Accused Escaped;
ಮುಂಡಗೋಡಿನ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಅದೇನಾಗಿದೆಯೋ ಒಂದೂ ಅರ್ಥ ಆಗ್ತಿಲ್ಲ. ಶ್ರೀಗಂಧ ಸಿಕ್ಕ ಪ್ರಕರಣದಲ್ಲಿ ಆರೋಪಿಯಾಗಿದ್ದವ ಖುದ್ದಾಗಿ ಕಚೇರಿಗೆ ಬಂದರೂ ಆತನನ್ನು ವಶಕ್ಕೆ ಪಡೆಯದೇ ಉಧಾರತೆ ತೋರಿದ್ದಾರೆ. ಹೀಗಾಗಿ, ಆತ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಇದೇಲ್ಲ ಖುದ್ದು ಮುಂಡಗೋಡ RFO ಸಾಹೇಬರ ಕಣ್ಗಾವಲಿನಲ್ಲೇ ನಡೆದು ಹೋಗಿದೆ ಅನ್ನೋದು ಕಂಡವರ ಆರೋಪ. ಹೀಗಾಗಿ, ಈ ಅಧಿಕಾರಿಗಳ ಬೇಜವಾಬ್ದಾರಿಗೆ ತಾಲೂಕಿನ ಜನ ಅಡಿಕೆ ಎಲೆ ತಿಂದು.. ಛೀ.. ಅಂತಿದಾರೆ…!

ಅಗಡಿಯಲ್ಲಿ ನಡೆದದ್ದು..!
ಅಸಲಿಗೆ, ಮುಂಡಗೋಡ ತಾಲೂಕಿನ ಅಗಡಿಯಲ್ಲಿ ಮಂಗಳವಾರ ಬೆಳ್ಳಂ ಬೆಳಿಗ್ಗೆ ಅರಣ್ಯ ಅಧಿಕಾರಿಗಳು ದಾಳಿ ನಡೆಸಿದ್ದರು. ಆ ವೇಳೆ ಲಕ್ಷಾಂತರ ಬೆಲೆ ಬಾಳುವ ಸುಮಾರು 60 ಕೆಜಿಗೂ ಹೆಚ್ಚು ಶ್ರೀಗಂಧದ ತುಂಡುಗಳನ್ನು ಜಪ್ತಿ ಮಾಡಲಾಗಿತ್ತು. ಅಲ್ಲದೇ ಇದೇ ವೇಳೆ ಆರೋಪಿ ಅಲ್ಲಿ ದಾಳಿ ನಡೆಸಿದ ಕ್ಷಣದಲ್ಲೇ ಕಬ್ಬಿನ ಗದ್ದೆಯಲ್ಲಿ ಹೋಗಿ ನಾಪತ್ತೆಯಾಗಿದ್ದ. ಬೆನ್ನತ್ತಿ ತಡಕಾಡಿದ್ರೂ ಆತ ಸಿಕ್ಕಿರಲೇ ಇಲ್ಲ.

ಹೀಗಾಗಿ, ವಶಪಡಿಸಿಕೊಂಡಿದ್ದ ಶ್ರೀಗಂಧದ ತುಂಡುಗಳೊಂದಿಗೆ ಅರಣ್ಯ ಅಧಿಕಾರಿಗಳು ಬರೀಗೈಯಲ್ಲಿ ವಾಪಸ್ ಆಗಿದ್ದರು. ಆರೋಪಿಯನ್ನು ಬಿಟ್ಟು ಬಂದಿದ್ದರು, ಆರೋಪಿಗಾಗಿ ಶೋಧ ಮಾಡ್ತಿದಿವಿ ಅಂತಾ ಘೋಷಣೆ ಮಾಡಿಕೊಂಡಿದ್ದರು. ವಿಚಿತ್ರವೆಂದರೆ, ಹಾಗೆ ಓಡಿ ಹೋಗಿದ್ದ ಅದೇ ಆರೋಪಿ ಖುದ್ದಾಗಿ ಇದೇ ಅರಣ್ಯ ಅಧಿಕಾರಿಗಳ ಕಛೇರಿಗೆ ಬೆಳಿಗ್ಗೆಯೇ ಬಂದಿಳಿದಿದ್ದ. ಏನಿಲ್ಲವೆಂದರೂ ಸಂಜೆ 5 ಗಂಟೆಯವರೆಗೆ ಹಲವು ತಾಸುಗಳು ಇದೇ ಮುಂಡಗೋಡಿನ ACF ಹಾಗೂ RFO ಕಚೇರಿಯ ಅಂಗಳದಲ್ಲೇ ಓಡಾಡಿಕೊಂಡಿದ್ದ.
