಸೇರಿ ಒಟ್ಟೂ 2.44.000 ರೂ ಮೌಲ್ಯದ ಚಿನ್ನ ಹಾಗು ಬೆಳ್ಳಿ ವಶಪಡಿಸಿಕೊಂಡಿದ್ದಾರೆ.

ಎಸ್ಪಿ ದೀಪನ್ ಎಮ್.ಎನ್, ಅಡಿಶನಲ್ ಎಸ್ಪಿ ಕೃಷ್ಣಮೂರ್ತಿ ಹಾಗೂ ಜಗದೀಶ ಎಮ್  ಶಿರಸಿ ಡಿವೈಎಸ್ಪಿ ಶ್ರೀಮತಿ ಗೀತಾ ಪಾಟೀಲ್ ಮಾರ್ಗದರ್ಶನದಲ್ಲಿ ಮುಂಡಗೋಡ ಪಿಐ ರಂಗನಾಥ ನೀಲಮ್ಮನವರ ರವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿದ್ದರು.

ಮುಂಡಗೋಡ ಪಿಐ ರಂಗನಾಥ ನೀಲಮ್ಮನವರ ಹಾಗೂ ಅಪರಾಧ ವಿಭಾಗದ ಸಿಬ್ಬಂದಿಗಳಾದ ಮಂಜುನಾಥ ಚಿಂಚಲಿ, ಕೊಟೇಶ ನಾಗರವಳ್ಳಿ, ಅಣ್ಣಪ್ಪ ಬುಡಿಗೇರ, ತಿರುಪತಿ ಚೌಡಣ್ಣನವರ, ಬಸವರಾಜ ಲಂಬಾಣಿ ಮತ್ತು ಕಲ್ಲಪ್ಪ ಹೊನ್ನಿಹಳ್ಳಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.