ಮುಂಡಗೋಡ ತಾಲೂಕಿನ ಪ.ಪಂಗಡದ ಮೀನುಗಾರರಿಗೆ ವಾಹನ ಖರೀದಿಗೆ ಸಹಾಯಧನಕ್ಕೆ ಅರ್ಜಿ ಅಹ್ವಾನ..!

ಉತ್ತರ ಕನ್ನಡದ ಇಂದಿನ ಸಂಕ್ಷಿಪ್ತ ಸುದ್ದಿಗಳು

ಮುಂಡಗೋಡ ತಾಲೂಕಿನ ಪ.ಪಂಗಡದ ಮೀನುಗಾರರಿಗೆ ವಾಹನ ಖರೀದಿಗೆ ಸಹಾಯಧನಕ್ಕೆ ಅರ್ಜಿ ಅಹ್ವಾನ..!

ಕಾರವಾರ; ಪ್ರಸಕ್ತ ಸಾಲಿನಲ್ಲಿ ಪ್ರಧಾನಮಂತ್ರಿ ಮತ್ಸö್ಯಸಂಪದ ಯೋಜನೆ ಅಡಿಯಲ್ಲಿ ಧರ್ತಿ ಆಭಾ ಜನ ಜಾತೀಯ ಗ್ರಾಮ ಉತ್ಕರ್ಷ ಅಭಿಯಾನ ಅಡಿಯಲ್ಲಿ ಬುಡಕಟ್ಟು ಸಮುದಾಯದ/ಪರಿಶಿಷ್ಟ ಪಂಗಡದವರಿಗೆ ಮೀನು ಮಾರಾಟಕ್ಕಾಗಿ ಐಸ್ ಬಾಕ್ಸ್ನೊಂದಿಗೆ ದ್ವಿಚಕ್ರ ವಾಹನ, ಐಸ್ ಬಾಕ್ಸ್ ನೊಂದಿಗೆ ತ್ರಿಚಕ್ರ ವಾಹನ ಖರೀದಿಗೆ ಮತ್ತು ಜೀವಂತ ಮೀನು ಮಾರಾಟ ಕೇಂದ್ರವನ್ನು ಸ್ಥಾಪಿಸಲು ಘಟಕ ವೆಚ್ಚದ ಶೇ.90 ರಷ್ಟು ಸಹಾಯಧನ ನೀಡಲಾಗುವುದು.

ಈ ಯೋಜನೆಯಡಿ ಮುಂಡಗೋಡ ತಾಲ್ಲೂಕಿನ ಯರೇಬೈಲ್, ಹುಲಿಹೊಂಡ, ಅಗಡಿ, ನಂದಿಕಟ್ಟ, ಉಗ್ಗಿನಕೇರಿ, ಗುಂಜಾವತಿ, ಮೈನಳ್ಳಿ, ಇಂದೂರು, ಹುನಗುಂದ, ಚೌಡಳ್ಳಿ, ನ್ಯಾಸರ್ಗಿ, ಸಾಲಗಾಂವ, ಚಿಗಳ್ಳಿ, ಕಾತೂರ, ಓರಲಗಿ, ರಾಮಾಪುರ, ಕೋಡಂಬಿ, ಭದ್ರಾಪುರ, ಪಾಳಾ, ಸಿದ್ದಾಪುರ, ಮಳಗಿ, ಗೊಟಗೋಡಿಕೊಪ್ಪ, ಕ್ಯಾದಗಿಕೊಪ್ಪ. ಗ್ರಾಮಗಳ ಫಲಾನುಭವಿಗಳ ಅರ್ಜಿಗಳನ್ನು ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ಜ.20 ಕೊನೆಯ ದಿನಾಂಕವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕೆ ಸಹಾಯಕ ನಿರ್ದೇಶಕರು, ಮುಂಡಗೋಡ ರವರ ಕಚೇರಿಯನ್ನು ಸಂಪರ್ಕಿಸುವಂತೆ ಮುಂಡಗೋಡ ಮೀನುಗಾರಿಕೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

**************************

ಗ್ರಾಮ ಒನ್ ಕೇಂದ್ರ ಆರಂಭಿಸಲು ಪ್ರಾಂಚೈಸಿಗಳಿಂದ ಅರ್ಜಿ ಅಹ್ವಾನ

ಕಾರವಾರ; ಸೂಪಾ ತಾಲೂಕಿನ ಗಂಗೋಡ, ಅಣಶಿ, ಬಜಾರ್‌ಕುಣಂಗ, ನಾಗೋಡ, ಜೋಯಿಡಾ ಮತ್ತು ಹೊನ್ನಾವರ ತಾಲೂಕಿನ ಚಿಕ್ಕನಕೋಡ್ ಸೇರಿದಂತೆ ಒಟ್ಟು 6 ಗ್ರಾಮ ಪಂಚಾಯತಿಗಳಲ್ಲಿ ಹೊಸದಾಗಿ ಗ್ರಾಮ ಒನ್ ಕೇಂದ್ರ ಅನುಷ್ಠಾನಗೊಳ್ಳುವುದು ಅವಶ್ಯಕತೆ ಇದ್ದು, ಆಯ್ದ ಗ್ರಾಮಗಳಲ್ಲಿ ಸಮಗ್ರ ನಾಗರಿಕ ಸೇವಾ ಕೇಂದ್ರ ಗ್ರಾಮ ಒನ್ ಆರಂಭಿಸಲು ಉದ್ದೇಶಿಸಿದ್ದು, ಪ್ರಾಂಚೈಸಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತರು ವೆಬ್‌ಸೈಟ್: https://www.karnatakaone.gov.in/Public/GramOneFranchiseeTerms ಮೂಲಕ ಜ.15 ರೊಳಗಾಗಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ತಹಶೀಲ್ದಾರ ಕಚೇರಿಯನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

