ಮುಂಡಗೋಡ ತಾಲೂಕಿನ ಗಡಿಭಾಗ, ತಡಸ ಸಮೀಪದ ತಾಯವ್ವನ ದೇವಸ್ಥಾನದ ಹತ್ತಿರ ಚಿರತೆ ಪ್ರತ್ಯಕ್ಷವಾಗಿದೆ. ರಾಜಾರೋಷವಾಗಿ ರಸ್ತೆಯ ಬದಿಯ ಕಾಡಲ್ಲಿ ಕುಳಿತಿರೋ ಚಿರತೆ ಕಂಡು ಜನ ಅಚ್ಚರಿಗೊಂಡಿದ್ದಾರೆ. ಚಿರತೆ ಕಾಣಿಸುತ್ತಿದ್ದಂತೆ ತಮ್ಮ ಮೊಬೈಲ್ ನಲ್ಲಿ ಚಿರತೆಯ ದೃಷ್ಯ ಸೆರೆಹಿಡಿದಿದ್ದಾರೆ.

ಅಂದಹಾಗೆ, ಮುಂಡಗೋಡ ಹಾಗೂ ಹಾವೇರಿ ಜಿಲ್ಲೆಯ ಗಡಿಭಾಗ ತಡಸ ತಾಯವ್ವನ ದೇವಸ್ಥಾನದ ಸಮೀಪ ಚಿರತೆ ಪ್ರತ್ಯಕ್ಷವಾಗಿದ್ದು, ಮುಂಡಗೋಡಿನ ವಿಠ್ಠಲ್ ಬಾಳಂಬೀಡ ಹಾಗೂ ಗುಡ್ಡಪ್ಪ ಕಾತೂರ್ ಚಿರತೆ ಕಣ್ಣಿಗೆ ಬೀಳುತ್ತಿದ್ದಂತೆ, ತಮ್ಮ ಮೊಬೈಲ್ ನಲ್ಲಿ ದೃಷ್ಯ ಸೆರೆ ಹಿಡಿದಿದ್ದಾರೆ. ಅಲ್ಲದೆ ಈ ಭಾಗದಲ್ಲಿ ಸಂಚರಿಸುವಾಗ ಜಾಗ್ರತೆ ಇರಲಿ ಅಂತಾ ಎಚ್ಚರಿಸಿದ್ದಾರೆ.