ಅಸಲು, RFO ಸಾಹೇಬ್ರು ಬರಬೇಕಂತೆ ಅಂತಾ ಕಾಯ್ದು ಕುಳಿತಿದ್ದನಂತೆ. ಆತನ ಜೊತೆ ಗ್ರಾಮದ ಕೆಲವೊಬ್ರು ಬಂದಿದ್ರು. ನಿಜ ಅಂದ್ರೆ ಸನ್ಮಾನ್ಯ RFO ಸಾಹೇಬ್ರು ಅದೇನು ಕೆಲಸದ ಮೇಲೆ ಹೋಗಿದ್ರೋ ಗೊತ್ತಿಲ್ಲ ಲೇಟಾಗಿ ಬಂದ್ರಂತೆ. ಸಂಜೆ 5 ಗಂಟೆಯಷ್ಟೊತ್ತಿಗೆ ಆರೋಪಿ ಅದೇ ಕಚೇರಿ ಅಂಗಳದಿಂದ ಮತ್ತೆ ಎಸ್ಕೇಪ್ ಆಗಿಬಿಟ್ಟಿದ್ದಾನೆ.

ಯಾಕೆ ಈ ಬೇಜವಾಬ್ದಾರಿ..?
ಅಲ್ರಿ, ಅರಣ್ಯ ಅಧಿಕಾರಿಗಳೇ ನಿಮ್ಮ ಹಣೆಬರಹಕ್ಕೆ , ಮುಂಡಗೋಡ ತಾಲೂಕಿನಲ್ಲಿ ಅದೇಷ್ಟೇ ಶ್ರೀಗಂಧ ಮರಗಳ್ಳತನ ಕೇಸುಗಳಾದ್ರೂ ಈ ಕ್ಷಣದವರೆಗೂ ಒಂದೇ ಒಂದು ಕೇಸು ಬೇಧಿಸೋ ತಾಕತ್ತು ಇಲ್ಲ.. ನಿಮ್ಮ ಇಲಾಖೆಯ ಅಂಗಳದಲ್ಲೇ ಶ್ರೀಗಂಧ ಮರಗಳನ್ನು ಕಡೆದುಕೊಂಡು ಹೋದ್ರೂ, ಕಣ್ಣು ಕೈ ಬಾಯಿಗಳನ್ನು ಮುಚ್ಕೊಂಡು ಬೆಪ್ಪಗೆ ಕುಳಿತವರು ನೀವು, ಇವಾಗ ಸಾರ್ವಜನಿಕರೇ ಇಂತಹದ್ದೊಂದು ಮಾಹಿತಿ ನೀಡಿದಾಗ, ಸಿಬ್ಬಂದಿಗಳನ್ನ ಕಳಿಸಿ ದಾಳಿ ಮಾಡಿಸಿ ಅದೇನೋ ಸಾಧನೆಗೈದವರ ಹಾಗೆ ಫೋಸು ಕೊಟ್ಟಿದ್ರಿ, ಪಾಪ ಕೊರೆವ ಚಳಿಯಲ್ಲೂ ನಿಮ್ಮ ಕೆಳ ಹಂತದ ಸಿಬ್ಬಂದಿಗಳುತಹದ್ದೊಂದು ರೇಡು ಮಾಡಿದ್ದರು. ಆದ್ರೆ, ಆ ಸಿಬ್ಬಂದಿಗಳು ಮಾಡಿರೊ ಕೆಲಸವನ್ನೂ ನೀವು ಬೇಜವಾಬ್ದಾರಿಯಿಂದಲೇ ನಿಭಾಯಿಸಿದ್ದಿರಲ್ಲ..? ನಿಮಗೆ ಏನೇನ್ನಬೇಕು..? ನಿಮ್ಮ ಕೈಯಲ್ಲೇ ಬಂದು ತಗಲಾಕ್ಕೊಂಡಿದ್ದ ಆರೋಪಿಯನ್ನ ಹಾಗೆ ಬಿಟ್ಟು ಕಳಿಸಿರೊ ಹಿಂದೆ ಇರೋ ಅಸಲೀ ಕಾರಣವಾದ್ರೂ ಏನು..? ಉತ್ತರಿಸ್ತಿರಾ ಅರಣ್ಯ ರಕ್ಷಕರೇ..?

