Forest Officials Raid;
ಮುಂಡಗೋಡ ತಾಲೂಕಿನ ಅಗಡಿಯಲ್ಲಿ ಬೆಳ್ಳಂ ಬೆಳಿಗ್ಗೆ ಅರಣ್ಯಾಧಿಕಾರಿಗಳ ಭರ್ಜರಿ ದಾಳಿ ನಡೆದಿದೆ. ಮನೆಯಲ್ಲಿ ಶೇಖರಿಸಿ ಇಟ್ಟಿದ್ದ ಸುಮಾರು 60 ಕೇಜಿ ಗೂ ಹೆಚ್ಚು ಶ್ರೀಗಂಧದ ಮರದ ತುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಅರಣ್ಯ ಅಧಿಕಾರಿಗಳು ದಾಳಿ ಮಾಡುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದಾನೆ. ಆರೋಪಿಯನ್ನು ಬೆನ್ನತ್ತಿ ಹಿಡಿಯಲು ಪ್ರಯತ್ನಿಸಿದರೂ ಕಬ್ಬಿನ ಗದ್ದೆಯಲ್ಲಿ ಸೇರಿಕೊಂಡು ತಪ್ಪಿಸಿಕೊಂಡಿದ್ದಾನೆ.

ಅಂದಹಾಗೆ, ಅಗಡಿಯ ಪರಶುರಾಮ ಲೋಕಪ್ಪ ಲಮಾಣಿ ಎಂಬುವವರ ಮನೆಯಲ್ಲಿ ಅರಣ್ಯಾಧಿಕಾರಿಗಳು ಶೋಧ ನಡೆಸಿ ಬರೋಬ್ಬರಿ ನಾಲ್ಕು ಚೀಲಗಳಲ್ಲಿ ಭರ್ತಿ ಮಾಡಿ ಇಟ್ಟಿದ್ದ ಶ್ರೀಗಂಧದ ಮರದ ತುಂಡುಗಳನ್ನು ಜಪ್ತಿ ಮಾಡಿದ್ದಾರೆ. ಇದೇಲ್ಲದ ಅಂದಾಜು ತೂಕ 60 ಕೇಜಿಗೂ ಹೆಚ್ಚು ಅಂತಾ ಅಂದಾಜಿಸಲಾಗಿದೆ. ಮೌಲ್ಯ ಇನ್ನೂ ಖಚಿತವಾಗಿಲ್ಲ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಅಷ್ಟಕ್ಕೂ ಗ್ಯಾಂಗ್ ಇದೆಯಾ..?
ಅಸಲು, ಮುಂಡಗೋಡ ಪಟ್ಟಣ, ತಾಲೂಕಿನ ಅತ್ತಿವೇರಿ ಸೇರಿದಂತೆ ಹಲವು ಕಡೆ ಇತ್ತಿಚೆಗೆ ಶ್ರೀಗಂಧದ ಮರಗಳ್ಳತನ ಪ್ರಕರಣ ನಡೆದಿವೆ. ನಡೆಯುತ್ತಲೇ ಇವೆ. ಹಾಗಿದ್ರೆ, ಆ ಪ್ರಕರಣಗಳಿಗೂ ಇಲ್ಲಿ ಸಿಕ್ಕಿರೋ ಶ್ರೀಗಂಧದ ಮರದ ತುಂಡುಗಳಿಗೂ ಸಂಬಂಧವಿದೆಯಾ..? ಇಲ್ಲವಾದಲ್ಲಿ ಈ ಶ್ರೀಗಂಧದ ಮರದ ತುಂಡುಗಳನ್ನು ತಂದಿದ್ದಾದರೂ ಎಲ್ಲಿಂದ..? ಇದೇಲ್ಲ ತನಿಖೆ ಆಗಬೇಕಿದೆ.

ಹಾಗೆ ನೋಡಿದ್ರೆ, ಕಲಘಟಗಿ ಹಾಗೂ ಮುಂಡಗೋಡ ತಾಲೂಕಿನ ಗಡಿಭಾಗದ ಕೆಲ ಹಳ್ಳಿಗಳ ಕೆಲವ್ರು ಈ ದಂಧೆಯಲ್ಲಿ ತೊಡಗಿಕೊಂಡಿದ್ದಾರೆ ಅನ್ನೋ ಭಾತ್ಮಿ ಇದೆ ಎನ್ನಲಾಗಿದೆ. ಇದೇಲ್ಲವೂ ಸನ್ಮಾನ್ಯ ಅರಣ್ಯ ಅಧಿಕಾರಿಗಳಿಂದ ಖಡಕ್ ತನಿಖೆಯಾದ್ರೆ ಇಡೀ ಗ್ಯಾಂಗನ್ನೇ ಹೆಡೆಮುರಿ ಕಟ್ಟಬಹುದು ಅಲ್ವಾ..?