*****************
ಹಳಿಯಾಳ,ಜೋಯಿಡಾ: ಪ.ಪಂಗಡದ ಮೀನುಗಾರರಿಗೆ ವಾಹನ ಖರೀದಿಗೆ ಸಹಾಯಧನ

ಕಾರವಾರ; ಪ್ರಸಕ್ತ ಸಾಲಿನಲ್ಲಿ ಪ್ರಧಾನಮಂತ್ರಿ ಮತ್ಸö್ಯಸಂಪದ ಯೋಜನೆ ಅಡಿಯಲ್ಲಿ ಧರ್ತಿ ಆಭಾ ಜನ ಜಾತೀಯ ಗ್ರಾಮ ಉತ್ಕರ್ಷ ಅಭಿಯಾನ ಅಡಿಯಲ್ಲಿ ಬುಡಕಟ್ಟು ಸಮುದಾಯದ/ಪರಿಶಿಷ್ಟ ಪಂಗಡದವರಿಗೆ ಮೀನು ಮಾರಾಟಕ್ಕಾಗಿ ಐಸ್ ಬಾಕ್ಸ್ ನೊಂದಿಗೆ ದ್ವಿಚಕ್ರ ವಾಹನ, ಐಸ್ ಬಾಕ್ಸ್ ನೊಂದಿಗೆ ತ್ರಿಚಕ್ರ ವಾಹನ ಖರೀದಿಗೆ ಮತ್ತು ಜೀವಂತ ಮೀನು ಮಾರಾಟ ಕೇಂದ್ರವನ್ನು ಸ್ಥಾಪಿಸಲು ಘಟಕ ವೆಚ್ಚದ ಶೇ.90 ರಷ್ಟು ಸಹಾಯಧನ ನೀಡಲಾಗುವುದು.

ಜೋಯಿಡಾ ತಾಲ್ಲೂಕಿನ ರಾಮನಗರ, ಅವೇದ, ಪ್ರಧಾನಿ, ಜೋಯಿಡಾ ಗ್ರಾಮಗಳಿಂದ ಮತ್ತು ಹಳಿಯಾಳ ತಾಲ್ಲೂಕಿನ ಗರಡೊಳ್ಳಿ ಗ್ರಾಮದ ಫಲಾನುಭವಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಜ.20 ಕೊನೆಯ ದಿನಾಂಕವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕೆ ಸಹಾಯಕ ನಿರ್ದೇಶಕರು, ಹಳಿಯಾಳ ರವರ ಕಚೇರಿಯನ್ನು ಸಂಪರ್ಕಿಸುವಂತೆ ಹಳಿಯಾಳ ಮೀನುಗಾರಿಕೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

******************

ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ..!

ಕಾರವಾರ; ಕೆನರಾ ಬ್ಯಾಂಕ್ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ನ ಸಹಯೋಗದಲ್ಲಿ ನಡೆಸುತ್ತಿರುವ ರುಡ್‌ಸೆಟ್ ಸಂಸ್ಥೆಯ ವತಿಯಿಂದ ಸಿಸಿ ಟಿ.ವಿ. ಕ್ಯಾಮೆರಾ, ಸೆಕ್ಯೂರಿಟಿ ಅಲಾರಾಂ ಮತ್ತು ಸ್ಮೋಕ್ ಡಿಟೆಕ್ಟರ್‌ನ ಅಳವಡಿಕೆ ಮತ್ತು ಸೇವೆ ಕುರಿತ 13 ದಿನಗಳ ಉಚಿತ ತರಬೇತಿಯನ್ನು ಜನವರಿ 19 ರಿಂದ ಹಮ್ಮಿಕೊಳ್ಳಲಾಗಿದ್ದು, ಗ್ರಾಮೀಣ ಆಸಕ್ತ ನಿರುದ್ಯೋಗಿ ಯುವಕ-ಯುವತಿಯರು ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತರು 18 ರಿಂದ 50 ವರ್ಷ ವಯೋಮಾನದವರಾಗಿದ್ದು, ಕನ್ನಡ ಭಾಷೆ ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು. ಗ್ರಾಮೀಣ ಭಾಗದ ಬಿಪಿಎಲ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಅನ್ನು ಕಡ್ಡಾಯವಾಗಿ ಹೊಂದಿರಬೇಕು. ತರಬೇತಿಯ ಅವಧಿಯಲ್ಲಿ ಉಚಿತವಾಗಿ ಊಟ ಮತ್ತು ವಸತಿ ನೀಡಲಾಗುವುದು ಹಾಗೂ ತರಬೇತಿಯ ಅವಧಿ ಪೂರ್ಣಗೊಂಡ ನಂತರ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಪ್ರಮಾಣಪತ್ರವನ್ನು ವಿತರಿಸಲಾಗುವುದು.

ಆಸಕ್ತರು ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ರುಡ್‌ಸೆಟ್ ಸಂಸ್ಥೆ, ಅರಿಶಿನಕುಂಟೆ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಅಥವಾ ಮೊಬೈಲ್ ಸಂಖ್ಯೆ: 9380162042, 9481506564, 9113880324 ಅನ್ನು ಸಂಪರ್ಕಿಸಬಹುದಾಗಿದೆ ಎಂದು ರುಡ್‌ಸೆಟ್ ಸಂಸ್ಥೆಯ ಬೆಂಗಳೂರು ಶಾಖೆಯ ನಿರ್ದೇಶಕ ರವಿಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.