ಆರೋಪಿನ ಎಸ್ಕೇಪ್ ಮಾಡಿದ್ದು ಯಾರು?
ಹಾಗೆ ನೋಡಿದ್ರೆ, ಶ್ರೀಗಂಧ ತುಂಡುಗಳು ಪತ್ತೆಯಾದ ಕೇಸಲ್ಲಿ, ದಾಳಿ ವೇಳೆ ನಾಪತ್ತೆಯಾಗಿದ್ದವ, ಅದೇ RFO ಕಚೇರಿ ಅಂಗಳಕ್ಕೆ ಬಂದ್ರೂ ಆತನನ್ನು ವಶಕ್ಕೆ ಯಾಕೆ ಪಡೆಯಲಿಲ್ಲ..? ಅದೂ ಹೋಗಲಿ, ಅಂತಹದ್ದೊಂದು ಆರೋಪ ಹೊತ್ತ ಆರೋಪಿ ತಮ್ಮ ನೆರಳಲ್ಲೇ ಹಲವು ಗಂಟೆಗಳ ಕಾಲ ಓಡಾಡಿಕೊಂಡಿದ್ರೂ ಅದ್ಯಾಕೆ ಈ ಅಧಿಕಾರಿಗಳಿಗೆ ಆತನ ಪರವಾಗಿ ಮೃದುತ್ವ ಹುಟ್ಟಿಕೊಂಡಿತ್ತು..? ಅಷ್ಟಕ್ಕೂ, ಸಂಜೆವರೆಗೂ ಅಲ್ಲೇ ಇದ್ದ ಆರೋಪಿಯನ್ನು ನೀವೇ ಎಸ್ಕೇಪ್ ಆಗುವಂತೆ ನೋಡಿಕೊಂಡರಾ..? ಹಾಗಿದ್ರೆ ಅದಕ್ಕೆಕಾರಣವೇನು..? ಅಧಿಕಾರಿಗಳೇ ಅದೇನು ಕಡಿದು ಗುಡ್ಡೆ ಹಾಕ್ತಿದಿರಿ..? ಹಾಗಂತ ಸಾರ್ವಜನಿಕರು, ಪರಿಸರ ಪ್ರೇಮಿಗಳು ಇಲಾಖೆ ಮೇಲೆ ನಂಬಿಕೆನೇ ಕಳೆದುಕೊಂಡು, ಪ್ರಶ್ನೆ ಕೇಳ್ತಿದಾರೆ.. ಆದ್ರೆ ಉತ್ತರಿಸೋರು ಯಾರು..?
ಪ್ರಮುಖ ಸುದ್ದಿ👉 ಅಗಡಿಯಲ್ಲಿ ಅರಣ್ಯ ಅಧಿಕಾರಿಗಳ ಭರ್ಜರಿ ದಾಳಿ, 60 ಕೆಜಿಗೂ ಹೆಚ್ಚು ಶ್ರೀಗಂಧದ ಮರದ ತುಂಡುಗಳು ವಶಕ್ಕೆ, ಆರೋಪಿ ಪರಾರಿ..!
