ಇಂದೂರು ಸೊಸೈಟಿಯ ನೂತನ ಕಛೇರಿ ಕಟ್ಟಡದ ಉದ್ಘಾಟನೆ ನೆರವೇರಿಸಿದ ಶಾಸಕ ಶಿವರಾಮ್ ಹೆಬ್ಬಾರ್..!

ಮುಂಡಗೋಡ ತಾಲೂಕಿನ ಇಂದೂರ ವಿವಿದ್ದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಕಛೇರಿ ಕಟ್ಟಡದ ಉದ್ಘಾಟನೆ ನಡೆಯಿತು. ಶಾಸಕ ಶಿವರಾಮ್ ಹೆಬ್ಬಾರ್ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿದ್ರು.

ಈ ವೇಳೆ ಈ ಹಿಂದಿನ ಅವಧಿಯಲ್ಲಿ ಸಹಕಾರ ಸಂಘದ ಅಧ್ಯಕ್ಷರುಗಳಾಗಿ ಸೇವೆ ಸಲ್ಲಿಸಿದ ಮಹನೀಯರಿಗೆ ಸನ್ಮಾನಿಸಲಾಯಿತು. ಅಲ್ದೆ, ಆಡಳಿತ ಸಮಿತಿಯಿಂದ ಶಾಸಕ ಶಿವರಾಮ್ ಹೆಬ್ಬಾರ್ ರವರಿಗೆ ಸನ್ಮಾನಿಸಲಾಯಿತು.

ಉದ್ಘಾಟನಾ ಸಮಾರಂಭದಲ್ಲಿ ಇಂದೂರ ಸೊಸೈಟಿಯ ಅಧ್ಯಕ್ಷ ಯಮನಪ್ಪ ಮಾರಂಬೀಡ, ಕೆಡಿಸಿಸಿ ನಿರ್ದೇಶಕ ಎಚ್.ಎಂ ನಾಯ್ಕ, ಮಾರ್ಕೆಟಿಂಗ್ ಸೊಸೈಟಿ ಅಧ್ಯಕ್ಷ ರವಿಗೌಡ ಪಾಟೀಲ್, ಇಂದೂರು ಸೊಸೈಟಿ ಉಪಾಧ್ಯಕ್ಷ ಅಲ್ಲಾವುದ್ದೀನ್ ಮುಂಡಗೋಡ, ಸದಸ್ಯರಾದ ಮಹ್ಮದ್ ದೇಸಳ್ಳಿ, ದೇವೇಂದ್ರ ಕೆಂಚಗೊಣ್ಣವರ್, ಉಮೇಶ್ ಹರ್ತಿ, ನಾಗಯ್ಯ ಹಿರೇಮಠ, ಮೋನ್ಸಿ ಥಾಮಸ್, ಶಿವಾನಂದ ಕಣಕಣ್ಣವರ್, ಬಸಣ್ಣ ಗಲಬಿ ಮುಖಂಡರಾದ ನಾಗಭೂಷಣ ಹಾವಣಗಿ, ಎಂ.ಎನ್.ದುಂಢಸಿ, ಸಿದ್ದಪ್ಪ ಹಡಪದ ಸೇರಿದಂತೆ ಹಲವರು ಉಪಸ್ಥಿತರಿದ್ದರು.