Car Accident; ಮುಂಡಗೋಡ ತಾಲೂಕಿನ ಗಡಿಭಾಗ ತಡಸ ತಾಯವ್ವನ ದೇವಸ್ಥಾನದ ಸಮೀಪ ಭೀಕರ ಕಾರು ಅಪಘಾತವಾಗಿದೆ. ಪರಿಣಾಮ ಮುಂಡಗೋಡ ತಹಶೀಲ್ದಾರ ಕಚೇರಿ ಓರ್ವ ಗ್ರಾಮ ಲೆಕ್ಕಾಧಿಕಾರಿ ಸ್ಥಳದಲ್ಲೇ ದುರಂತ ಸಾವು ಕಂಡಿದ್ದಾರೆ. ಮತ್ತಿಬ್ಬರಿಗೆ ಗಂಭೀರ ಗಾಯವಾಗಿದೆ.

ಮುಂಡಗೋಡ ತಹಶೀಲ್ದಾರ ಕಚೇರಿ ಮೂವರು ಗ್ರಾಮ ಲೆಕ್ಕಾಧಿಕಾರಿಗಳಾದ ಗೋಪಾಲ್ ಎಂ, ಗೋವಿಂದ್ ರಾಠೋಡ್ ಹಾಗೂ ಮಂಜುನಾಥ್ ಎಂಬುವವರು ಪ್ರಯಾಣಿಸುತ್ತಿದ್ದ ಕಾರು, ನಿನ್ನೆ ಸಂಜೆ ಹುಬ್ಬಳ್ಳಿಯಿಂದ ಮುಂಡಗೋಡ ಕಡೆಗೆ ಬರುತ್ತಿದ್ದಾಗ ಘಟನೆ ಸಂಭವಿಸಿದೆ
ನಿನ್ನೆ ರಾತ್ರಿ ನಡೆದಿರೋ ದುರಂತ ಇದಾಗಿದ್ದು, ತಾಯವ್ವನ ದೇವಸ್ಥಾನದ ಸಮೀಪದ ಮಿನಿ ಬ್ರಿಡ್ಜ್ ನ ಪ್ರಪಾತಕ್ಕೆ ಕಾರು ಬಿದ್ದಿದೆ.

ಕಾರು ಪ್ರಪಾತಕ್ಕೆ ಬಿದ್ದು ಕಾರಿನಲ್ಲಿದ್ದ ಗ್ರಾಮ ಲೆಕ್ಕಾಧಿಕಾರಿ ಗೋಪಾಲ ಎಂ. ಸ್ಥಳದಲ್ಲೇ ದುರಂತ ಸಾವುವಕಂಡಿದ್ದಾರೆ. ಗೋವಿಂದ ರಾಥೋಡ್ ಮತ್ತು ಮಂಜುನಾಥ ಇಬ್ಬರು ಗಂಭೀರ ಗಾಯಗಳಾಗಿ ಹುಬ್ಬಳ್ಳಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
