ಮಾಜಿ ಶಾಸಕ ವಿ.ಎಸ್.ಪಾಟೀಲರ ಬಂದೂಕು ನಾಪತ್ತೆಯಾಗಿದೆ. ಪಾಟೀಲರ ತೋಟದ ಮನೆಯಲ್ಲಿಟ್ಟಿದ್ದ ಡಬಲ್ ಬ್ಯಾರಲ್ ಗನ್ ಜನೆವರಿ ಒಂದರಂದೇ ನಾಪತ್ತೆಯಾಗಿದೆ ಅಂತಾ ಖುದ್ದು ವಿ.ಎಸ್.ಪಾಟೀಲರೇ ಮುಂಡಗೋಡ ಠಾಣೆಗೆ ದೂರು ನೀಡಿದ್ದಾರೆ.

ಅಂದಹಾಗೆ, ವಿ.ಎಸ್.ಪಾಟೀಲ್ ಅವರ ಆತ್ಮರಕ್ಷಣೆಗಾಗಿ ಇಟ್ಟುಕೊಂಡಿದ್ದ ಡಬಲ್ ಬ್ಯಾರಲ್ ಗನ್ ಕಳ್ಳತನವಾಗಿದ್ದು, ಮುಂಡಗೋಡ ತಾಲೂಕಿನ ಅಂದಲಗಿಯ ತೋಟದ ಮನೆಯಲ್ಲಿ ಘಟನೆ ನಡೆದಿದೆ. ಡಿ.31ರಂದು ತೋಟದ ಮನೆಯಲ್ಲಿರುವ ಪಂಪ್ ಹೌಸ್ ನಲ್ಲಿ ಬಂದೂಕು ಇಟ್ಟಿದ್ದರು. ಜನವರಿ 1ರಂದು ಬೆಳಿಗ್ಗೆ ನೋಡಿದಾಗ ಡಬಲ್ ಬ್ಯಾರಲ್ ಬಂದೂಕು ನಾಪತ್ತೆಯಾಗಿದೆ. ಮನೆ ಅಥವಾ ತೋಟದಲ್ಲಿ ಇಟ್ಟಿರಬಹುದು ಎಂದು ಹುಡುಕಾಡಿದ್ದರು. ಆದರೂ ಎಲ್ಲಿಯೂ ಗನ್ ಪತ್ತೆಯಾಗಿಲ್ಲ.
ಈ ಹಿನ್ನೆಲೆಯಲ್ಲಿ 15 ದಿನಗಳ ಬಳಿಕ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಮಾಜಿ ಶಾಸಕ ವಿ.ಎಸ್.ಪಾಟೀಲ್ ದೂರು ನೀಡಿದ್ದಾರೆ.
