ಕಾತೂರು ನಾಗನೂರು ರಸ್ತೆಯಲ್ಲಿ ಬೈಕುಗಳ ನಡುವೆ ಮುಖಾಮುಕಿ ಡಿಕ್ಕಿ, ಇಬ್ಬರಿಗೆ ಗಾಯ

ಮುಂಡಗೋಡ ತಾಲೂಕಿನ ಕಾತೂರು ಬಳಿ ಬೈಕುಗಳ‌ ನಡುವೆ ಮುಖಾಮುಕಿ ಡಿಕ್ಕಿಯಾಗಿದೆ‌. ಪರಿಣಾಮ ಇಬ್ಬರೂ ಬೈಕ್ ಸವಾರರಿಗೆ ಗಾಯವಾಗಿದೆ.

ಕಾತೂರು- ನಾಗನೂರು ರಸ್ತೆಯಲ್ಲಿ ಘಟನೆ ನಡೆದಿದ್ದು, ಬೈಕ್ ಗಳ ನಡುವೆ ಡಿಕ್ಕಿಯಲ್ಲಿ ಇಬ್ಬರಿಗೂ ಗಾಯವಾಗಿದೆ. ಗಾಯಾಳುಗಳನ್ನು ಮುಂಡಗೋಡ ತಾಲೂಕಾಸ್ಪತ್ರೆಗೆ ರವಾನಿಸಲಾಗಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.